Advertisment

1969ಕ್ಕೂ ಮೊದಲು ಕರೆನ್ಸಿ ನೋಟಿನಲ್ಲಿರಲಿಲ್ಲ ಗಾಂಧೀಜಿ ಫೋಟೋ! ಬಾಪು ಭಾವಚಿತ್ರ ನೋಟಿನ ಮೇಲೆ ಬಂದಿದ್ದು ಹೇಗೆ..?

author-image
Gopal Kulkarni
Updated On
1969ಕ್ಕೂ ಮೊದಲು ಕರೆನ್ಸಿ ನೋಟಿನಲ್ಲಿರಲಿಲ್ಲ ಗಾಂಧೀಜಿ ಫೋಟೋ! ಬಾಪು ಭಾವಚಿತ್ರ ನೋಟಿನ ಮೇಲೆ ಬಂದಿದ್ದು ಹೇಗೆ..?
Advertisment
  • ಸ್ವತಂತ್ರ ಭಾರತದ ಹಲವು ವರ್ಷ ಕರೆನ್ಸಿ ನೋಟಿನಲ್ಲಿರಲಿಲ್ಲ ಗಾಂಧಿ ಚಿತ್ರ
  • ಮಹಾತ್ಮಾ ಗಾಂಧೀಜಿ ಭಾವಚಿತ್ರ ಬಳಕೆ ಆರಂಭವಾಗಿದ್ದು ಯಾವಾಗಿನಿಂದ?
  • ಮೊಟ್ಟ ಮೊದಲ ಬಾರಿಗೆ ಕರೆನ್ಸಿ ನೋಟಿನಲ್ಲಿ ಗಾಂಧೀಜಿ ಚಿತ್ರ ಬಳಸಿದ್ದು ಎಂದು?

ಒಂದು ದೇಶದ ಕರೆನ್ಸಿ ನೋಟಿನ ಗುಣಮಟ್ಟ ಹಾಗೂ ಅದು ಹೊಂದಿರುವ ಸಂಕೇತ ಮತ್ತು ಭಾವಚಿತ್ರಗಳು ಆ ದೇಶದ ಇತಿಹಾಸ, ಸಂಸ್ಕೃತಿ ಹಾಗೂ ಪರಂಪರೆ ಕಥೆಯನ್ನು ಇಡೀ ವಿಶ್ವಕ್ಕೆ ಹೇಳುತ್ತದೆ. ಅನೇಕ ದೇಶಗಳು ಆ ದೇಶಗಳ ನಿರ್ಮಾಣಕ್ಕೆ ಕಾರಣವಾದ ವ್ಯಕ್ತಿಯ ಫೋಟೋವನ್ನು ತಮ್ಮ ಕರೆನ್ಸಿ ನೋಟಿನಲ್ಲಿ ಇಂದಿಗೂ ಮುದ್ರಿಸುತ್ತಿವೆ. ಅಮೆರಿಕಾ ಜಾರ್ಜ್ ವಾಷಿಂಗ್ಟನ್ ಫೋಟೋವನ್ನು ತನ್ನ ಕರೆನ್ಸಿ ನೋಟಿನಲ್ಲಿ ಮುದ್ರಿಸಿದರೆ. ಪಾಕಿಸ್ತಾನ ಮೊಹಮ್ಮದ್ ಅಲಿ ಜಿನ್ನಾ ಅವರ ಫೋಟೋವನ್ನು ತನ್ನ ಕರೆನ್ಸಿ ನೋಟಿನಲ್ಲಿ ಮುದ್ರಿಸುತ್ತದೆ. ಚೀನಾ ಮಾವೋ ಜೆಡಾಂಗ್ ಭಾವಚಿತ್ರ ಬಳಸಿದ್ರೆ, ಭಾರತವು ಸ್ವಾತಂತ್ರ್ಯ ಹೋರಾಟಗಾರ ಮಹಾತ್ಮಾ ಗಾಂಧಿಜೀಯವರ ಫೋಟೋವನ್ನು ಬಳಸುತ್ತದೆ.

Advertisment

publive-image

ಇದೆಲ್ಲದರ ಮಧ್ಯೆ ನಿಮಗೆ ಗೊತ್ತಿಲ್ಲದ ಅಥವಾ ಬಹುತೇಕರು ಅರಿಯದ ಒಂದು ವಿಷಯ ಅಂದ್ರೆ ಸ್ವತಂತ್ರ ಭಾರತದ ಆರಂಭದಲ್ಲಿ ಗಾಂಧೀಜಿಯವರು ಫೋಟೋ ಕರೆನ್ಸಿ ನೋಟಿನಲ್ಲಿ ಮುದ್ರಿಸಲು ನಿರಾಕರಿಸಲಾಗಿತ್ತು. ಮಹಾತ್ಮ ಗಾಂಧಿ ರಾಷ್ಟ್ರಪಿತ ಹೀಗಾಗಿ ಅವರ ಭಾವಚಿತ್ರ ನಮ್ಮ ಕರೆನ್ಸಿ ನೋಟಿನಲ್ಲಿ ಮುದ್ರಿಸುವುದು ಪರಮ ಆಯ್ಕೆಯೇ ಹೌದು. ಆದ್ರೆ ಭಾರತ ಸ್ವತಂತ್ರಗೊಂಡಾಗ ನಮ್ಮ ಕರೆನ್ಸಿ ನೋಟಿನಲ್ಲಿ ಅವರ ಭಾವಚಿತ್ರ ಮೊದಲ ಆಯ್ಕೆ ಆಗಿರಲಿಲ್ಲ. ಹಾಗಿದ್ರೆ ಯಾರು? ಹೇಗೆ ಮಹಾತ್ಮಾ ಗಾಂಧಿಜಿ ಭಾರತೀಯ ಕರೆನ್ಸಿ ನೋಟುಗಳ ಮುಖಭಾವವಾಗಿ ಹೋದರು ಎಂಬುದನ್ನೇ ಈ ಲೇಖನದಲ್ಲಿ ನಾವು ನಿಮಗೆ ಹೇಳುತ್ತೇವೆ.

publive-image

ಇದನ್ನೂ ಓದಿ:ಸದ್ಗುರು ಜಗ್ಗಿ ವಾಸುದೇವ್​ ಪಾದದ ಫೋಟೋಗಳು ಮಾರಾಟಕ್ಕೆ! ಬೆಲೆ ಎಷ್ಟು ಗೊತ್ತಾ?

ಸ್ವಾತಂತ್ರ್ಯ ಬಂದ ಬಳಿಕ ಅದೆಷ್ಟೊ ವರ್ಷಗಳ ಕಾಲ ಬ್ಯಾಂಕ್​ ನೋಟ್​ಗಳಲ್ಲಿ ಈ ದೇಶದ ಪರಂಪರೆಯನ್ನು ಪ್ರತಿನಿಧಿಸುವ ಭಾವಚಿತ್ರಗಳೇ ಜಾಗ ಪಡೆದಿದ್ದವು. 195 ರಿಂದ 60 ರವರೆಗೂ ಪ್ರಾಣಿಗಳ ಫೋಟೋಗಳನ್ನು ಬಳಸುತ್ತಿದ್ದರು. ಉದಾಹರಣೆಗೆ ರಾಷ್ಟ್ರ ಪ್ರಾಣಿ ಹುಲಿ, ಕರಡಿಯಂತ ಭಾವಚಿತ್ರಗಳು. ಹೀರಾಕುಂಡ ಡ್ಯಾಮ್​, ಆರ್ಯಭಟ್ ಸೆಟ್​ಲೈಟ್​ನಂತಹ ಭಾವಚಿತ್ರಗಳು ಭಾರತೀಯ ಕರೆನ್ಸಿ ನೋಟುಗಳಲ್ಲಿ ಇರುತ್ತಿದ್ದವು.

Advertisment

ಇದನ್ನು ಓದಿ:ಯುದ್ಧರಂಗವನ್ನು ಮೀರಿದ ಇಸ್ರೇಲ್- ಇರಾನ್ ಸಮರ: ಭಾರತದ ವ್ಯಾಪಾರ, ಪೂರೈಕೆ ಸರಪಳಿಯ ಮೇಲೆ ಯುದ್ಧದ ಪರಿಣಾಮ

1969ರಲ್ಲಿ ಮಹಾತ್ಮಾ ಗಾಂಧೀಜಿಯವರ 100ನೇ ಜನ್ಮದಿನೋತ್ಸವದ ಅಂಗವಾಗಿ ಮುದ್ರಿಸಲಾದ ನೋಟುಗಳಲ್ಲಿ ಮೊದಲ ಬಾರಿ ಗಾಂಧೀಜಿಯವರ ಭಾವಚಿತ್ರ ಭಾರತೀಯ ಕರೆನ್ಸಿ ನೋಟುಗಳಲ್ಲಿ ಕಾಣಿಸಿಕೊಂಡಿತು.

ಇನ್ನು 1987ರಲ್ಲಿ ಅಂದಿನ ರಾಜೀವ ಗಾಂಧಿ ಸರ್ಕಾರ 500 ರೂಪಾಯಿ ನೋಟುಗಳನ್ನು ಪರಿಚಯಿಸಿತು. ಒಂಬತ್ತು ವರ್ಷಗಳ ಬಳಿಕ ಅಧಿಕಾರದಲ್ಲಿದ್ದ ಜನತಾ ಸರ್ಕಾರ ದೊಡ್ಡ ಮೊತ್ತ ನೋಟುಗಳನ್ನು ಅಮಾನ್ಯೀಕರಣ ಮಾಡಿ ಗಾಂಧೀಜಿ ಭಾವಚಿತ್ರವಿರುವ ಹೊಸ ಐನೂರು ರುಪಾಯಿ ನೋಟುಗಳನ್ನು ಪರಿಚಯಿಸಿತು .ಮೊದಲ ಬಾರಿ 500 ರೂಪಾಯಿ ಕರೆನ್ಸಿ ನೋಟಿನಲ್ಲಿ ಗಾಂಧೀಜಿಯವರ ಭಾವಚಿತ್ರ ಕಾಣಿಸಿಕೊಂಡಿದ್ದು ಹೀಗೆ. 1990ರ ಮಧ್ಯದಲ್ಲಿ ಭಾರತೀಯ ರಿಸರ್ವ ಬ್ಯಾಂಕ್​ ಮಹಾತ್ಮಾ ಗಾಂಧೀಜಿಯವರ ಭಾವಚಿತ್ರಗಳಿರುವ ನೋಟುಗಳ ಸರಣಿಯನ್ನು ಬಿಡುಗಡೆ ಮಾಡಿತು 1996ರಲ್ಲಿ ನೂತನ ಭದ್ರಾತ ವೈಶಿಷ್ಟ್ಯಗಳನ್ನ ಪರಿಚಯಿಸಿದ ಆರ್​ಬಿಐ ವಾಟರ್​ಮಾರ್ಕ್ ಸೆಕ್ಯೂರಿಟಿ ಥ್ರೆಡ್ಸ್​ಗಳ ಫೀಚರ್ಸ್​ ಇರುವ ನೋಟುಗಳನ್ನು ಪರಿಚಯಿಸಿತು. ಅಂದಿನಿಂದ ಮಹಾತ್ಮಾ ಗಾಂಧೀಜಿ ಭಾರತೀಯ ಕರೆನ್ಸಿ ನೋಟುಗಳಲ್ಲಿ ಖಾಯಂ ಸ್ಥಾನ ಪಡೆದರು. ಅಂದಿನಿಂದ ಇಂದಿನವರೆಗೂ ಎಲ್ಲಾ ಕರೆನ್ಸಿ ನೋಟುಗಳಲ್ಲಿ ರಾಷ್ಟ್ರಪಿತ ಗಾಂಧೀಜಿಯವರ ಹೆಸರು ಇರುತ್ತದೆ.

Advertisment

ಇದನ್ನೂ ಓದಿ: ಇಸ್ರೇಲ್- ಇರಾನ್ ಮಧ್ಯೆ ಯುದ್ಧ ಹೆಚ್ಚಾದರೆ ಭಾರತಕ್ಕೆ ಎಫೆಕ್ಟ್​.. ದೇಶದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಏನಾಗುತ್ತೆ..?

ಈ ಹಿಂದೆ ಭಾರತೀಯ ಕರೆನ್ಸಿ ನೋಟಿನ ವಿಚಾರವಾಗಿ ಅನೇಕ ಸಲಹೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದ್ದವು. ಎಲ್ಲಾ ನೋಟುಗಳಲ್ಲಿ ಗಾಂಧೀಜಿಯರ ಫೋಟೋಗಳನ್ನೆ ಬಳಸುವ ಬದಲು, ಕೆಲವು ನೋಟುಗಳಲ್ಲಿ ಸುಭಾಷ್ ಚಂದ್ರ ಭೋಸ್, ಜವಾಹರಲಾಲ್ ನೆಹರು, ರಾಣಿ ಲಕ್ಷ್ಮೀಬಾಯಿ ಸರ್ದಾರ್ ಪಟೇಲರ ಫೋಟೋಗಳನ್ನು ಬಳಸುವಂತೆ ಕೋರಲಾಗಿತ್ತು. ಯುಪಿಎ ಸಮಯದಲ್ಲಿಯೇ ಇದೇ ವಿಚಾರವಾಗಿ ಒಂದು ಕಮೀಟಿಯನ್ನು ರಚನೆ ಮಾಡಲಾಗಿತ್ತು. ಆ ಕಮೀಟಿ ಗಾಂಧೀಜಿ ಹೊರತಾಗಿ ಬೇರೆ ಯಾರ ಫೋಟೋವನ್ನು ಬಳಸುವ ಅವಶ್ಯಕತೆಯಿಲ್ಲ ಎಂಬ ನಿರ್ಧಾರಕ್ಕೆ ಬಂದಿತ್ತು ಎಂದು 2016ರಲ್ಲಿ ಅಂದಿನ ರಾಜ್ಯ ಖಾತೆ ಹಣಕಾಸು ಸಚಿವ ಅರ್ಜುನ್ ರಾಮ್ ಮೇಘವಾಲಾ ಹೇಳಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment