ಡೆತ್ ಓವರ್ಗಳಲ್ಲಿ ಮನರಂಜನೆಗಿಲ್ಲ ಬ್ರೇಕ್
IPLನ ಅತಿ ಹಿರಿಯ ವಿಕೆಟ್ ಕೀಪರ್ಸ್ ಅಂಡ್ ಫಿನಿಷರ್ಸ್
ಇಳಿ ವಯಸ್ಸಲ್ಲಿ ಯುವಕರನ್ನ ನಾಚಿಸುವ ಆಟ
16 ಐಪಿಎಲ್ ಸೀಸನ್ ಒಂದು ಲೆಕ್ಕವಾದ್ರೆ, ಪ್ರಸಕ್ತ ಐಪಿಎಲ್ ಸೀಸನ್ನದ್ದೇ ಮತ್ತೊಂದು ಲೆಕ್ಕ. ಇದನ್ನ ಮೋಸ್ಟ್ ಸ್ಪೆಷಲ್ ಸೀಸನ್ ಅಂದ್ರೆ ತಪ್ಪಾಗಲ್ಲ.. ಪ್ರತಿ ಸೀಸನ್ ಯಂಗ್ಸ್ಟರ್ಗಳ ಆರ್ಭಟವಾದ್ರೆ, ಈ ಸೀಸನ್ನಲ್ಲಿ ಈ ಸೀನಿಯರ್ಗಳ ದರ್ಬಾರ್ ನಡೀತಿದೆ. ಮಹೇಂದ್ರ ಸಿಂಗ್ ಧೋನಿ ಹಾಗೂ ದಿನೇಶ್ ಕಾರ್ತಿಕ್ ಆಟ ಯುವಕರೂ ನಾಚಿಸುವಂತಿದೆ.
ಐಪಿಎಲ್ನಲ್ಲಿ ಮನರಂಜನೆಗೆ ಕೊರತೆ ಇಲ್ಲ. ರೆಕಾರ್ಡ್ ಬ್ರೇಕರ್ ಮ್ಯಾಚ್ಗಳು, ಹೊಸ ಪ್ರತಿಭೆಗಳ ಪರ್ಫಾಮೆನ್ಸ್, ಬೌಂಡರಿ, ಸಿಕ್ಸರ್ಗಳ ಭರಾಟೆ ಜೋರಾಗಿ ನಡೀತಿದೆ. ಈ ಎಲ್ಲದರ ನಡುವೆ ಹೆಚ್ಚು ಗಮನ ಸೆಳೀತಾ ಇರೋದು ಇವರಿಬ್ಬರ ಬ್ಯಾಟಿಂಗ್. ಬ್ಯಾಟಿಂಗ್ ಅಂದ್ರೆ, ಹೀಗಿರಬೇಕು ಅಂತ ಎ್ಲರಲೂ ಅಂತಿದ್ದಾರೆ. ಅಂದ್ಹಾಗೆ ಆ ಇಬ್ಬರು ಮಾಂತ್ರಿಕರು ಬೇರಾರೂ ಅಲ್ಲ.. ಮಹೇಂದ್ರ ಸಿಂಗ್ ಧೋನಿ ಹಾಗೂ ದಿನೇಶ್ ಕಾರ್ತಿಕ್.
ಇದನ್ನೂ ಓದಿ:ಸೋರುವ ಬಿಡಾರ, ನೆನೆದು ಹೋಗ್ತಿದ್ದ ಪುಸ್ತಕಗಳು.. ಛಲ ಬಿಡದೇ UPSC ಬೆನ್ನೇರಿ ಸಾಧಿಸಿದ ಛಲಗಾರ..!
ಪ್ರಸಕ್ತ ಸೀಸನ್ನಲ್ಲಿ ಯಾರ ಆಟ ಹೆಚ್ಚು ನೆನಪಿಗೆ ಬರ್ತಿದೆಯೋ ಇಲ್ವೋ, ಯಾರ ಆಟದ ಬಗ್ಗೆ ಫ್ಯಾನ್ಸ್ ಬಹುಪರಾಕ್ ಎಂದು ಮೆಚ್ಚಿಕೊಂಡಿದ್ದಾರೋ ಇಲ್ವೋ.. ಆದ್ರೆ, ಪ್ರಸಕ್ತ ಐಪಿಎಲ್ನಲ್ಲಿ ಇವರಿಬ್ಬರ ಆಟವನ್ನ ಮೆಚ್ಚಿಕೊಳ್ಳದ ಕ್ರಿಕೆಟ್ ಅಭಿಮಾನಿ ಒಬ್ಬರೂ ಇರಲಾರರು. ಇಳಿ ವಯಸ್ಸಿನಲ್ಲಿ ಇವ್ರು ಮಾಡ್ತಿರೋ ಮೋಡಿ.. ವಾವ್ಹ್ ಅನ್ನಿಸುವಂತಿದೆ.
ಪ್ರಸಕ್ತ ಐಪಿಎಲ್ನಲ್ಲಿ ಧೋನಿ, ಡಿಕೆ ಅಬ್ಬರ
ಮಹೇಂದ್ರ ಸಿಂಗ್ ಧೋನಿ, ದಿನೇಶ್ ಕಾರ್ತಿಕ್. ಪ್ರಸಕ್ತ ಐಪಿಎಲ್ನಲ್ಲಿ ಬಿಂದಾಸ್ ಬ್ಯಾಟಿಂಗ್ ನಡೆಸ್ತಿರೋ ಆಟಗಾರರು. ಚೆನ್ನೈ ಸೂಪರ್ ಕಿಂಗ್ಸ್ ಪರ ಧೋನಿ ದರ್ಬಾರ್ ನಡೆಸ್ತಿದ್ರೆ. ಆರ್ಸಿಬಿ ಪರ ದಿನೇಶ್ ಕಾರ್ತಿಕ್ ಬ್ಯಾಟಿಂಗ್ ದಂಡಯಾತ್ರೆ ನಡೆಸ್ತಿದ್ದಾರೆ. ಡೆತ್ ಓವರ್ಗಳಲ್ಲಿ ಕ್ರೀಸ್ಗೆ ಎಂಟ್ರಿ ನೀಡ್ತಿರೋ ಇವರಿಬ್ಬರು, ಸ್ಟೇಡಿಯಂನಲ್ಲಿ ಫ್ಯಾನ್ಸ್ಗೆ ಭರಪೂರ ಮನರಂಜನೆಯನ್ನೇ ನೀಡ್ತಿದ್ದಾರೆ. ಅದು ಕೂಡ ಬರೋಬ್ಬರಿ 200ರ ಸ್ಟ್ರೈಕ್ರೇಟ್ನಲ್ಲಿ.
ಇದನ್ನೂ ಓದಿ: ಐಪಿಎಲ್ ಪಂದ್ಯದ ವೇಳೆ ಕಣ್ಣೀರಿಟ್ಟ ಶಾರುಖ್ ಖಾನ್, ನಟನ ನೋಡಿ ಅಭಿಮಾನಿಗಳೂ ಭಾವುಕ
ಪ್ರಸಕ್ತ ಐಪಿಎಲ್ನಲ್ಲಿ ಧೋನಿ-ದಿನೇಶ್
ಪ್ರಸಕ್ತ ಐಪಿಎಲ್ನಲ್ಲಿ ಧೋನಿ ಎದುರಿಸಿದ 25 ಎಸೆತಗಳಿಂದ 59 ರನ್ ಸಿಡಿಸಿದ್ರೆ. 236ರ ಸ್ಟ್ರೈಜ್ರೇಟ್ನಲ್ಲಿ ಬ್ಯಾಟ್ ಬೀಸಿರುವ ಧೋನಿ, 4 ಬೌಂಡರಿ, 6 ಸಿಕ್ಸರ್ ದಾಖಲಿಸಿದ್ದಾರೆ. ಇನ್ನು ದಿನೇಶ್ ಕಾರ್ತಿಕ್, 110 ಎಸೆತಗಳಿಂದ 226 ರನ್ ಸಿಡಿಸಿದ್ದು, 16 ಬೌಂಡರಿ, 18 ಸಿಕ್ಸರ್ ಬಾರಿಸಿರುವ ದಿನೇಶ್, 205.45ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಝಳಪಿಸಿದ್ದಾರೆ. ಆ ಮೂಲಕ ಡೆತ್ ಓವರ್ಗಳಲ್ಲಿ ನಮ್ಮನ್ನ ಮೀರಿಸುವವರು ಯಾರಿಲ್ಲ ಅಂತಿದ್ದಾರೆ.
ಐಪಿಎಲ್ನ ಅತಿ ಹಿರಿಯ ವಿಕೆಟ್ ಕೀಪರ್ಸ್ ಅಂಡ್ ಫಿನಿಷರ್ಸ್..!
ಧೋನಿ ಹಾಗೂ ದಿನೇಶ್ ಕಾರ್ತಿಕ್.. ಐಪಿಎಲ್ ಇತಿಹಾಸದ ಅತಿ ಹಿರಿಯ ವಿಕೆಟ್ ಕೀಪರ್ಸ್ ಹಾಗೂ ಮ್ಯಾಚ್ ಫಿನಿಷರ್ಸ್.. 2008ರ ಚೊಚ್ಚಲ ಐಪಿಎಲ್ನಿಂದ ಈವರೆಗೆ.. ಅಂದ್ರೆ, ಸತತ 17 ಸೀಸನ್ಗಳಲ್ಲಿ ವಿಕೆಟ್ ಕೀಪರ್ಗಳಾಗಿ, ಮ್ಯಾಚ್ ಫಿನಿಷರ್ಗಳಾಗಿ ಕಾರ್ಯ ನಿರ್ವಹಿಸಿದ್ದಾರೆ. ಸೀಸನ್ನಿಂದ ಸೀಸನ್ಗೆ ಇವ್ರ ಬ್ಯಾಟಿಂಗ್ ಖದರ್ ಹೆಚ್ಚಾಗ್ತಿದೆಯೇ ಹೊರತು ಕಡಿಮೆಯಾಗಿಲ್ಲ. ಪ್ರಸಕ್ತ ಸೀಸನ್ನಲ್ಲೂ ತಾವು ಆಡ್ತಿರೋ ಮೊದಲ ಐಪಿಎಲ್ ಸೀಸನ್ ಎಂಬ ಉತ್ಸಾಹದಲ್ಲೇ ಬ್ಯಾಟಿಂಗ್ ನಡೆಸ್ತಿದ್ದಾರೆ. ವಿಕೆಟ್ ಹಿಂದೆಯೂ ಜಾದೂ ಮಾಡ್ತಿದ್ದಾರೆ. ತಂಡದ ಗೆಲುವಿಗಾಗಿ ಛಲದ ಹೋರಾಟ ನಡೆಸ್ತಿದ್ದಾರೆ. ಇನ್ಫ್ಯಾಕ್ಟ್.. ಇವರಿಬ್ಬರ ಆಟ ನಿಜಕ್ಕೂ ಯುವಕರೂ ನಾಚುವಂತಿದೆ.
ಇದನ್ನೂ ಓದಿ:ಶೀಘ್ರದಲ್ಲೇ ಆರ್ಸಿಬಿ ಮಾಲೀಕರ ಬದಲಾವಣೆ..? ಬಿಸಿಸಿಐ ಮೇಲೆ ಹೆಚ್ಚಿದ ಭಾರೀ ಒತ್ತಡ..!
ಈ ಬಾರಿಯ ಐಪಿಎಲ್ ‘ಗೋಲ್ಡೆಸ್ಟ್ ಸೀಸನ್’..!
ಕಳೆದ 16 ಸೀಸನ್ಗಳಿಗೆ ಹೋಲಿಸಿದ್ರೆ ಈ ಸೀಸನ್ ನಿಜಕ್ಕೂ ಗೋಲ್ಡನ್ ಸೀಸನ್. ಯಾಕಂದ್ರೆ ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ ಆಟಗಾರನೊಬ್ಬ 37ರ ವಯಸ್ಸಿನ ಬಳಿಕ ವಿಕೆಟ್ ಕೀಪರ್ ಅಂಡ್ ಮ್ಯಾಚ್ ಫಿನಿಷರ್ಗಳಾಗಿ ಕಾರ್ಯ ನಿರ್ವಹಿಸಿದ ಉದಾಹರಣೆಗಳೇ ಇಲ್ಲ. ಅಂತಹದ್ರಲ್ಲಿ, 42 ವರ್ಷದ ಧೋನಿ, 38 ವರ್ಷದ ದಿನೇಶ್ ಐಪಿಎಲ್ನಲ್ಲಿ ಚಮತ್ಕಾರ ಮಾಡ್ತಿದ್ದಾರೆ. ಮ್ಯಾಚ್ ಫಿನಿಷರ್ಗಳಾಗಿ ಯುವ ಆಟಗಾರರಿಗೆ ಸೆಡ್ಡು ಹೊಡೆಯುತ್ತಿದ್ದಾರೆ.
ಬೇಸರದ ಸಂಗತಿ ಅಂದ್ರೆ ಈ ಹಿರಿಯ ವಿಕೆಟ್ ಕೀಪರ್ಸ್ ಆ್ಯಂಡ್ ಮ್ಯಾಚ್ ಫಿನಿಷರ್ಸ್ ನಿವೃತ್ತಿಯ ಅಂಚಿನಲ್ಲಿದ್ದಾರೆ. ಬಹುತೇಕ ಇದೇ ಸೀಸನ್ ಇವರಿಬ್ಬರಿಗೂ ಕೊನೆಯ ಐಪಿಎಲ್. ಈ ಸೀಸನ್ನ ಉಳಿದ ಪಂದ್ಯಗಳಲ್ಲಿ ಧೋನಿ, ಕಾರ್ತಿಕ್ ಮತ್ತಷ್ಟು ಆರ್ಭಟಿಸಲಿ ಅನ್ನೋದೇ ಎಲ್ಲರ ಆಶಯ.
ವಿಶೇಷ ವರದಿ: ಸಂತೋಷ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್