newsfirstkannada.com

ಕೊನೆಯಲ್ಲಿ ಬಂದು 2 ಸಿಕ್ಸ್ ಬಾರಿಸಿದ ಸಿರಾಜ್; 13 ಎಸೆತದಲ್ಲಿ 33 ರನ್​ ಚಚ್ಚಿದ ಲೋಮ್ರಾರ್ ಆಟ ಹೇಗಿತ್ತು..!

Share :

Published April 3, 2024 at 10:16am

Update April 3, 2024 at 10:35am

    ಚಿನ್ನಸ್ವಾಮಿಯಲ್ಲಿ ಡಿಕಾಕ್ ಪವರ್ ಶೋಗೆ ಆರ್​ಸಿಬಿ ದಂಗು

    ಪೂರನ್ ಪಂಚ್, ಮಯಾಂಕ್ ಫೈರಿ ಸ್ಪೆಲ್​ಗೆ ಆರ್​ಸಿಬಿ ಸ್ಟನ್

    ಲಕ್ನೋ ಮಾರಕ ದಾಳಿಗೆ ತತ್ತರಿಸಿ ಸೋಲಿನ ಮುಖಭಂಗ

ಆರ್​​​ಸಿಬಿ ಅಭಿಮಾನಿಗಳ ನಿರೀಕ್ಷೆ ಮತ್ತೊಮ್ಮೆ ಹುಸಿಯಾಯ್ತು. ಬ್ಯಾಟಿಂಗ್​ನಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ ಆರ್​ಸಿಬಿ, ಲಕ್ನೋ ಬೌಲರ್​​ಗಳ ಮಾರಕ ದಾಳಿಗೆ ತತ್ತರಿಸಿ ಸೋಲಿನ ಮುಖಭಂಗ ಅನುಭವಿಸಿತು. ಕ್ವಿಂಟನ್ ಡಿಕಾಕ್ ಪವರ್ ಶೋ.. ಸ್ಲಾಗ್​ ಓವರ್​ನಲ್ಲಿ ಪೂರನ್ ಪಂಚ್.. ಆರ್​ಸಿಬಿ ಬ್ಯಾಟರ್​ಗಳ ಫ್ಲಾಫ್ ಶೋ.. ಮಯಾಂಕ್ ಯಾದವ್ ಫೈರಿ ಸ್ಪೆಲ್.. ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಮೂರನೇ ಸೋಲಿನ ಅಘಾತ. ಇದಕ್ಕೆಲ್ಲಾ ಸಾಕ್ಷಿಯಾಗಿದ್ದು ಚಿನ್ನಸ್ವಾಮಿಯ ಸ್ಟೇಡಿಯುಂ..

ಇದನ್ನೂ ಓದಿ: RCB ಫ್ಯಾನ್ಸ್​ಗೆ ಸಲಾಂ ಹೊಡೆದ ಎಲ್​ಎಸ್​ಜಿ; ಟ್ವೀಟ್ ಮಾಡಿ ಹೇಳಿದ್ದೇನು ಗೊತ್ತಾ..!

ಹೌದು! ನಿನ್ನೆ ಲಕ್ನೋ ಎದುರು ಗೆಲ್ಲೋ ಆತ್ಮವಿಶ್ವಾಸದಲ್ಲಿದ್ದ ಆರ್​ಸಿಬಿ, ಟಾಸ್ ಗೆದ್ದು ಎದುರಾಳಿ ಲಕ್ನೋ ತಂಡವನ್ನ ಬ್ಯಾಟಿಂಗ್ ಆಹ್ವಾನಿಸಿತು. ಇದರಂತೆ ಬ್ಯಾಟಿಂಗ್ ಆರಂಭಿಸಿದ ಕ್ವಿಂಟನ್ ಡಿಕಾಕ್ ಹಾಗೂ ಕೆ.ಎಲ್.ರಾಹುಲ್​ ಸಾಲಿಡ್ ಓಪನಿಂಗ್ ನೀಡಿದ್ರು.
53 ರನ್​ಗಳ ಉತ್ತಮ ಅಡಿಪಾಯ ಹಾಕಿದ್ರು. ಈ ಹಂತದಲ್ಲಿ 20 ರನ್ ಗಳಿಸಿದ್ದ ರಾಹುಲ್, ಮ್ಯಾಕ್ಸಿ ಬೌಲಿಂಗ್​ನಲ್ಲಿ ಕ್ಯಾಚ್ ನೀಡಿ ಹೊರ ನಡೆದ್ರೆ. ಈ ಬೆನ್ನಲ್ಲೇ ಬಂದ ಪಡಿಕ್ಕಲ್, 6 ರನ್​​ಗಳಿಗೆ ಔಟಾದರು. 2 ಸಿಕ್ಸರ್​, 1 ಬೌಂಡರಿ ಬಾರಿಸಿ ಡೇಂಜರಸ್ ಆಗುವ ಮುನ್ಸೂಚನೆ ನೀಡಿದ ಸ್ಟೋಯ್ನಿಸ್, ಮ್ಯಾಕ್ಸ್​ವೆಲ್​ಗೆ ಬಲಿಯಾದರು.

ಇದನ್ನೂ ಓದಿ: 16 ಅಂತಸ್ತಿನ ಕಟ್ಟಡದಲ್ಲಿ ಘೋರ ಬೆಂಕಿ ದುರಂತ; 29 ಮಂದಿ ಸಜೀವ ದಹನ

ಅರ್ಧಶತಕ ಸಿಡಿಸಿದ ಕ್ವಿಂಟನ್ ಡಿಕಾಕ್
ಒಂದ್ಕಡೆ ವಿಕೆಟ್ ಬೀಳುತ್ತಿದ್ರು, ಲೀಲಜಾಲವಾಗಿ ಬ್ಯಾಟ್ ಬೀಸಿದ ಡಿಕಾಕ್, ಅರ್ಧಶತಕ ಸಿಡಿಸಿ ಮಿಂಚಿದ್ರು. 8 ಬೌಂಡರಿ, 5 ಸಿಕ್ಸರ್​ ಒಳಗೊಂಡ 81 ರನ್ ಸಿಡಿಸಿ ಮುನ್ನುಗ್ಗುತ್ತಿದ್ದ ಡಿಕಾಕ್​​ಗೆ ಟೋಪ್ಲೆ ಬ್ರೇಕ್ ಹಾಕಿದ್ರು.

ಸ್ಲಾಗ್​ ಓವರ್​ನಲ್ಲಿ ಪೂರನ್ ಪಂಚ್..!
ಡಿಕಾಕ್ ನಿರ್ಗಮನದ ಬಳಿಕ ಚಾರ್ಜ್​ ತೆಗೆದುಕೊಂಡ ನಿಕೋಲಸ್ ಪೂರ್, 21 ಎಸೆತಗಳಲ್ಲಿ 1 ಬೌಂಡರಿ, 5 ಸಿಕ್ಸರ್​ ಒಳಗಿಂಡ ಅಜೇಯ 40 ರನ್​​ ಬಾರಿಸಿದ್ರು. ಇದರೊಂದಿಗೆ ಲಕ್ನೋ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 181 ರನ್ ದಾಖಲಿಸಿತು.

ಇದನ್ನೂ ಓದಿ: RCB ವಿರುದ್ಧದ ಪಂದ್ಯದಲ್ಲಿ ಮಯಾಂಕ್ ಯಾದವ್ ದಾಖಲೆ; ಅಚ್ಚರಿಯ ಬೌಲಿಂಗ್ ಸ್ಪೀಡ್​..! ವಿಡಿಯೋ

182 ರನ್​​ಗಳ ಟಾರ್ಗೆಟ್ ಬೆನ್ನಟ್ಟಿದ ಆರ್​ಸಿಬಿಗೆ ಶಾಕ್
182 ರನ್​​ಗಳ ಗುರಿ ಬೆನ್ನಟ್ಟಿದ ಆರ್​ಸಿಬಿಗೆ ಕೊಹ್ಲಿ ಹಾಗೂ ಫಾಫ್ ಉತ್ತಮ ಅಡಿಪಾಯ ನಿರೀಕ್ಷೆ ಹುಟ್ಟಿಹಾಕಿದ್ರು. ವಿರಾಟ್ 22 ರನ್​ಗಳಿಗೆ ಆಟ ಅಂತ್ಯಗೊಳಿಸಿದ್ರೆ, ಫಾಫ್ ಇಲ್ಲದ ರನ್ ಕದಿಯಲು ಯತ್ನಿಸಿ ರನೌಟ್​ ಬಲೆಗೆ ಸಿಲುಕಿದ್ರು.

ಫ್ಲಾಫ್ ಶೋ.. ಲೋಮ್ರಾರ್ ಏಕಾಂಗಿ ಹೋರಾಟ..!
ಫಾಫ್ ವಿಕೆಟ್ ಪತನದ ಬಳಿಕ ಬಂದ ಮ್ಯಾಕ್ಸ್​ವೆಲ್, ಕಮರೂನ್ ಗ್ರೀನ್, ವೇಗಿ ಮುಯಾಂಕ್ ಯಾದವ್​​​ಗೆ ವಿಕೆಟ್ ಒಪ್ಪಿಸಿ ಹೊರನಡೆದ್ರೆ. ಜೀವದಾನದ ಲಾಭ ಪಡೆಯುವಲ್ಲಿ ವಿಫಲರಾದ ಅನುಜ್ 11 ರನ್, ರಜತ್ ಪಾಟಿದಾರ್ 29 ರನ್​ಗಳಿಗೆ ಆಟ ಮುಗಿಸಿದ್ರೆ. ದಿನೇಶ್ ಕಾರ್ರಿಕ್​​ 4 ರನ್​ಗೆ ಸುತ್ತಾದರು. ಒಂಡ್ಕೆಡೆ ವಿಕೆಟ್ ಬೀಳುತ್ತಿದ್ದರೂ ಇಫ್ಯಾಕ್ಟ್​ ಪ್ಲೇಯರ್ ಆಗಿ ಬ್ಯಾಟ್ ಬೀಸಿದ ಲೋಮ್ರಾರ್, 13 ಎಸೆತಗಳಲ್ಲಿ 33 ರನ್​ ಸಿಡಿಸಿ ಔಟಾದ್ರೆ. ಕೊನೆಯಲ್ಲಿ ಸಿರಾಜ್, 2 ಸಿಕ್ಸರ್ ಸಿಡಿಸಿ ಸೋಲಿನ ಅಂತರವನ್ನಷ್ಟೇ ಕಡಿಮೆ ಮಾಡಿದ್ರು. ಆ ಮೂಲಕ ಲಕ್ನೋ 28 ರನ್​​ಗಳ ಗೆಲುವು ದಾಖಲಿಸಿಸ್ತು.‘

ಇದನ್ನೂ ಓದಿ: ರಾಯಚೂರಿನ ಅಭಿಮಾನಿಗೆ ಹೊಡಿಬೇಡಿ ಎಂದಿದ್ದ ಕೊಹ್ಲಿ, ಆದರೂ ಥಳಿಸಿದ ಬಾಡಿಗಾರ್ಡ್ಸ್

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕೊನೆಯಲ್ಲಿ ಬಂದು 2 ಸಿಕ್ಸ್ ಬಾರಿಸಿದ ಸಿರಾಜ್; 13 ಎಸೆತದಲ್ಲಿ 33 ರನ್​ ಚಚ್ಚಿದ ಲೋಮ್ರಾರ್ ಆಟ ಹೇಗಿತ್ತು..!

https://newsfirstlive.com/wp-content/uploads/2024/04/MAHIPAL.jpg

Load More