Advertisment

ದರ್ಶನ್‌ಗೆ ರಾಜಾತಿಥ್ಯದ ಕೇಸ್‌ಗೆ ಬಿಗ್‌ ಟ್ವಿಸ್ಟ್‌.. ಇಡೀ ರಾಜ್ಯದ ಕಾರಾಗೃಹಗಳಿಗೆ ಮಹತ್ವದ ಆದೇಶ; ಏನದು?

author-image
admin
Updated On
ವಿಗ್ ಲೆಸ್ ದರ್ಶನ.. ಜೈಲಿನಲ್ಲಿ A2 ಬಿಂದಾಸ್ ಲೈಫ್‌ನ ಅಸಲಿ ಮುಖ ಅನಾವರಣ; ಏನಿದರ ರಹಸ್ಯ?
Advertisment
  • ಪರಪ್ಪನ ಅಗ್ರಹಾರ ಜೈಲಿನಲ್ಲಿ ಬೆಳಕಿಗೆ ಬಂದಿದ್ದ ದರ್ಶನ್‌ ದರ್ಬಾರ್‌!
  • ಸೆಂಟ್ರಲ್ ಜೈಲಿನಲ್ಲಿದ್ದ ದರ್ಶನ್‌ಗೆ ರಾಜಾತಿಥ್ಯ ಬಳಿಕ ಮಹತ್ವದ ಆದೇಶ
  • ಜೈಲಿನಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನ ತಡೆಯಲು ಪ್ಲಾನ್

ಬೆಂಗಳೂರು: ರೇಣುಕಾಸ್ವಾಮಿ ಕೇಸ್‌ನಲ್ಲಿ ಅರೆಸ್ಟ್ ಆದ ನಟ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು. ಸುಮಾರು 2 ತಿಂಗಳ ಕಾಲ ಸೆಂಟ್ರಲ್ ಜೈಲಿನಲ್ಲಿದ್ದ ದರ್ಶನ್‌ಗೆ ರಾಜಾತಿಥ್ಯ ಸಿಕ್ಕಿತ್ತು. ಟೈಮ್‌, ಟೈಮ್‌ ಕಾಫಿ, ಟೀ ಸಿಗರೇಟ್‌ ಸೇದುತ್ತಾ ರೌಡಿಗಳ ಜೊತೆ ಆರಾಮಾಗಿ ಕಾಲ ಕಳೆಯುತ್ತಿದ್ದರು.

Advertisment

ಇದನ್ನೂ ಓದಿ: ಬೆಂಗಳೂರು ಡಾನ್​ ಯಾರು? ಭೂಗತ ಲೋಕದ ವಿಲ್ಸನ್ ಗಾರ್ಡನ್ ನಾಗನ ಭಯಾನಕ ಕಥೆ ಇಲ್ಲಿದೆ! 

ಒಂದು ಕೈಯಲ್ಲಿ ಕಾಫಿ ಮಗ್‌, ಮತ್ತೊಂದು ಕೈಯಲ್ಲಿ ಸಿಗರೇಟ್‌. ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‌ ದರ್ಬಾರ್‌ನ ಈ ಫೋಟೋ ಇಡೀ ರಾಜ್ಯವೇ ಬೆಚ್ಚಿ ಬೀಳುವಂತೆ ಮಾಡಿತ್ತು. ಸೆಂಟ್ರಲ್ ಜೈಲಿನಿಂದ ಬಿಡುಗಡೆಯಾದ ಈ ಫೋಟೋಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.

publive-image

ರೇಣುಕಾಸ್ವಾಮಿ ಕೊಲೆ ಆರೋಪಿಗೆ ಜೈಲಿನಲ್ಲಿ ಸಿಕ್ಕ ರಾಜಮರ್ಯಾದೆ, ರೌಡಿಶೀಟರ್‌ಗಳ ರಾಜಾತಿಥ್ಯ ಬೆಚ್ಚಿ ಬೀಳಿಸುವಂತೆ ಮಾಡಿತ್ತು. ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಯಾದ ಬಳಿಕ ರಾಜ್ಯ ಸರ್ಕಾರ ಜೈಲಿನ ರಾಜಾತಿಥ್ಯದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ.

Advertisment

publive-image

ಇದನ್ನೂ ಓದಿ: ಎಣ್ಣೆ ಮುಟ್ಟಲ್ಲ, ಧಮ್‌ ಹೊಡೆಯಲ್ಲ.. ದರ್ಶನ್‌ ಪಕ್ಕದಲ್ಲಿರೋ ವಿಲ್ಸನ್ ಗಾರ್ಡನ್ ನಾಗನಿಗಿದೆ 20 ವರ್ಷದ ರಕ್ತ ಚರಿತ್ರೆ! 

ಜೈಲಿನಲ್ಲಿ ನಟ ದರ್ಶನ್‌ಗೆ ರಾಜ್ಯಾತಿಥ್ಯ ನೀಡಿದ ಎಫೆಕ್ಟ್‌ನಿಂದ ಕಾರಾಗೃಹ ಮತ್ತು ಸುಧಾರಣಾ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಲಾಗಿದೆ. ಪ್ರಮುಖವಾಗಿ ಜೈಲರ್, ಮುಖ್ಯ ವೀಕ್ಷಕರ ವರ್ಗಾವಣೆ ಮಾಡಿ ಮಹತ್ವದ ಆದೇಶ ನೀಡಲಾಗಿದೆ. ಇದರ ಜೊತೆಗೆ ಜೈಲಿನಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನ ತಡೆಯಲು 43 ಮುಖ್ಯ ವೀಕ್ಷಕರನ್ನ ವರ್ಗಾವಣೆ ಮಾಡಿ ರಾಜ್ಯ ಒಳಾಡಳಿತ ಇಲಾಖೆ ಆದೇಶ ನೀಡಿದೆ. ಇನ್ಮುಂದೆ ರಾಜ್ಯದಲ್ಲಿ ಕಾರಾಗೃಹದಲ್ಲಿರುವ ಕೈದಿಗಳಿಗೆ ಸಿಗೋ ಅನಧಿಕೃತ ಸೌಲಭ್ಯಗಳಿಗೆ ಬ್ರೇಕ್ ಹಾಕಲು ಸರ್ಕಾರ ಮುಂದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment