newsfirstkannada.com

ಬೆಂಗಳೂರು ಡಾನ್​ ಯಾರು? ಭೂಗತ ಲೋಕದ ವಿಲ್ಸನ್ ಗಾರ್ಡನ್ ನಾಗನ ಭಯಾನಕ ಕಥೆ ಇಲ್ಲಿದೆ!

Share :

Published August 27, 2024 at 9:01pm

    ಬೆಂಗಳೂರು ಭೂಗತ ಲೋಕದ ದೊರೆ ಪಟ್ಟಕ್ಕಾಗಿ ಇಬ್ಬರ ಮಧ್ಯೆ ಫೈಟ್

    ಒಂದು ಕಾಲದಲ್ಲಿ ಗುರು-ಶಿಷ್ಯರಂತಿದ್ದವರು ಈಗ ಬದ್ಧ ವೈರಿಗಳಾಗಿದ್ದು ಹೇಗೆ?

    ಆ ಒಂದು ಮರ್ಡರ್ ಭೂಗತ ಲೋಕದ ಸಂಬಂಧವನ್ನೇ ಬದಲಿಸಿತಾ?

ಬೆಂಗಳೂರು: ಭೂಗತಲೋಕ, ಇದು ಜಗತ್ತು ಮಲಗಿದ ಮೇಲೆ ತೆರೆದುಕೊಳ್ಳುವ ಲೋಕ. ಇಲ್ಲಿ ನಮಗೆ ಸಿಗೋದು ರಕ್ತಸಿಕ್ತ ಅಧ್ಯಾಯಗಳ ಪುಟಗಳು. ಈ ಪಾಪಿಗಳ ಲೋಕಕ್ಕೆ ಎಂಟ್ರಿ ಕೊಡಬೇಕು ಅಂದ್ರೆ ನೆತ್ತರಿನೊಂದಿಗೆ ಅಂಗೈಯನ್ನು ತೊಳೆದುಕೊಳ್ಳುವ ವಿದ್ಯೆ ಕಲಿತಿರಬೇಕು. ಇಲ್ಲಿ ರಕ್ತ ಹರಿಸಿಯೇ ಎಂಟ್ರಿ ಆಗುತ್ತೆ, ರಕ್ತದಿಂದಲೇ ಅಂತ್ಯವೂ ಆಗುತ್ತೆ. ಅಷ್ಟಕ್ಕೂ ಈ ಮಾತು ಏಕೆ ಅಂದ್ರೆ, ನಾಗನಿಗೆ ಫೈಟ್‌ ನೀಡೋದಕ್ಕೆ ಬೆಂಗಳೂರಲ್ಲಿ ಮತ್ತೊಬ್ಬ ಡಾನ್‌ ಇದ್ದಾನೆ. ಆತ ಬೇರೆಯಾರೋ ಅಲ್ಲ. ಒಂದ್‌ ಕಾಲದಲ್ಲಿ ವಿಲ್ಸನ್‌ ಗಾರ್ಡನ್‌ ನಾಗನ ಪರಮ ಗುರು. ಹಾಗಾದ್ರೆ, ಬೆಂಗಳೂರು ಕಬ್ಜಾಗೆ ಇಬ್ಬರು ಯಾವ್‌ ರೀತಿಯಲ್ಲಿ ಕಾಡ್ತಿದ್ದಾರೆ? ರಕ್ತಕ್ಕೆ ರಕ್ತ ಅಂತಾ ಹೇಗೆ ಜಿದ್ದಿಗೆ ಬಿದ್ದಾರೆ? ಗುರ ಶಿಷ್ಯರು ಪ್ರತ್ಯೇಕವಾಗೋದಕ್ಕೆ ಕಾರಣವೇನು? ಅದರ ಬಗ್ಗೆ ಸಂಪೂರ್ಣ ಮಾಹಿತಿ ಹೊತ್ತ ಲೇಖನವಿದು.

ಇದನ್ನೂ ಓದಿ: ದರ್ಶನ್‌ಗೂ ಮುಂಚೆ ಬೇಲ್ ಸಿಗುತ್ತಾ? ಕೋರ್ಟ್‌ ಮೊರೆ ಹೋದ ಪವಿತ್ರಾಗೆ ಪೊಲೀಸರಿಂದ 5 ಕೌಂಟರ್‌!

ಬೆಂಗಳೂರು ಹಾಗೂ ಮುಂಬೈಗೆ ಒಂದು ದೊಡ್ಡ ಭೂಗತ ಇತಿಹಾಸವಿದೆ. ಇಲ್ಲಿ ಗುರು ಶಿಷ್ಯರು ಪರಮ ವೈರಿಗಳಾದ ಕಥೆಗಳಿವೆ. ಪರಮ ವೈರಿಗಳು ಬದ್ಧ ಸ್ನೇಹಿತರಾದ ಕುರುಹುಗಳಿವೆ. ಈಗ ದರ್ಶನ್ ಕೇಸ್ ಬಳಿಕ ಬೆಂಗಳೂರಿನ ಮಾಜಿ ಗುರು ಶಿಷ್ಯರ ಕಥೆಯೊಂದಕ್ಕೆ ಜೀವ ಬಂದಿದೆ. ಬೆಂಗಳೂರಿನ ಡಾನ್​ ಪಟ್ಟಕ್ಕಾಗಿ ವಿಲ್ಸನ್​ ಗಾರ್ಡನ್ ನಾಗಇಡೀ ಬೆಂಗಳೂರನ್ನೇ ಕಬ್ಜಾ ಮಾಡ್ಬೇಕು ಸಿಲಿಕಾನ್​ ಸಿಟಿಯನ್ನೇ ತನ್ನ ಕಣ್ಣ ಸನ್ನೆಯಲ್ಲಿ ಆಡಿಸ್ಬೇಕು, ವಿಲ್ಸನ್​ ಗಾರ್ಡನ್​ನ ತನ್ನ ಹೆಸರಿನಿಂದಲೇ ಬೆಂಗಳೂರಿನ ಕ್ಯಾಪಿಟಲ್ ಆಗಿ ಮಾಡ್ಬೇಕು ಅನ್ನೋ ಹಠ ನಾಗನಿಗಿದ್ಯಂತೆ. ನಂಬರ್ ಒನ್ ಡಾನ್ ಪಟ್ಟಕ್ಕಾಗಿ ಮತ್ತೊಬ್ಬ ಡಾನ್​ ಜೊತೆಗೆ ಸಮರ ನಡೆಸ್ತಾನೇ ಇದ್ದಾನಂತೆ.

ಇದನ್ನೂ ಓದಿ: ಜೈಲಲ್ಲಿ ರಾಜಾತಿಥ್ಯ.. ದರ್ಶನ್ ಬೆನ್ನಿಗೆ ನಿಂತ ಸುಮಲತಾ ಅಂಬರೀಶ್ ಶಾಕಿಂಗ್ ಹೇಳಿಕೆ; ಏನಂದ್ರು?

ಬೆಂಗಳೂರು ಡಾನ್ ಪಟ್ಟಕ್ಕಾಗಿ ಸೈಲೆಂಟ್​-ನಾಗನ​ ಫೈಟ್​!?
ಬೆಂಗಳೂರು ಅಂಡರ್​​ವರ್ಲ್ಡ್​ ಈಗ ಯಾರ ಕಂಟ್ರೋಲ್​ನಲ್ಲಿದೆ ಅಂತಾ ಕೇಳಿದ್ರೆ ಎರಡೇ ಹೆಸರು ಕೇಳಿಬರೋದು, ಒಂದು ಸೈಲೆಂಟ್‌ ಸುನೀಲ, ಮತ್ತೊಂದು ವಿಲ್ಸನ್‌ ಗಾರ್ಡನ್‌ ನಾಗ. ಇಬ್ಬರ ಗ್ಯಾಂಗು, ಪ್ಲಾನ್​ಗಳು ಬೇರೆ ಬೇರೆಯಿದ್ರೂ ಇಬ್ಬರ ಗುರಿ ಒಂದೇ. ಅದು ಬೆಂಗಳೂರೇ ತಮ್ಮದು ಅಂತಾ ಎದೆಯುಬ್ಬಿಸಿ ಹೇಳಿಕೊಳ್ಳೋದು. ಕುತೂಹಲಕಾರಿ ವಿಚಾರ ಅಂದ್ರೆ, ತೀರಾ ಇತ್ತೀಚಿನವರೆಗೂ ಇವತ್ತಿಗೂ ನಂಬರ್ ಒನ್ ಡಾನ್​ ಅನಿಸಿಕೊಳ್ಳುವ ಸೈಲೆಂಟ್‌ ಸುನಿಲನ ಹವಾ ಜೋರಾಗಿಯೇ ಇತ್ತು. ಯಾವುದೇ ದೊಡ್ಡ ದೊಡ್ಡ ಡೀಲ್‌ ಆಯ್ತು ಅಂದ್ರೆ ಅಲ್ಲಿ ಸೈಲೆಂಟ್‌ ಸುನೀಲ್​ ಹೆಸ್ರು ಕೇಳಿ ಬರ್ತಾ ಇತ್ತು. ಯಾವುದಾದ್ರೂ ರೌಡಿಶೀಟರ್ ಮರ್ಡರ್‌ ಆಯ್ತು ಅಂದ್ರೆ ಅಲ್ಲಿ ಸುನೀಲ್‌ ಪಟಾಲಂ ಹೆಸ್ರು ಮುನ್ನೆಲೆಗೆ ಬರ್ತಾ ಇತ್ತು. ಆದ್ರೆ, ಅದ್ಯಾವಾಗ ಸುನಿಲ್‌ ಪಾಲಿಟಿಕ್ಸ್‌ಗೆ ಎಂಟ್ರಿ ಕೊಟ್ಟಿದ್ದಾರೋ ಆವಾಗಿಂದ ನಾಗನ ಗ್ಯಾಂಗ್‌ ಮತ್ತಷ್ಟು ಸ್ಟ್ರಾಂಗ್‌ ಆಗ್ತಾ ಹೋಯ್ತು. ನಗರದಲ್ಲಿ ಸಖತ್​ ವೈಲೆಂಟ್‌ ಆಗೋದಕ್ಕೆ ಶುರುಮಾಡಿದ್ರು. ಬೆಂಗಳೂರಿನ ಗಲ್ಲಿ ಗಲ್ಲಿಗಳನ್ನೂ ತಮ್ಮ ಹಿಡಿತ ಸಾಧಿಸೋ ಪ್ರಯತ್ನಕ್ಕೆ ಕೈ ಹಾಕಿದ್ರು.

ಒಂದು ಕಾಲದ ಗುರು ಶಿಷ್ಯರು ಅದೊಂದು ಮರ್ಡರ್‌ನಿಂದ ದೂರ ದೂರ!
ಪಾತಕಿಗಳು, ನಟೋರಿಯಸ್‌ಗಳ ಸ್ಟೋರಿಯನ್ನು ಕೆದಕುತ್ತಾ ಹೋದ್ರೆ  ಒಂದಕ್ಕೊಂದು ತಳಕು ಆಗ್ತಾನೆ ಹೋಗುತ್ತವೆ. ನಾಗ ಹಾಗೂ ಸೈಲೆಂಟ್‌ ಸುನೀಲ್​ ವಿಚಾರದಲ್ಲೂ ಅಷ್ಟೇ. ಇಬ್ಬರು ಹಲವು ವರ್ಷಗಳ ಹಿಂದೆ ಗುರು ಶಿಷ್ಯರಾಗಿದ್ದವರು. ವಿಲ್ಸನ್​ ಗಾರ್ಡನ್ ನಾಗ 2009ರಿಂದ 2019ರವರೆಗೂ ಸೈಲೆಂಟ್ ಟೀಮ್​​ನಲ್ಲಿ ಆಕ್ಟೀವ್ ಮೆಂಬರ್ ಆಗಿದ್ದ. 2009ರಲ್ಲಿ ಕಲಾಸಿಪಾಳ್ಯ ಗೇಟ್ ಗಣೇಶನ ಕೊಲೆ ಆಗುತ್ತೆ. ಆ ಕೊಲೆಯನ್ನ ನಾಗನ ಗ್ಯಾಂಗ್‌ನವರೇ ಮಾಡ್ತಾರೆ. ಅದ್ರಲ್ಲಿ ನಾಗನೇ ಎ1 ಆರೋಪಿಯಾಗಿರ್ತಾನೆ. ಅಲ್ಲಿಂದ ಸೈಲೆಂಟ್‌ ಗ್ಯಾಂಗ್‌ಗೆ ನಾಗ ಎಂಟ್ರಿಯಾಗ್ತಾನೆ. ತದನಂತರ ಕೆಲ ಪ್ರಕರಣಗಳಲ್ಲಿ ಸೈಲೆಂಟ್ ಟೀಮ್​​ ಜೊತೆಗೆ ನಾಗ ಭಾಗಿಯಾಗಿರ್ತಾನೆ. ಆದ್ರೆ, ಅದೊಂದು ಮರ್ಡರ್‌ ಮುಹೂರ್ತ ಇಬ್ಬರೂ ಗುರು ಶಿಷ್ಯರನ್ನು ದೂರ ದೂರ ಮಾಡಿಬಿಡುತ್ತೆ.

ಇದನ್ನೂ ಓದಿ: ಇದು ಗೋವಾ ಟ್ರಿಪ್ಪಾ? ಜೈಲಿನ ಮತ್ತೊಂದು ಫೋಟೋ ವೈರಲ್‌; ರೌಡಿಗಳ ಬ್ರ್ಯಾಂಡೆಡ್ ಲೈಫ್‌ ಬಗ್ಗೆ ಕೇಳಿದ್ರೆ ಶಾಕ್‌ ಆಗ್ತೀರಾ!

2019ರಲ್ಲಿ ಶಾಂತಿನಗರ ಲಿಂಗ ಎಂಬ ರೌಡಿಶೀಟರ್​ ಮರ್ಡರ್ ಆಗತ್ತೆ. ಆ ಲಿಂಗ ಸೈಲೆಂಟ್ ಸುನಿಲ್​ನ ಶಿಷ್ಯನಾಗಿದ್ದ. ಆದ್ರೆ, ಆ ಮರ್ಡರ್‌ ಮಾಡೋದು ಡಬಲ್ ಮೀಟರ್ ಮೋಹನ ಅನ್ನೋ ಮತ್ತೊಬ್ಬ ನಟೋರಿಯಸ್​. ಅದ್ಯಾವಾಗ ಲಿಂಗನ ಹತ್ಯೆ ಆಯ್ತೋ? ಆವಾಗ್ಲೇ ಮೋಹನನ ಬೆನ್ನಿಗೆ ವಿಲ್ಸನ್‌ ಗಾರ್ಡನ್‌ ನಾಗ ನಿಂತುಕೊಳ್ತಾನೆ. ಇನ್ನು ಲಿಂಗನ ಹತ್ಯೆಗೆ ಪ್ರತೀಕಾರವಾಗಿ ಕೊಲೆಗೆ ಫೈನಾನ್ಸ್ ಮಾಡಿದ್ದ ಮದನ್ ಹತ್ಯೆಯೂ ನಡೆದು ಹೋಗುತ್ತೆ. ಮದನ್ ಹತ್ಯೆ ಮಾಡಿದ್ದು ಸಿದ್ದಾಪುರ ಮಹೇಶ್.

ಮದನ್ ಹತ್ಯೆಗೆ ಪ್ರತೀಕಾರವಾಗಿ ನಾಗನ ಟೀಂನಿಂದ ಆಡುಗೋಡಿಯ ಬಬ್ಲಿ ಮರ್ಡರ್ ನಡೆಯುತ್ತೆ. ಬಬ್ಲಿ ಮರ್ಡರ್​ಗೆ ಪ್ರತೀಕಾರವಾಗಿ ನಾಗನಿಗೆ ಜೈಲಲ್ಲೆ ಸಿದ್ದಾಪುರ ಮಹೇಶ ಸ್ಕೆಚ್‌ ಹಾಕ್ತಾನೆ. ತಾನು ಬಿಡುಗಡೆ ಆಗ್ತಿದ್ದಂತೆ ನಾಗನನ್ನ ಹೊಡೀತೀನಿ ಅಂತಾ ಪೆರೋಲ್ ಮೇಲೆ ಬಂದಾಗ ಅವಾಜ್ ಬಿಟ್ಟಿರ್ತಾನೆ. ಅದ್ಯಾವಾಗ ನಾಗನ ಕಿವಿಗೆ ಈ ವಿಚಾರ ಬೀಳುತ್ತೋ ಸಿದ್ದಾಪುರ ಮಹೇಶನ ಹತ್ಯೆಗೆ ಸ್ಕೆಚ್‌ ರೆಡಿಯಾಗುತ್ತೆ. ವಾಲ್ಟೇರ್, ಮೋಹನ, ದರ್ಶನ್​ ಫೋಟೋ ವೈರಲ್ ಮಾಡಿದ ವೇಲು ಸೇರಿ 10 ಜನರ ಟೀಮ್​ನ ನಾಗ ರೆಡಿ ಮಾಡ್ತಾನೆ. ಜೈಲಿಂದ ಹೊರಬರ್ತಾ ಇದ್ದಂತೆ ಮಹೇಶನ ಕಥೆಯನ್ನ ನಾಗನ ಕಡೆಯವ್ರು ಮುಗ್ಸಿ ಬಿಡ್ತಾರೆ. ಇಷ್ಟೆಲ್ಲಾ ಗ್ಯಾಂಗ್​​ವಾರ್ ನಡೀತಿದ್ರೂ ಈ ಮಧ್ಯೆ ಸೈಲೆಂಟ್‌ ಸುನೀಲ್‌ ರಾಜಕೀಯಕ್ಕೆ ಎಂಟ್ರಿಯಾದ್ಮೇಲೆ ರೌಡಿಸಂನಿಂದ ಅಂತರ ಕಾಯ್ದುಕೊಡಿದ್ದಾರೆ ಅನ್ನೋ ಮಾತುಗಳು ಕೇಳಿಬರ್ತಿವೆ.

ದರ್ಶನ್‌ ಪೋಟೋ ಕೇಸ್‌ನಿಂದ ನಾಗನ ಹವಾ ಮತ್ತೆ ಪ್ರೂವ್!
ಇಲ್ಲಿಯವರೆಗೂ ಬೆಂಗಳೂರಿನ ಭೂಗತ ಲೋಕದಲ್ಲಿ ಜಾಸ್ತಿ ಓಡಾಡ್ತಾ ಇದ್ದದ್ದೇ ಸೈಲೆಂಟ್‌ ಸುನಿಲ್‌ನ ಹೆಸರು. ಸೈಕಲ್‌ ರವಿ, ಸಿದ್ದಾಪುರ ಮಹೇಶ, ಸೇರಿದಂತೆ ಕೆಲವು ಹೆಸರುಗಳು ಕೇಳಿಬರ್ತಾ ಇದ್ವು. ಆದ್ರೆ, ಜೈಲಲ್ಲಿ ದರ್ಶನ್‌ಗೆ ನಾಗನೇ ಆತಿಥ್ಯ ಕೊಟ್ಟಿದ್ದು. ದರ್ಶನ್‌ ಭದ್ರತೆಯನ್ನ ನೋಡ್ಕೊಂಡಿದ್ದು ನಾಗ ಅನ್ನೋ ಸುದ್ದಿ ಯಾವಾಗ ಸ್ಫೋಟವಾಯ್ತೋ? ಆವಾಗ್ಲೇ ನಾಗನ ಹವಾ ವ್ಯವಸ್ಥೆಯಲ್ಲೇ ಪ್ರಬಲವಾಗಿರೋದು ಪ್ರೂವ್​ ಆಗಿದೆ.

ಹೀಗಾಗಿಯೇ, ನಾಗನ ಹೆಸರು ಮತ್ತೆ ಜೋರಾಗಿ ಸದ್ದು ಮಾಡ್ತಿದೆ. ಇನ್ನೊಂದ್‌ ವಿಚಾರ ಅಂದ್ರೆ ನಾಗ ಸ್ಕೆಚ್‌ ಹಾಕುವಲ್ಲಿ ಸಖತ್​ ಪಂಟರ್‌. ತನ್ನ ವಿರೋಧಿಯ ವಿರುದ್ಧ ಬಲೆ ಹೆಣೆದ ಅಂದ್ರೆ ಆತನ ಬಗ್ಗೆ ಪಿನ್​ ಟು ಪಿನ್ ಇನ್ಫಾರ್ಮೇಷನ್​ ಕಲೆಕ್ಟ್​ ಮಾಡ್ತಾನೆ. ಉದಾಹರಣೆಯೊಂದಿಗೆ ಹೇಳ್ಬೇಕು ಅಂದ್ರೆ ಒಂದು ರೋಡಲ್ಲಿ ಒಬ್ಬನಿಗೆ ಸ್ಕೆಚ್‌ ಹಾಕ್ತಾನೆ ಅಂದ್ರೆ, ಆ ರಸ್ತೆಯ ತುತ್ತ ತುದಿಯವರೆಗೂ ನಾಗ ತನ್ನ ಹುಡುಗರನ್ನ ಸರ್ಕಲ್​ ಹಾಕಿಸಿರ್ತಾನೆ. ಪ್ಲಾನ್‌ Aನಲ್ಲಿ ಮುಹೂರ್ತ ಮಿಸ್ ಆದ್ರೆ, ಪ್ಲಾನ್‌ Bನಲ್ಲಿ ಮಿಸ್ ಆಗೋ ಚಾನ್ಸೇ ಇರಲ್ಲ.

ಇದನ್ನೂ ಓದಿ: ದರ್ಶನ್​​ರನ್ನ ಬಳ್ಳಾರಿಗೆ ಶಿಫ್ಟ್ ಮಾಡೋದು ಯಾವಾಗ.. ಇವತ್ತು ರಾತ್ರಿನಾ, ಬೆಳಗ್ಗೆನಾ?

ಅದೆಂತಾ ದೊಡ್ಡ ಡಾನೇ ಆಗಿರ್ಲಿ, ಅದೆಷ್ಟೇ ಹವಾ ಇರಲಿ, ಅವರನ್ನ ಹೇಗೆ ಮಟ್ಟ ಹಾಕ್ಬೇಕು ಅನ್ನೋದ್‌ ಪೊಲೀಸರಿಗೆ ಗೊತ್ತಿರಬೇಕು. ಹಾಗಾದ್ರೆ, ಮಾತ್ರ ಯಾವುದೇ ಗ್ಯಾಂಗ್‌ ಅಥವಾ ಆ ಗ್ಯಾಂಗ್​ನ ಲೀಡರ್ ಹೆಡೆಬಿಚ್ಚದಂತೆ ನೋಡಿಕೊಳ್ಳಲು ಸಾಧ್ಯ. ಸದ್ಯ, ಪೊಲೀಸರ ಶ್ರಮದಿಂದ 70 ಮತ್ತು 80ರ ದಶಕದಲ್ಲಿದ್ದ ರೌಡಿಗಳ ಅಟ್ಟಹಾಸ ಈಗ ಇಲ್ಲ ಅನ್ನೋದು ಸತ್ಯ. ಆದ್ರೆ, ನಾಗನಂತಹ ನಟೋರಿಯಸ್‌ ಗ್ಯಾಂಗ್‌ ಇನ್ನೂ ಌಕ್ಟೀವ್ ಆಗಿದೆ.  ಇವ್ರನ್ನ ಹೆಚ್ಚು ಬೆಳೆಯೋದಕ್ಕೆ ಬಿಟ್ರೆ ಅಪರಾಧಗಳು ಹೆಚ್ಚಾಗುತ್ತವೆ ಅನ್ನೋದು ಹಲವರ ಆತಂಕ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರು ಡಾನ್​ ಯಾರು? ಭೂಗತ ಲೋಕದ ವಿಲ್ಸನ್ ಗಾರ್ಡನ್ ನಾಗನ ಭಯಾನಕ ಕಥೆ ಇಲ್ಲಿದೆ!

https://newsfirstlive.com/wp-content/uploads/2024/08/SILENT-SUNIL-AND-NAGA.jpg

Load More