newsfirstkannada.com

ದರ್ಶನ್‌ಗೂ ಮುಂಚೆ ಬೇಲ್ ಸಿಗುತ್ತಾ? ಕೋರ್ಟ್‌ ಮೊರೆ ಹೋದ ಪವಿತ್ರಾಗೆ ಪೊಲೀಸರಿಂದ 5 ಕೌಂಟರ್‌!

Share :

Published August 27, 2024 at 7:00pm

Update August 27, 2024 at 6:49pm

    ಜಾಮೀನು ಅರ್ಜಿ ಸಲ್ಲಿಸಿದ ಪವಿತ್ರಾಗೌಡಳ ಮುಂದಿನ ಕಥೆಯೇನು

    ಆ ಪಂಚ ಪಾತಕಗಳೇ ಚಕ್ರವರ್ತಿಯ ದೊರೆಸಾನಿಗೆ ಕಂಟಕವಾಗುತ್ವಾ?

    ಪೊಲೀಸರು ಉಲ್ಲೇಖಿಸಿರುವ ಆ ಐದು ಅಂಶಗಳು ಆದ್ರೂ ಯಾವುವು?

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ ಈಗ ಹೊಸ ಟ್ವಿಸ್ಟ್ ಪಡೆದುಕೊಂಡಿದೆ. ದರ್ಶನ್ ರಾಜಾತಿಥ್ಯದ ಫೋಟೋ, ವಿಡಿಯೋ ಕಾಲ್ ಸದ್ಯ ರಾಜ್ಯದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಇದರ ಮಧ್ಯೆ A1 ಆರೋಪಿ ಪವಿತ್ರಾಗೌಡ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ಉಲ್ಲೇಖಿಸಿರುವ ಅಂಶಗಳು ದರ್ಶನ್ ಸೇರಿ ಉಳಿದ ಆರೋಪಿಗಳಿಗೂ ಕಂಟಕವಾಗುವ ಎಲ್ಲಾ ಸಾಧ್ಯತೆಯಿದೆ ಎಂದು ಊಹಿಸಲಾಗಿದೆ. ಆದ್ರೆ ಪವಿತ್ರ ಅರ್ಜಿಗೆ ಪೊಲೀಸರು ಕೂಡ ಕೌಂಟರ್ ಹಾಕಿದ್ದಾರೆ. ಆ ಐದು ಕೌಂಟರ್​ಗಳೇ ಜಾಮೀನು ಅರ್ಜಿಗೆ ಮಹಾಕಂಟಕವಾಗುವ ಎಲ್ಲಾ ಸಾಧ್ಯತೆಗಳು ಇವೆ.

ಇದನ್ನೂ ಓದಿ: ಜೈಲಲ್ಲಿ ಬಿಂದಾಸ್‌ ಆಗಿದ್ದ ದರ್ಶನ್‌ಗೆ ಮುಂದೈತೆ.. ನ್ಯಾಯಾಲಯದಿಂದ ಮಹತ್ವದ ಆದೇಶ

ಪ್ರಕಣದಲ್ಲಿ ಮೊದಲ ಆರೋಪಿಯಾಗಿ ರೆಗ್ಯೂಲರ್ ಬೇಲ್ ಅರ್ಜಿ
ರೇಣುಕಾಸ್ವಾಮಿ ಕೊಲೆಯ ಮೂಲ ಪವಿತ್ರಾಗೌಡ, ಆಕೆಗೆ ರೇಣುಕಾಸ್ವಾಮಿ ಮೆಸೆಜ್ ಮಾಡಿದ್ದ ಅನ್ನೋ ಕಾರಣಕ್ಕೆ ದರ್ಶನ್​ ಕಿಡ್ನ್ಯಾಪ್ ಮಾಡಿ ಹಲ್ಲೆ ಮಾಡಿ ಜೀವ ತೆಗೆದಿರುವ ಆರೋಪ ಎದುರಿಸ್ತಿದ್ದಾರೆ. ಹಾಗಾಗಿ ಪೊಲೀಸರು ಈ ಕೇಸ್​​ನಲ್ಲಿ ಪವಿತ್ರಾಗೌಡರನ್ನ ಎ1 ಆರೋಪಿಯಾಗಿ ಮಾಡಿದ್ರು. ಯಾವಾಗ ಈ ಬಂಧನದಿಂದ ಬಿಡುಗಡೆಯಾಗಿ ಹೊರ ಬರ್ತಿನೋ ಅಂತ ಕಾಯ್ತಿದ್ದಾಳೆ. ಹಾಗಾಗಿ ಚಾರ್ಜ್​ಶೀಟ್ ಸಲ್ಲಿಕೆಯಾಗುವ ಮೊದಲೇ ಪವಿತ್ರಾಗೌಡ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾಳೆ. ಪ್ರಕರಣದ ಮೊದಲ ಆರೋಪಿಯಾಗಿ ಪವಿತ್ರಾಗೌಡ ಜಾಮೀನು ಕೇಳಿದ್ದು, ಸಿಆರ್​ಪಿಸಿ 439 ಅಡಿಯಲ್ಲಿ ಪವಿತ್ರಾಗೌಡ ಬೇಲ್​​ಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಜಾಮೀನು ಅರ್ಜಿಯಲ್ಲಿ ಶಾಕಿಂಗ್ ಅಂಶಗಳು ರಿವೀಲ್!
ಜೈಲಿನಿಂದ ಆಚೆ ಬಂದ್ರೆ ಸಾಕು ಅಂತ ಕಾಯ್ತಿರುವ ಪವಿತ್ರಾಗೌಡ ನ್ಯಾಯಲಯಕ್ಕೆ ಸಲ್ಲಿಸಿರುವ ಜಾಮೀನು ಅರ್ಜಿಯಲ್ಲಿ ಕೆಲ ಶಾಂಕಿಂಗ್ ಅಂಶಗಳನ್ನ ಉಲ್ಲೇಖಿಸಿದ್ದಾಳೆ. ಪ್ರಕರಣದಲ್ಲಿ ನೇರವಾಗಿ ತನ್ನ ಪಾತ್ರವಿಲ್ಲ ಎಂದಿರುವ ಪವಿತ್ರಾಗೌಡ ಸಹ ಆರೋಪಿಗಳು ಕೊಟ್ಟಿರುವ ಹೇಳಿಕೆ ಎಲ್ಲವೂ ಸುಳ್ಳು ಎಂದಿದ್ದಾಳೆ. ಇಲ್ಲಿ ಗಮನಿಸಬೇಕಾಗಿರುವ ಅಂಶ ಏನಂದ್ರೆ ಜಾಮೀನು ಅರ್ಜಿಯಲ್ಲಿ ಪವಿತ್ರಾಗೌಡ ತನ್ನ ಮೇಲೆ ಪ್ರಚೋದನೆ ಆರೋಪ ಮಾತ್ರವೇ ಇದ್ದು, ಐಪಿಸಿ 302 ಬದಲಿಗೆ ಕೇವಲ 304 ಹಾಕಬೇಕಿತ್ತು ಎಂದಿದ್ದಾಳೆ.

ಇದನ್ನೂ ಓದಿ: ಜೈಲಲ್ಲಿ ದರ್ಶನ್‌ಗೆ ರಾಜಾತಿಥ್ಯ.. ಪರಪ್ಪನ ಅಗ್ರಹಾರಕ್ಕೆ ಖಡಕ್ ಆಫೀಸರ್ಸ್‌ ನೇಮಿಸಿದ ಸರ್ಕಾರ!

ನನಗೆ ಕಿಡ್ನಾಪ್ ಮಾಡಿಸುವ, ಕೊಲೆ ಮಾಡುವ ಉದ್ದೇಶ ಇರಲಿಲ್ಲ

ಪವಿತ್ರಾ ಗೌಡ ಸಲ್ಲಿಸಿರುವ ಅರ್ಜಿಯಲ್ಲಿ ನನಗೆ ಕಿಡ್ನಾಪ್ ಮಾಡಿಸುವ ಹಾಗೂ ಕೊಲೆ ಮಾಡಿಸುವ ಉದ್ದೇಶವಿರಲಿಲ್ಲ, ನಾನು ಆತನ ಮೇಲೆ ಮಾಡಿದ ಹಲ್ಲೆ ತೀವ್ರತರಹದ್ದಾಗಿರಲಿಲ್ಲ ಎಂದು ಉಲ್ಲೇಖಿಸಲಾಗಿದೆ. ಈ ಮೂಲಕ ಪವಿತ್ರಾಗೌಡ ಉಲ್ಟಾ ಹೊಸ ಸಂಕಷ್ಟವನ್ನು ಮೈಮೇಲೆ ಎಳೆದುಕೊಂಡಂತಿದೆ. ಯಾಕಂದ್ರೆ, ಅರ್ಜಿಯಲ್ಲಿ ತಾನು ಹಲ್ಲೆ ಮಾಡಿದ್ರೂ ತೀವ್ರ ತರಹವಾಗಿ ಮಾಡಿಲ್ಲ ಎಂದಿರೋದು ಈಗ ಕೇಸ್​​​ನ್ನ ಸ್ಟ್ರಾಂಗ್ ಮಾಡೋದ್ರಲ್ಲಿ ಅನುಮಾನವೇ ಇಲ್ಲ.

ಪವಿತ್ರ ಅರ್ಜಿಗೆ ಪೊಲೀಸರು ಕೊಟ್ಟ ಕೌಂಟರ್​​ಗಳೇನು ?
ಒಂದು ಕಡೆ ಪವಿತ್ರಾಗೌಡ ಜೈಲಿನಿಂದ ಹೊರ ಬರೋದಕ್ಕೆ ಹಾತೊರೆಯುತ್ತಿದ್ರೆ, ಇತ್ತ ಪೊಲೀಸರು ಕೂಡ ಆಕೆಯ ಜಾಮೀನು ಅರ್ಜಿಗೆ ಹಲವು ಕೌಂಟರ್​ಗಳನ್ನ ಕೊಟ್ಟಿದ್ದಾರೆ. ಆ ಕೌಂಟರ್​ಗಳನ್ನ ನೋಡಿದ್ರೆ ಪವಿತ್ರಾಗೆ ಜಾಮೀನು ಸಿಗೋದೇ ಅನುಮಾನ ಅನಿಸುವಂತಿದೆ.

ಕೌಂಟರ್​1:  ತನ್ನ ಮೊಬೈಲ್ ಎ3 ಪವನ್​​ಗೆ ಕೊಟ್ಟು ಮೆಸೇಜ್ ಮಾಡಲು ಸೂಚನೆ.

ಪವಿತ್ರಾಗೌಡ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಿರುವ ಪೊಲೀಸರು ಪವಿತ್ರಾಗೌಡಗೆ ರೇಣುಕಾಸ್ವಾಮಿಗೆ ಏನಾದ್ರೂ ಮಾಡುವ ಉದ್ದೇಶವಿತ್ತು ಎಂದಿದ್ದಾರೆ. ಇದೇ ಕಾರಣಕ್ಕೆ ಪವಿತ್ರಾಗೌಡ ತನ್ನ ಮೊಬೈಲ್​​ನ್ನ ಎ 3 ಪವನ್​ ಕೈಗೆ ಕೊಟ್ಟು ಮೆಸೆಜ್ ಮಾಡಿಸಿದ್ದಾಳೆ.ಅವನ ಕೈಯಿಂದ ಮೆಜೆಜ್ ಮಾಡಿಸಿಸ ಲೊಕೆಷನ್​ ಪಡೆದು ಪ್ಲಾನ್ ನಡೆಸಿದ್ದಾಳೆ ಅಂತ ಉಲ್ಲೇಖಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಪವಿತ್ರಾಗೌಡ ಉಳಿದ ಆರೋಪಿಗಳ ಜೊತೆ ಸೇರಿ ಷಡ್ಯಂತ್ರ ಮಾಡಿದ್ದಾಳೆ ಅಂತ ಕೌಂಟರ್​ ಅರ್ಜಿಯಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ. ರೇಣುಕಾಸ್ವಾಮಿಯನ್ನ ಕಿಡ್ನ್ಯಾಪ್ ಮಾಡುವ ಮುಂಚಿನಿಂದಲೇ ಆರೋಪಿಗಳ ಜೊತೆ ಪವಿತ್ರಗೌಡ ಸಂಪರ್ಕವಿದ್ದು, ಕೃತ್ಯ ನಡೆದ ಬಳಿಕವೂ ಅವರ ಜೊತೆ ಪವಿತ್ರಾಗೌಡಳ ನಿರಂತರ ಸಂಪರ್ಕವಿತ್ತು ಅಂತ ಅರ್ಜಿಯಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ದರ್ಶನ್ ಫೋಟೋ ವೈರಲ್ ಮಾಡಿದ ವೇಲು ಯಾರು? ನಾಗನಿಗಾಗಿ ಡಬಲ್ ಮರ್ಡರ್‌ ಮಾಡಿದ್ದ ಶಿಷ್ಯ!

ಕೌಂಟರ್ 2:  ಕೃತ್ಯದಲ್ಲಿ ಇತರ ಆರೋಪಿಗಳ ಜೊತೆ ಸೇರಿ ಷಡ್ಯಂತ್ರ

ಪವಿತ್ರಾ ಜಾಮೀನು ಅರ್ಜಿಗೆ ತುಂಬಾ ಸ್ಟ್ರಾಂಗ್ ಆಗಿಯೇ ಪೊಲೀಸರು ಆಕ್ಷೇಪಣೆ ಸಲ್ಲಿಸಿದ್ದು, ಕೃತ್ಯದಲ್ಲಿ ಪವಿತ್ರಾ ಪಾತ್ರದ ಇರುವ ಬಗ್ಗೆ ಸಿಡಿಆರ್​​ನಿಂದ ಸಾಕ್ಷಿಗಳು ಸಿಕ್ಕಿವೆ ಎಂದಿದ್ದಾರೆ. ಇದಷ್ಟೆ ಪವಿತ್ರಾ ವಿರುದ್ಧ 302 ಹಾಕೋದಕ್ಕೆ ಬೇಕಾಗುವ ಎಲ್ಲ ಸಾಕ್ಷಿಗಳು ತಮ್ಮಲ್ಲಿ ಲಭ್ಯವಿದ್ದು, ಪವಿತ್ರಾಗೌಡ ಹಲ್ಲೆ ಮಾಡಿರೋದಕ್ಕು ಸಾಕ್ಷಿಗಳು ಸಿಕ್ಕಿರುವ ಬಗ್ಗೆ ಪೊಲೀಸರು ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದಾರೆ.

ಕೌಂಟರ್ 3:  ಪೊಲೀಸರ ಪ್ರಕಾರ ಇದು ಜೀವಾವಧಿ ಶಿಕ್ಷೆ ನೀಡುವ ಅಪರಾಧ

ಕಿಡ್ನ್ಯಾಪ್ ಕೊಲೆ ಮಾತ್ರವಲ್ಲ ಕೊಲೆ ನಡೆದ ಬಳಿಕ ಸಾಕ್ಷಿ ನಾಶದ ಕೃತ್ಯದಲ್ಲೂ ಪವಿತ್ರಾಗೌಡ ಭಾಗಿಯಾಗಿದ್ದಾಳೆ ಅಂತ ಪೊಲೀಸರು ಕೌಂಟರ್ ಹಾಕಿದ್ದಾರೆ. ಮೃತದೇಹ ಎಸೆದು ಸಾಕ್ಷಿ ನಾಶ ಮಾಡುವ ಸಂಚಿನಲ್ಲಿ ಪವಿತ್ರಗೌಡಳ ಪಾತ್ರವೂ ಇದೆ ಅಂತ ಪೊಲೀಸರು ವಾದಿಸಿದ್ದಾರೆ. ಪೊಲೀಸರ ಪ್ರಕಾರ ಇದೊಂದು ಜೀವಾವಧಿ ಶಿಕ್ಷೆ ನೀಡುವ ಅಪರಾಧವಾಗಿದ್ದು, ಎಲ್ಲ ವಿಚಾರ ಗೊತ್ತಿದ್ದೇ ಪವಿತ್ರಗೌಡ ಕಿಡ್ನ್ಯಾಪ್ ಮಾಡಿಸಿ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ ಅಂತ ಆಕ್ಷೇಪಣಾ ಅರ್ಜಿಯಲ್ಲಿ ತಿಳಿಸಿದ್ದಾರೆ.

ಕೌಂಟರ್4:  ಪವಿತ್ರಾಗೌಡ ಮೆಸೇಜ್ ಮಾಡಿದ್ದರಿಂದಲೇ ಕಿಡ್ನಾಪ್ ಮಾಡಿ ಕೊಲೆ ಮಾಡಲಾಗಿದೆ

ಪವಿತ್ರಾಗೌಡ ಜಾಮೀನು ನೀಡಬಾರದು ಎಂದಿರುವ ಪೊಲೀಸರು ಈ ಕೇಸ್​​ನಲ್ಲಿ ಜಾಮೀನು ಕೊಟ್ರೆ ಸಾಕ್ಷಿ ನಾಶವಾಗಲಿದೆ ಎಂದಿದ್ದಾರೆ. ಟೆಕ್ನಿಕಲ್​ ಸಾಕ್ಷಿಗಳ ಪ್ರಕಾರ ಆಕೆ ಸ್ಥಳದಲ್ಲಿದ್ದು ಹಲ್ಲೆ ನಡೆಸಿದ್ದು, ಮೃತನ ದೇಹದ ಮೇಲೆ ಗಂಭೀರವಾದ 39 ಗಾಯದ ಗುರತುಗಳಿವೆ ಅಂತ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಪವಿತ್ರಾಗೌಡ ಹಲ್ಲೆ ಮಾಡಿದ್ದು ಮಾತ್ರವಲ್ಲ ತಾನೇ ಮುಂದೆ ನಿಂತು ಸಾಯುವ ರೀತಿ ಹೊಡೆಸಿದ್ದಾಳೆ.. ಹೀಗಾಗಿ ಇವರ ಉದ್ದೇಶ ಕೊಲೆ ಮಾಡುವುದೇ ಆಗಿತ್ತು ಅಂತ ಪೊಲೀಸರು ಆಕ್ಷೇಪ ಸಲ್ಲಿಸಿದ್ದಾರೆ.

ಕೌಂಟರ್5:  ಪವಿತ್ರಾಗೌಡಗೆ ಜಾಮೀನು ಕೊಟ್ಟರೆ ಸಾಕ್ಷಿನಾಶ ಸಾಧ್ಯತೆ

ಪವಿತ್ರಾಗೌಡ ಮೆಸೆಜ್ ಮಾಡಿದ ಕಾರಣಕ್ಕೆ ಕಿಡ್ನ್ಯಾಪ್ ಮಾಡಿ ಕೊಲೆ ಮಾಡಲಾಗಿದೆ ಅಂತ ಪೊಲೀಸರು ಆಕ್ಷೇಪ ಸಲ್ಲಿಸಿದ್ದಾರೆ. ಕೃತ್ಯದ ಸಂಚಿನಲ್ಲಿ ಭಾಗಿಯಾಗಿ ಹಲ್ಲೆ ಮಾಡಿ, ಸಾಕ್ಷಿ ನಾಶದ ಯತ್ನದಲ್ಲೂ ಪವಿತ್ರಾಗೌಡ ಕೈವಾಡವಿದೆ ಅಂತ ಆಕ್ಷೇಪಣಾ ಅರ್ಜಿಲ್ಲಿ ಉಲ್ಲೆಖಿಸಿದ್ದಾರೆ. ಜೊತೆಗೆ ಪವಿತ್ರಾಗೌಡ ಪ್ರಭಾವಿ ವ್ಯಕ್ತಿಯಾಗಿದ್ದು, ಜಾಮೀನು ಸಿಕ್ರೆ ಸಾಕ್ಷಿಗಳಿಗೆ ಸಂಕಷ್ಟವಾಗಬಹುದು.ಎ 2 ಆರೋಪಿ ಓರ್ವ ಸಿನಿಮಾ ಸ್ಟಾರ್ ಆತನಿಕೆ ಈಕೆ ತೀರ ಆಪ್ತೆ.. ಹಾಗಾಗಿ ಈಕೆಗೆ ಜಾಮೀನು ಕೊಟ್ಟರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು. ಹಾಗಾಗಿ ಯಾವುದೇ ಕಾರಣಕ್ಕೆ ಪವಿತ್ರಾಗೌಡ ಜಾಮೀನಿಗೆ ಅರ್ಹಳಲ್ಲ. ಈಕೆ ಜಾಮೀನು ಅರ್ಜಿಯನ್ನ ತೀರಸ್ಕರಿಸುವಂತೆ ಪೊಲೀಸರು ಆಕ್ಷೇಪಣೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಜೈಲಲ್ಲಿ ವಿಲ್ಸನ್ ಗಾರ್ಡನ್ ನಾಗನದ್ದೇ ಹವಾ.. ದರ್ಶನ್‌ಗೇ ಆರ್ಡರ್ ಮಾಡಿ ಕರೆಸಿಕೊಳ್ತಿದ್ದ ರೌಡಿಶೀಟರ್!

ಮಂಗಳವಾರ ಮಧ್ಯಾಹ್ನ 4 ಗಂಟೆಗೆ 57ನೇ CCH​ ಕೋರ್ಟ್​ನಲ್ಲಿ ಪವಿತ್ರಾ ಬೇಲ್​ ಅರ್ಜಿ ವಿಚಾರಣೆ ನಡೆಸಲಾಯ್ತು. ಪವಿತ್ರಾ ಪರ ಸೀನಿಯರ್ ವಕೀಲ ಟಾಮಿ ಸೆಬಾಸ್ಟಿಯನ್ ವಾದ ಮಂಡಿಸಿದ್ರೆ. ಎಸ್​​ಪಿಪಿ ತನಿಖಾಧಿಕಾರಿಗಳ ಪರ ವಾದ ಮಂಡಿಸಿದ್ರು. ಎರಡು ಕಡೆಯ ವಾದಗಳನ್ನ ಆಲಿಸಿದ ಬಳಿಕ ಜಾಮೀನು ಅರ್ಜಿಯ ವಿಚಾರಣೆಯನ್ನ ಬುಧವಾರಕ್ಕೆ ಮುಂದೂಡಲಾಗಿದೆ. ಬುಧವಾರ ಪವಿತ್ರಾಗೌಡಗೆ ಜಾಮೀನು ಸಿಗುತ್ತಾ? ಅಥವಾ ಮತ್ತೆ ಪರಪ್ಪನ ಅಗ್ರಹಾರವೇ ಖಾಯಂ ಆಗುತ್ತಾ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್‌ಗೂ ಮುಂಚೆ ಬೇಲ್ ಸಿಗುತ್ತಾ? ಕೋರ್ಟ್‌ ಮೊರೆ ಹೋದ ಪವಿತ್ರಾಗೆ ಪೊಲೀಸರಿಂದ 5 ಕೌಂಟರ್‌!

https://newsfirstlive.com/wp-content/uploads/2024/06/DARSHAN_PAVITRA.jpg

Load More