/newsfirstlive-kannada/media/post_attachments/wp-content/uploads/2024/08/Makhana.png)
ಮಖಾನ ತಿಂದಿದ್ದೀರಾ? ಇದನ್ನು ಆಂಗ್ಲ ಪದದಲ್ಲಿ ಫಾಕ್ಸ್​ ನಟ್​ ಎಂದು ಕರೆಯುತ್ತಾರೆ. ಪಾಪ್​ಕಾರ್ನ್​ನಂತೆ ಉಬ್ಬುವ ಈ ಕಾಳುಗಳು ಆರೋಗ್ಯಕ್ಕೆ ಹಲವು ಪ್ರಯೋಜನ ನೀಡುತ್ತದೆ ಎಂಬುದು ತಿಳಿದಿದೆಯಾ?. ಹಾಗಿದ್ರೆ ಈ ಸ್ಟೋರಿ ಓದಿ.
ಮಖಾನ ಸೇವಿಸುವುದರಿಂದ ಆರೋಗ್ಯ ಲಾಭ ಪಡೆಯಬಹುದಾಗಿದೆ. ತಿನ್ನಲು ರುಚಿಕರವಾಗಿರುವ ಈ ಮಖಾನ ಮಾನವನ ದೇಹದಲ್ಲಿರುವ ಮೂಳೆಯನ್ನು ಬಲಪಡಿಸುವಂತಹ ಶಕ್ತಿಯನ್ನು ಹೊಂದಿದೆ, ಕಾಲ್ಸಿಯಂ ಅಂಶ ಇದರಲ್ಲಿ ಜಾಸ್ತಿ ಇರುವ ಕಾರಣ ಮೂಳೆಯ ಆರೋಗ್ಯ ವೃದ್ಧಿಸುತ್ತದೆ.
ಇದನ್ನೂ ಓದಿ: Gold Rate: ನಿನ್ನೆಗಿಂತ ಇಂದು ಇಳಿಕೆ ಕಂಡ ಚಿನ್ನ.. ಸ್ವರ್ಣ ಇಂದು ಖರೀದಿಸಿದರೆ ಉತ್ತಮವೇ?
ಮಖನಾದ ಪ್ರಯೋಜನ ತಿಳಿದವರು ಇದನ್ನು ಆಹಾರದಲ್ಲಿ ಸೇರಿಸಿ ಸೇವಿಸುತ್ತಾರೆ. ಪ್ರೋಟೀನ್​​, ಫೈಬರ್ ಅಂಶ ಇದರಲ್ಲಿರುವ ಕಾರಣ ಹೃದಯದ ಆರೋಗ್ಯವನ್ನು ವೃದ್ಧಿಸುವುದರ ಜೊತೆ ಕಾಪಾಡಲು ಸಹಾಯಕ. ಇದಲ್ಲದೆ ಜೀರ್ಣಕ್ರಿಯೆಗೂ ಮಖಾನ ಸಹಾಯ ಮಾಡುತ್ತದೆ.
/newsfirstlive-kannada/media/post_attachments/wp-content/uploads/2024/08/Makhana.jpg)
ಮಖಾನದಲ್ಲಿ ಮೆಗ್ನೀಷಿಯಂ ಮತ್ತು ಕ್ಯಾಲಿಯಂ ಅಂಶ ಇವೆ. ಆರೋಗ್ಯದ ತೂಕವನ್ನು ಕಾಪಾಡುವ ಶಕ್ತಿಯು ಇದಕ್ಕಿದೆ. ಅನೇಕರು ಇದನ್ನು ಹುರಿದು ಸೇವಿಸುತ್ತಾರೆ. ಇನ್ನು ಕೆಲವರು ಮಸಾಲೆ ಸೇರಿಸಿ ಸವಿಯುತ್ತಾರೆ.
ಇದನ್ನೂ ಓದಿ: ನೋವು.. ನೋವು.. ಕುಳಿತಲ್ಲಿಂದ ಎದ್ದೇಳಲು ಆಗದೆ ಪರದಾಡಿದ ಸಲ್ಮಾನ್​ ಖಾನ್​!
ಆರೋಗ್ಯ ದೃಷ್ಟಿಯಿಂದ ಮಖಾನ ಸೇವಿಸಬಹುದಾಗಿದೆ. ಒಬ್ಬ ವ್ಯಕ್ತಿ 20 ಗ್ರಾಂ ತಿಂದರೆ ಬಹಳ ಒಳ್ಳೆಯದು. ಬಾಯಿಗೆ ಹಿಡಿಸುವ ಈ ಮಖಾನ ದೇಹಕ್ಕೂ ಲಾಭ ಕೊಡುತ್ತದೆ ಎಂದರೆ ಲಾಭವೇ ತಾನೆ.
(Desclaimer : ಈ ಲೇಖನವು ಅಂತರ್ಜಾಲದಿಂದ ಲಭ್ಯವಾದ ಮಾಹಿತಿಯನ್ನು ಆಧರಿಸಿದೆ. ಇದಕ್ಕೂ ನ್ಯೂಸ್​ಫಸ್ಟ್​​ಗೂ ಸಂಬಂಧವಿಲ್ಲ)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us