ಸೇದಲು ಬೀಡಿ ಕೇಳಿದ್ದಕ್ಕೆ ಕೊಟ್ಟಿಲ್ಲ.. ಕೋಪದಲ್ಲಿ ಥಳಿಸಿ ಕೊಂದೇ ಬಿಟ್ಟ

author-image
AS Harshith
Updated On
ಸೇದಲು ಬೀಡಿ ಕೇಳಿದ್ದಕ್ಕೆ ಕೊಟ್ಟಿಲ್ಲ.. ಕೋಪದಲ್ಲಿ ಥಳಿಸಿ ಕೊಂದೇ ಬಿಟ್ಟ
Advertisment
  • ಇದೆಂಥಾ ವಿಚಿತ್ರ.. ಸೇದುವ ಬೀಡಿಗಾಗಿ ನಡೆಯಿತು ಕೊಲೆ
  • ಒಂದು ಬೀಡಿ ಕೊಟ್ಟ, ಎರಡನೇ ಬೀಡಿ ಕೊಡಲು ನಿರಾಕರಿಸಿದ
  • ಬೀಡಿ ಕೊಡಲು ನಿರಾಕರಿಸಿದ್ದಕ್ಕೆ ಶುರುವಾಯ್ತು ಜಗಳ.. ಆಮೇಲೆ?

ಸೇದಲು ಬೀಡಿ ಕೊಟ್ಟಿಲ್ಲ ಎಂಬ ಕಾರಣಕ್ಕೆ ಸರಿಯಾಗಿ ಥಳಿಸಿ ಕೊಲೆ ಮಾಡಿದ ಘಟನೆ ಮಧ್ಯಪ್ರದೇಶ ಛೋಟಿ ಗ್ವಾಲ್ಟೋಲಿ ಪೊಲೀಸ್​ ವೃತ್ತದಲ್ಲಿ ಬೆಳಕಿಗೆ ಬಂದಿದೆ. ಮೇ13ರಂದು ರಾತ್ರಿ ಈ ಘಟನೆ ನಡೆದಿದೆ.

ಬೀಡಿ ಕೊಡಲು ನಿರಾಕರಿಸಿದ

ಮನೋಹರ್​ ಎಂಬಾತ ಸಾವನ್ನಪ್ಪಿದ್ದಾನೆ. ಈತ ಆ ಪ್ರದೇಶದಲ್ಲೇ ಓಡಾಡಿಕೊಂಡು ಪುಟ್​ಪಾತ್​ ಮೇಲೆ ಮಲಗುತ್ತಿದ್ದ. ಆತನ ಬಳಿ ಬಂದ ಕರಣ್​ ಎಂಬಾತ ಸೇದಲು ಬೀಡಿ ಕೇಳಿದ್ದಾನೆ. ಮೊದಲಿಗೆ ಆತನಿಗೆ ಬೀಡಿ ನೀಡಿದ್ದಾನೆ. ಎರಡನೇ ಬೀಡಿ ಕೇಳಿದಾಗ ಮನೋಹರ್​ ಕೊಡಲು ನಿರಾಕರಿಸಿದ್ದಾನೆ.

ಇದನ್ನೂ ಓದಿ:90ರ ದಶಕದ ಫೋನನ್ನು ಮರು ಪರಿಚಯಿಸಿದ ನೋಕಿಯಾ.. 2 ದಿನಕ್ಕೆ ‘Sorry, Out Of Stock​’ ಎಂದ ಕಂಪನಿ!

ಮರದ ಕೋಲಿನಿಂದ ಹೊಡೆದ

ಈ ವೇಳೆ ಕರಣ್​ ಮತ್ತು ಮನೋಹರ್​ ನಡುವೆ ವಾಗ್ವಾದವಾಗಿದೆ. ಕೊನೆಗೆ ಕರಣ್​ ಅಲ್ಲಿದ್ದ ಮರದ ಕೋಲಿನಿಂದ ಮನೋಹರ್​ ತಲೆಯ ಮೇಲೆ ಹೊಡೆದಿದ್ದಾನೆ. ಜೋರಾಗಿ ಹೊಡೆದ ಪರಿಣಾಮ ಮನೋಹರ್​ಗೆ ರಕ್ತಸ್ರಾವವಾಗಿದೆ.

ಇದನ್ನೂ ಓದಿ: RCBvsCSK: ಮೇ18 ಆರ್​ಸಿಬಿಗೆ ಅದೃಷ್ಟದ ದಿನ.. ಯಾಕಂದ್ರೆ ಇಲ್ಲಿವರೆಗೆ ಆಡಿರುವ ಎಲ್ಲಾ ಪಂದ್ಯ ಬೆಂಗಳೂರು ಪಾಲು

ಚಿಕಿತ್ಸೆ ಫಲಿಸಲಿಲ್ಲ

ಇದನ್ನು ಕಂಡು ಮನೋಹರ್​ ಪರಿಚಯಸ್ಥರು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ ಅದೇ ದಿನ ರಾತ್ರಿ ಚಿಕಿತ್ಸೆ ಫಲಿಸದೆ ಮನೋಹರ್​ ಸಾವನ್ನಪ್ಪಿದ್ದಾನೆ. ಸದ್ಯ ಪೊಲೀಸರು ಪ್ರಕರಣದ ಕುರಿತಂತೆ ತನಿಖೆ ಆರಂಭಿಸಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ಸದ್ಯ ಕೊಲೆಗಾರ ಕರಣ್​​ಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಬೀಡಿಗಾಗಿ ಮನೋಹರ್​ನನ್ನು ಕೊಲೆ ಮಾಡಿದವನನ್ನು ಬಂಧಿಸಲು ಮುಂದಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment