Advertisment

ಹೆಂಡ್ತಿಗೆ ಹಾವಿನ ವಿಷದ ಇಂಜೆಕ್ಷನ್ ಕೊಟ್ಟು ಸಾಯಿಸಿದ ಗಂಡ; ಕಾರಣವೇನು? ಸಿಕ್ಕಿಬಿದ್ದಿದ್ದೇ ರೋಚಕ!

author-image
Gopal Kulkarni
Updated On
ಹೆಂಡ್ತಿಗೆ ಹಾವಿನ ವಿಷದ ಇಂಜೆಕ್ಷನ್ ಕೊಟ್ಟು ಸಾಯಿಸಿದ ಗಂಡ; ಕಾರಣವೇನು? ಸಿಕ್ಕಿಬಿದ್ದಿದ್ದೇ ರೋಚಕ!
Advertisment
  • ಉತ್ತರಾಖಂಡ್ ರಾಜ್ಯದಲ್ಲಿ ಪತ್ನಿಗೆ ಹಾವಿನ ವಿಷ ನೀಡಿ ಹತ್ಯೆಗೈದ ಪತಿ
  • ಉತ್ತರಾಖಂಡ್ ರಾಜ್ಯದ ಉದಮ್ ಸಿಂಗ್ ನಗರದಲ್ಲಿ ಪತ್ನಿಯ ಹತ್ಯೆ
  • ಪಾಪಿ ಪತಿಯೇ ಇಂತಹ ನೀಚ ಕೆಲಸಕ್ಕೆ ಕೈ ಹಾಕಲು ಕಾರಣವೇನು?

ಡೆಹ್ರಾಡೂನ್: 21ನೇ ಶತಮಾನದ ಈ ಯುಗದಲ್ಲಿ ಮನುಷ್ಯನ ಸಂಬಂಧಗಳು ಸಂಕುಚಿತಗೊಳ್ಳುತ್ತಿವೆ. ಬದುಕಿನಲ್ಲಿ ದುಡ್ಡಿಗೆ ಇದ್ದಷ್ಟು ಬೆಲೆ, ಮಾನವೀಯ ಸಂಬಂಧಗಳಿಗೆ ಇಲ್ಲ. ಹಣಕ್ಕಾಗಿ ಯಾವುದೇ ದಾರಿ ತುಳಿಯಲು ಜನರು ಈಗ ಸಿದ್ಧರಿದ್ದಾರೆ. ಅದಕ್ಕೆ ದೊಡ್ಡ ಸಾಕ್ಷಿಯಾಗಿ ನಿಂತಿದೆ.

Advertisment

ಉತ್ತರಾಖಂಡ್​ನ ಉದಮ್ ಸಿಂಗ್ ನಗರದಲ್ಲಿ ಪತ್ನಿಯನ್ನು ಇನ್ಸುರೆನ್ಸ್ ಹಣಕ್ಕಾಗಿ ಹಾವಿನ ವಿಷವಿಕ್ಕಿ ಕೊಂದ ಒಂದು ಘಟನೆ ನಡೆದಿದೆ. ಪತಿ ಶುಭಂ ಚೌದರಿ ಎನ್ನುವ ಪಾಪಿ ಪತಿಯೇ ಇಂತಹ ನೀಚ ಕೆಲಸಕ್ಕೆ ಕೈ ಹಾಕಿದ್ದಾನೆ. ಅದಕ್ಕೆ ಕಾರಣ ಪತ್ನಿಯ ಹೆಸರಲ್ಲಿದ್ದು 25 ಲಕ್ಷ ರೂಪಾಯಿ ಇನ್ಸೂರೆನ್ಸ್ ಹಣ.

ಇದನ್ನೂ ಓದಿ: Breaking: ಅನಿಲ್ ಅಂಬಾನಿಗೆ ಬಿಗ್​ ಶಾಕ್.. ಷೇರು ಮಾರುಕಟ್ಟೆಯಿಂದ 5 ವರ್ಷ ಬ್ಯಾನ್

ಪತ್ನಿ ಸಲೋನಿ ಚೌದರಿ ಇತ್ತೀಚೆಗಷ್ಟೇ 25 ಲಕ್ಷ ರೂಪಾಯಿ ಇನ್ಸೂರೆನ್ಸ್ ಹಣ ಪಡೆದುಕೊಂಡಿದ್ದರು. ಅದನ್ನು ಲಪಾಟಿಯಸಲೆಂದು ಶುಭಂ ಚೌದರಿ ಇಂಜೆಕ್ಷನ್ ಮೂಲಕ ಹಾವಿನ ವಿಷವನ್ನು ಹೆಂಡತಿ ದೇಹಕ್ಕೆ ಇಳಿಸಿದ್ದಾನೆ. ಸಲೋನಿ ಚೌದರಿ ಸಹೋದರ ತನ್ನ ಸಹೋದರಿಯ ಸಾವಿನ ಕುರಿತು ಸಂಶಯ ಬಂದು ಪೊಲೀಸರಿಗೆ ದೂರು ನೀಡಿದ್ದಾನೆ ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ.

Advertisment

ಇದನ್ನೂ ಓದಿ: ಏಷ್ಯಾದಲ್ಲೇ ಅತ್ಯಂತ ಶ್ರೀಮಂತ ಗ್ರಾಮ ಭಾರತದಲ್ಲಿದೆ; ಈ ಹಳ್ಳಿ ಜನ ಬ್ಯಾಂಕ್​ನಲ್ಲಿಟ್ಟ ಹಣ ಎಷ್ಟು ಸಾವಿರ ಕೋಟಿ ಗೊತ್ತಾ?

ಜಸ್ಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನಲ್ಲಿ ಸಲೋನಿ ಸಹೋದರ ಶುಭಂ ವಿರುದ್ಧ ಅನೇಕ ಆರೋಪಗಳನ್ನು ಮಾಡಿದ್ದಾನೆ ಪತ್ನಿಯ ಇನ್ಸೂರೆನ್ಸ್ ಹಣ ಲಪಾಟಿಯಿಸಲು ಅಂತಲೇ ಶುಭಂ ನನ್ನ ಸಹೋದರಿಯನ್ನು ಕೊಲೆ ಮಾಡಿದ್ದಾನೆ. ಈ ಹಿಂದೆ ನನ್ನ ಸಹೋದರಿಯನ್ನು ಶುಭಂ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸಿಸಿದ್ದಾನೆ.

ಊರಿನ ಹಿರಿಯರನ್ನು ಕೂರಿಸಿ ಸಂಧಾನ ಮಾಡಿದ ಮೇಲೂ ಕೂಡ ಅದು ಹಾಗೆಯೇ ಮುಂದುವರಿದಿತ್ತು. ನಾಲ್ಕು ವರ್ಷದ ಹಿಂದೆ ಇವನು ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಕಾರಣವನ್ನಿಟ್ಟುಕೊಂಡೇ ನನ್ನ ಸಹೋದರಿ ಡಿವೋರ್ಸ್ ನೀಡಲು ಕೂಡ ಮುಂದಾಗಿದ್ದಳು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾನೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment