newsfirstkannada.com

ಬಾಲಕಿ ಮುಂದೆ ಅಸಭ್ಯ ವರ್ತನೆ ತೋರಿದ ಕಿಡಿಗೇಡಿಗೆ ಧರ್ಮದೇಟು; ನೀಚ ಮಾಡಿದ್ದೇನು?

Share :

Published May 1, 2024 at 4:38pm

    ಬಾಲಕಿ ಕಿರುಚಿಕೊಂಡಿದ್ದರಿಂದ ಸ್ಥಳೀಯರು ಓಡೋಡಿ ಬಂದು ಮಾಡಿದ್ದೇನು?

    ಬಾಲಕಿ ಹೋಗುವಾಗ ರಸ್ತೆ ಬದಿ ಮೂತ್ರ ವಿಸರ್ಜನೆ ಮಾಡ್ತಿದ್ದ ಕಿಡಿಗೇಡಿ

    ಸಿಕ್ಕಿಬಿದ್ದ ಆರೋಪಿ ಮೇಲೆ ಸೆಕ್ಷನ್​ 354, 352, 504 ಮತ್ತು 509 ಅಡಿ ಪ್ರಕರಣ

ಲಕ್ನೋ: ವ್ಯಕ್ತಿಯೊಬ್ಬ ರಸ್ತೆ ಬದಿ ಮೂತ್ರ ವಿಸರ್ಜನೆ ಮಾಡುವಾಗ ಬಾಲಕಿ ಜೊತೆ ಅಸಭ್ಯ ವರ್ತನೆ ತೋರಿದ ಹಿನ್ನೆಲೆ ಸ್ಥಳೀಯರು ಧರ್ಮದೇಟು ಕೊಟ್ಟು ಪೊಲೀಸರಿಗೆ ಒಪ್ಪಿಸಿರುವ ಘಟನೆ ಗ್ರೇಟರ್ ನೋಯ್ಡಾದ ಉನೈದ್‌ಪುರ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ: VIDEO: ಕ್ಲಾಸ್​ ರೂಮ್​ ಅನ್ನೇ ಸ್ವಿಮ್ಮಿಂಗ್ ಪೂಲ್ ಮಾಡಿದ ಶಾಲೆ; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

ಆರೋಪಿಯನ್ನು ಅಜಿತ್ ಎಂದು ಗುರುತಿಸಲಾಗಿದೆ. ಬಾಲಕಿ ಹೋಗುವಾಗ ರಸ್ತೆ ಬದಿ ಬೇಕಂತಲೆ ವ್ಯಕ್ತಿ ಪ್ಯಾಂಟ್ ಬಿಚ್ಚಿ ಮೂತ್ರವಿಸರ್ಜನೆಗೆ ಮುಂದಾಗಿದ್ದಾನೆ. ಆದರೆ ಈ ವೇಳೆ ಬಾಲಕಿಗೆ ತನ್ನ ಖಾಸಗಿ ಅಂಗಗಳನ್ನ ತೋರಿಸಿದ್ದಾನೆ ಎನ್ನಲಾಗಿದೆ. ಹೀಗಾಗಿ ಬಾಲಕಿ ಕಿರುಚಿಕೊಂಡಿದ್ದರಿಂದ ಸ್ಥಳೀಯರು ಏನಾಯಿತೆಂದು ಓಡಿ ಬಂದು ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಶಾಲೆಗಳ ಬಾಂಬ್ ಬೆದರಿಕೆ ಹಿಂದೆ ವಿದೇಶಿ ಕೈವಾಡ? ದೆಹಲಿ ಪೊಲೀಸರಿಂದ ಸ್ಫೋಟಕ ಮಾಹಿತಿ ಪತ್ತೆ

ಇನ್ನು ಈ ಸಂಬಂಧ ಪೊಲೀಸರು ಕೇಸ್​ ದಾಖಲು ಮಾಡಿಕೊಂಡು ವ್ಯಕ್ತಿಯನ್ನು ಅರೆಸ್ಟ್ ಮಾಡಿದ್ದಾರೆ. ಬಾಲಕಿ ಹೋಗುವಾಗ ಅಸಭ್ಯ ವರ್ತನೆ ಮಾಡಿದ್ದಲ್ಲದೇ ತನ್ನ ಖಾಸಗಿ ಅಂಗಗಳನ್ನ ತೋರಿಸಿದ್ದಾನೆ. ಕೈ ಹಿಡಿದು ಎಳೆದುಕೊಂಡು ಹೋಗಲು ಯತ್ನಿಸಿದ್ದನು ಎಂದು ಬಾಲಕಿ ಹೇಳಿದ್ದಾಳೆ. ಆದರೆ ಇದಕ್ಕೆ ತದ್ವಿರುದ್ಧ ಹೇಳಿಕೆ ನೀಡಿರುವ ಆರೋಪಿ ನಾನು ಇನೋಸೆನ್ಸ್​, ಆ ರೀತಿ ಮಾಡಿಲ್ಲ ಎಂದಿದ್ದಾನೆ. ಸದ್ಯ ಪೊಲೀಸರು ಆರೋಪಿ ಮೇಲೆ ಐಪಿಸಿ ಸೆಕ್ಷನ್​ 354, 352, 504 ಮತ್ತು 509 ಅಡಿ ಪ್ರಕರಣ ದಾಖಲು ಮಾಡಿದ್ದಾರೆ ಎಂದು ವರದಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಲಕಿ ಮುಂದೆ ಅಸಭ್ಯ ವರ್ತನೆ ತೋರಿದ ಕಿಡಿಗೇಡಿಗೆ ಧರ್ಮದೇಟು; ನೀಚ ಮಾಡಿದ್ದೇನು?

https://newsfirstlive.com/wp-content/uploads/2024/05/UP_GIRL.jpg

Load More