newsfirstkannada.com

VIDEO: ಕ್ಲಾಸ್​ ರೂಮ್​ ಅನ್ನೇ ಸ್ವಿಮ್ಮಿಂಗ್ ಪೂಲ್ ಮಾಡಿದ ಶಾಲೆ; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

Share :

Published May 1, 2024 at 1:13pm

    ಅಬ್ಬಾ.. ಶಾಲೆ ಆಡಳಿತ ಮಂಡಳಿ ಹೀಗೆ ಮಾಡಿದ್ದಕ್ಕೆ ಎಲ್ರೂ ಶಾಕ್!

    ಕ್ಲಾಸ್​ ರೂಮ್ ಮಳೆ ಬಂದು ಸ್ವಿಮ್ಮಿಂಗ್ ಪೂಲ್​ನಂತೆ ಆಗಿಲ್ಲ ಇಲ್ಲಿ

    ಮಕ್ಕಳು ಶಾಲೆಗೆ ಬರುವುದಲ್ಲ, ಈಜಾಡಿ ಎಂಜಾಯ್ ಮಾಡ್ತಿವೆ ​

ಲಕ್ನೋ: ಸಾಮಾನ್ಯ ದಿನಗಳಲ್ಲಿ ಮಕ್ಕಳು ಸರ್ಕಾರಿ ಶಾಲೆಗೆ ಹೋಗು ಎಂದರೆ ಹೋಗುವುದಿಲ್ಲ. ಅಂತಹದ್ರಲ್ಲಿ ಈಗ ಬೇಸಿಗೆ ಬೇರೆ ಇದ್ದು ಶಾಲೆಗೆ ಹೋಗು ಎಂದರೆ ಇನ್ನು ಹೋಗ್ತಾವಾ?. ಮನೆಯಲ್ಲೇ ಇದ್ದು ಚೇಷ್ಟೆ, ತಂಟೆ, ತುಂಟಾಟ ಎಲ್ಲ ಮಾಡುವುದು ಉಂಟು. ಹೀಗಾಗಿಯೇ ಶಾಲೆಗೆ ಬಾರದ ಮಕ್ಕಳನ್ನು ಬರುವಂತೆ ಮಾಡಲು ಆಡಳಿತ ಮಂಡಳಿ ಬಿಗ್ ಪ್ಲಾನ್ ಮಾಡಿ ಯಶಸ್ಸು ಕಂಡಿದೆ. ಸದ್ಯ ಮಕ್ಕಳು ಶಾಲೆಗೆ ಬಂದು ಕ್ಲಾಸ್​​ ಕೂಮ್​ನಲ್ಲಿ ಈಜಾಡುತ್ತಿರೋ ಸೊಗಾಸದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಉತ್ತರ ಪ್ರದೇಶದ ಕನೌಜ್​ ಜಿಲ್ಲೆಯ ಪ್ರಾಥಮಿಕ ಶಾಲೆಯೊಂದರ ತರಗತಿಯ ಕೊಠಡಿಯನ್ನು ನೀರಿನಿಂದ ತುಂಬಿಸಿ ಸ್ವಿಮ್ಮಿಂಗ್ ಪೂಲ್​ನಂತೆ ಮಾಡಲಾಗಿದೆ. ತರಗತಿಯ ನಂತರ ಬಿರು ಬಿಸಿನಲ್ಲಿ ಮಕ್ಕಳನ್ನು ಈಜಾಡಲು ನೀರಿರುವ ರೂಮ್​ನಲ್ಲಿ ಬಿಡಲಾಗುತ್ತದೆ. ಈ ವೇಳೆ ಮಕ್ಕಳೆಲ್ಲ ಶಾಲಾ ಸಮವಸ್ತ್ರದಲ್ಲೇ ಸಖತ್ ಖುಷಿ, ಖುಷಿಯಾಗಿ ಈಜಾಡಿ ಎಂಜಾಯ್ ಮಾಡ್ತಿದ್ದಾವೆ. ಈ ಈಜಾಡುವುದಕ್ಕಂತೆ ಮಕ್ಕಳು ಪೋಷಕರ ಜೊತೆ ಹೊಲಗಳಿಗೆ ಹೋಗದೇ ಶಾಲೆಗೆ ಬರುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಹಾಸನ ವಿಡಿಯೋ ಕೇಸ್​ ಹೊತ್ತಲ್ಲೇ ರಾಜ್ಯಕ್ಕೆ ಅಮಿತ್ ಶಾ ಎಂಟ್ರಿ.. ಕಾಂಗ್ರೆಸ್​ಗೆ ಚೆಕ್​ಮೇಟ್ ಕೊಡಲು ಭರ್ಜರಿ ಪ್ಲಾನ್ 

ಇದನ್ನೂ ಓದಿ: ಹಾಸನ ವಿಡಿಯೋ ಕೇಸ್‌ಗೆ ಹೊಸ ಟ್ವಿಸ್ಟ್‌.. ಅಪ್ರಾಪ್ತ ಹೆಣ್ಣು ಮಗಳನ್ನು ಬಳಸಿಕೊಂಡ ಬಗ್ಗೆ ಅನುಮಾನ

ಸದ್ಯ ಕನೌಜ್​ ಜಿಲ್ಲೆಯಲ್ಲಿ ರೈತರು ಬೆಳೆಗಳನ್ನ ಕಟಾವು ಮಾಡುತ್ತಿದ್ದು ಜೊತೆಗೆ ಬಿಸಿಲು ಬೇರೆ ಬೆಂಕಿಯಂತೆ ಸುಡುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ಶಾಲೆ ಕಡೆ ಸುಳಿಯುತ್ತಿಲ್ಲ ಎನ್ನಲಾಗಿದೆ. ಹೀಗಾಗಿ ಏನು ಮಾಡಬೇಕು ಎಂದು ಶಾಲಾ ಆಡಳಿತ ಮಂಡಳಿ ಯೋಚಿಸಿದಾಗ ಈ ಹೊಸ ಐಡಿಯಾ ಕಂಡುಕೊಂಡಿದೆ. ಅದರಂತೆ ಕ್ಲಾಸ್​ ರೂಮ್​ ಅನ್ನು ಸ್ವಿಮ್ಮಿಂಗ್ ಪೂಲ್​ನಂತೆ ಮಾಡಿದ್ದರಿಂದ ಗ್ರಾಮದ ಮಕ್ಕಳೆಲ್ಲ ಶಾಲೆಗೆ ಬರುತ್ತಿದ್ದಾರೆ. ಇದರಿಂದ ಬೆಳೆಗಳ ಕಟಾವಿಗೆ ಹೊಲಕ್ಕೆ ಹೋಗದಂತೆ ತೆಡೆದಿದ್ದಲ್ಲದೇ ಮಕ್ಕಳ ಹಾಜರಾತಿಯೂ ಹೆಚ್ಚಾಗಿರುವುದು ಕಂಡು ಬಂದಿದೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಕ್ಲಾಸ್​ ರೂಮ್​ ಅನ್ನೇ ಸ್ವಿಮ್ಮಿಂಗ್ ಪೂಲ್ ಮಾಡಿದ ಶಾಲೆ; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

https://newsfirstlive.com/wp-content/uploads/2024/05/UP_STUDEN.jpg

Load More