newsfirstkannada.com

ಶಾಲೆಗಳ ಬಾಂಬ್ ಬೆದರಿಕೆ ಹಿಂದೆ ವಿದೇಶಿ ಕೈವಾಡ? ದೆಹಲಿ ಪೊಲೀಸರಿಂದ ಸ್ಫೋಟಕ ಮಾಹಿತಿ ಪತ್ತೆ

Share :

Published May 1, 2024 at 12:05pm

Update May 1, 2024 at 12:19pm

    ಮುನ್ನೆಚ್ಚರಿಕಾ ಕ್ರಮವಾಗಿ ಶಾಲೆಗಳ ಸುತ್ತ ಪೊಲೀಸರಿಂದ ಭದ್ರತೆ

    ದೆಹಲಿ ನಗರದ ವಿವಿಧೆಡೆ ಇರೋ ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ

    ಪಬ್ಲಿಕ್ ಸ್ಕೂಲ್, ಮದರ್ ಸ್ಕೂಲ್ ಸೇರಿ 100 ಶಾಲೆಗಳಿಗೆ ಬೆದರಿಕೆ ಸಂದೇಶ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ನಗರದ 100ಕ್ಕೂ ಹೆಚ್ಚು ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಕರೆ ಬಂದಿರುವುದು ಭಾರೀ ಆತಂಕವನ್ನು ಸೃಷ್ಟಿ ಮಾಡಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಶಾಲೆಗಳ ಸುತ್ತಮುತ್ತ ಭದ್ರತೆ ಕೈಗೊಳ್ಳಲಾಗಿದ್ದು ಶೋಧ ಕಾರ್ಯ ನಡೆಸಲಾಗುತ್ತಿದೆ.

ಇಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ರಾಜಧಾನಿ ದೆಹಲಿ ಹಾಗೂ ನೋಯ್ಡಾದ ಹಲವು ಶಾಲೆಗಳಿಗೆ ಮೇಲ್ ಕಳುಹಿಸಲಾಗಿದೆ. ಅದರಲ್ಲಿ ದೆಹಲಿಯ ದ್ವಾರಕಾದಲ್ಲಿರುವ ದೆಹಲಿ ಪಬ್ಲಿಕ್ ಸ್ಕೂಲ್, ಪೂರ್ವ ಮಯೂರ್ ವಿಹಾರ್‌ನ ಮದರ್ ಮ್ಯಾರಿ ಸ್ಕೂಲ್, ಸಂಸ್ಕೃತಿ ಶಾಲೆ ಮತ್ತು ಸಾಕೇತ್‌ನ ಅಮಿಟಿ ಸ್ಕೂಲ್ ಸೇರಿದಂತೆ ಇತರ ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆಗಳು ಬಂದಿವೆ. ಇನ್ನು ಮಕ್ಕಳನ್ನು ಶಾಲೆಗಳಿಂದ ಕಳುಹಿಸಲಾಗಿದ್ದು ಯಾವುದೇ ಆತಂಕ ಪಡಬೇಕಾಗಿಲ್ಲ. ಇದೊಂದು ಹುಸಿ ಬಾಂಬ್ ಕರೆ ಆಗಿದ್ದಾವೆ. ಈ ಮೇಲ್​ ಅನ್ನು ಯಾರು ಮಾಡಿದ್ದಾರೆ ಎಂಬುದು ಇನ್ನು ತಿಳಿದು ಬಂದಿಲ್ಲ. ಈ ಬಗ್ಗೆ ಶೋಧ ಕಾರ್ಯ ಮಾಡಲಾಗುತ್ತಿದೆ ಎನ್ನಲಾಗಿದೆ.

ಬಾಂಬ್ ನಿಷ್ಕ್ರಿಯ ದಳ, ಪೊಲೀಸರು ಮತ್ತು ದೆಹಲಿ ಅಗ್ನಿಶಾಮಕ ಸಿಬ್ಬಂದಿ ಶಾಲೆಗಳಿಗೆ ದೌಡಾಯಿಸಿದ್ದು, ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬೆದರಿಕೆ ಇಮೇಲ್‌ಗಳ ಪ್ರಕಾರ ತನಿಖೆ ನಡೆಸಲಾಗುತ್ತಿದೆ. ಆದರೆ ಇದುವರೆಗೂ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಹಾಸನ ವಿಡಿಯೋ ಕೇಸ್‌ಗೆ ಹೊಸ ಟ್ವಿಸ್ಟ್‌.. ಅಪ್ರಾಪ್ತ ಹೆಣ್ಣು ಮಗಳನ್ನು ಬಳಸಿಕೊಂಡ ಬಗ್ಗೆ ಅನುಮಾನ

ಇದನ್ನೂ ಓದಿ: ಹಾಸನ ವಿಡಿಯೋ ಕೇಸ್​ ಹೊತ್ತಲ್ಲೇ ರಾಜ್ಯಕ್ಕೆ ಅಮಿತ್ ಶಾ ಎಂಟ್ರಿ.. ಕಾಂಗ್ರೆಸ್​ಗೆ ಚೆಕ್​ಮೇಟ್ ಕೊಡಲು ಭರ್ಜರಿ ಪ್ಲಾನ್ 

ಶಾಲೆಗಳಿಗೆ ಇಮೇಲ್ ಮಾಡಲಾದ ಐಪಿ ವಿಳಾಸವು ದೇಶದ ಹೊರಗಿನದ್ದು ಎಂದು ತೋರಿಸುತ್ತಿದೆ. ಐಪಿ ವಿಳಾಸವನ್ನು ವಿಪಿಎನ್ ಮೂಲಕ ಮರೆಮಾಡಬಹುದು ಎಂದು ಪೊಲೀಸರು ಶಂಕಿಸಿದ್ದು ತನಿಖೆ ನಡೆಸುತ್ತಿದ್ದಾರೆ. ಮೇಲ್ನೋಟಕ್ಕೆ ಒಂದೇ ಮೇಲ್ ಎಲ್ಲ ಕಡೆ ಸೆಂಡ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಇಲ್ಲಿಯವರೆಗೆ ನಗರದ ವಿವಿಧ ಪ್ರದೇಶಗಳಲ್ಲಿನ 100ಕ್ಕೂ ಅಧಿಕ ಶಾಲೆಗಳಿಂದ ಕರೆಗಳನ್ನು ಸ್ವೀಕರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: ಪ್ರಚಾರದ ವೇದಿಕೆಯಲ್ಲೇ ಭಾರೀ ಹೈಡ್ರಾಮಾ.. ಮುಖಂಡರ ಗಲಾಟೆಯಿಂದ ಸಿದ್ದರಾಮಯ್ಯಗೆ ಮುಜುಗರ..!

  • ದ್ವಾರಕಾದ ಶಾಲೆಗಳಿಂದ 5 ಬಾಂಬ್ ಬೆದರಿಕೆ ಕರೆಗಳು
  • ವಸಂತ್ ಕುಂಜ್‌ನ ಶಾಲೆಗಳಿಂದ 2 ಬಾಂಬ್ ಬೆದರಿಕೆ
  • ನಜಾಫ್‌ಗಢದ ಶಾಲೆಯೊಂದರಿಂದ 1 ಬಾಂಬ್ ಬೆದರಿಕೆ ಕರೆ
  • ಪುಷ್ಪ ವಿಹಾರ್ ಶಾಲೆಯೊಂದರಿಂದ 1 ಬಾಂಬ್ ಬೆದರಿಕೆ ಕರೆ
  • ಮಯೂರ್ ವಿಹಾರ್ ಶಾಲೆಯೊಂದರಿಂದ 1 ಬಾಂಬ್ ಬೆದರಿಕೆ ಕರೆ

ಬಾಂಬ್‌ ಬೆದರಿಕೆ ಹಿಂದೆ ವಿದೇಶಿ ಕೈವಾಡ?

ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಎಲ್ಲಾ ದೆಹಲಿ ಶಾಲೆಗಳನ್ನು ಬಂದ್ ಮಾಡಲಾಗಿದೆ. ಶಾಲೆಗೆ ಬಂದಿದ್ದ ಮಕ್ಕಳನ್ನು ವಾಪಸ್ ಮನೆಗೆ ಕಳುಹಿಸಲಾಗಿದೆ. ದೆಹಲಿಯ ಶಾಲೆಗಳಿಗೆ ಬಾಂಬ್ ಬೆದರಿಕೆಯ ಇ-ಮೇಲ್ ರಷ್ಯಾ ಸರ್ವರ್‌ನಿಂದ ಕಳುಹಿಸಲಾಗಿದೆ. ರಷ್ಯಾದ IP ಅಡ್ರೆಸ್ ಮೂಲಕ ಇ ಮೇಲ್ ರವಾನೆಯಾಗಿದೆ. ವಿದೇಶಿ ಸರ್ವರ್ ಬಳಸಿ ದೆಹಲಿಯ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ಬಾಂಬ್ ಬೆದರಿಕೆಯ ಇ-ಮೇಲ್ ಹಿಂದೆ ವಿದೇಶಿ ಶಕ್ತಿಗಳ ಕೈವಾಡದ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಯಾರೂ ಗಾಬರಿಯಾಗುವುದು ಬೇಡ, ಆತಂಕ ಬೇಡ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಾಲೆಗಳ ಬಾಂಬ್ ಬೆದರಿಕೆ ಹಿಂದೆ ವಿದೇಶಿ ಕೈವಾಡ? ದೆಹಲಿ ಪೊಲೀಸರಿಂದ ಸ್ಫೋಟಕ ಮಾಹಿತಿ ಪತ್ತೆ

https://newsfirstlive.com/wp-content/uploads/2024/05/BOMB.jpg

Load More