ಬಿಸಿಲಿನ ತಾಪಮಾನ; ರಾಯಚೂರನ್ನೇ ಸೈಡ್ ಮಾಡಿದ ಮಂಡ್ಯ.. ಎಷ್ಟು ಡಿಗ್ರಿ ಸೆಲ್ಸಿಯಸ್​ ದಾಖಲಾಯ್ತು?

author-image
Bheemappa
Updated On
ಬಿಸಿಲಿನ ತಾಪಮಾನ; ರಾಯಚೂರನ್ನೇ ಸೈಡ್ ಮಾಡಿದ ಮಂಡ್ಯ.. ಎಷ್ಟು ಡಿಗ್ರಿ ಸೆಲ್ಸಿಯಸ್​ ದಾಖಲಾಯ್ತು?
Advertisment
  • ಈಗಾಗಲೇ ಬಿಸಿಲಿನ ಜಳದಿಂದ ಸಂಕಷ್ಟ ಎದುರಿಸ್ತಿರುವ ಜನರು
  • ರಾಜ್ಯದ 4 ಜಿಲ್ಲೆಗಳಲ್ಲಿ ತಾಪಮಾನ 40ರ ಗಡಿ ದಾಟಿದ್ದು ಆಶ್ಚರ್ಯ
  • ಕಲಬುರಗಿ, ಯಾದಗಿರಿಯಲ್ಲಿ ಎಷ್ಟು ಡಿಗ್ರಿ ಸೆಲ್ಸಿಯಸ್ ದಾಖಲು?​

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ದಾಖಲೆ ಮೀರಿದ ಪ್ರಮಾಣದಲ್ಲಿ ಬಿಸಿಲಿನ ಬೇಗೆ ಹೆಚ್ಚಾಗುತ್ತಲೇ ಇದ್ದು ಜನರು ಹೊರಗೆ ಬರಲು ಭಯಪಡುವಂತೆ ಆಗಿದೆ. ಇಂದು ಸಹ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು ವಾತಾವರಣದಲ್ಲಿ ರಾಜ್ಯದ 4 ಜಿಲ್ಲೆಗಳಲ್ಲಿ ತಾಪಮಾನ 40ರ ಗಡಿ ದಾಟಿರುವುದು ಆಶ್ಚರ್ಯ ಮೂಡಿಸಿದೆ.

ಸಿಲಿಕಾನ್ ಸಿಟಿಯಲ್ಲಿ ವರುಣರಾಯ ಕೃಪೆ ತೋರಿ ಮಳೆ ಬರಿಸಿದ್ರೆ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಾತ್ರ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲಿಯು ಬಿಸಿಲಿನ ಬೇಗೆಗೆ ಜನರು ತತ್ತರಿಸುತ್ತಿದ್ದು, ಬಾನದಾರಿಯಲ್ಲಿ ವರುಣನ ಬರುವಿಕೆಗೆಗೆ ಕಾಯುತ್ತಿದ್ದಾರೆ.

ಇದನ್ನೂ ಓದಿ:ಯಶ್​ ಟಾಕ್ಸಿಕ್​​ನಿಂದ ಬಾಲಿವುಡ್​ ಬ್ಯೂಟಿ ಔಟ್​.. ಕರೀನಾ ಹೊರ ಬರಲು ಕಾರಣ?

publive-image

ಇದನ್ನೂ ಓದಿ: ಮಂಡ್ಯ, ಮೈಸೂರಲ್ಲಿ ಆಲಿಕಲ್ಲು ಸಹಿತ ಧಾರಾಕಾರ ಮಳೆ; ವರುಣನ ಅಬ್ಬರಕ್ಕೆ ಜನ ಶಾಕ್; ಎಲ್ಲೆಲ್ಲಿ ಏನಾಯ್ತು? 

ರಾಜ್ಯದಲ್ಲಿ ತೀವ್ರ ಬಿಸಿಗಾಳಿ ಮುಂದುವರಿದಿದ್ದು, ಇಂದು 4 ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಮಂಡ್ಯ, ರಾಯಚೂರು, ಕಲಬುರಗಿ, ಯಾದಗಿರಿಯಲ್ಲಿ 46 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಟಿದೆ. ಇದು ದಾಖಲೆಯ ಪ್ರಮಾಣದಲ್ಲಿ ದಾಖಲಾಗಿದೆ. ಇದು ಜನರ ಆರೋಗ್ಯದ ಮೇಲೆಯು ಪರಿಣಾಮ ಬೀರುತ್ತಿದೆ.

  • ಮಂಡ್ಯ: 47.6 ಡಿಗ್ರಿ ಸೆಲ್ಸಿಯಸ್
  • ರಾಯಚೂರು: 46.7 ಡಿಗ್ರಿ ಸೆಲ್ಸಿಯಸ್
  • ಕಲಬುರಗಿ: 46.3 ಡಿಗ್ರಿ ಸೆಲ್ಸಿಯಸ್
  • ಯಾದಗಿರಿ: 46 ಡಿಗ್ರಿ ಸೆಲ್ಸಿಯಸ್

ಬಿಸಿಲಿನ ತಾಪಮಾನದಿಂದ ಜನರು ಅನಾರೋಗ್ಯಕ್ಕೂ ತುತ್ತಾಗುತ್ತಿದ್ದು, ಸಾಮಾನ್ಯ ಜೀವನ ನಡೆಸಲು ಕಷ್ಟವಾಗುತ್ತಿದೆ. ಇದೇ ರೀತಿ ಮುಂದುವರೆದ್ರೆ ಜನರ ಆರೋಗ್ಯ ಸ್ಥಿತಿ ಗತಿ ಹದಗೇಡುತ್ತೆ. ತಂಪಾದ ವಾತಾವರಣಕ್ಕಾಗಿ ಜನರು‌ ಎದುರು ನೋಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment