Advertisment

ಅಮ್ಮನ ಕಳ್ಕೊಂಡ 4 ವರ್ಷದ ಕಂದಮ್ಮ.. ಮಂಗಳೂರು ಉಪನ್ಯಾಸಕಿ ದುರಂತ ಅಂತ್ಯ; ಏನಿದು ಲಿವರ್ ದಾನ?

author-image
admin
Updated On
ಅಮ್ಮನ ಕಳ್ಕೊಂಡ 4 ವರ್ಷದ ಕಂದಮ್ಮ.. ಮಂಗಳೂರು ಉಪನ್ಯಾಸಕಿ ದುರಂತ ಅಂತ್ಯ; ಏನಿದು ಲಿವರ್ ದಾನ?
Advertisment
  • 4 ವರ್ಷದ ಪುಟ್ಟ ಮಗನಿಗೆ ಇನ್ಯಾರು ದಿಕ್ಕು? ಅಯ್ಯೋ ವಿಧಿಯೇ!
  • ಒಂದು ಜೀವಕ್ಕಲ್ಲ.. ಅನೇಕ ಜೀವಗಳಿಗೆ ಶಕ್ತಿಯಾಗಿ ನಿಂತಾಕೆ ಇನ್ನಿಲ್ಲ
  • ಏನಿದು ಲಿವರ್ ದಾನ? ಲಿವರ್ ದಾನ ಮಾಡಿದವರೆಲ್ಲಾ ಸಾಯ್ತಾರಾ?

ಮಂಗಳೂರಿನ ಉಪನ್ಯಾಸಕಿ ಲಿವರ್ ದಾನ ಮಾಡಿದ ಬಳಿಕ ಹಠಾತ್ ಸಾವನ್ನಪ್ಪಿರೋ ಸುದ್ದಿ ಎಲ್ಲರಲ್ಲೂ ಆಘಾತ ತಂದಿದೆ. ಹಾಗಾದ್ರೆ, ಈ ಲಿವರ್ ಡೊನೇಷನ್ ಹೇಗೆ ನಡೆಯುತ್ತೆ? ಆಪರೇಷನ್ ಹೇಗಿರುತ್ತೆ? ಲಿವರ್ ಕೊಟ್ಟವರಿಗೆಲ್ಲಾ ಆಪತ್ತು ಇರುತ್ತಾ? ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ.

Advertisment

ಇದನ್ನೂ ಓದಿ: ಅಪರೂಪದ ಜೀವದಾನಿ.. ಮಂಗಳೂರು ಉಪನ್ಯಾಸಕಿ ಅರ್ಚನಾ ಕಾಮತ್ ಸಾವು ಹೇಗಾಯ್ತು? ಕಾರಣವೇನು? 

ಯಾವ ಹಣ, ಆಮಿಷಗಳಿಗೆ ಒಳಗಾಗದೆ, ಕೇವಲ ಮಾನವೀಯತೆಯಿಂದ ತಮ್ಮ ಅಂಗಾಂಗಳನ್ನು ದಾನ ಮಾಡೋದು ಸಿನಿಮಾಗಳಲ್ಲಷ್ಟೇ ಕಾಣ ಸಿಗುತ್ತೆ. ಆಗೊಮ್ಮೆ ಹೀಗೊಮ್ಮೆ ನಿಜ ಜೀವನದಲ್ಲಿಯೂ ಇಂಥಾ ಅಪರೂಪದ ಘಟನೆಗಳು ನಡೆಯುತ್ತಿರುತ್ತವೆ. ಹಾಗೆ, ಬೇರೊಂದು ಜೀವ ರಕ್ಷಿಸಲು ತಮ್ಮ ಲಿವರ್ ಅನ್ನೇ ದಾನ ಮಾಡಿದ್ದಾ ಈ ಪರೋಪಕಾರಿ ಅರ್ಚನಾ ಕಾಮತ್ ಹಠಾತ್ ನಿಧನರಾಗಿದ್ದಾರೆ.

publive-image

ಲಿವರ್ ದಾನ ಮಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಬಂದ ಮೂರೇ ದಿನಕ್ಕೆ ಆರೋಗ್ಯದಲ್ಲಿ ಏರುಪೇರಾಗಿದೆ. ಆಸ್ಪತ್ರೆಗೆ ತಂದು ದಾಖಲಿಸಿದ ಕೆಲ ದಿನದಲ್ಲೇ ಬಹುಅಂಗಾಂಗ ವೈಫಲ್ಯವಾಗಿ ದಾರುಣ ಸಾವು ಕಂಡಿದ್ದಾರೆ. ಮತ್ತೊಬ್ಬರ ಜೀವಕ್ಕಾಗಿ ಮಿಡಿದಾಕೆಯನ್ನೇ ವಿಧಿ ಬಲಿಪಡೆದುಕೊಂಡಿರೋದು ಎಲ್ಲರಿಗೂ ಆಘಾತ ತಂದಿದೆ.

Advertisment

ಮಂಗಳೂರಿನಲ್ಲಿ ಉಪನ್ಯಾಸಕಿಯಾಗಿದ್ದ ಅರ್ಚನಾ ಕಾಮತ್ ಅವ್ರು ಇದೊಂದು ವಿಚಾರದಲ್ಲಿಯಷ್ಟೇ ಮಾನವೀಯತೆ ಮೆರೆದಿದ್ರು ಅನ್ಕೋಬೇಡಿ. ತಮ್ಮ ಇಡೀ ಜೀವನದ ಉದ್ದಕ್ಕೂ ಕಷ್ಟ ಎಂದವರಿಗೆ ಮಿಡಿಯುತ್ತಿದ್ದ ಜೀವ ಇದು ಅನ್ನೋದು ಎಲ್ಲರ ಮಾತು. ಇಂತಹ ಪರೋಪಕಾರಿ ಹೆಣ್ಣುಮಗಳ ಸಾವು ಎಂಥವರಿಗೂ ಆಘಾತವೇ ಸರಿ.

ಇದನ್ನೂ ಓದಿ:ಜೀವ ಉಳಿಸಲು ಹೋಗಿ ಪ್ರಾಣ ಬಿಟ್ಟ ಮಹಿಳೆ.. ಉಡುಪಿಯಲ್ಲಿ ಘೋರ ದುರಂತ; ಆಗಿದ್ದೇನು?

ಈ ಘಟನೆಯಲ್ಲಿ ಎಲ್ಲರಿಗೂ ಕಾಡೋ ಅತಿಮುಖ್ಯ ಪ್ರಶ್ನೆ ಅಂದ್ರೆ ಲಿವರ್ ದಾನ ಮಾಡಿದ್ದೇ ಅರ್ಚನಾ ಜೀವಕ್ಕೆ ಕುತ್ತು ತಂದಿತಾ ಅನ್ನೋದು. ಸದ್ಯಕ್ಕೆ ತಿಳಿದು ಬಂದಿರೋ ಮಾಹಿತಿ ಪ್ರಕಾರ ಲಿವರ್ ದಾನ ಮಾಡಿದ ಬಳಿಕ ಅರ್ಚನಾರಿಗೆ ಸೋಂಕು ತಗುಲಿದೆ ಎನ್ನಲಾಗಿದೆ. ಇದು ದೇಹದ ಬೇರೆ ಬೇರೆ ಅಂಗಗಳಿವೂ ವ್ಯಾಪಿಸಿ ಸಾವು ಸಂಭವಿಸಿದೆ ಎಂಬ ಮಾಹಿತಿಯಿದೆ.

Advertisment

publive-image

ಏನಿದು ಲಿವರ್ ದಾನ? ಲಿವರ್ ದಾನ ಮಾಡಿದವರೆಲ್ಲಾ ಸಾಯ್ತಾರಾ?
ಹೇಗಿರುತ್ತೆ ಗೊತ್ತಾ ಲಿವರ್ ಟ್ರಾನ್ಸ್‌ಪ್ಲಾಂಟ್ ಆಪರೇಷನ್?
ನಾವು ಮೊದಲೇ ಹೇಳಿದ ಹಾಗೆ ಕಿಡ್ನಿ ದಾನ ಬೇರೆ.. ಲಿವರ್ ದಾನ ಬೇರೆ. ದೇಹದಲ್ಲಿ ಎರಡೆರಡು ಕಿಡ್ನಿಗಳಿರುತ್ತವೆ. ಹಾಗಾಗಿ, ಒಂದು ಕಿಡ್ನಿಯನ್ನು ಸಂಪೂರ್ಣವಾಗಿ ತೆಗೆದು ಅಗತ್ಯವಿರೋ ರೋಗಿಗೆ ಹಾಕಲಾಗುತ್ತೆ. ಒಬ್ಬ ವ್ಯಕ್ತಿ ಒಂದು ಕಿಡ್ನಿಯಲ್ಲೂ ತಕ್ಕಮಟ್ಟಿಗೆ ಜೀವನ ಸಾಗಿಸಬಹುದು. ಆದ್ರೆ, ಲಿವರ್ ಟ್ರಾನ್ಸ್‌ಪ್ಲಾಂಟ್‌ನಲ್ಲಿ ಹಾಗೆ ಆಗೋದಿಲ್ಲ. ಲಿವರ್ ಟ್ರಾನ್ಸ್‌ಪ್ಲಾಂಟ್ ಅಂದ್ರೆ ಒಬ್ಬ ವ್ಯಕ್ತಿಯ ಲಿವರ್ ಅನ್ನು ಸಂಪೂರ್ಣವಾಗಿ ತೆಗೆದು ರೋಗಿಯ ದೇಹಕ್ಕೆ ಕಸಿ ಮಾಡುವುದಿಲ್ಲ. ಬದಲಾಗಿ, ಲಿವರ್‌ನ ಒಂದು ಭಾಗವನ್ನು ಮಾತ್ರ ಕತ್ತರಿಸಿಕೊಂಡು ಅಗತ್ಯವಿರೋ ರೋಗಿಯ ದೇಹಕ್ಕೆ ಕಸಿ ಮಾಡಲಾಗುತ್ತೆ.

ಲಿವರ್ ನ ಒಂದು ಭಾಗ ಕಟ್ ಮಾಡಿಬಿಟ್ರೆ ಆರೋಗ್ಯವಂತ ರೋಗಿಗೂ ತೊಂದ್ರೆ ಆಗಲ್ವಾ ಅಂತ ನೀವು ಕೇಳಬಹುದು. ಯಾಕಂದ್ರೆ ಲಿವರ್ ಬೇರೆ ಅಂಗಾಂಗಳಂತಲ್ಲ. ಲಿವರ್‌ನ ಒಂದು ಭಾಗವನ್ನು ಕತ್ತರಿಸಿದರೆ ಅದು ಮತ್ತೆ ಬೆಳೆಯುತ್ತೆ. ವಾರಗಳ ಅಂತರದಲ್ಲಿ ಮತ್ತೆ ಮೊದಲಿನ ಸ್ಥಿತಿಗೆ ಬರುತ್ತೆ. ದಾನಿಯ ಲಿವರ್‌ನಿಂದ ಕತ್ತರಿಸಿ ತೆಗೆದ ಭಾಗವನ್ನು ರೋಗಿಯ ದೇಹಕ್ಕೆ ಕಸಿ ಮಾಡಿದ ಬಳಿಕ. ಆ ರೋಗಿಯ ದೇಹದಲ್ಲಿ ಲಿವರ್ ಹಂತ ಹಂತವಾಗಿ ಬೆಳೆಯುತ್ತಾ ಹೋಗುತ್ತೆ. ತಿಂಗಳುಗಳ ಅಂತರದಲ್ಲಿ ಲಿವರ್ ಪರಿಪೂರ್ಣವಾಗಿ ಬೆಳೆದು ಮೊದಲಿನಂತೆ ಕಾರ್ಯ ಆರಂಭಿಸುತ್ತೆ.

publive-image

ಲಿವರ್ ದಾನಿಗಳಿಗೇ ಆಗ್ಲಿ.. ಲಿವರ್ ಪಡೆದುಕೊಳ್ಳೋ ರೋಗಿಗಳಿಗೇ ಆಗ್ಲಿ.. ಪ್ರಾಬ್ಲಂ ಇರೋದು ಕೊಡೋದ್ರಲ್ಲಿ, ತೆಗೆದುಕೊಳ್ಳೋದ್ರಲ್ಲಿಯಲ್ಲ. ಬದ್ಲಾಗಿ, ಕಸಿ ಮಾಡುವ ವೇಳೆ ಯಾವುದಾದ್ರು ಸೋಂಕು ತಗುಲಿದ್ರೆ ಇಬ್ಬರ ಪ್ರಾಣಕ್ಕೂ ಕುತ್ತು ಬರುತ್ತೆ. ಈ ಸೋಂಕುಗಳು ಹೇಗೆ ಬೇಕಾದ್ರೂ ತಗುಲಬಹುದು. ವೈದ್ಯರ ನಿರ್ಲಕ್ಷದಿಂದ.. ಗಾಳಿಯಿಂದ.. ವ್ಯಕ್ತಿಯ ರೋಗನಿರೋಧಕ ಶಕ್ತಿ ಕಡಿಮೆಯಿದ್ದರೂ ಸೋಂಕು ಅಟ್ಯಾಕ್ ಮಾಡಬಹುದು.

Advertisment

ಇದನ್ನೂ ಓದಿ: ಆ ಕರ್ಣನಂತೆ, ನೀ ದಾನಿಯಾದೆ.. ಜೀವದಾನ ಮಾಡಿ ಮನೆಗೆ ಶವವಾಗಿ ಮರಳಿದ ಮನಕಲುಕುವ ಕಥೆ ಇದು! 

ಅರ್ಚನಾ ಕಾಮತ್‌ ಕುಟುಂಬದ ಆಪ್ತರು ಹೇಳೋ ಪ್ರಕಾರ ಲಿವರ್ ನೀಡಿದ್ದೇ ಅವರ ಸಾವಿಗೆ ನೇರವಾದ ಕಾರಣ ಅಲ್ಲ. ಇದಕ್ಕೆ ಬೇರೆ ಬೇರೆ ಆರೋಗ್ಯ ಸಂಬಂಧಿ ಸಮಸ್ಯೆಗಳೂ ಕಾರಣ ಆಗಿರಬಹುದು ಅಂತಾರೆ. ಅದೇನೇ ಇರ್ಲಿ ಬೇರೊಬ್ಬ ರೋಗಿಗೆ ಮರುಜನ್ಮ ಕೊಡಲು ಮಂದಾಗಿದ್ದ ಕರುಣಾಮಯಿ ಜೀವಕ್ಕೆ ಆ ನಿರ್ಧಾರವೇ ಮುಳುವಾಗಿರೋದು ನಿಜಕ್ಕೂ ದುರಂತ. ವಿಧಿಯೇ ನೀನೆಷ್ಟು ಕ್ರೂರಿ.

publive-image

ಈ ಪರೋಪಕಾರಿ ಅರ್ಚನಾ ಕಾಮತ್ ವಿಚಾರದಲ್ಲಿಯೂ ಇದೇ ರೀತಿಯಲ್ಲೇ ಸೋಂಕು ತಗುಲಿ ಪ್ರಾಣಕ್ಕೆ ಕುತ್ತು ಬಂದಿದೆ ಎನ್ನಲಾಗಿದೆ. ಅರ್ಚನಾ ಕಾಮತ್‌ರ ಲಿವರ್‌ಗೆ ಸೋಂಕು ತಗುಲಿರೋ ಕಾರಣಕ್ಕೆ ಅವರಿಗೂ ಲಿವರ್ ಟ್ರಾನ್ಸ್‌ಪ್ಲಾಂಟ್ ಮಾಡೋಕೆ ಲಿವರ್ ದಾನಿಯನ್ನು ಹುಡುಕಿ ಕಸಿ ಮಾಡೋದಕ್ಕೂ ತಯಾರಿ ನಡೆದಿತ್ತಂತೆ. ಆಷ್ಟರಲ್ಲಿ ಅರ್ಚನಾ ಪ್ರಾಣಪಕ್ಷಿ ಹಾರಿದೆ. ಛೇ ಯಾರು ಬೇಕಾದ್ರೂ ಈ ನೋವಿನಿಂದ ಹೊರಬಹುದೇನೋ. ಬಟ್ ಅಮ್ಮ ಎಲ್ಲಿ ಅಂತಾ ಕೇಳಿದ್ರೆ ಈ ಪುಟ್ಟ ಕಂದಮ್ಮನಿಗೆ ಏನಂತಾ ಹೇಳೋದು.

Advertisment

ಅರ್ಚನಾ ಕಾಮತ್‌ರಂತಾ ನಿಸ್ವಾರ್ಥ ಹೆಣ್ಣುಮಗಳ ಹಠಾತ್ ಸಾವು ನಿಜಕ್ಕೂ ಘೋರ. ಕೇವಲ ಕುಟುಂಬಕ್ಕಷ್ಟೇ ಅಲ್ಲ.. ಆಕೆಯನ್ನು ಹತ್ತಿರದಿಂದ ಕಂಡಿರೋ ಪ್ರತಿಯೊಬ್ಬರಿಗೂ ಬರಸಿಡಿಲು ಬಡಿದಂತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment