newsfirstkannada.com

×

ಅಪರೂಪದ ಜೀವದಾನಿ.. ಮಂಗಳೂರು ಉಪನ್ಯಾಸಕಿ ಅರ್ಚನಾ ಕಾಮತ್ ಸಾವು ಹೇಗಾಯ್ತು? ಕಾರಣವೇನು?

Share :

Published September 17, 2024 at 10:04pm

    ಆಸ್ಪತ್ರೆಯಿಂದ ಮನೆಗೆ ಹೋದ ಮೂರೇ ದಿನಕ್ಕೆ ಕೆಟ್ಟಿತ್ತು ಆರೋಗ್ಯ

    4 ವರ್ಷದ ಪುಟ್ಟ ಮಗನಿಗೆ ಇನ್ಯಾರು ದಿಕ್ಕು? ಅಯ್ಯೋ ವಿಧಿಯೇ!

    ನಿಸ್ವಾರ್ಥ, ಪರೋಪಕಾರ, ಜನರ ಕಷ್ಟಕ್ಕೆ ಮಿಡಿಯೋ ಅಪರೂಪದ ಹೆಣ್ಣು

ಈಕೆಗಿನ್ನೂ 33 ವರ್ಷ. ನಿಸ್ವಾರ್ಥ, ಪರೋಪಕಾರ, ಜನರ ಕಷ್ಟಕ್ಕೆ ಮಿಡಿಯೋ ಅಪರೂಪದ ಹೆಣ್ಣು. ವೃತ್ತಿಯಲ್ಲಿ ಪ್ರೊಫೆಸರ್ ಆಗಿದ್ದಾಕೆಗೆ ಎಲ್ಲವೂ ಇತ್ತು. ಆದ್ರೂ ಬೇರೊಂದು ಜೀವ ಉಳಿಸಬೇಕು ಅಂತ ಲಿವರ್ ದಾನ ಮಾಡಿದಾಕೆ ಬದುಕಲ್ಲಿ ವಿಧಿ ಬೇರೆಯದೇ ಆಟವಾಡ್ಬಿಟ್ಟಿದೆ. ಸಾವು ಬದುಕಿನ ನಡುವೆ ಹೋರಾಡ್ತಿದ್ದ ರೋಗಿಗೆ ಲಿವರ್ ದಾನ ಮಾಡಿ ಮನೆಗೆ ತೆರಳಿದ ಮೂರೇ ದಿನಕ್ಕೆ ಚೆನ್ನಾಗಿದ್ದಾಕೆಯ ಪ್ರಾಣಪಕ್ಷಿಯೇ ಹಾರಿದೆ.

ಇದನ್ನೂ ಓದಿ: ಆ ಕರ್ಣನಂತೆ, ನೀ ದಾನಿಯಾದೆ.. ಜೀವದಾನ ಮಾಡಿ ಮನೆಗೆ ಶವವಾಗಿ ಮರಳಿದ ಮನಕಲುಕುವ ಕಥೆ ಇದು! 

ಮಂಗಳೂರಿನ ಕಂರಗಲ್ಪಾಡಿಯ ಈ ಅರ್ಚನಾ ಕಾಮತ್ ತನ್ನ ಲಿವರ್‌ ಅನ್ನು ದಾನ ಮಾಡಿದ ಕೇವಲ ಎರಡೇ ವಾರಕ್ಕೆ ಹಠಾತ್ ಸಾವನ್ನಪ್ಪಿದ್ದಾರೆ. ನಾಲ್ಕು ವರ್ಷದ ಪುಟ್ಟ ಮಗು ಕೂಡ ಈಗ ಅಮ್ಮನಿಲ್ಲದೆ ರೋದಿಸುವಂತಾಗಿದೆ. ಬಿಟ್ಟೋದ್ಯಲ್ಲಾ ಅಮ್ಮಾ ಅಂತ ಈ ಮಗು ಕಣ್ಣೀರು ಹಾಕುತ್ತಿದ್ರೆ, ಇಡೀ ನಾಡು ಈ ಅರ್ಚನಾರ ಗುಣಗಾನ ಮಾಡ್ತಿದೆ. ಯಾಕಂದ್ರೆ, ಈ ಅರ್ಚನಾ ಬೇರೊಂದು ಜೀವ ಕಾಪಾಡಲು ಹೋಗಿ ತನ್ನ ಪ್ರಾಣವನ್ನೇ ಅರ್ಪಿಸಿದ್ದಾರೆ. ಛೇ ಇದೆಂತಾ ವಿಧಿಯಾಟ.

ಮತ್ತೊಂದು ಜೀವ ಉಳಿಸಲು ಲಿವರ್ ಕೊಟ್ಟಳು ಉಪನ್ಯಾಸಕಿ!
ವೃದ್ಧೆಯ ಕಾಪಾಡಿದ ಅರ್ಚನಾ ಜೀವಕ್ಕೆ ಕುತ್ತು ಬಂತೇಕೆ?
ಸಮಾಜಮುಖಿ, ಪರೋಪಕಾರಿ, ಸದಾ ಪರರ ಕಷ್ಟಕ್ಕೆ ಮಿಡಿಯುತ್ತಿದ್ದ ಹೃದಯ ಇಂದು ಬಡಿತವನ್ನೇ ನಿಲ್ಲಿಸಿದೆ. ಹೌದು, ಮಂಗಳೂರಿನ ಪ್ರಸಿದ್ಧ ಲೆಕ್ಕಪರಿಶೋಧಕರಾಗಿರೋ ಚೇತನ್ ಕಾಮತ್‌ರ ಪತ್ನಿ ಅರ್ಚನಾ ಕಾಮತ್ ಅವರು ಮತ್ತೊಂದು ಜೀವ ಕಾಪಾಡಲು ತಮ್ಮ ಲಿವರ್ ದಾನ ಮಾಡಿದ್ದರು. ಬಟ್, ಎಲ್ಲವೂ ಚೆನ್ನಾಗಿದ್ದ ಹೊತ್ತಲ್ಲೇ ಅರ್ಚನಾ ದಿಢೀರಂತ ಅನಾರೋಗ್ಯಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ. ಅರ್ಚನಾರಾ ಸಾವಿಗೆ ಮನೆಮಂದಿ, ಊರಿಗೆ ಊರೇ ಕಣ್ಣೀರಾಗಿದೆ.

ಇದನ್ನೂ ಓದಿ: ನಂಗೂ ಬೇಕು.. ನಂಗೂ ಬೇಕು; ಮೈಸೂರು ಸಿಲ್ಕ್​​ ಸೀರೆಗಳಿಗೆ ಮುಗಿಬಿದ್ದ ನಾರಿಯರು; ಸಿಗ್ತಾ ಇಲ್ಲ ಯಾಕೆ? 

ಲಿವರ್ ದಾನ ಮಾಡೋರು ಸಾಯ್ತಾರಾ? ಹಠಾತ್ ಸಾವು ಏಕೆ?

ಮಂಗಳೂರಿನ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿದ್ದ ಅರ್ಚನಾ ಕಾಮತ್ ಕುಟುಂಬದಲ್ಲಿ ಇತ್ತೀಚೆಗೆ ಸಂಕಷ್ಟವೊಂದು ಶುರುವಾಗಿತ್ತು. ಅರ್ಚನಾರ ಪತಿ ಚೇತನ್ ಕಾಮತ್‌ರ ತಂದೆಯ ತಮ್ಮನ ಪತ್ನಿಗೆ ಲಿವರ್ ಡಿಸೀಸ್ ಕಾಣಿಸಿಕೊಂಡಿತ್ತಂತೆ. ಹಾಗಾಗಿ, ಅವರಿಗೆ ಲಿವರ್ ಟ್ರಾನ್ಸ್‌ಪ್ಲಾಂಟ್‌ಗಾಗಿ ಹುಡುಕಾಟ ಆರಂಭವಾಗಿತ್ತು. ಹಲವಾರು ಮಂದಿ ಸ್ವಇಚ್ಛೆಯಿಂದ ಲಿವರ್ ದಾನ ಮಾಡಲು ಮುಂದೆ ಬಂದಿದ್ರು. ಆದ್ರೆ, ಯಾರೊಬ್ಬರ ಲಿವರ್‌ ಕೂಡ ರೋಗಿಯ ಲಿವರ್‌ಗೆ ಮ್ಯಾಚ್ ಆಗಲೇ ಇಲ್ಲ. ಆ ಸಂದರ್ಭದಲ್ಲಿ ನನ್ನ ಲಿವರ್ ತಗೊಳ್ಳಿ ಅಂತ ಮುಂದೆ ಬಂದಿದ್ದಾಕೆಯೇ ಈ ಕರುಣಾಮಯಿ ಅರ್ಚನಾ.

ಸ್ವಂತ ತಾಯಿಯೂ ಅಲ್ಲ.. ಸ್ವಂತ ತಂದೆಯೂ ಅಲ್ಲ.. ಮಾವ, ಅತ್ತೆ, ಅಕ್ಕ, ತಂಗಿ, ಪತಿ.. ಇವಱರೂ ಅಲ್ಲ. ಲಿವರ್‌ ಅವಶ್ಯಕತೆ ಇದ್ದದ್ದು ಅರ್ಚನಾ ಕಾಮತ್‌ರ ಪತಿಯ ತಂದೆಯ ಅಣ್ಣನ ಪತ್ನಿಗೆ. ಹಾಗೆ, ನೋಡಿದ್ರೆ ಅರ್ಚನಾ ನಾನ್ಯಾಕೆ ಕೊಡಲಿ ಅಂತ ಅಂದುಕೊಂಡು ಸುಮ್ಮನಿರಬಹುದಿತ್ತು. ಬಟ್, ಯಾವಾಗ ಯಾವ ಲಿವರ್ ಸ್ಯಾಂಪಲ್‌ಗಳೂ ಮ್ಯಾಚ್ ಆಗಲಿಲ್ವೋ.. ತಾನೇ ಲಿವರ್ ಕೊಡ್ತೀನಿ ಅಂತ ಮುಂದೆ ಬಂದ್ರು. ಕುಟುಂಬಸ್ಥರೂ ಕೂಡ ಒಪ್ಪಿಕೊಂಡ್ರು. ಅಂದುಕೊಂಡಂತೆ ಲಿವರ್ ಟ್ರಾನ್ಸ್‌ಪ್ಲಾಂಟ್‌ಗೆ ಸಮಯ ಕೂಡ ನಿಗಧಿಯಾಯಿತು. ಬಟ್, ಮತ್ತೊಂದು ಜೀವಕ್ಕೆ ಮಿಡಿದ ಅರ್ಚನಾಳ ಜೀವನದಲ್ಲಿ ಆ ವಿಧಿ ಬೇರೆಯದೇ ಆಟವಾಡಿಬಿಡ್ತು.

ಲಿವರ್ ಕೊಟ್ಟು ಮನೆಗೆ ತೆರಳಿದ್ದ ಅರ್ಚನಾ ಆರೋಗ್ಯದಲ್ಲಿ ಏರುಪೇರು!
ಆಸ್ಪತ್ರೆಯಿಂದ ಮನೆಗೆ ಹೋದ ಮೂರೇ ದಿನಕ್ಕೆ ಕೆಟ್ಟಿತ್ತು ಆರೋಗ್ಯ!
ಕೊಟ್ಟಿದ್ದು ಲಿವರ್.. ಆದ್ರೆ, ಬಹುಅಂಗಾಂಗ ವೈಫಲ್ಯದಿಂದ ಹಠಾತ್ ಸಾವು!
ಕಿಡ್ನಿ ಬೇರೆ.. ಲಿವರ್ ಬೇರೆ.. ದೇಹದಲ್ಲಿ ಎರಡು ಕಿಡ್ನಿಗಳಿರುತ್ವೆ. ಆದ್ರೆ, ಲಿವರ್ ಇರೋದು ಒಂದು ಮಾತ್ರ. ಸಂಬಂಧಿಯ ಜೀವ ಉಳಿಸಬೇಕು ಅಂತಾ ಈ ಲಿವರ್ ಅನ್ನು ಕೊಡೋಕೆ ನಿರ್ಧರಿಸಿದ್ದ ಅರ್ಚನಾ ಕಾಮತ್. ಬೆಂಗಳೂರಿನ ಖ್ಯಾತ ಆಸ್ಪತ್ರೆಗೆ ದಾಖಲಾಗಿದ್ರು. ಯಾಕಂದ್ರೆ, ಬೆಂಗಳೂರಿನ ಆ ಖ್ಯಾತ ಆಸ್ಪತ್ರೆಯಲ್ಲೇ ರೋಗಿಯನ್ನು ದಾಖಲು ಮಾಡಲಾಗಿತ್ತು. ಲಿವರ್ ಟ್ರಾನ್ಸ್‌ಪ್ಲಾಂಟ್ ಕೂಡ ಅಲ್ಲೇ ನಡೆಯಲಿತ್ತು. ಕುಟುಂಬಸ್ಥರೆಲ್ಲಾ ಬಂದಿದ್ರು. ಅಂದುಕೊಂಡಂತೆ ಅರ್ಚನಾರ ಲಿವರ್‌ನ ಒಂದು ಭಾಗವನ್ನು ಯಶಸ್ವಿಯಾಗಿ ತೆಗೆದು ರೋಗಿಗೆ ಕಸಿ ಮಾಡೋಕೆ ತಯಾರಿ ಆರಂಭಿಸಲಾಯ್ತು.

ಇದನ್ನೂ ಓದಿ: ಜೀವ ಉಳಿಸಲು ಹೋಗಿ ಪ್ರಾಣ ಬಿಟ್ಟ ಮಹಿಳೆ.. ಉಡುಪಿಯಲ್ಲಿ ಘೋರ ದುರಂತ; ಆಗಿದ್ದೇನು?

ಲಿವರ್‌ನ ಒಂದು ಭಾಗ ದಾನ ಮಾಡಿದ ಅರ್ಚನಾರನ್ನು ಆಸ್ಪತ್ರೆಯಲ್ಲಿ ವಿಶ್ರಾಂತಿಗೆ ಕೆಲ ದಿನ ಇರಿಸಲಾಗಿತ್ತು. ಮೂರು ದಿನಗಳ ಹಿಂದೆ ಅರ್ಚನಾ ಕಾಮತ್‌ರನ್ನು ಡಿಸ್ಚಾರ್ಜ್ ಕೂಡ ಮಾಡಾಗಿತ್ತು. ಆದ್ರೆ, ಇದ್ದಕ್ಕಿದ್ದಂತೆ ಅರ್ಚನಾಗೆ ತೀವ್ರ ಜ್ವರ ಶುರುವಾಗಿತ್ತು.

ಅರ್ಚನಾರನ್ನು ಕರೆದುಕೊಂಡು ಮತ್ತೆ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದ ಅರ್ಚನಾ ಕುಟುಂಬ ತೀವ್ರ ಆತಂಕಗೊಂಡಿತ್ತು. ಗಂಟೆ ಗಂಟೆಗೂ ಅರ್ಚನಾ ಆರೋಗ್ಯ ಹದಗೆಡುತ್ತಾ ಹೋಯಿತು. ಲಿವರ್ ದಾನ ಮಾಡಿದ್ದ ಅರ್ಚನಾರ ಒಂದೊಂದೇ ಅಂಗಗಳು ಕೆಲಸ ಮಾಡೋದನ್ನೆ ನಿಲ್ಲಿಸುತ್ತಾ ಬಂದವು.

ಖ್ಯಾತ ವೈದ್ಯರುಗಳು ಅದೆಷ್ಟೇ ಪ್ರಯತ್ನ ಪಟ್ಟರೂ ಅರ್ಚನಾ ಕಾಮತ್‌ರ ಆರೋಗ್ಯದಲ್ಲಿ ಸುಧಾರಣೆ ಕಾಣಲೇ ಇಲ್ಲ. ನಿಧಾನವಾಗಿ ಚಿಕಿತ್ಸೆಗೂ ಸ್ಪಂದಿಸೋದೂ ನಿಂತು ಹೋಯಿತು. ಅಂತಿಮವಾಗಿ ಅರ್ಚನಾ ಕಾಮತ್ ಬಹು ಅಂಗಾಂಗ ವೈಫಲ್ಯದಿಂದ ಅಸುನೀಗಿದ್ದಾರೆ. ಮತ್ತೊಬ್ಬರ ಜೀವ ಉಳಿಸೋಕೆ ಪ್ರಾಣಭಯ ಬಿಟ್ಟು ತನ್ನ ಲಿವರ್ ಅನ್ನೇ ದಾನ ಮಾಡಿದಾಕೆಯನ್ನೇ ಆ ವಿಧಿ ಬಲಿ ಪಡೆದುಕೊಂಡಿದೆ.

ಒಂದು ಜೀವಕ್ಕಲ್ಲ.. ಅನೇಕ ಜೀವಗಳಿಗೆ ಶಕ್ತಿಯಾಗಿ ನಿಂತಿದ್ದಾಕೆ ಇನ್ನಿಲ್ಲ!
ಪರೋಪಕಾರಿ ಅರ್ಚನಾರ ತ್ಯಾಗ ಸ್ಮರಿಸಿ ಭಾವುಕರಾದ ಶಾಸಕ!
ಸಂಬಂಧಿಯೊಬ್ಬರಿಗೆ ಲಿವರ್ ದಾನ ಮಾಡಿ ಜೀವ ಉಳಿಸೋ ಮಹತ್ಕಾರ್ಯಕ್ಕೆ ಮುಂದಾಗಿದ್ದ ಅರ್ಚನಾ ಇನ್ನಿಲ್ಲ ಅನ್ನೋದು ಎಲ್ಲರಿಗೂ ಆಘಾತ ತಂದಿದೆ. ಅದರಲ್ಲೂ, ಅರ್ಚನಾ ಕಾಮತ್‌ರ ನಿಸ್ವಾರ್ಥ, ಸೇವಾ ಮನೋಭಾವ.. ಪರೋಪಕಾರದ ಗುಣವನ್ನು ಹತ್ತಿರದಿಂದ ನೋಡಿರೋರಿಗೆ ಬರಸಿಡಿಲು ಬಡಿದಂತಾಗಿದೆ.

ಇದನ್ನೂ ಓದಿ: ಮೈಸೂರು ಸಿಲ್ಕ್ ಸೀರೆಗೆ ಸಿಕ್ಕಾಪಟ್ಟೆ ಡಿಮ್ಯಾಂಡ್.. ಕ್ಯೂ ನಿಂತರೂ ಸಿಗುತ್ತಿಲ್ಲ ಸ್ಯಾರಿ; ಕಾರಣವೇನು?

ಅರ್ಚನಾ ಕಾಮತ್ ಒಬ್ಬ ಒಳ್ಳೆಯ ಉಪನ್ಯಾಸಕಿಯಾಗಿದ್ರು. ವಿದ್ಯಾರ್ಥಿಗಳ ನೆಚ್ಚಿನ ಉಪನ್ಯಾಸಕಿಯಾಗಿದ್ರು. ಈ ಸಂಸ್ಥೆಯ ಪ್ರತಿಯೊಬ್ಬರಿಗೂ ಆತ್ಮೀಯರಾಗಿದ್ರು. ನಾವೆಲ್ಲಾ ಆಕೆಯನ್ನು ತುಂಬಾ ಮಿಸ್ ಮಾಡಿಕೊಳ್ತೀವಿ. ಇನ್ನುಮಂದೆ ಆಕೆ ನಮ್ಮೊಂದಿಗೆ ಇರೋದಿಲ್ಲ ಅನ್ನೋದನ್ನು ಕಲ್ಪಿಸಿಕೊಳ್ಳೋದಕ್ಕೂ ಸಾಧ್ಯವಾಗ್ತಿಲ್ಲ. ಈ ಸಂಸ್ಥೆಯ ಪ್ರತಿಯೊಬ್ಬರಲ್ಲೂ ಮಂಕು ಕವಿದಂತಾಗಿದೆ. ವಿದ್ಯಾರ್ಥಿಗಳಂತೂ ತುಂಬಾ ನೋವು ಪಡ್ತಿದ್ದಾರೆ.
ದುಡ್ಡು, ಹೆಸರು ಇದೆ ಅಂತಾ ಅಂಹಕಾರದಿಂದ ತಿರುಗದೆ, ಪರರ ಕಷ್ಟಕ್ಕೂ ಮಿಡಿಯುತ್ತಿದ್ದ ಅರ್ಚನಾ ಸಾವಿಗೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಕಂಬನಿ ಮಿಡಿದಿದ್ದಾರೆ. ಅರ್ಚನಾ ಸಮಾಜಮುಖಿ ವ್ಯಕ್ತಿತ್ವ ಹೇಗಿತ್ತು ಅನ್ನೋದಕ್ಕೆ ಈ ಭಾವುಕ ನಮನವೇ ಸಾಕ್ಷಿ.

ಅಪರೂಪದ ಲಿವರ್‌ ದಾನಿ!
ಬಾಳಿಗೊಂದು ಅರ್ಥಪೂರ್ಣವಾದ ನಿಯಮ ಇರಬೇಕು ಎನ್ನುತ್ತಾ ಸದಾ ಎಲ್ಲರಲ್ಲೂ ಪ್ರೇರಣಾಸ್ಫೂರ್ತಿಯಾಗಿದ್ದ ಸೋದರಿ ಶ್ರೀಮತಿ ಅರ್ಚನಾ ಕಾಮತ್ ರವರು ಮತ್ತೊಂದು ಜೀವವೊಂದನ್ನು ಉಳಿಸುವ ಸಂದರ್ಭದಲ್ಲಿ ತನ್ನ ಉಸಿರನ್ನೇ ನಿಲ್ಲಿಸಿರುವುದು ಅತ್ಯಂತ ನೋವಿನ ಸಂಗತಿ. ಅವರ ಆತ್ಮಕ್ಕೆ ಸದ್ಗತಿಯನ್ನು ಕೋರುತ್ತಾ ನನ್ನ ಆತ್ಮೀಯರಾದ ಶ್ರೀ ಸಿ.ಎ ಚೇತನ್ ಕಾಮತ್ ರವರ ಕುಟುಂಬ ವರ್ಗಕ್ಕೆ ಹಾಗೂ ಸೋದರಿ ಸೇವೆ ಸಲ್ಲಿಸುತ್ತಿದ್ದ ಶಿಕ್ಷಣ ಸಂಸ್ಥೆಯ ಎಲ್ಲಾ ವೃಂದಕ್ಕೂ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಭಗವಂತ ಕರುಣಿಸಲೆಂದು ಪ್ರಾರ್ಥಿಸುತ್ತೇನೆ
– ವೇದವ್ಯಾಸ ಕಾಮತ್, ಶಾಸಕರು

ಲಿವರ್ ದಾನಿ ಅರ್ಚನಾ ಕಾಮತ್ ಸಾವು ಸಂಬಂಧಿಕರಿಗೆ, ಸ್ನೇಹಿತರಿಗೆ, ಉಪನ್ಯಾಸಕಿಯಾಗಿದ್ದ ಕಾಲೇಜಿನ ಸಹೋದ್ಯೋಗಿಗಳಿಗೆ ತಂದಿರೋ ನೋವು, ಆಘಾತ ಒಂದುಕಡೆಯಾದ್ರೆ. ಈ ನಾಲ್ಕು ವರ್ಷದ ಪುಟ್ಟ ಮಗನಿಗೆ ಏನಂತಾ ಹೇಳೋದು. ಹುಟ್ಟು, ಸಾವಿನ ಅರಿವೇ ಇಲ್ಲದ ಈ ಮುಗ್ಧ ಜೀವಕ್ಕೆ ಅಮ್ಮ ಪ್ರಾಣಬಿಟ್ರು ಕಂದಾ ಅಂತಾ ಅರ್ಥೈಸೋರು ಯಾರು? ಅಯ್ಯೋ ವಿಧಿಯೇ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಪರೂಪದ ಜೀವದಾನಿ.. ಮಂಗಳೂರು ಉಪನ್ಯಾಸಕಿ ಅರ್ಚನಾ ಕಾಮತ್ ಸಾವು ಹೇಗಾಯ್ತು? ಕಾರಣವೇನು?

https://newsfirstlive.com/wp-content/uploads/2024/09/Archana-Kamath.jpg

Load More