newsfirstkannada.com

×

ನಂಗೂ ಬೇಕು.. ನಂಗೂ ಬೇಕು; ಮೈಸೂರು ಸಿಲ್ಕ್​​ ಸೀರೆಗಳಿಗೆ ಮುಗಿಬಿದ್ದ ನಾರಿಯರು; ಸಿಗ್ತಾ ಇಲ್ಲ ಯಾಕೆ?

Share :

Published September 17, 2024 at 9:12pm

Update September 19, 2024 at 8:28pm

    ಕೇಳ್ರಪ್ಪೋ, ಕೇಳಿ.. ಮೈಸೂರು ಸಿಲ್ಕ್​​ ಸೀರೆಗೆ ಬಂತು ಫುಲ್ ಡಿಮ್ಯಾಂಡ್​!

    ಅಮೇರಿಕ, ಆಸ್ಟ್ರೇಲಿಯಾ ಸೇರಿ ವಿದೇಶಗಳಲ್ಲಿ ಸೀರೆಗೆ ಆನ್​ಲೈನ್​ ಬೇಡಿಕೆ

    ಕೆಎಸ್​ಐಎ ಕೇವಲ ವಾರಕ್ಕೆ 1 ದಿನ ಮಾತ್ರ ಸೇರೆಗಳನ್ನ ಮಾರುತ್ತಿದೆಯಾ?

ಭಾರತೀಯರ ಹೆಣ್ಣುಮಕ್ಕಳಿಗೂ ಸೀರೆಗೂ ಏನೋ ಒಂಥರಾ ಅವಿನಾಭಾವ ಸಂಬಂಧ. ಆದ್ರೆ, ಹಿಂಗೂ ಒಂದು ಕಾಲ ಬರುತ್ತೆ ಅಂತಾ ನಮ್ ರಾಜ್ಯದ ನಾರಿಮಣಿಯರು ಕನಸಲ್ಲೂ ಅಂದ್ಕೊಂಡಿರಲ್ವೇನೋ. ಒಂದ್ ಕಾಲದಲ್ಲಿ ಹೆಂಗಳೆಯರ ಮನಸ್ಸು ಕದಿದ್ದ ಮೈಸೂರು ಸಿಲ್ಕ್​ ಸೀರೆಗೆ ಈಗ ಸಿಕ್ಕಾಪಟ್ಟೆ ಕೊರತೆ ಬಂದಿದೆ. ಆದ್ರೆ, ಅಂಗಡಿ ಮುಂದೆ ಲೇಡಿಸ್​ ಕ್ಯೂ ಮಾತ್ರ ಕಮ್ಮಿ ಆಗಿಲ್ಲ.

ಹೆಣ್ಣಿಗೆ ಸೀರೆ ಯಾಕೆ ಅಂದ.. ಅಂದ ಚಂದ.. ಅವಳ ಅಂದ ಒಳಗೆ ಅಡಗಿರೋದ್ರಿಂದ. ವಾರೇವ್ಹಾ.. ಹೆಣ್ಣು ಮಕ್ಕಳು ಸೀರೆ ಹುಟ್ಕೊಂಡ್ರೇನೆ ಕಳೆ ಅನ್ನೋ ಮಾತು ಕೇಳಿ ಬರ್ತಾನೆ ಇರುತ್ತೆ.. ಇವಾಗ್ಯಾಕೆ ಸೀರೆ ಮ್ಯಾಟ್ರು ಅಂದ್ರಾ?..

ಇದನ್ನೂ ಓದಿ: ಮೈಸೂರು ಸಿಲ್ಕ್ ಸೀರೆಗೆ ಸಿಕ್ಕಾಪಟ್ಟೆ ಡಿಮ್ಯಾಂಡ್.. ಕ್ಯೂ ನಿಂತರೂ ಸಿಗುತ್ತಿಲ್ಲ ಸ್ಯಾರಿ; ಕಾರಣವೇನು?

ದುಡ್ಡು ಕೊಟ್ರೂ ಸಿಗ್ತಾ ಇಲ್ವಂತೆ ‘ಮೈಸೂರು’ ಸಿಲ್ಕ್​ ಸೀರೆಗಳು!

ಅದಕ್ಕೆ ಹೇಳಿದ್ದು ಹಿಂಗೂ ಒಂದು ಕಾಲ ಬರುತ್ತೆ ಅಂತಾ ಹೆಣ್ಣುಮಕ್ಕಳು ಊಹೆ ಮಾಡ್ಕೊಂಡಿರಲಿಲ್ವೇನೋ. ಒಂದು ಕಾಲದಲ್ಲಿ ಸದ್ದು ಮಾಡಿದ್ದ ಸೀರೆ. ಅದ್ರಲ್ಲೂ ಹೆಣ್ಣುಮಕ್ಕಳ ಬಲು ಇಷ್ಟದ ಮೈಸೂರ್​ ಸಿಲ್ಕ್​ ಸೀರೆಗೆ ಕೊರತೆ ಉಂಟಾಗಿದೆ ಅಂದ್ರೆ ವಿಪರ್ಯಾಸವೇ ಅಲ್ವಾ. ಹಣ ಕೊಟ್ರೂ ಪರಂಪರೆಯ ಸೀರೆ ಸಿಗದೇ ಹೆಂಗಳೆಯರು ಅದ್ಯಾಕೋ ಬೇಜಾರಾಗಿ ಬಿಟ್ಟಿದ್ದಾರೆ.

ಅತ್ತ, ಗ್ರಾಹಕರ ಬೇಡಿಕೆ ಈಡೇರಿಸಲು ಕರ್ನಾಟಕ ಸಿಲ್ಕ್​ ಇಂಡಸ್ಟ್ರೀಸ್​ ಹೈರಾಣಾಗಿಬಿಟ್ಟಿದೆ. ಮತ್ತೊಂದ್ಕಡೆ, ನಾ ಮುಂದು ತಾ ಮುಂದು ಅಂತಾ ಮಹಿಳೆಯರು ಖರೀದಿ ಮುಗಿಬೀಳ್ತಿದ್ದಾರೆ.

ಸೀರೆ ಬೇಕು ಸೀರೆ..!

  • ಬೇಡಿಕೆಗೆ ತಕ್ಕಂತೆ ಉತ್ಪಾದನೆ ಆಗದ ಮೈಸೂರು ಸಿಲ್ಕ್ ಸೀರೆ
  • ತಿಂಗಳುಗಟ್ಟಲೆ ಕಾದ್ರೂ ಸಿಗ್ತಿಲ್ಲ ಮಹಿಳೆಯರ ಮೆಚ್ಚಿನ ಸೀರೆ
  • ಹಬ್ಬ, ಮದುವೆ, ಇತರೆ ಕಾರ್ಯಕ್ರಮಗಳಿಗೂ ಸಿಗದ ಸೀರೆ
  • ಬೆಂಗಳೂರು ಸೇರಿ ರಾಜ್ಯಾದ್ಯಂತ 17 ಮಾರಾಟ ಮಳಿಗೆಗಳು
  • ಅಮೇರಿಕ, ಆಸ್ಟ್ರೇಲಿಯದಲ್ಲೂ ಸೀರೆಗಳಿಗೆ ಆನ್​ಲೈನ್​ ಬೇಡಿಕೆ
  • ಇದೀಗ ಹೆಚ್ಚಿನ ಪಾಳಿಯಲ್ಲಿ ಕೆಲಸ ಮಾಡಲು KSIC ಪ್ಲಾನ್

ಇದನ್ನೂ ಓದಿ: ಕೊಹ್ಲಿ ಸೀಕ್ರೆಟ್​ ರಿವೀಲ್ ಮಾಡಿದ ಮಾಜಿ ಕ್ರಿಕೆಟರ್.. ವಿರಾಟ್ ಫ್ಲೈಟ್​​ನಲ್ಲಿ ಏನ್ ಮಾಡ್ತಿದ್ರು?

ಅಂಗಡಿ ತೆಗೆದು ಎರಡು ಗಂಟೆಯಲ್ಲೇ ಎಲ್ಲ ಸೀರೆಗಳು ಸೇಲ್

ಇನ್ನು, ಕೆಎಸ್​ಐಎ ಕೇವಲ ವಾರಕ್ಕೆ ಒಂದು ದಿನ ಅಂದ್ರೆ ಶನಿವಾರ ಮಾತ್ರ ಸೀರೆ ಮಳಿಗೆಗಳನ್ನ ಓಪನ್ ಮಾಡ್ತಿದೆ. ಆದ್ರೆ, ಅಂಗಡಿ ಓಪನ್ ಮಾಡಿದ​ ಎರಡೇ ಗಂಟೆಗಳಲ್ಲಿ ಸ್ಟಾಕ್​ ಇರೋ ಎಲ್ಲಾ ಸೀರೆಗಳು ಸೇಲ್ ಆಗ್ತಿವೆಯಂತೆ. ಗಂಟೆ ಗಟ್ಟಲೇ ಕ್ಯೂ ನಿಂತು ಲೇಡಿಸ್ ನಾ ಮುಂದು ತಾ ಮುಂದು ಅಂತಾ ಖರೀದಿ ಮಾಡ್ತಿದ್ದಾರಂತೆ.

ಶನಿವಾರ ಬಿಟ್ಟು ಬೇರೆ ದಿನ ಮಳಿಗೆಗೆ ಬರುವವರು ಬೇಸರದಲ್ಲೇ ಬರಿಗೈನಲ್ಲಿ ವಾಪಾಸ್ ಆಗ್ತಿದ್ದಾರಂತೆ. ಅದೇನೆ ಹೇಳಿ, ಸೀರೆಗೆ ಕೊರತೆ ಉಂಟಾದ್ರೆ, ನಮ್ ಹೆಣ್ಣುಮಕ್ಕಳ ಕಥೆ ಹೆಂಗೆ ಅನ್ನೋದೇ ಚಿಂತೆ ಆಗ್ಬಿಟ್ಟಿದೆ. ಆದಷ್ಟು ಬೇಗ ಕೆಎಸ್​ಐಸಿ ಇದಕ್ಕೆ ಏನಾದ್ರು ಒಂದು ಪರಿಹಾರ ಹುಡುಕಿದ್ರೆ, ಹೆಣ್ಣು ಮಕ್ಕಳು ಖುಷಿಯಾಗೋದು ಗ್ಯಾರಂಟಿ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಂಗೂ ಬೇಕು.. ನಂಗೂ ಬೇಕು; ಮೈಸೂರು ಸಿಲ್ಕ್​​ ಸೀರೆಗಳಿಗೆ ಮುಗಿಬಿದ್ದ ನಾರಿಯರು; ಸಿಗ್ತಾ ಇಲ್ಲ ಯಾಕೆ?

https://newsfirstlive.com/wp-content/uploads/2024/09/MYS_SAREES.jpg

Load More