Advertisment

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಬಿಗ್​ ಅಪ್​ಡೇಟ್​.. ಶಾರೀಕ್​ಗಿದೆ ಶತ್ರು ದೇಶದ ಜೊತೆ ಸಂಬಂಧ

author-image
Bheemappa
Updated On
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಬಿಗ್​ ಅಪ್​ಡೇಟ್​.. ಶಾರೀಕ್​ಗಿದೆ ಶತ್ರು ದೇಶದ ಜೊತೆ ಸಂಬಂಧ
Advertisment
  • ಶಾರೀಕ್​ಗೆ ಸಿಮ್​, ಡೆಬಿಟ್ ಕಾರ್ಡ್​ ನೀಡಿದ್ದ ಒಡಿಶಾದ ವ್ಯಕ್ತಿ
  • ರಾಂಚಿಯಲ್ಲಿ ISI ಏಜೆಂಟ್​ಗಳನ್ನ ಭೇಟಿಯಾಗಿದ್ದ ಆರೋಪಿ
  • ಸಿಮ್​ ಕಾರ್ಡ್​ ನೀಡಿದ್ದ ಒಡಿಶಾದ ವ್ಯಕ್ತಿ ಬಂಧಿಸುವಲ್ಲಿ ಯಶಸ್ವಿ​

ಮೈಸೂರು: ಮಂಗಳೂರಿನ ನಾಗುರಿನಲ್ಲಿ ನಡೆದಿದ್ದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಬಿಗ್​ ಅಪ್​ಡೇಟ್​ ಸಿಕ್ಕಿದೆ. ಎನ್​ಐಎ ಅಧಿಕಾರಿಗಳ ತನಿಖೆಯಲ್ಲಿ ಆತಂಕಕಾರಿ ವಿಷಯ ಬೆಳಕಿಗೆ ಬಂದಿದ್ದು ಈ ಪ್ರಕರಣದ ಹಿಂದೆ ಪಾಕಿಸ್ತಾನದ ನಂಟು ಇರುವುದು ಗೊತ್ತಾಗಿದೆ.

Advertisment

ಆಟೋದಲ್ಲಿ ಕುಕ್ಕರ್​ ಬಾಂಬ್​ ತೆಗೆದುಕೊಂಡು ಹೋಗುತ್ತಿದ್ದ ಆರೋಪಿ ಶಾರೀಕ್​ಗೆ ಪಾಕಿಸ್ತಾನದ ಗುಪ್ತಚರ ಇಲಾಖೆಯೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದನು. ಒಡಿಸ್ಸಾ ಮೂಲದ ವ್ಯಕ್ತಿಯೊಬ್ಬರು ಆರೋಪಿಗೆ ಸಿಮ್ ಕಾರ್ಡ್​ ನೀಡಿದ್ದಾರೆ ಎನ್ನುವ ಮಹತ್ವದ ಮಾಹಿತಿ ಎನ್ಐಎ ಅಧಿಕಾರಿಗಳಿಗೆ ಸಿಕ್ಕಿದೆ.

ಹೀಗಾಗಿಯೇ ಸಿಮ್​ ಕಾರ್ಡ್​ ನೀಡಿದ ವ್ಯಕ್ತಿಯ ಜಾಡು ಹಿಡಿದು ಹೋಗಿದ್ದ ಒಡಿಶಾ ಸ್ಪೆಷಲ್ ಟಾಸ್ಕ್ ಪೋರ್ಸ್ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಡಿಶಾದ ಬಬ್ಜುರ ಜಿಲ್ಲೆಯ ಬುರುಂಗಾ ಗ್ರಾಮದ ನಿವಾಸಿಯಾದ ಆರೋಪಿ ಪ್ರೀತಂಕಾರ್​ನನ್ನು ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಸಿಮ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್ ನೀಡಿದ್ದಾನೆ. ಅಲ್ಲದೇ ಪಾಟ್ನಾ ಹಾಗು ರಾಂಚಿಯಲ್ಲಿ ಕೂಡ ಐಎಸ್ಐ ಏಜೆಂಟ್​ಗಳನ್ನ ಭೇಟಿ ಆಗಿರುವುದಾಗಿ ಆರೋಪಿ ಬಾಯಿ ಬಿಟ್ಟಿದ್ದಾನೆ ಎನ್ನಲಾಗಿದೆ.

ಮಂಗಳೂರಿನ ನಾಗುರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟವು 2022 ನವೆಂಬರ್ 11 ರಂದು ನಡೆದಿತ್ತು. ಇದು ಸ್ಥಳೀಯ ಜನರು ಸೇರಿದಂತೆ ಇಡೀ ರಾಜ್ಯದಲ್ಲಿ ಭಾರೀ ಆತಂಕವನ್ನು ಉಂಟು ಮಾಡಿತ್ತು. ಆಗಿನ ಸರ್ಕಾರ ತನಿಖೆ ಕೂಡ ಕೈಗೊಂಡಿತ್ತು. ಆರೋಪಿ ಶಾರೀಕ್​ ಮೂಲತಃ ಶಿವಮೊಗ್ಗದವನಾದ್ರೂ ಮೈಸೂರಿನ ಮೇಟಗಳ್ಳಿಯ ಲೋಕನಾಯಕ ನಗರದಲ್ಲಿ ವಾಸವಾಗಿದ್ದನು. ಈ ಎಲ್ಲ ಮಾಹಿತಿ ಮೈಸೂರು ಹಾಗು ಎನ್​ಐಎ ಪೊಲೀಸರ ಜಂಟಿ‌ ಕಾರ್ಯಾಚರಣೆ ವೇಳೆ ಬೆಳಕಿಗೆ ಬಂದಿದ್ದವು.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment