ಮಾವಿನ ಕಾಯಿ, ಮಾವಿನ ಹಣ್ಣು ಈ ಎರಡರಲ್ಲಿ ಆರೋಗ್ಯಕ್ಕೆ ಯಾವುದು ಬೆಸ್ಟ್?

author-image
Bheemappa
Updated On
ಮಾವಿನ ಕಾಯಿ, ಮಾವಿನ ಹಣ್ಣು ಈ ಎರಡರಲ್ಲಿ ಆರೋಗ್ಯಕ್ಕೆ ಯಾವುದು ಬೆಸ್ಟ್?
Advertisment
  • ಮಾವುಗೆ ಈ ಮೊದಲು ಯಾವ ಹೆಸರಿನಿಂದ ಕರೆಯುತ್ತಿದ್ರು ಗೊತ್ತಾ?
  • 4,000 ವರ್ಷದ ಹಿಂದೆ ಭಾರತ ಸೇರಿ ಇತರೆಡೆಗೆ ಮಾವು ಗೊತ್ತಾಯಿತು
  • ಮಾವಿನ ಕಾಯಿ, ಮಾವಿನ ಹಣ್ಣು ಈ ಎರಡರಲ್ಲಿ ಯಾವುದು ಬೆಸ್ಟ್.?

ಈಗ ಬೇಸಿಗೆ ಅಲ್ವಾ.. ಮಾವಿನ ಹಣ್ಣಿನ ಸೀಸನ್. ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ಮಾವಿನ ಕಾಯಿ ಜೊತೆಗೆ ಹಣ್ಣಾಗಿರುವ ಮಾವಿನ ಹಣ್ಣುಗಳನ್ನು ನೋಡದರೆ ಬಾಯಲ್ಲಿ ನೀರೂರುತ್ತೆ. ವರ್ಷಕ್ಕೊಮ್ಮೆ ಬರುವ ಮಾವಿನ ಸೀಸನ್​ನಲ್ಲಿ ಜನರು ಹಣ್ಣುಗಳನ್ನು ತಿಂದು ಅಬ್ಬಬ್ಬಾ.. ಎಷ್ಟು ರುಚಿ ಎನ್ನುತ್ತಾರೆ. ವರ್ಷಕ್ಕೊಮ್ಮೆ ಬರುವ ಈ ಮಾವಿನ ಹಣ್ಣುಗಳು ನಮ್ಮ ಆರೋಗ್ಯಕ್ಕೂ ಸಹಕಾರಿಯಾಗಿವೆ. ಮಾವಿನ ಕಾಯಿ ಹಾಗೂ ಮಾವಿನ ಹಣ್ಣು ಈ ಎರಡನ್ನು ತಿನ್ನುವುದರಿಂದಲೂ ನಮಗೆ ತುಂಬಾ ಪ್ರಯೋಜನೆಗಳಿವೆ. ಅವುಗಳ ಬಗ್ಗೆ ಇಂದಿನ ಈ ಆರ್ಟಿಕಲ್​ನಲ್ಲಿ ತಿಳಿದುಕೊಳ್ಳೋಣ.

publive-image

ಇದನ್ನೂ ಓದಿ: ಅತಿಯಾದ್ರೆ ಅಮೃತವೂ ವಿಷ, ಧೋನಿ ಅಭಿಮಾನಿ ಮಾಡಿದ್ದು ಸರಿನಾ.. ಸೋಶಿಯಲ್ ಮೀಡಿಯಾದಲ್ಲಿ ಪರ- ವಿರೋಧ ಚರ್ಚೆ 

ವಿಟಮಿನ್‌-C, ನಾರಿನಾಂಶ ಹಾಗೂ ಪೆಕ್ವಿನ್‌ ಅಂಶವನ್ನು ಮಾವಿನಹಣ್ಣಿನಲ್ಲಿ ಹೆಚ್ಚಾಗಿ ಇದೆ. ಇದು ದೇಹದಲ್ಲಿ ಕೊಲೆಸ್ಟ್ರಾಲ್‌ ಮಟ್ಟ ನಿಯಂತ್ರಿಸಲು ಸಹಕರಿಸುತ್ತದೆ. ಇದರ ಅತ್ಯದ್ಭುತ ಗುಣ ಎಂದ್ರೆ ನಮ್ಮ ದೇಹದ ಚರ್ಮವನ್ನು ಒಳಗಿನಿಂದ ಶುದ್ಧೀಕರಿಸುತ್ತದೆ. ಚರ್ಮದಲ್ಲಿನ ರಂಧ್ರಗಳ ಆರೋಗ್ಯಕ್ಕೆ ನೆರವಾಗುವ ಜೊತೆಗೆ ಹೊಳಪನ್ನು ಇವು ಹೆಚ್ಚಿಸುತ್ತವೆ. ಹಾಗೇ ಮಾವಿನ ಕಾಯಿಗಳಲ್ಲಿ ಆಹಾರದ ಫೈಬರ್, ಕ್ಯಾರೊಟಿನಾಯ್ಡ್‌, ಜೀವಸತ್ವಗಳು ಮತ್ತು ಖನಿಜಗಳು ಕಂಡುಬರುತ್ತವೆ.

ಮೊದ ಮೊದಲು ಅಮರ್ ಫಾಲ್ ಎಂದು ಕರೆಯುತ್ತಿದ್ದರು

ಸುಮಾರು 4000 ವರ್ಷಗಳ ಹಿಂದೆ ಸಾಂಸ್ಕೃತಿಕ ವೈವಿಧ್ಯತೆಯ ಭೂಮಿಯಾದ ಭಾರತದಲ್ಲಿ ಮಾವು ಹುಟ್ಟಿಕೊಂಡಿದೆ ಎಂದು ಹೇಳಲಾಗುತ್ತದೆ. ನಂತರವೇ ಏಷ್ಯಾ ಹಾಗೂ ಪ್ರಪಂಚದ ಇತರೆ ಭಾಗಗಳಿಗೆ ಮಾವಿನ ಹಣ್ಣಿನ ಬಗ್ಗೆ ಗೊತ್ತಾಯಿತು. ಇದಕ್ಕೆ ಮೊದ ಮೊದಲು ಅಮರ್ ಫಾಲ್ ಎಂದು ಕರೆಯುತ್ತಿದ್ದರು ಎನ್ನಲಾಗಿದೆ. ಆದರೆ ಮಾವು ಅಂತಲೇ ಈಗಲೂ ಸಖತ್ ಫೇಮಸ್.

ಒಂದು ಮಾವಿನ ಹಣ್ಣು ತಿನ್ನುವುದರಿಂದ ಏನೇಲ್ಲ ಉಪಯೋಗ

ಮಾವಿನ ಕಾಯಿಗಳು ಅಸಿಡಿಟಿ, ಅಜೀರ್ಣ, ಮಲಬದ್ಧತೆ ಸೇರಿದಂತೆ ಜೀರ್ಣಕ್ರಿಯೆ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ. ನಿರ್ಜಲೀಕರಣದ ಲಕ್ಷಣಗಳನ್ನು ಸುಧಾರಿಸಿ, ಜೀರ್ಣ ಮಾಡಲು ಸಹಕರಿಸುವ ವಿವಿಧ ಜೀರ್ಣಕಾರಿ ಕಿಣ್ವಗಳನ್ನು ಸ್ರವಿಸಲು ಜಠರ ಕರುಳನ್ನು ಮಾವಿನ ಕಾಯಿ ಉತ್ತೇಜಿಸುತ್ತದೆ.

ಜಸ್ಟ್​ ಒಂದು ಮಾವಿನ ಹಣ್ಣು ತಿನ್ನುವುದರಿಂದ 1 ಗ್ರಾಂ ಪ್ರೋಟೀನ್, 20+ ಗ್ರಾಂ ಕಾರ್ಬೋಹೈಡ್ರೇಟ್ಸ್​, 2.5 ಗ್ರಾಂ ಫೈಬರ್, 20 ಗ್ರಾಂ ಸಕ್ಕರೆ, ವಿಟಮಿನ್ Cಯ ಶೇ.65 ರಷ್ಟು, ಶೇ.15 ರಷ್ಟು ಫೋಲೇಟ್ ನಮ್ಮ ದೇಹಕ್ಕೆ ದೊರೆಯುತ್ತದೆ. ಈ ಹಣ್ಣು ಕೇವಲ ನಾಲಿಗೆ ರುಚಿಮಾತ್ರವಲ್ಲ ದೇಹಕ್ಕೆ ಖನಿಜಗಳ ಗಣಿ ಆಗಿದೆ ಎಂದು ಹೇಳಬಹುದು.

ಮಾವು ಜೀರ್ಣಕಾರಿ ಕಿಣ್ವ ಅಮೈಲೇಸ್ ಹೊಂದಿದೆ

ಮಾವಿನ ಹಣ್ಣುಗಳು ಹಲವಾರು ಗುಣಗಳನ್ನು ಹೊಂದಿದ್ದು ಹಾಗೇ ಜೀರ್ಣಕಾರಿ ಕಿಣ್ವ ಅಮೈಲೇಸ್ ಅನ್ನು ಕೂಡ ಹೊಂದಿದೆ. ಜೀರ್ಣಕಾರಿ ಕಿಣ್ವಗಳು ದೇಹವನ್ನು ಪ್ರವೇಶಿಸುವ ಆಹಾರವನ್ನು ಸಣ್ಣ ಅಣುಗಳಾಗಿ ವಿಭಜಿಸಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ: ಜಸ್ಟ್​ ಕಾರಿಗೆ ಬೈಕ್​ ಡಿಕ್ಕಿ, ವ್ಯಕ್ತಿಯ ಎದೆ ಮೇಲಿನ ಶರ್ಟ್​ ಹಿಡಿದ ಯುವತಿ.. ಮುಂದೇನಾಯ್ತು?

publive-image

ಇದನ್ನೂ ಓದಿ: 5 ಗ್ಯಾರಂಟಿಯಿಂದಾಗಿ ಹಳ್ಳಿಯ ತಾಯಂದಿರು ದಾರಿ ತಪ್ಪಿದ್ದಾರೆ ಎಂದ ಕುಮಾರಸ್ವಾಮಿ; ಮಹಿಳಾ ಆಯೋಗ ಸಿಡಿಮಿಡಿ

ಮಾವಿನ ಹಣ್ಣಿನಲ್ಲಿನ ಪಾಲಿಫಿನಾಲ್ಸ್​ ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿವೆ. ಹೀಗಾಗಿಯೇ ಆಕ್ಸಿಡೇಟಿವ್ ಸ್ಟ್ರೆಸ್ ಎಂಬ ಹಾನಿಕಾರಕ ಪ್ರಕ್ರಿಯೆಯಿಂದ ದೇಹವನ್ನು ರಕ್ಷಿಸುತ್ತವೆ. ಆಕ್ಸಿಡೇಟಿವ್ ಸ್ಟ್ರೆಸ್ ವಿವಿಧ ರೀತಿಯ ಕ್ಯಾನ್ಸರ್ ಹೆಚ್ಚಿಸುತ್ತದೆ. ಇದನ್ನು ಪಾಲಿಫಿನಾಲ್‌ಗಳು ರಕ್ಷಣೆ ಮಾಡುತ್ತಾವೆ.

ಮಾವಿನಕಾಯಿಯಲ್ಲಿ ಮೆಗ್ನೀಷಿಯಂ, ಪೊಟ್ಯಾಸಿಯಮ್ ಇದ್ದು ಹೃದಯದ ಆರೋಗ್ಯಕರ ಕಾರ್ಯನಿರ್ವಹಣೆ ಹೆಚ್ಚಿಸುತ್ತದೆ. ಹಸಿರು ಮಾವಿನ ಹಣ್ಣುಗಳು ಕಾಲಜನ್ ಸಂಶ್ಲೇಷಣೆ ಉತ್ತೇಜಿಸುವ ಮತ್ತು ಚರ್ಮದ ಆರೋಗ್ಯ ಸುಧಾರಿಸಿಸುವ ಪೋಷಕಾಂಶ ಹೆಚ್ಚಾಗಿ ಇವೆ. ಇದು ಕೂದಲಿನ ಬೆಳವಣಿಗೆ ಸಹಕಾರಿ ಆಗಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment