Monsoon rain: ಕರ್ನಾಟಕಕ್ಕೆ ಮುಂಗಾರು ಮಳೆ ಯಾವಾಗ ಎಂಟ್ರಿ ಆಗುತ್ತೆ..?

author-image
Ganesh
Updated On
Rain Alert: ಇಂದು ಈ ಭಾಗಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ.. ಯೆಲ್ಲೋ ಅಲರ್ಟ್ ಘೋಷಣೆ
Advertisment
  • ಕೇರಳಕ್ಕೆ ಎಂಟ್ರಿ ನೀಡಲು ಮುಂಗಾರು ಮಳೆ ಸಿದ್ಧತೆ
  • ಬೆಂಗಳೂರಲ್ಲಿ ಯಾವಾಗ ಮಳೆ ಬರುತ್ತಂತೆ ಗೊತ್ತಾ?
  • ವಾಡಿಕೆಗಿಂತ ಹೆಚ್ಚಾಗಿ ಮುಂಗಾರು ಅಬ್ಬರಿಸೋ ಸಾಧ್ಯತೆ

ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ರೀಮಲ್ ಚಂಡಮಾರುತ ಭಾರಿ ಅವಾಂತರಗಳನ್ನು ಸೃಷ್ಟಿಸಿದೆ. ಬಾಂಗ್ಲಾ ಕರಾವಳಿಗೆ ಅಪ್ಪಳಿಸಿರುವ ರಣಚಂಡಿ ಮಾರುತ 7 ಜನರನ್ನು ಬಲಿ ಪಡೆದಿದೆ. ಬಾಂಗ್ಲಾದೇಶ, ಪಶ್ಚಿಮ ಬಂಗಾಳ ಸೇರಿ ಈಶಾನ್ಯ ರಾಜ್ಯಗಳಲ್ಲಿ ಭಾರಿ ಮಳೆಯಾಗ್ತಿದೆ. ನದಿಗಳು ಉಕ್ಕಿ ಹರಿದ ಪರಿಣಾಮ ಅಲ್ಲೋಲಕಲ್ಲೋಲ ಸೃಷ್ಟಿಸಿದೆ.

ಇದನ್ನೂ ಓದಿ:ಡಿವೋರ್ಸ್ ವದಂತಿ ಬೆನ್ನಲ್ಲೇ.. ವಿಶ್ವಕಪ್​​ಗೆ ವಿಮಾನ ಹತ್ತದ ಹಾರ್ದಿಕ್ ಪಾಂಡ್ಯ.. ಕೈಕೊಟ್ರಾ..?

publive-image

ಆದರೆ ಬೆಂಗಳೂರಲ್ಲಿ ಇನ್ನೂ ಮೂರು ದಿನಗಳ ಕಾಲ ಮಳೆ ಬೀಳಲ್ಲ ಎಂದು ತಿಳಿಸಿದೆ. ಪೂರ್ವ ಮುಂಗಾರು ಮಳೆಯ ಆರ್ಭಟಕ ಕುಗ್ಗಿದೆ. ಮೇ 30ರವರೆಗೆ ಬೆಂಗಳೂರಲ್ಲಿ ಮಳೆ ಬರಲ್ಲ. ಮೇ 31, ಜೂನ್ 1ರ ಅವಧಿಯಲ್ಲಿ ಕೇರಳಕ್ಕೆ ಮುಂಗಾರು ಎಂಟ್ರಿ ನೀಡಲಿದೆ. ಹೀಗಾಗಿ ಜೂ‌ನ್ 1ರ ಬಳಿಕ ಕರಾವಳಿ ಮತ್ತು ದಕ್ಷಿಣ ಒಳನಾಡು ಪ್ರದೇಶಗಳಿಗೆ ಭಾರೀ ಮಳೆ ಮುನ್ಸೂಚನೆ ಸಿಕ್ಕಿದೆ. ವಾಡಿಕೆಗಿಂತ ಹೆಚ್ಚಾಗಿ ಮುಂಗಾರು ಅಬ್ಬರಿಸೋ ಸಾಧ್ಯತೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ:ಸಮಸ್ಯೆ ಇದ್ದಾಗ ಮಾತ್ರ KL ರಾಹುಲ್ ನೆನಪಾಗ್ತಾರೆ.. ಈ ವಿಚಾರದಲ್ಲಿ ತಪ್ಪು ಮಾಡಿಬಿಡ್ತಾ ಬಿಸಿಸಿಐ..?

publive-image

ಹವಾಮಾನ ಇಲಾಖೆ ನೀಡಿರುವ ಮಾಹಿತಿಯಂತೆ ಜೂನ್ 5 ರಂದು ಕರ್ನಾಟಕಕ್ಕೆ ಮುಂಗಾರು ಪ್ರವೇಶ ಆಗಲಿದೆ. ಜೂನ್ 5 ರಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಮಳೆ ಬೀಳಿದೆ. ಅದರಲ್ಲೂ ಹೆಚ್ಚಾಗಿ ಕರಾವಳಿ ಭಾಗ, ದಕ್ಷಿಣ ಒಳನಾಡುಗಳಲ್ಲಿ ಮಳೆ ಆಗಲಿದೆ ಎಂದು ತಿಳಿಸಿದೆ.
ಇದನ್ನೂ ಓದಿ:ಮಹಿಳೆಯನ್ನು ನೀಲಗಿರಿ ತೋಪಿಗೆ ಎತ್ಕೊಂಡು ಹೋಗಿ ಅತ್ಯಾಚಾರ, ಕೊಲೆ.. 11 ವರ್ಷಗಳ ಕೇಸ್​ಗೆ ಬಿಗ್ ಟ್ವಿಸ್ಟ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment