Advertisment

ಯಶಸ್ಸು, ಕೆಟ್ಟ ಸಂಗಡಿಗರ ಸಹವಾಸದಿಂದ ದರ್ಶನ್ ಹಾಳಾದ! ಅಂದು ಸಿನಿಮಾದ ರೀಲ್ ಸುಟ್ಟಾಕ್ತೀನಿ ಎಂದಿದ್ದ!

author-image
AS Harshith
Updated On
ಯಶಸ್ಸು, ಕೆಟ್ಟ ಸಂಗಡಿಗರ ಸಹವಾಸದಿಂದ ದರ್ಶನ್ ಹಾಳಾದ! ಅಂದು ಸಿನಿಮಾದ ರೀಲ್ ಸುಟ್ಟಾಕ್ತೀನಿ ಎಂದಿದ್ದ!  
Advertisment
  • ನಟ ದರ್ಶನ್​​ ಬಗ್ಗೆ ಮಾತನಾಡಿದ ‘ಮೆಜೆಸ್ಟಿಕ್’​ ನಿರ್ಮಾಪಕ
  • ಕರಿಯ ಸಿನಿಮಾ ಟೈಮಲ್ಲೂ ಪ್ರೇಮ್ ಜೊತೆ ಜಗಳ ಆಡಿದ್ದ
  • ತೂಗುದೀಪ ಶ್ರೀನಿವಾಸ್, ಮೀನಮ್ಮ ತುಂಬಾ ಒಳ್ಳೆಯವ್ರು

ಮೆಜೆಸ್ಟಿಕ್ ಸಿನಿಮಾದಲ್ಲಿ ದರ್ಶನ್ ತುಂಬಾ ವಿನಯ, ವಿಧೇಯತೆಯಿ‌ದ ಇದ್ದ. ಅನಂತರದಲ್ಲಿ ಯಶಸ್ಸು, ಕೆಟ್ಟ ಸಂಗಡಿಗರ ಸಹವಾಸದಿಂದ ದರ್ಶನ್ ಹಾಳಾದ ಎಂದು ಮೆಜೆಸ್ಟಿಕ್ ಸಿನಿಮಾದ ನಿರ್ಮಾಪಕ ಭಾ.ಮಾ.ಹರೀಶ್ ಹೇಳಿದ್ದಾರೆ.

Advertisment

ರೇಣುಕಾಸ್ವಾಮಿ ಕೊಲೆ ಕೇಸ್​ಗೆ ಸಂಬಂಧಿಸಿ ಮಾತನಾಡಿದ ಭಾ.ಮಾ.ಹರೀಶ್​ರವರು, ದರ್ಶನ್ ನಮ್ಮ ಮನೆಯ ಹುಡುಗರ ಥರಾ. ಈ ಥರಾ ಆರೋಪದಿಂದ ಅವ್ರ ಅಮ್ಮನಿಗೆ ತುಂಬಾ ಬೇಸರ ಆಗಿರುತ್ತೆ. ತೂಗುದೀಪ ಶ್ರೀನಿವಾಸ್, ಮೀನಮ್ಮ ತುಂಬಾ ಒಳ್ಳೆಯವ್ರು. ದರ್ಶನ್ ಬಂಧನ ಆಗಿರೋದು ಅವರ ಮನಸ್ಸಿಗೆ ಘಾಸಿಯಾಗಿರುತ್ತೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ದರ್ಶನ್​ ಪ್ರಕರಣದಲ್ಲಿ ಹ್ಯಾಸ ನಟನಿಗೂ ಢವ ಢವ.. ಅರೆಸ್ಟ್​ ಆಗೋ ಭಯದಲ್ಲಿದ್ದಾರಂತೆ ಈ ತಾರೆ!

ಕರಿಯ ಸಿನಿಮಾ ಟೈಮಲ್ಲೂ ಪ್ರೇಮ್ ಜೊತೆ ಜಗಳ ಆಡಿದ್ದ. ಸಿನಿಮಾದ ರೀಲ್ ಸುಟ್ಟಾಕ್ತೀನಿ ಅಂತಾ ಹೆದರಿಸಿದ್ದ. ಆನಂತರದಲ್ಲಿ ನಮ್ ಮನೆಗೆ ಕರೆಸಿ ಬುದ್ಧಿ ಹೇಳಿದ್ದೆ. ಆಮೇಲೆ ಒಕ್ಕಲಿಗರ ಸಮಾವೇಶದಲ್ಲಿ ಎಲ್ಲರೂ ದರ್ಶನ್ ಗೌಡ ಅಂತಾ ಕೂಗುತ್ತಿದ್ರು. ಆಗ ನಾನು ದರ್ಶನ್ ಒಕ್ಕಲಿಗ ಅಂತಾ ನೇರವಾಗಿ ಹೇಳಿದ್ದೆ.‌ ಈ ಘಟನೆಯ ನಂತರ ದರ್ಶನ್ ನಮ್ಮ ಮಧ್ಯೆ ಮನಸ್ತಾಪ ಉಂಟಾಯ್ತು. ಅಲ್ಲಿಂದ ಅಷ್ಟಾಗಿ ದರ್ಶನ್ ಜೊತೆ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

Advertisment

ಇದನ್ನೂ ಓದಿ: ರೇಣುಕಾಸ್ವಾಮಿ ಮೈಮೇಲಿದ್ದ ಚಿನ್ನವನ್ನು ಕದ್ದಿರೋದು ಈತ! ವಿಚಾರಣೆ ವೇಳೆ ಕೊನೆಗೂ ಸಿಕ್ಕಿಬಿದ್ದ ನೋಡಿ

ದರ್ಶನ್ ಹಾಳಾಗೋಕೆ ಅವರ ಸಂಗಡಿಗರು ಕಾರಣ. ಆತನ ಹಿಂದಿರೋ ಕೆಲವು ಜಿಂಕ್ ಚಾಕ್​ಗಳು ಅವನನ್ನು ಬಳಸಿಕೊಳ್ತಿದ್ದಾರೆ ಎಂದು ಮೆಜೆಸ್ಟಿಕ್ ಸಿನಿಮಾದ ನಿರ್ಮಾಪಕ ಭಾ.ಮಾ.ಹರೀಶ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment