newsfirstkannada.com

ಕೊಹ್ಲಿ v/s​​​ ಮುಂಬೈ ಇಂಡಿಯನ್ಸ್​.. ಮೊತ್ತೊಂದು ಟೆರರ್​ ಇನ್ನಿಂಗ್ಸ್ ಕಟ್ಟುವ ಹಿಂಟ್ ಕೊಟ್ಟ ವಿರಾಟ್​

Share :

Published April 11, 2024 at 12:59pm

Update April 11, 2024 at 1:02pm

  ಕಿಂಗ್ ಕೊಹ್ಲಿಯ ಮತ್ತೊಂದು ಬ್ಲಾಕ್​ಬಸ್ಟರ್​ ಇನ್ನಿಂಗ್ಸ್​ಗೆ ಕೌಂಟ್​ಡೌನ್​​​​

  ಒಂಟಿಸಲಗದ ವಿರಾಟರೂಪ ಕಣ್ತುಂಬಿಕೊಳ್ಳಲು ವಿಶ್ವ ಕ್ರಿಕೆಟ್​ ಹವಣಿಸ್ತಿದೆ

  ಸಾಲಿಡ್​​ ಟಚ್​​ನಲ್ಲಿರುವ ಕೊಹ್ಲಿಯಿಂದ ಬ್ಲಾಕ್​​ಬಸ್ಟರ್ ಇನ್ನಿಂಗ್ಸ್ ಗ್ಯಾರಂಟಿ

17ನೇ ಐಪಿಎಲ್​​ನ ಮೆಗಾ ಬ್ಯಾಟಲ್​​​​ ಬಂದೇ ಬಿಡ್ತು. ಅದುವೇ ಮುಂಬೈ ಇಂಡಿಯನ್ಸ್ ವರ್ಸಸ್​​​ ಆರ್​ಸಿಬಿ. ಇದನ್ನ ಕೊಹ್ಲಿ ವರ್ಸಸ್​​​ ಮುಂಬೈ ಇಂಡಿಯನ್ಸ್​ ಬ್ಯಾಟಲ್ ಅಂತ ಕರೆಯೋದೆ ಉತ್ತಮ. ಯಾಕಂದ್ರೆ ಪ್ರತಿ ಬಾರಿ ಮುಂಬೈಗೆ ವಿರಾಟ್​ ನರಕ ತೋರಿಸಿದ್ದಾರೆ. ಇಂದು ಕೂಡ ವಾಂಖೆಡೆಯಲ್ಲಿ ಅಂತಹದೇ ಟೆರರ್​ ಇನ್ನಿಂಗ್ಸ್ ಕಟ್ಟುವ ಹಿಂಟ್ ನೀಡಿದ್ದಾರೆ.

ಸೋಲಿನೊಂದಿಗೆ ಶುಭಾರಂಭ, ನಂತರ ಗೆಲುವು. ಅದಾದ ಬಳಿಕ ಹ್ಯಾಟ್ರಿಕ್ ಸೋಲು. ಇದು ಪ್ರಸಕ್ತ ಐಪಿಎಲ್​ನ ಆರ್​ಸಿಬಿಯ ಪರ್ಫಾಮೆನ್ಸ್​ ಕಾರ್ಡ್​. ಫಾಫ್​ ಡುಪ್ಲೆಸಿ​​​ ಪಡೆ ಸತತ ಸೋಲಿನ ಸುಳಿಗೆ ಸಿಲುಕಿ ವಿಲವಿಲ ಒದ್ದಾಡ್ತಿದೆ. ಆದ್ರೆ ಟೀಮ್ ಮೇಲಿಂದ ಮೇಲೆ ಸೋಲ್ತಿದ್ರೂ ಕಿಂಗ್ ಕೊಹ್ಲಿ ದಮ್ದಾರ್​​​​ ಪ್ರದರ್ಶನ ನೀಡಿ ಫ್ಯಾನ್ಸ್​ ದಿಲ್​ ಗೆಲ್ತಿದ್ದಾರೆ. ಅವರೊಳಗಿನ ಹೋರಾಟದ ಕಿಚ್ಚು ಮಾತ್ರ ಕಮ್ಮಿ ಆಗ್ತಿಲ್ಲ.

ಇದನ್ನೂ ಓದಿ: ಡಾ.ಮಂಜುನಾಥ್ ಪರ ಕ್ಯಾಂಪೇನ್ ಮಾಡಿದಕ್ಕೆ JDS ಸದಸ್ಯನ ಮೇಲೆ ಚಾಕು ಇರಿತ- ಗಂಭೀರ ಆರೋಪ

ಮುಂಬೈ ಬೇಟೆಗೆ ವಿರಾಟ್​​ ಭರ್ಜರಿ ಪ್ರಾಕ್ಟೀಸ್​​

ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಕಿಂಗ್ ಕೊಹ್ಲಿಯ ಮತ್ತೊಂದು ಬ್ಲಾಕ್​ಬಸ್ಟರ್​ ಇನ್ನಿಂಗ್ಸ್​ಗೆ ಕೌಂಟ್​ಡೌನ್​​​​ ಶುರುವಾಗಿದೆ. ಇಂದು ಐಕಾನಿಕ್ ಮೈದಾನದಲ್ಲಿ ಪವರ್​ಫುಲ್​​​ ತಂಡಗಳಾದ ಮುಂಬೈ ಹಾಗೂಆರ್​ಸಿಬಿ ಮುಖಾಮುಖಿಯಾಗಲಿದೆ. ಕಿಂಗ್ ಕೊಹ್ಲಿ ಪಂದ್ಯದ ಸೆಂಟರ್​ ಆಫ್​ ಅಟ್ರ್ಯಾಕ್ಷನ್​​. ಈ ಒಂಟಿಸಲಗದ ವಿರಾಟರೂಪ ಕಣ್ತುಂಬಿಕೊಳ್ಳಲು ಕ್ರಿಕೆಟ್​ ಜಗತ್ತು ಹವಣಿಸ್ತಿದೆ. ಆ ನಿರೀಕ್ಷೆ ನಿಜವಾಗಿಸುವ ದಿಸೆಯಲ್ಲಿ ಕಿಂಗ್ ಕೊಹ್ಲಿ ನೆಟ್ಸ್​ನಲ್ಲಿ ಭರ್ಜರಿ ಬೆವರು ಹರಿಸಿದ್ದಾರೆ.

ಆರ್​ಸಿಬಿ ಒನ್​​​ಮ್ಯಾನ್ ಆರ್ಮಿ ನೆಟ್ಸ್​ನಲ್ಲಿ ಹೈ ಎನರ್ಜಿಯಲ್ಲಿ ಬ್ಯಾಟ್​​​ ಬೀಸ್ತಿದ್ದಾರೆ. ಸ್ಟ್ರೇಟ್​​​​ಹಿಟ್​​​​, ಕವರ್​​​ ಡ್ರೈವ್​​​​, ಸ್ಟೆಪ್​ ಔಟ್​​, ಲಾಂಗ್​ ಆನ್​​​​, ಲಾಂಗ್​ ಆಫ್​​​​​​ ಹಾಗೂ ಡೀಪ್​ ಸ್ಕ್ವೇರ್ ಲೆಗ್​​​. ಹೀಗೆ ಎಲ್ಲ ವಿಧದ ಶಾಟ್ಸ್​​​​ ಆಡಿ ಮುಂಬೈಗೆ ಸ್ಟ್ರಾಂಗ್ ಮೆಸೆಜ್ ರವಾನಿಸಿದ್ದಾರೆ.

ಕಿಂಗ್ ಕೊಹ್ಲಿ ಭಯದಲ್ಲಿ ಮುಂಬೈ ಕಣಕ್ಕೆ..!

ಇಂದು ಪಂದ್ಯ ನಡೆಯುತ್ತಿರೋದು ವಾಂಖೆಡೆಯಲ್ಲಾದ್ರು ಮುಂಬೈ ಇಂಡಿಯನ್ಸ್​​​ ರನ್ ಮಷಿನ್​ ಕೊಹ್ಲಿ ಭಯದಲ್ಲಿ ಕಣಕ್ಕಿಳಿಯುತ್ತಿದೆ. ಯಾಕಂದ್ರೆ ಮುಂಬೈ ವಿರುದ್ಧ ವಿರಾಟ್​ ಅಂತಹ ಟೆರರ್​​​ ಇನ್ನಿಂಗ್ಸ್ ಕಟ್ಟಿದ್ದಾರೆ. ಈ ಅಂಕಿಅಂಶವೇ ಸದ್ಯ ಮುಂಬೈ ನಿದ್ದೆಗೆಡಿಸಿದೆ.

ಇದನ್ನೂ ಓದಿ: ರಾವಣನ ಪಾತ್ರದಲ್ಲಿ ಯಶ್ ನಟಿಸುತ್ತಿಲ್ಲ, ಆದರೆ.. ಬಾಲಿವುಡ್​​ನ ರಾಮಾಯಣ ಚಿತ್ರದಲ್ಲಿ ಯಶ್ ಪಾತ್ರ ಏನು..?

ಮುಂಬೈ ವಿರುದ್ಧ ಕೊಹ್ಲಿ ಸಾಧನೆ

ಕಿಂಗ್ ಕೊಹ್ಲಿ ಐಪಿಎಲ್ ಕರಿಯರ್​ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಇಲ್ಲಿತನಕ ಒಟ್ಟು 31 ಇನ್ನಿಂಗ್ಸ್​ಗಳನ್ನ ಆಡಿದ್ದಾರೆ. 128.12 ಸ್ಟ್ರೈಕ್​ರೇಟ್​ನಲ್ಲಿ 852 ರನ್​​ ಚಚ್ಚಿದ್ದಾರೆ. ಶತಕ ಮೂಡಿಬರದಿದ್ರೂ 5 ಹಾಫ್​ಸೆಂಚುರಿ ಹೊಡೆದಿದ್ದಾರೆ.

ಇದನ್ನೂ ಓದಿ: ‘ಕಾಲ್​ ಗರ್ಲ್​ ಬೇಕಾದ್ರೆ..’ ತನ್ನ ಹೆಂಡತಿಯ ಫೋನ್ ನಂಬರ್, ಫೋಟೋ ಶೇರ್ ಮಾಡಿದ ಕಿತಾಪತಿ ಗಂಡ..!

ಬರೀ ಇತಿಹಾಸ ಅಷ್ಟೇ ಅಲ್ಲ, ಪ್ರಸಂಟ್​ ಫಾರ್ಮ್​ ಕೂಡ ಕೊಹ್ಲಿ ಪರವಿದೆ. 17ನೇ ಐಪಿಎಲ್​​ನಲ್ಲಿ 316 ರನ್ ಗಳಿಸಿ ಆರೆಂಜ್ ಕ್ಯಾಪ್​ ರೇಸ್​ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಸೋಲಿನ ನಡುವೆ ರಾಜಸ್ಥಾನ ವಿರುದ್ಧ ಭರ್ಜರಿ ಶತಕ ಸಿಡಿಸಿ ಮಿಂಚಿದ್ರು. ಸದ್ಯ ಸಾಲಿಡ್​​ ಟಚ್​​ನಲ್ಲಿ ಕೊಹ್ಲಿ ಮತ್ತೊಂದು ಬ್ಲಾಕ್​​ಬಸ್ಟರ್ ಇನ್ನಿಂಗ್ಸ್ ಕಟ್ಟಿ, ಮುಂಬೈಗೆ ಸೋಲಿನ ದರ್ಶನ ಮಾಡಿಸಿದ್ರೂ ಅಚ್ಚರಿಪಡಬೇಕಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕೊಹ್ಲಿ v/s​​​ ಮುಂಬೈ ಇಂಡಿಯನ್ಸ್​.. ಮೊತ್ತೊಂದು ಟೆರರ್​ ಇನ್ನಿಂಗ್ಸ್ ಕಟ್ಟುವ ಹಿಂಟ್ ಕೊಟ್ಟ ವಿರಾಟ್​

https://newsfirstlive.com/wp-content/uploads/2024/03/VIRAT.jpg

Load More