Advertisment

ತಲೆ ಇಲ್ಲದೇ 18 ತಿಂಗಳು ಬದುಕಿದ್ದ ಮೈಕ್​.. ರೈತ ಇದನ್ನ ಸಾಕಿದ್ದು ಹೇಗೆ ಅಂತ ಕೇಳಿದ್ರೆ ಶಾಕ್ ಆಗ್ತೀರಾ!

author-image
Bheemappa
Updated On
ತಲೆ ಇಲ್ಲದೇ 18 ತಿಂಗಳು ಬದುಕಿದ್ದ ಮೈಕ್​.. ರೈತ ಇದನ್ನ ಸಾಕಿದ್ದು ಹೇಗೆ ಅಂತ ಕೇಳಿದ್ರೆ ಶಾಕ್ ಆಗ್ತೀರಾ!
Advertisment
  • ತಿನ್ನಬೇಕೆಂದು ಕುಯ್ದಿದ್ದ ಹುಂಜ ಎಷ್ಟು ವರ್ಷ ಬದುಕಿತು ಗೊತ್ತಾ?
  • ವ್ಯಾಂಡೊಟ್ಟೆ ಜಾತಿಯ ಕೋಳಿಗಳು ದಷ್ಟಪುಷ್ಟವಾಗಿ ಬೆಳೆಯುತ್ತವೆ
  • ರೈತನು ಆ ಹುಂಜವನ್ನು ಬದುಕಿಸಿದ್ದೇ ಘಟನೆಯ ಹೈಲೆಟ್ಸ್ ಆಗಿದೆ

ಇಲ್ಲಿ ಹೇಳುತ್ತಿರುವುದು ಒಂದು ವಿಚಿತ್ರವಾದ ಒಂದು ಘಟನೆ. ನಮ್ಮ ದೇಶ ಸುದ್ದಿ ಅಲ್ಲದಿದ್ದರೂ ನಮಗೆ ಸ್ವಾತಂತ್ರ್ಯ ಸಿಗುವುದಕ್ಕೂ ಎರಡು ವರ್ಷ ಮೊದಲು ಇದು ನಡೆದಿದೆ. ಎಷ್ಟೊಂದು ಕುತೂಹಲವಾದ ಸಂಗತಿ ಎಂದರೆ ಇದು ಯಾರಿಗೂ ನಂಬಲು ಸಾಧ್ಯನೇ ಇಲ್ಲ. ಆದರೂ ಇದು ವಿದೇಶದಲ್ಲಿ ನಿಜವಾಗಿ ನಡೆದಂತ ಘಟನೆಯಾಗಿದೆ. ತಲೆ ಇಲ್ಲದ ಹುಂಜವೊಂದು ಬರೋಬ್ಬರಿ 18 ತಿಂಗಳ ಕಾಲ ಬದುಕಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಸದ್ಯ ಆ ಹುಂಜ ಹೇಗೆ ಬದುಕಿತು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

Advertisment

‘Mike the Headless Chicken’.. ಸದ್ಯ ನಿಮಗೆ ಹೇಳುತ್ತಿರುವುದು ಮೈಕ್ ಎನ್ನುವ ಹುಂಜದ ಬಗ್ಗೆ. ಈ ಹುಂಜವು ಅಮೆರಿಕದ ಕೊಲೊರಾಡೋ ರಾಜ್ಯದ ಫ್ರೂಟಾ ಎನ್ನುವ ಪ್ರದೇಶದಲ್ಲಿ ವಾಸವಿದ್ದ ರೈತ ಲಾಯ್ಡ್ ಓಲ್ಸೆನ್ ಮನೆಯಲ್ಲಿ 1940, ಏಪ್ರಿಲ್​ 20 ರಂದು ಜನಿಸಿತ್ತು. ದಿನ ಕಳೆದಂತೆ ಈ ಹುಂಜ ದಷ್ಟಪುಷ್ಟವಾಗಿ ಚೆನ್ನಾಗಿ ಬೆಳೆದಿತ್ತು. ಅದು ಅಲ್ಲದೇ ಈ ಹುಂಜ ವ್ಯಾಂಡೊಟ್ಟೆ (Wyandotte chicken) ಬ್ರೀಡ್​ಗೆ ಸೇರಿದ್ದಾಗಿದೆ. ಈ ಬ್ರೀಡ್​ಗೆ ಸೇರಿದ ಕೋಳಿ, ಹುಂಜಗಳು ದಷ್ಟಪುಷ್ಟಗಳಾಗಿ ಮೈ ತುಂಬಾ ಮಾಂಸವನ್ನೇ ಅತ್ಯಧಿಕವಾಗಿ ಹೊಂದಿರುತ್ತಾವೆ. ಹೀಗಾಗಿ ಅಮೆರಿಕದಲ್ಲಿ ಈ ಜಾತಿಯ ಕೋಳಿಗಳನ್ನು ಹೆಚ್ಚಾಗಿ ಸಾಕುತ್ತಿದ್ದರು.

ಇದನ್ನೂ ಓದಿ:ಮಾಡೆಲ್​ ಜೊತೆ ಅಭಿಷೇಕ್​ ಶರ್ಮಾ ಲವ್.. ಆತ್ಮಹತ್ಯೆ ಕೇಸ್​ನಲ್ಲಿ ಹೊರ ಬಂದು ಬ್ಯಾಟ್​ ಬೀಸಿದ್ದೇ ರೋಚಕ

[caption id="attachment_66300" align="alignnone" width="800"]publive-image ವ್ಯಾಂಡೊಟ್ಟೆ ಬ್ರೀಡ್[/caption]

Advertisment

ಅದರಂತೆ ತನ್ನ ಹುಂಜ ಚೆನ್ನಾಗಿ ಬೆಳೆದಿದೆ ಎಂದು ರೈತ ಲಾಯ್ಡ್ ಓಲ್ಸೆನ್ ಅವರು ರಾತ್ರಿ ಊಟಕ್ಕೆ ಅದನ್ನು ಕುಯ್ಯೋದು ಚಿಕನ್ ಸಾರು ಮಾಡಿಕೊಂಡು ತಿನ್ನಬೇಕು ಎಂದುಕೊಳ್ಳುತ್ತಾನೆ. ಅದರಂತೆ ಒಂದು ದಿನ ಮೈಕ್​ ಹುಂಜದ ತಲೆ ಕಟ್ ಮಾಡಿಬಿಡುತ್ತಾನೆ. ಆದರೆ ಆ ಮೇಲೆ ಅದನ್ನು ಸುಮ್ಮನೆ ಕಟ್ ಮಾಡಿದೆನಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾನೆ. ಹುಂಜದ ತಲೆ ಕಟ್ ಮಾಡಿದರು ಅದರ ಒಂದು ಕಿವಿ ಹಾಗೂ ಮೆದುಳಿನ ಕಾಂಡದ ಹೆಚ್ಚಿನ ಭಾಗ ಹಾಗೇ ಉಳಿದಿರುತ್ತದೆ. ರಕ್ತ ಹೆಪ್ಪುಗಟ್ಟಿದ್ದರಿಂದ ಇನ್ನು ಹೆಚ್ಚಿನ ರಕ್ತ ಹೊರ ಬಾರದೆ ಹಾಗೇ ಉಳಿದುಕೊಳ್ಳುತ್ತದೆ. ಹೀಗಾಗಿ ರೈತ ಒಂದು ನಿರ್ಧಾರಕ್ಕೆ ಬಂದು ಅದನ್ನು ಹಾಗೇ ಉಳಿಸಿಕೊಳ್ಳಬೇಕು ಎಂದುಕೊಳ್ಳುತ್ತಾನೆ.

ರೈತ ಆಹಾರ ಹೇಗೆ ನೀಡುತ್ತಿದ್ದನು?

ತಲೆ ಕಟ್ ಆದರೂ ವಿಕಾರವಾಗಿ ಕಾಣುತ್ತಿದ್ದ ಹುಂಜ, ನಂತರ ನಡೆಯಲು ಪ್ರಾರಂಭಿಸುತ್ತದೆ. ಆವಾಗ ಅದನ್ನು ಉಳಿಸಿಕೊಳ್ಳಬೇಕೆಂದು ನಿತ್ಯ ಅದಕ್ಕೆ ಆಹಾರ ಕೊಡಲು ರೈತ ಮುಂದಾಗುತ್ತಾನೆ. ಐಡ್ರಾಪರ್ ಮೂಲಕ ಹಾಲು ಮತ್ತು ನೀರಿನ ಮಿಶ್ರಣವನ್ನು ಅದಕ್ಕೆ ನೀಡುತ್ತಿರುತ್ತಾನೆ. ಸಣ್ಣ ಸಣ್ಣ ಕಾಳು ಮತ್ತು ಸಣ್ಣ ಹುಳುಗಳನ್ನು ಮಾತ್ರ ನೀಡುತ್ತಿರುತ್ತಾರೆ. ಹೀಗಾಗಿ ಇದು ಹಾಗೇ ಬದುಕುತ್ತಿರುತ್ತದೆ. ಇದರ ಜೊತೆಗೆ ಒಮ್ಮೆ ರಾಷ್ಟ್ರಮಟ್ಟದಲ್ಲಿ ಮೈಕ್ ಹುಂಜ ಫೇಮಸ್ ಆಗಿ ರೈತನಿಗೆ ಖ್ಯಾತಿಯನ್ನು ತಂದು ಕೊಡುತ್ತದೆ. ಹೀಗಾಗಿ ಆಗಿನ ನಿಯತಕಾಲಿಕೆಗಳು, ಪೇಪರ್​ನಲ್ಲೂ ಹುಂಜ ಹೆಡ್​ಲೈನ್ ಆಗಿತ್ತು.

ಇದನ್ನೂ ಓದಿ: IPL ಫೈನಲ್​ ಮ್ಯಾಚ್​​ನಲ್ಲಿ ಕ್ಯಾಮೆರಾಮೆನ್​ ಆಗಿ ಕೆಲಸ ಮಾಡಿದ್ರಾ ನಟ ಸೋನ್ ಸೂದ್​..?

Advertisment

ಮೆಕ್ಕೆಜೋಳ ತಂದ ಸಾವು

ಹೀಗೆ ಮೈಕ್​ 18 ತಿಂಗಳಗಳ ಕಾಲ ತಲೆ ಇಲ್ಲದೆ ಜೀವನ ನಡೆಸಿರುತ್ತದೆ. ಕೊನೆಗೆ ಒಂದು ದಿನ 1947ರ ಮಾರ್ಚ್​ನಲ್ಲಿ ಮೆಕ್ಕೆಜೋಳ (corn​) ತಿನ್ನುವಾಗ ಒಂದು ಮೆಕ್ಕೆಜೋಳ ಗಂಟಲಲ್ಲಿ ಸಿಕ್ಕಿಕೊಂಡು ಉಸಿರುಗಟ್ಟಿ ಮೈಕ್​ ಹುಂಜ ದುರಂತ ಸಾವು ಕಾಣುತ್ತದೆ. ಇದರಿಂದ ರೈತ ತೀವ್ರ ದುಃಖಿತನಾಗುತ್ತಾನೆ. ಇನ್ನು ರೈತ ಲಾಯ್ಡ್ ಓಲ್ಸೆನ್ ಕುಟುಂಬಸ್ಥರು ಇದುವರೆಗೂ ಮೈಕ್​ ನೆನಪಿಗಾಗಿ ‘ಮೈಕ್ ದಿ ಹೆಡ್‌ಲೆಸ್ ಚಿಕನ್ ಡೇ’ ಅನ್ನು ಗೌರವಾರ್ಥವಾಗಿ ಆಚರಣೆ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment