/newsfirstlive-kannada/media/post_attachments/wp-content/uploads/2024/09/Riya-Singha.jpg)
2024ರ ಮಿಸ್​​​ ಯೂನಿವರ್ಸ್​​ ಇಂಡಿಯಾ ಸ್ಪರ್ಧೆಯಲ್ಲಿ ರಿಯಾ ಸಿಂಘಾ ಎಂಬವರು ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. 19 ವರ್ಷದ ಯುವತಿ ರಿಯಾ ರಾಜಸ್ಥಾನದ ಜೈಪುರದಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಿಸಿದ್ದರು. ಈ ವೇಳೆ ಎಲ್ಲರ ಗಮನ ಸೆಳೆದ ಯುವತಿ ಮಿಸ್​​​ ಯೂನಿವರ್ಸ್​​ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಗುಜರಾತ್​​​​​ ಮೂಲಕ ರಿಯಾ ಸಿಂಘಾ ಮಿಸ್​​​ ಯೂನಿವರ್ಸ್​​ ಇಂಡಿಯಾ ಕಿರೀಟ ಗೆದ್ದ ಬಳಿಕ ಮಾತನಾಡಿದ್ದು, ‘ಇಂದು ಪ್ರಶಸ್ತಿ ಗೆದ್ದ ನಂತರ ನಾನು ಕೃತಜ್ಞನಾಗಿದ್ದೇನೆ. ಈ ಮಟ್ಟಕ್ಕೆ ಬರಲು ತುಂಬಾ ಕಷ್ಟಪಟ್ಟಿದ್ದೇನೆ. ಅಲ್ಲಿ ನಾನು ಕಿರೀಟಕ್ಕೆ ಅರ್ಹನೆಂದು ಪರಿಗಣಿಸಿದೆ. ಹಿಂದಿನ ವಿಜೇತರಿಂದ ನಾನು ತುಂಬಾ ಸ್ಫೂರ್ತಿ ಪಡೆದಿದ್ದೇನೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: 17 ವರ್ಷದ ಹಿಂದೆ ಅಪಹರಣಕ್ಕೊಳಗಾಗಿದ್ದ.. ಈಗ ವಕೀಲನಾಗಿ ಪ್ರಕರಣವನ್ನೇ ಗೆದ್ದ!
ಬಾಲಿವುಡ್​ ನಟಿ ಊರ್ವಶಿ ರೌಟೇಲರವರು ರಿಯಾರವರಿಗೆ ಕಿರೀಟ ತೊಡಿಸಿದರು. ಬಳಿಕ ಮಾತನಾಡಿದ ಅವರು, ‘ಎಲ್ಲಾ ಹುಡುಗಿಯರ ಭಾವನೆಗಳ ಬಗ್ಗೆ ತಿಳಿದಿದೆ. ವಿಜೇತರು ಅದ್ಭುತವಾಗಿದ್ದಾರೆ. ವಿಶ್ವ ಸುಂದರಿಯ ಜಾಗತಿಕ ವೇದಿಕೆಯಲ್ಲಿ ನಮ್ಮ ದೇಶವನ್ನು ಉತ್ತಮವಾಗಿ ಪ್ರತಿನಿಧಿಸುತ್ತಾರೆ ಎಂದು ಹೇಳಿದ್ದಾರೆ.
ಬಳಿಕ ಮಾತು ಮುಂದುವರೆಸಿದ ಅವರು, ಈ ವರ್ಷ ಭಾರತಕ್ಕೆ ವಿಶ್ವ ಸುಂದರಿ ಕಿರೀಟ ಸಿಗುತ್ತದೆ ಎಂಬ ಭರವಸೆ ನನಗಿದೆ. ಎಲ್ಲಾ ಹುಡುಗಿಯರು ತುಂಬಾ ಕಠಿಣ ಶ್ರಮ ವಹಿಸುತ್ತಿದ್ದಾರೆ ಎಂದು ಊರ್ವಶಿ ರೌಟೇಲಾ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ