newsfirstkannada.com

ಬಾಲಿವುಡ್ ಬ್ಯೂಟಿ ಪೂನಂ ಪಾಂಡೆ ಬಲಿ ಪಡೆದ ಗರ್ಭಕಂಠ ಕ್ಯಾನ್ಸರ್; Cervical Cancer ಎಷ್ಟು ಡೇಂಜರ್..?

Share :

Published February 2, 2024 at 1:07pm

Update February 2, 2024 at 1:22pm

    Cervical Cancer ಎಂದರೇನು? ಯಾಕೆ ಬರುತ್ತದೆ?

    32ನೇ ವರ್ಷಕ್ಕೆ ಇಹಲೋಕ ತ್ಯಜಿಸಿದ ಪೂನಂ ಪಾಂಡೆ

    ವಿವಾದಾತ್ಮಕ ವಿಚಾರಗಳಲ್ಲಿ ಹೆಚ್ಚು ಸುದ್ದಿಯಾಗ್ತಿದ್ದ ನಟಿ

ಬಾಲಿವುಡ್​ ಅಂಗಳದಿಂದ ಶಾಕಿಂಗ್ ನ್ಯೂಸ್​ ಬಂದಿದ್ದು, ಜನಪ್ರಿಯ ನಟಿ ಪೂನಂ ಪಾಂಡೆ ನಿಧನರಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಕ್ಯಾನ್ಸರ್​ಗೆ ತುತ್ತಾಗಿದ್ದ ಪಾಂಡೆ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂಬ ಬರಸಿಡಲು ಎಲ್ಲರನ್ನೂ ಆಘಾತಕ್ಕೆ ತಳ್ಳಿದೆ. ಕೇವಲ 32 ವರ್ಷಕ್ಕೆ ರೂಪದರ್ಶಿ ಶಾಶ್ವತ ಬದುಕಿನಿಂದ ದೂರವಾಗಿದ್ದಾಳೆ. ಇದು ಆಕೆಯ ಅಭಿಮಾನಿಗಳಿಗೆ, ಕುಟುಂಬಸ್ಥರಿಗೆ ದೊಡ್ಡ ಶಾಕ್ ಆಗಿದೆ.

ಪೂನಂ ಪಾಂಡೆಗೆ ಏನಾಗಿತ್ತು..?
ಪೂನಂ ಪಾಂಡೆ ಕಳೆದ 9 ವರ್ಷಗಳಿಂದ ಮಹಾಮಾರಿ ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಅಂದ್ಹಾಗೆ ಬಾಲಿವುಡ್​ ನಟಿಯನ್ನು ಕಾಡಿದ್ದು Cervical Cancer (ಗರ್ಭಕಂಠ ಕ್ಯಾನ್ಸರ್​). ಇದರ ವಿರುದ್ಧ ಸುದೀರ್ಘ ಹೋರಾಟ ನಡೆಸುತ್ತಿದ್ದ ಪಾಂಡೆ, ಚಿಕಿತ್ಸೆ ಫಲಿಸದೇ ಸಾವಿಗೆ ಶರಣಾಗಿದ್ದಾರೆ ಎಂದು ಅವರ ಮ್ಯಾನೇಜರ್ ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿShocking: ಭಾರತೀಯ ರೂಪದರ್ಶಿ ಪೂನಂ ಪಾಂಡೆ ನಿಧನ

ಬೆಳಗ್ಗೆ ನಿಮ್ಮೆಲ್ಲರಿಗೂ, ನಮ್ಮೆಲ್ಲರಿಗೂ ಆಘಾತಕಾರಿ ಸುದ್ದಿಯನ್ನು ಕೇಳೋದು ತುಂಬಾ ಕಷ್ಟ. ನಮ್ಮ ಪ್ರೀತಿಯ ಪೂನಂ ಪಾಂಡೆಯನ್ನು ಗರ್ಭಕಂಠದ ಕ್ಯಾನ್ಸರ್​ನಿಂದ ಕಳೆದುಕೊಂಡಿದ್ದೇವೆ. ಇದನ್ನು ನಿಮಗೆ ತಿಳಿಸಲು ನನಗೆ ತುಂಬಾ ದುಃಖ ಆಗುತ್ತಿದೆ ಎಂದು ಅವರ ಮ್ಯಾನೇಜರ್​ ಇನ್​ಸ್ಟಾ ಪೋಸ್ಟ್​​ನಲ್ಲಿ ಮಾಹಿತಿ ನೀಡಿದ್ದಾರೆ. ಸದ್ಯ ಪೋಸ್ಟ್​ ಬಾಲಿವುಡ್ ಅಂಗಳವನ್ನು ಆಘಾತಕ್ಕೆ ತಳ್ಳಿದೆ. ಅತಿ ಚಿಕ್ಕ ವಯಸ್ಸಿನಲ್ಲಿ ಅಂದರೆ ಕೇವಲ 32ನೇ ವರ್ಷಕ್ಕೆ ನಟಿಯೊಬ್ಬಳನ್ನು ಬಾಲಿವುಡ್​ ಕಳೆದುಕೊಂಡಿದೆ.

ಪೂನಂ ಪಾಂಡೆ ಬಲಿ ಪಡೆದ ಗರ್ಭಕಂಠ ಕ್ಯಾನ್ಸರ್ ಏನು..?
ಗರ್ಭಕಂಠ ಕ್ಯಾನ್ಸರ್ ಅನ್ನೋದು ಗರ್ಭಕಂಠದ ದ್ವಾರ, ಅದರ ಸುತ್ತ ಮುತ್ತ ಕಂಡು ಬರುವ ತೀವ್ರ ಸ್ವರೂಪದ ಗೆಡ್ಡೆ. ಅಂದರೆ ಗರ್ಭಕಂಠದ ಮೇಲಿನ ಜೀವಕೋಶಗಳ ಅಸಾಮಾನ್ಯ ಹಾಗೂ ಅಸ್ವಾಭಾವಿಕ ಬೆಳವಣಿಗೆಯೇ ಗರ್ಭಕಂಠದ ಕ್ಯಾನ್ಸರ್. ಈ ಕ್ಯಾನ್ಸರ್​ಗೆ ಹ್ಯೂಮನ್ ಪ್ಯಾಪಿಲೋಮ್ ವೈರಸ್ (HPV) ಎಂಬ ಸೋಂಕು ಕಾರಣವಾಗಿದೆ. ಈ ಸೋಂಕು ಲೈಂಗಿಕವಾಗಿ ಸಕ್ರಿಯರಾಗಿರುವ ಯಾವುದೇ ವಯಸ್ಸಿನವರಲ್ಲೂ ಕಂಡುಬರಬಹುದು. ತೀರಾ ಎಳೆಯ ವಯಸ್ಸಿನಲ್ಲಿ ಲೈಂಗಿಕ ಚಟುವಟಿಕೆ ನಡೆಸುವುದರಿಂದ ಹಾಗೂ ಒಂದಕ್ಕಿಂತ ಹೆಚ್ಚು ಲೈಂಗಿಕ ಸಂಗಾತಿ ಇರೋರಲ್ಲಿ ಅಧಿಕವಾಗಿ ಕಂಡು ಬರುತ್ತದೆ. HPV ಸೋಂಕಿನಲ್ಲಿ ಸಾಕಷ್ಟು ತಳಿಗಳಿದ್ದು ಎಲ್ಲವೂ ಕೂಡ ಕ್ಯಾನ್ಸರ್ ಆಗಲು ಕಾರಣವಾಗುವುದಿಲ್ಲ. HPV ಸೋಂಕು ಕ್ಯಾನ್ಸರ್​ ಆಗಿ ಪರಿವರ್ತನೆಯಾಗಲು ಬರೋಬ್ಬರಿ 15 ರಿಂದ 20 ವರ್ಷಗಳ ಕಾಲ ಸಮಯ ತೆಗೆದುಕೊಳ್ಳುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ.

ಇದನ್ನೂ ಓದಿಕಪ್ಪು ಬಿಳುಪಿನ.. ಪೂನಂ ಪಾಂಡೆ ಹಾಕಿಕೊಂಡ ಕೊನೆಯ ವಿಡಿಯೋ ಯಾವುದು ಗೊತ್ತಾ?

ಲಕ್ಷಣಗಳು ಏನು..?
ಅಸುರಕ್ಷಿತ ಹೆರಿಗೆ ಸಮಯದಲ್ಲಿ ಆಗುವ ಗಾಯದಿಂದಲೂ ಇದು ಸಂಭವಿಸುತ್ತದೆ ಎಂದು ಹೇಳಲಾಗುತ್ತದೆ. ಗರ್ಭಕೊರಳು ಕ್ಯಾನ್ಸರ್​​ನ ಪ್ರಮುಖ ಲಕ್ಷಣಗಳನ್ನು ನೋಡೋದಾದ್ರೆ ಬಳಿ ಮುಟ್ಟು ಅಥವಾ ಕೆಂಪು ಮುಟ್ಟು ಹೋಗುವುದು. ಕಿಬ್ಬೊಟ್ಟೆ ಅಥವಾ ಸೊಂಟದ ಕೆಳಭಾಗದಲ್ಲಿ ತೀವ್ರ ನೋವು ಕಾಣಿಸಿಕೊಳ್ಳುತ್ತದೆ. ಹಾಗೆಯೇ ಅನಿಯಮಿತ ಋತುಸ್ರಾವ ಆಗುತ್ತದೆ. ಲೈಂಗಿಕ ಸಂಪರ್ಕದ ವೇಳೆ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ಲೈಂಗಿಕ ಸಂಪರ್ಕದ ನಂತರ ರಕ್ತಸ್ರಾವ ಕೂಡ ಸಂಭವಿಸುತ್ತದೆ. ಈ ಲಕ್ಷಣಗಳು ಪದೇಪದೆ ಕಂಡು ಬಂದರೆ ತಜ್ಞರನ್ನು ಸಂಪರ್ಕಿಸಬೇಕು.

ಪ್ಯಾಪ್ ಸ್ಮೀಯರ್ ತಪಾಸಣೆ ಮೂಲಕ ಮಹಾಮಾರಿಯಿಂದ ದೂರ ಇರಬಹುದು ಅನ್ನೋದು ವೈದ್ಯರ ವಾದ. ಪ್ರತಿ ಮೂರು ವರ್ಷಕ್ಕೆ ಒಮ್ಮೆ ಈ ಪರೀಕ್ಷೆಗೆ ಒಳಗಾದರೆ ಗರ್ಭಕಂಠ ಕ್ಯಾನ್ಸರ್​ನಿಂದ ಪಾರಾಗಬಹುದು. ಪ್ರೊಟೋಕಾಲ್ ಪ್ರಕಾರ, 21 ವರ್ಷದೊಳಗಿನ ಮಹಿಳೆಯರಿಗೆ, ಯುವತಿಯರಿಗೆ ಪ್ಯಾಪ್ ಸ್ಮೀಯರ್ ಟೆಸ್ಟ್ ಅಗತ್ಯ ಇರಲ್ಲ. 21 ವರ್ಷಕ್ಕಿಂತ ಮೇಲ್ಪಟ್ಟು 65 ವರ್ಷದೊಳಗಿನ ಮಹಿಳೆಯರು ಈ ತಪಾಸಣೆಗೆ ಒಳಗಾಗಬೇಕು. 65 ವರ್ಷಗಳ ನಂತರ ಪ್ಯಾಪ್ ಸ್ಮೀಯರ್ ಟೆಸ್ಟ್​ ಅಗತ್ಯ ಇಲ್ಲ ಎಂದು ಹೇಳಲಾಗಿದೆ. ವರದಿಗಳ ಪ್ರಕಾರ ಭಾರತದಲ್ಲಿ ಪ್ರತಿವರ್ಷ ಒಂದು ಲಕ್ಷಕ್ಕೂ ಅಧಿಕ ಮಹಿಳೆಯರು ಗರ್ಭಕಂಠ ಕ್ಯಾನ್ಸರ್​ಗೆ ಸಾವನ್ನಪ್ಪುತ್ತಿದ್ದಾರೆ.

ಮತ್ತೊಂದು ಆಘಾತಕಾರಿ ವಿಚಾರ ಏನೆಂದರೆ ಇತ್ತೀಚೆಗಿನ ವರ್ಷಗಳಲ್ಲಿ ಗ್ರಾಮೀಣ ಭಾಗದ ಮಹಿಳೆಯರು ಈ ಮಹಾಮಾರಿಗೆ ಬಲಿಯಾಗುತ್ತಿದ್ದಾರೆ. ಇದಕ್ಕೆ ಕಾರಣ ತಿಳುವಳಿಕೆಯ ಕೊರತೆ. ಹಲವು ದಶಕಗಳಿಂದ ಗರ್ಭಕಂಠ ಕ್ಯಾನ್ಸರ್​ ಬಗ್ಗೆ ಅಭಿಯಾನಗಳು ನಡೆಯುತ್ತಿದ್ದರೂ ಪ್ರಕರಣಗಳು ಹೆಚ್ಚಾಗುತ್ತಲೇ ಇರೋದು ದೊಡ್ಡ ದುರಂತ. ಇದೀಗ ಎಲ್ಲವೂ ಅರಿವಿದ್ದ ಪೂನಂ ಪಾಂಡೆಯಂತ ನಟಿಯೇ ಡೇಂಜರ್​ ಕ್ಯಾನ್ಸರ್​ಗೆ ಬಲಿಯಾಗಿರೋದು ಬೇಸರ ವಿಚಾರ.

ವಿಶೇಷ ವರದಿ: ಗಣೇಶ ಕೆರೆಕುಳಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಲಿವುಡ್ ಬ್ಯೂಟಿ ಪೂನಂ ಪಾಂಡೆ ಬಲಿ ಪಡೆದ ಗರ್ಭಕಂಠ ಕ್ಯಾನ್ಸರ್; Cervical Cancer ಎಷ್ಟು ಡೇಂಜರ್..?

https://newsfirstlive.com/wp-content/uploads/2024/02/POONAM-PANDE.jpg

Load More