ಧೋನಿ ಫ್ಯಾನ್ಸ್​ಗೆ ಶುರುವಾಯ್ತು ಢವಢವ.. ಬಿಸಿಸಿಐ ಕೋರ್ಟ್​ನಲ್ಲಿ ತಲಾ IPL ಭವಿಷ್ಯ

author-image
Ganesh
Updated On
ಧೋನಿ ಫ್ಯಾನ್ಸ್​ಗೆ ಶುರುವಾಯ್ತು ಢವಢವ.. ಬಿಸಿಸಿಐ ಕೋರ್ಟ್​ನಲ್ಲಿ ತಲಾ IPL ಭವಿಷ್ಯ
Advertisment
  • ಸಿಎಸ್​​ಕೆ ಫ್ರಾಂಚೈಸಿ ನಿರ್ಧಾರದ ಮೇಲೆ ಧೋನಿ‌ ಭವಿಷ್ಯ
  • ತಿಂಗಳಾಂತ್ಯದಲ್ಲಿ ಧೋನಿ ಭವಿಷ್ಯ ನಿರ್ಧಾರವಾಗುತ್ತಾ..?
  • ಸಿಎಸ್​​​ಕೆಗೆ ಧೋನಿ ಮುಖ್ಯನಾ..? ತಂಡ ಮುಖ್ಯನಾ..?

ಐಪಿಎಲ್ ಹತ್ತಿರವಾದ್ರೆ ಸಾಕು.. ಇದೇನಾ ಧೋನಿ ಆಡೋ ಕೊನೆ ಸೀಸನ್.​.? ಅನ್ನೋ ಪ್ರಶ್ನೆ ಸಖತ್​ ಸೌಂಡ್​ ಮಾಡುತ್ತೆ. ಈ ಬಾರಿಯ ಐಪಿಎಲ್​ಗೂ ಮುನ್ನವೇ ಧೋನಿಯ ರಿಟೈರ್ಮೆಂಟ್​ ಸುದ್ದಿ ಸದ್ದು ಮಾಡ್ತಿದೆ. ಬಿಗ್​ಬಾಸ್​ಗಳ ಆ ಒಂದು ನಿರ್ಣಯದ ಜೊತೆ ಫ್ರಾಂಚೈಸಿಯೇ ಬೋಲ್ಡ್​ ಡಿಸಿಷನ್ ತೆಗೆದುಕೊಳ್ಳುತ್ತಾ ಎಂಬ ಚಿಂತೆ ಕಾಡ್ತಿದೆ.

ಸೀಸನ್​​-18ರ ಇಂಡಿಯನ್ ಪ್ರೀಮಿಯರ್​ ಲೀಗ್​ಗೆ ತಯಾರಿ ಶುರುವಾಗಿದೆ. ಇದಕ್ಕೂ ಮುನ್ನ ಫ್ರಾಂಚೈಸಿಗಳು, ಮೆಗಾ ಆಕ್ಷನ್​​ನಲ್ಲಿ ಬಲಿಷ್ಠ ತಂಡಗಳನ್ನ ಕಟ್ಟುವ ಲೆಕ್ಕಚಾರದಲ್ಲೇ ಬ್ಯುಸಿಯಾಗಿದೆ. ಯಾವ ತಂಡ ಯಾರನ್ನ ರಿಲೀಸ್ ಮಾಡುತ್ತೆ. ರಿಟೈನ್ ಮಾಡುತ್ತೆ ಅನ್ನೋ ಕ್ಯೂರಿಯಾಸಿಟಿಯೂ ಫ್ಯಾನ್ಸ್​ ಮನದಲ್ಲಿ ಮನೆ ಮಾಡಿದೆ. ಇದೆಲ್ಲಕ್ಕಿಂತ ಮೋಸ್ಟ್​ ಡಿಬೇಟಬಲ್ ಆ್ಯಂಡ್ ಹಾಟ್ ಟಾಪಿಕ್ ವಿಚಾರ ಎಮ್​.ಎಸ್.ಧೋನಿಯ ರಿಟೈನ್​ ವಿಚಾರ.

ಇದನ್ನೂ ಓದಿ:ದರ್ಶನ್​​ಗೆ ಮತ್ತೊಂದು ಕೇಸ್​ನಲ್ಲಿ ಸಂಕಷ್ಟ.. ಪೊಲೀಸರಿಂದ ಬಿಗ್ ಪ್ಲಾನ್ ರೆಡಿ.. ಏನದು..?

publive-image

ಪ್ರತಿ ಸೀಸನ್​ ಶುರುವಾದಾಗಲೂ ಧೋನಿ, ಆಡ್ತಾರಾ? ಇಲ್ವಾ? ಎಂಬ ಸುದ್ದಿ ಸದ್ದು ಮಾಡುತ್ತೆ. ಈ ಸಲ ಐಪಿಎಲ್ ಅರಂಭಕ್ಕೂ ಮುನ್ನವೇ ಧೋನಿ ತಂಡದಲ್ಲಿ ಉಳೀತಾರಾ? ಇಲ್ಲವಾ ಅನ್ನೋ ಚರ್ಚೆ ಜೋರಾಗಿ ನಡೀತಿದೆ. ಇದಕ್ಕೆಲ್ಲಾ ಕಾರಣ ಮುಂಬರೋ ಮೆಗಾ ಹರಾಜಿನ ನ್ಯೂ ರೂಲ್ಸ್ ಪಾಲಿಸಿ.

ಎಮ್​.ಎಸ್.ಧೋನಿ ಫ್ಯಾನ್ಸ್​ಗೆ ಶುರುವಾಯ್ತು ಢವ ಢವ
ಅಕ್ಟೋಬರ್​ನಲ್ಲೇ ಬಿಸಿಸಿಐ, ಐಪಿಎಲ್​ನ ರಿಟೈನ್ ಪಾಲಿಸಿ ಜಾರಿ ಮಾಡಬೇಕಿತ್ತು. ಫ್ರಾಂಚೈಸಿಗಳ ಮನವಿಯನ್ನ ಗಂಭೀರವಾಗಿ ಪರಿಗಣಿಸುವ ಬಿಗ್​ಬಾಸ್​ಗಳು ಇದೇ ತಿಂಗಳಾಂತ್ಯಕ್ಕೆ ಮುಂದೂಡಿದೆ. ಇದರೊಂದಿಗೆ ಧೋನಿ, ರಿಟೈನ್ ಭವಿಷ್ಯ ಏನಾಗುತ್ತೆ ಅನ್ನೋ ಟೆನ್ಶನ್​. ಫ್ಯಾನ್ಸ್​ಗೆ ಇನ್ನಿಲ್ಲದೇ ಕಾಡ್ತಿದೆ. ಇದಕ್ಕೆ ಕಾರಣ ಚೆನ್ನೈ ನಿರ್ಧಾರ ಏನಾಗಿರುತ್ತೆ ಅನ್ನೋದೇ ಆಗಿದೆ. ಡಿಸೆಂಬರ್​ನಲ್ಲಿ ಮೆಗಾ ಹರಾಜು ನಡೆಯಲಿದ್ದು, ಇದಕ್ಕಾಗಿ ಭವಿಷ್ಯದ ತಂಡವನ್ನು ಕಟ್ಟುವ ಲೆಕ್ಕಚಾರವೂ ಚೆನ್ನೈ ಮುಂದಿದೆ. ಇದೇ ಕಾರಣಕ್ಕೆ ಋತುರಾಜ್, ಜಡೇಜಾ ಫಸ್ಟ್ ಚಾಯ್ಸ್ ರಿಟೈನ್ ಆಗಿದ್ದಾರೆ. ಚಾಂಪಿಯನ್ ಕ್ಯಾಪ್ಟನ್​ ಧೋನಿ ವಿಚಾರದಲ್ಲಿ ಮಾತ್ರ, ಇನ್ನು ಕಾದುನೋಡುವ ತಂತ್ರಕ್ಕೆ ಅನುಸರಿಸುತ್ತಿದೆ ಅನ್ನೋದು ಮೂಲಗಳ ಮಾಹಿತಿ. ಹೀಗಾಗಿ ಚೆನ್ನೈ ಬೋಲ್ಡ್​ ಡಿಸಿಷನ್ ತೆಗೆದುಕೊಳ್ಳುತ್ತಾ ಎಂಬ ಅನುಮಾನ ಇದ್ದೇ ಇದೆ.

ಇದನ್ನೂ ಓದಿ:ಕೊಹ್ಲಿ ಹೆಸರು ಹೇಳದೇ ಟಾಂಗ್ ಕೊಟ್ಟ ಬೂಮ್ರಾ; ಕೊಹ್ಲಿ ಕೊಹ್ಲಿ ಅನ್ನೋರಿಗೂ ಹೋಯ್ತು ಮೆಸೇಜ್..!

publive-image

ಸಿಎಸ್​​​ಕೆಗೆ ಧೋನಿ ಮುಖ್ಯನಾ? ತಂಡ ಮುಖ್ಯನಾ?
ಚೆನ್ನೈ ಸೂಪರ್​ ಕಿಂಗ್ಸ್​ಗೆ ಧೋನಿಯೇ ಪ್ರಮುಖ ಆದ್ಯತೆಯಾಗಿದ್ದಾರೆ. ಧೋನಿ ಅಂದ್ರೆನೇ ಚೆನ್ನೈ.. ಚೆನ್ನೈ ಅಂದ್ರೆನೇ ಧೋನಿ.. ಹೀಗಾಗಿ ಚೆನ್ನೈನ ಫಸ್ಟ್ ಪ್ರಿಪರೆನ್ಸ್ ಧೋನಿಯನ್ನ ಉಳಿಸಿಕೊಳ್ಳುವುದಾಗಿದೆ. ಹೀಗಾಗಿ ಅನ್​ಕ್ಯಾಪ್ಡ್​ ರೂಲ್​ ಮರು ಜಾರಿಗೆ ಪಟ್ಟು ಹಿಡಿದಿರುವ ಚೆನ್ನೈ ಸೂಪರ್ ಕಿಂಗ್ಸ್, ಶತಾಯ ಗತಾಯ ಧೋನಿಯನ್ನ ಉಳಿಸಿಕೊಳ್ಳಲು ಮುಂದಾಗಿದೆ. ಚೆನ್ನೈ ಫ್ರಾಂಚೈಸಿಯ ಮನವಿಯನ್ನ ಬಿಸಿಸಿಐ ಕೂಡ ಗಂಭೀರವಾಗೇ ಪರಿಗಣಿಸುತ್ತಿದೆ ಎನ್ನಲಾಗ್ತಿದೆ. ಧೋನಿ ಆಟಗಾರನಾಗಿ ಮತ್ತೊಂದು ವರ್ಷ ಆಡೋದ್ರಿಂದ ಫ್ರಾಂಚೈಸಿಗೆ ಮಾತ್ರವಲ್ಲ ಒಟ್ಟಾರೆ ಐಪಿಎಲ್‌ಗೂ ಲಾಭವಾಗುತ್ತೆ.

ಕೋರ್ಟ್​ನಲ್ಲಿದೆ ಧೋನಿ ಐಪಿಎಲ್ ಭವಿಷ್ಯ
​​ಧೋನಿ ಮುಂದಿನ ಐಪಿಎಲ್​​ನಲ್ಲಿ ಆಡ್ತಾರೋ, ಇಲ್ವೋ ಅನ್ನೋದು ಬಿಸಿಸಿಐ ಅಂಗಳದಲ್ಲಿದೆ. ಅತಿ ಶೀಘ್ರದಲ್ಲೇ ಬಿಸಿಸಿಐ ರಿಟೈನ್, ರಿಲೀಸ್ ನಿಯಮವಳಿ ಜಾರಿಗೆ ತರಲಿದೆ. ಮೂಲಗಳ ಪ್ರಕಾರ ಸೆಪ್ಟೆಂಬರ್ ಅಂತ್ಯದ ವೇಳೆಗೆ ಘೋಷಿಸುವ ಲೆಕ್ಕಚಾರದಲ್ಲಿದೆ. ಇದೇ ರೂಲ್ಸ್​ಗಾಗಿಯೇ ಸಿಎಸ್​ಕೆ ಫ್ರಾಂಚೈಸಿ ಕಾಯ್ತಿದೆ. ಹೀಗಾಗಿ ರಿಟೇನ್​ ಹೆಚ್ಚಳ ಹಾಗೂ ಅನ್​ಕ್ಯಾಪ್ಡ್​​ ಪ್ಲೇಯರ್​​ ರೂಲ್ಸ್ ಅನುಗುಣವಾಗಿಯೇ ಧೋನಿ ಭವಿಷ್ಯ ಸುಗಮವಾಗಿದೆ. ಇಲ್ಲ ಧೋನಿ ಅಂತತ್ರಕ್ಕೆ ಸಿಲುಕೋದು ಗ್ಯಾರಂಟಿ. ಆದ್ರೆ, ಧೋನಿ ಬಗ್ಗೆ ಒಲವು ಹೊಂದಿರುವ ಬಿಸಿಸಿಐ, ಅಂತಿಮವಾಗಿ ಯಾವ ನಿರ್ಧಾರ ತೆಗೆದುಕೊಳ್ಳುತ್ತೆ ಅನ್ನೋದು ಕಾದುನೋಡಬೇಕಿದೆ.

ಇದನ್ನೂ ಓದಿ:IND vs BAN ಕ್ರಿಕೆಟ್​ ಸರಣಿ ರದ್ದು? ಕಾರಣ ಕೇಳಿದ್ರೆ ಶಾಕ್ ಆಗ್ತೀರಿ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment