newsfirstkannada.com

×

ಲೋಕಾಯುಕ್ತರಿಂದ ಸಿಎಂ ಸಿದ್ದರಾಮಯ್ಯ ತನಿಖೆ.. ವಿಚಾರಣೆ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ

Share :

Published September 28, 2024 at 7:21am

Update September 28, 2024 at 7:22am

    ಜಮೀನಿನ ಮೂಲ ಮಾಲೀಕರಿಗೆ ನೋಟಿಸ್

    90 ದಿನದೊಳಗೆ ತನಿಖಾ ವರದಿಯನ್ನು ನೀಡಬೇಕು

    FSL ಮೂಲಕ ಸಹಿಗಳ ಬಗ್ಗೆಯೂ ವೆರಿಫೀಕೇಷನ್

ಲೋಕಾಯುಕ್ತ ನಿಧಾನವೇ ಪ್ರಧಾನ ಅಂದ್ಕೊಳ್ತೋ ಏನೋ? ರಾಜ್ಯ ರಾಜಕಾರಣಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ಮುಡಾ ಕೇಸ್​​ನಲ್ಲಿ ಎರಡು ದಿನದ ಬಳಿಕ ಎಫ್​ಐಆರ್​​ ದಾಖಲಿಸಿದೆ. ಲೋಕಾಯುಕ್ತ ಎಸ್‌ಪಿ ಉದೇಶ್ ಅವರು ಖುದ್ದು ಎಫ್‌ಐಆರ್ ಮೇಲ್ವಿಚಾರಣೆ ನಡೆಸಿದ್ದಾರೆ. ನಿರೀಕ್ಷೆಯಂತೆ ಎಫ್​ಐಆರ್​​ನಲ್ಲಿ ಸಿಎಂ ಸಿದ್ದರಾಮಯ್ಯ ಎ-1 ಆರೋಪಿ ಆಗಿದ್ದಾರೆ. ಎಫ್​ಐಆರ್​ ಏನೋ ದಾಖಲಾಯ್ತು. ಮೈಸೂರು ಲೋಕಾಯುಕ್ತ ಪೊಲೀಸರು ಮುಂದೇನು ಮಾಡ್ತಾರೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.

ಜನಪ್ರತಿನಿಧಿಗಳ ಕೋರ್ಟ್​ ಸೂಚನೆಯಂತೆ 90 ದಿನದೊಳಗೆ ವರದಿಯನ್ನು ನೀಡಬೇಕಿದೆ. ಹೀಗಾಗಿ ಮುಡಾ ಅಕ್ರಮದ ತನಿಖೆಗೆ ಮೈಸೂರು ಲೋಕಾ ಎಸ್​ಪಿ ಮುಂದಾಗಿದ್ದಾರೆ.

ತನಿಖೆ ಹೇಗೆ ನಡೆಯಲಿದೆ?

ಮುಡಾ ಕೇಸ್​ಗೆ ಸಂಬಂಧಿಸಿದಂತೆ 1998 ರಿಂದ 2023ರ ವರೆಗಿನ ಸಂಪೂರ್ಣ ಫೈಲ್ ಪಡೆಯಲಿದ್ದಾರೆ. ಆ ಫೈಲ್​​ಗಳನ್ನ ರೆವೆನ್ಯೂ ಎಕ್ಸ್​ಪರ್ಟ್​ಗಳ‌ ಮೂಲಕ ಪರಿಶೀಲನೆ ನಡೆಸಲಿದ್ದು, ಅಗತ್ಯವಿದ್ದರೆ FSL ಮೂಲಕ ಸಹಿಗಳ ಬಗ್ಗೆಯೂ ವೆರಿಫೀಕೇಷನ್ ಮಾಡಿಸಲಿದ್ದಾರೆ. ಇದರ ಜೊತೆಗೆ 1998ರಿಂದ ಈವರೆಗಿನ ಅಧಿಕಾರಿಗಳ ಪಾತ್ರದ ಬಗ್ಗೆ ಲಿಸ್ಟ್​ ಓಪನ್ ಮಾಡಿ, ಅವರ ಹೇಳಿಕೆಯನ್ನ ದಾಖಲಿಸ್ತಾರೆ. ಆನಂತರ ದೂರುದಾರರ ಹೇಳಿಕೆ ದಾಖಲಿಸಿ ಕೇಳಿ ಬಂದಿರುವ ಆರೋಪ ಮತ್ತು ದಾಖಲೆಗಳಿಗೆ ಮ್ಯಾಚ್​ ಮಾಡ್ತಾರೆ. ಇನ್ನು ಜಮೀನಿನ ಮೂಲ ಮಾಲೀಕರಿಗೂ ನೋಟಿಸ್​​​ ನೀಡಿ ಹೇಳಿಕೆ ದಾಖಲಿಸಲಿದ್ದಾರೆ.

ಇದನ್ನೂ ಓದಿ: ಮಹಾಕಾಳೇಶ್ವರ ದೇಗುಲದ ಆವರಣದ ಗೋಡೆ ಕುಸಿತ; 2 ಸಾವು, ನಾಲ್ವರಿಗೆ ಗಾಯ, ಹಲವರು ಸಿಲುಕಿರುವ ಶಂಕೆ

ಆರೋಪಿಗಳ ಪಾತ್ರದ ಮನವರಿಕೆ ಮಾಡ್ಕೊಳ್ಳುವ ಅಧಿಕಾರಿಗಳು, ಕೊನೆಗೆ ಎಲ್ಲಾ ಆರೋಪಿಗಳಿಗೆ ವಿಚಾರಣೆಗಾಗಿ ನೋಟಿಸ್​ ಜಾರಿ ತನಿಖೆ ನಡೆಸಲಿದ್ದಾರೆ. ಈ ವೇಳೆ ತನಿಖೆಯಲ್ಲಿ ಪತ್ತೆಯಾದ ಅಂಶಗಳನ್ನ ಒಳಗೊಂಡ ಅಂತಿಮ ವರದಿಯನ್ನು ಕೋರ್ಟ್​ಗೆ ಸಲ್ಲಿಸಲಿದ್ದಾರೆ.

ಮೈಸೂರಿನಲ್ಲಿ ಎಫ್​​​ಐಆರ್​​​ ಬಳಿಕ ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಸಂಕಷ್ಟ ಶುರುವಾಗಿದೆ. ಲೋಕಾಯುಕ್ತದ ಮೇಲೆ ನಂಬಿಕೆ ಇಲ್ಲ. ಸಿಬಿಐಗೆ ಪ್ರಕರಣ ವರ್ಗಾವಣೆ ಮಾಡುವಂತೆ ದೂರುದಾರ ಸ್ನೇಹಮಯಿ ಕೃಷ್ಣ ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: SSLC ವಿದ್ಯಾರ್ಥಿಗಳೇ ಎಚ್ಚರ.. ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ಯಾ? ಏನಿದು ಹೊಸ ಯಡವಟ್ಟು?

ಸೋಮವಾರ ಇದರ ವಿಚಾರಣೆಯನ್ನು ಹೈಕೋರ್ಟ್​ ಕೈಗೆತ್ತಿಕೊಳ್ಳಲಿದೆ. ಇನ್ನು ವಿಪಕ್ಷ ನಾಯಕ ಆರ್​.ಅಶೋಕ್​ ಕೂಡ, ಸಿಎಂ ತನಿಖೆಗೆ ಆಗ್ರಹಿಸಿದ್ದಾರೆ. ನಮ್ಮ ಮೇಲೆ ಭ್ರಷ್ಟಾಚಾರ ಆರೋಪ ಮಾಡಿದ್ರು, ಇಂದು ಅವರ ಮೇಲೆ ಭ್ರಷ್ಟಾಚಾರ ಆರೋಪ ಬಂದಿದೆ. ನೀವೇ ಅಪರಾಧಿ ಸ್ಥಾನದಲ್ಲಿ ಇದ್ದು ನೀವೇ ತನಿಖೆ ಮಾಡಿಕೊಂಡ್ರೆ ಹೇಗೆ ಎಂದು ಆರ್​.ಅಶೋಕ್​ ಪ್ರಶ್ನಿಸಿದ್ದಾರೆ.

ಇನ್ನು ಮುಡಾ ಕೇಸ್​ನಲ್ಲಿ ಎಫ್​ಐಆರ್​ ಆದ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ರಾಜೀನಾಮೆಗೆ ಪಟ್ಟು ಹಿಡಿದಿರುವ ವಿಪಕ್ಷಗಳಿಗೆ ಟಾಂಗ್​ ನೀಡಿದ್ದಾರೆ. ನನ್ನ ರಾಜೀನಾಮೆಗೆ ಕೇಳೋದಾದ್ರೆ ಮೋದಿಯವರೂ ಮೊದಲು ರಾಜೀನಾಮೆ ಕೊಡಬೇಕಾಗಯತ್ತೆ ಎಂದು ಕಿಡಿಕಾರಿದ್ದಾರೆ.

ಒಟ್ಟಾರೆ. ಸಿದ್ದರಾಮಯ್ಯನವರ 40 ವರ್ಷಗಳ ರಾಜಕೀಯ ಜೀವನದಲ್ಲೇ ಇಂಥ ಪರಿಸ್ಥಿತಿ ಯಾವತ್ತೂ ಬಂದಿರಲಿಲ್ಲ. ಇದೀಗ ಇಡೀ ರಾಜ್ಯದ ಚಿತ್ತ ಲೋಕಾಯುಕ್ತ ತನಿಖೆಯತ್ತ ನೆಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೋಕಾಯುಕ್ತರಿಂದ ಸಿಎಂ ಸಿದ್ದರಾಮಯ್ಯ ತನಿಖೆ.. ವಿಚಾರಣೆ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ

https://newsfirstlive.com/wp-content/uploads/2024/07/SIDDARAMAIAH_NF.jpg

Load More