Advertisment

ಮತ್ತೊಂದು ತಿರುವಿಗೆ ಬಂದು ನಿಂತ ಮುಡಾ ಕೇಸ್​; ಆರ್​ ಅಶೋಕ್ ವಿರುದ್ಧ ದಾಖಲೆ ಬಿಡುಗಡೆ ಮಾಡಿದ ಕಾಂಗ್ರೆಸ್

author-image
Gopal Kulkarni
Updated On
ಮತ್ತೊಂದು ತಿರುವಿಗೆ ಬಂದು ನಿಂತ ಮುಡಾ  ಕೇಸ್​; ಆರ್​ ಅಶೋಕ್ ವಿರುದ್ಧ ದಾಖಲೆ ಬಿಡುಗಡೆ ಮಾಡಿದ ಕಾಂಗ್ರೆಸ್
Advertisment
  • ದಿನಕ್ಕೊಂದು ರಾಜಕೀಯ ತಿರುವು ಪಡೆಯುತ್ತಿರುವ ಮುಡಾ ಪ್ರಕರಣ
  • ಆರ್ ಅಶೋಕ್​ ಬಿಡಿಎಗೆ ಸೈಟ್​ ಹಿಂದಿರುಗಿಸಿದ ದಾಖಲೆ ಬಿಡುಗಡೆ
  • ಅಶೋಕ್ ವಿರುದ್ಧದ ದಾಖಲೆ ಬಿಡುಗಡೆ ಮಾಡಿದ ಕಾಂಗ್ರೆಸ್ ನಾಯಕರು

ಬೆಂಗಳೂರು: ಮುಡಾ ಹಗರಣ ದಿನಕ್ಕೊಂದು ಕಾವು ಪಡೆದುಕೊಳ್ಳುತ್ತಿದೆ. ಆರೋಪ ಪ್ರತ್ಯಾರೋಪಗಳ ಕದನ ರಾಜ್ಯದಲ್ಲಿ ಜೋರಾಗಿಯೇ ನಡೆದಿದೆ. ಸದ್ಯ ಮುಡಾ ಹಗರಣದ ವಿಚಾರವಾಗಿ ಸಿಎಂ ಸಿದ್ದರಾಮಯ್ಯನವರ ಪತ್ನಿ ತಮಗೆ ನೀಡಲಾಗಿದ್ದ 14 ಸೈಟ್​​ಗಳನ್ನು ವಾಪಸ್ ನೀಡಿದ್ದಾರೆ. ಅದರ ವಿರುದ್ಧವೂ ಕೂಡ ಪ್ರತಿಪಕ್ಷಗಳು ಕೆಂಡ ಕಾರುತ್ತಿವೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಹಿರಿಯ ಸಚಿವರಿಂದ ಜಂಟಿ ಮಾಧ್ಯಮಗೋಷ್ಠಿ ನಡೆಸಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ವಿರುದ್ಧ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.

Advertisment

ಸಿಎಂ ಸಿದ್ದರಾಮಯ್ಯನವರ ಪತ್ನಿ ಪಾರ್ವತಿಯವರು ಸೈಟ್ ವಾಪಸ್ ಮಾಡಿದ ವಿಷಯವನ್ನು ಬಿಜೆಪಿ ನಾಯಕರು ಬೇರೆ ಅರ್ಥದಲ್ಲಿ ಮಾತನಾಡುತ್ತಿದ್ದಾರೆ. ನಿವೇಶನ ವಾಪಸ್ ಮಾಡಿರುವುದು ತಪ್ಪು ಎನ್ನಲಾಗುತ್ತಿದೆ. ಆದರೆ ಲೊಟ್ಟೆ ಗೊಲ್ಲಹಳ್ಳಿಯಲ್ಲಿ ನೂರಾರು ಕೋಟಿ ರೂಪಾಯಿ ಮೌಲ್ಯದ ಜಮೀನು ಹಗರಣ ನಡೆದಿದ್ದು ಅದನ್ನು ದಾಖಲೆ ಸಮೇತ ಹೇಳುತ್ತೇವೆ ಎಂದು ಸಚಿವ ಜಿ ಪರಮೇಶ್ವರ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ಇದನ್ನೂ ಓದಿ:Breaking: ಕಿತ್ತೂರು ಉತ್ಸವ ಜ್ಯೋತಿಗೆ ಚಾಲನೆ ನೀಡುವಾಗ ಅವಘಡ; ಸಿಎಂ ಬಟ್ಟೆಗೆ ತಾಕಿದ ದೀಪದ ಕಿಡಿ

ಲೊಟ್ಟೆಗೊಲ್ಲಹಳ್ಳಿಯ ಸರ್ವೆ 10/11 ಎಫ್​1 ಎಫ್​2 ನಲ್ಲಿರುವ ಜಮೀನಿನಲ್ಲಿ ಹಗರಣ ನಡೆದಿದೆ. 24-2-2023ರಲ್ಲಿ ಈ ಜಮೀನನ್ನು ಡಿನೋಟಿಫಿಕೇಶನ್ ಮಾಡಿದ್ದಾರೆ ಆಗ ಪ್ರಾಥಮಿಕ ಅಧಿಸೂಚನೆ 1972ರಲ್ಲಿ ಆಗುತ್ತದೆ 31-08-78ರಲ್ಲಿ ಫೈನಲ್ ನೋಟಿಫಿಕೇಶನ್ ಆಗುತ್ತೆ. ಈ ಜಮೀನು 2023ರಲ್ಲಿ ಬಿಡಿಎ ನೋಟಿಫಿಕೇಶನ್ ಆಗುತ್ತೆ. ರಾಮಸ್ವಾಮಿ ಎಂಬುವವರು ಇದರ ಮಾಲೀಕರು 2003 ರಿಂದ 2007ರವರೆಗೆ ಯಾವುದೇ ವ್ಯವಹಾರ ಆಗೋದಿಲ್ಲ. 2003 ಮತ್ತು 2007ರಲ್ಲಿ ಎರಡು ನೊಂದಣಿ ಮಾಡಿಸುತ್ತಾರೆ. ಪ್ರತಿಪಕ್ಷ ನಾಯಕ ಆರ್ ಅಶೋಕ್ ಶುದ್ಧ ಕ್ರಯಪತ್ರ ಮಾಡಿಸ್ತಾರೆ. ಆಗ ರಾಮಸ್ವಾಮಿ ಮಾಲೀಕರಾಗಿರೋದಿಲ್ಲ. ಆಗ ಬಿಡಿಎ ಸ್ವಾಧೀನ ಮಾಡಿಕೊಂಡಿರುತ್ತೆ. 38.02 ಎಕರೆ ಜಮೀನು ಕ್ರಯ ಮಾಡಿಕೊಳ್ತಾರೆ. 16-10-2009ರಲ್ಲಿ ಈ ಜಮೀನಿಗೆ ಆರ್ ಅಶೋಕ್ ಮಾಲೀಕರಾಗುತ್ತಾರೆ. ಬಳಿಕ 16-10+2009ಕ್ಕೆ ಸರ್ಕಾರಕ್ಕೆ ರಾಮಸ್ವಾಮಿಯವರಿಂದ ಅರ್ಜಿ ಕೊಡಿಸುತ್ತಾರೆ.

Advertisment

ಇದನ್ನೂ ಓದಿ:ಸಿಎಂ ಸೈಟ್​​ ವಾಪಸ್​ ಕೊಟ್ಟಿದ್ದಾರೆ ಅಂದ್ರೆ ತಪ್ಪಾಗಿದೆ ಅಂತಾನೆ ಅರ್ಥ; ಯದುವೀರ್ ಒಡೆಯರ್

ಅಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ ಕೂಡಲೇ ಕಡತ ಮಂಡಿಸಿ ಅಂತ ಸೂಚನೆ ನೀಡಿದ ಬಳಿಕ ಕಡತ ಮಂಡನೆಯಾಗುತ್ತದೆ. ಆದ್ರೆ ಎರಡೇ ತಿಂಗಳಲ್ಲಿ ಡಿನೋಟಿಫಿಕೇಶನ್ ಕೈ ಬಿಡುತ್ತಾರೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ವಿರುದ್ಧ ಗೃಹ ಸಚಿವ ಜಿ ಪರಮೇಶ್ವರ್ ಗಂಭೀರ ಆರೋಪ ಮಾಡಿದ್ದಾರೆ. ಬಿಡಿಎ ಡಿನೋಟಿಫಿಕೇಶನ್ ಮಾಡಿದ ಭೂಮಿಗೆ ವಿಂಗ್​ ಕಮಾಂಡರ್ ಅತ್ರಿ ಹೈಕೋರ್ಟ್​ಗೆ ಅರ್ಜಿ ಹಾಕುತ್ತಾರೆ. ಅಷ್ಟರೊಳಗೆ ಅಶೋಕ್​ ಭೂಮಿಯನ್ನು ವಾಪಸ್ ಮಾಡುವ ತೀರ್ಮಾನಕ್ಕೆ ಬರುತ್ತಾರೆ. ಕಳೆದ2012ರಲ್ಲಿ ರಿಜಿಸ್ಟರ್ ಗಿಫ್ಟ್ ಮೂಲಕ ರಿಟರ್ನ್ ಗಿಫ್ಟ್ ಮಾಡುತ್ತಾರೆ. ಗಿಫ್ಟ್ ಕೊಡೊಕೆ ಮಾಲೀಕರು ಯಾರೂ ಇಲ್ಲ. ಆದ್ರೆ ಬಿಡಿಎನವರಿಗೆ ಗಿಫ್ಟ್ ಕೊಡ್ತಾರೆ ಅಂದ್ರೆ ಹೇಗೆ? ಎಂದು ಪರಮೇಶ್ವರ್ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:ಮುಡಾ ಕೇಸ್​​ಗೆ ಟ್ವಿಸ್ಟ್; CM ವಿರುದ್ಧ ದೂರು ನೀಡಿದ್ದ ಸ್ನೇಹಮಯಿ ಕೃಷ್ಣಗೆ ಸಂಕಷ್ಟ..!

Advertisment

ಹೈಕೋರ್ಟ್​​ಗೆ ಹೋದ ಈ ಕೇಸ್​ನಲ್ಲಿ ಜಸ್ಟೀಸ್ ದಿನೇಶ್​ ಮಹೇಶ್ ಅರವಿಂದ ಅವರ ಪೀಠ ಕ್ರಿಮಿನಲ್ ಕೇಸ್ ಹಾಕಬೇಕಿಲ್ಲ ಅಂತಾ ಹೇಳ್ತಾರೆ. ಬಿಡಿಎಗೆ ಭೂಮಿ ವಾಪಸ್ ಕೊಟ್ಟಾಗಿದೆ. ಸೆಟ್ಲ್ ಆದ ಮೇಲೆ ಯಾವುದೇ ಕೇಸ್ ಬೇಕಿಲ್ಲ ಎಂದು ದ್ವಿಸದಸ್ಯ ಪೀಠ ಆದೇಶ ಮಾಡಿದೆ. ಇಂತಹ ಒಂದು ತೀರ್ಪು ಸಿದ್ದರಾಮಯ್ಯನವರಿಗೂ ಅನ್ವಯವಾಗುವುದಿಲ್ಲವೇ? ಎಂದು ಪ್ರಶ್ನಿಸಿದರುವ ಪರಮೇಶ್ವರ್, ಜಮೀನು ನಿಮ್ಮದು ಅಲ್ಲವೇ ಅಲ್ಲ ಆದರೂ ರಿಜಿಸ್ಟರ್ ಮಾಡಿಸಿಕೊಂಡಿದ್ದೀರಾ ಕೊನೆಗೆ ಮಾಲೀಕರು ಯಾರು ಅನ್ನೋದು ಇಲ್ಲ. ಇದನ್ನು ನಾವು ಯಾವ ಭಾಷೆಯಲ್ಲಿ ಹೇಳಬೇಕು ಎಂದು ಪ್ರಶ್ನಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment