ಸಿಎಂ ಪತ್ನಿ ಪತ್ರ ಬೆನ್ನಲ್ಲೇ 14 ಸೈಟ್ಗಳ ಖಾತೆ ರದ್ದು
ಸ್ನೇಹಮಯಿ ಕೃಷ್ಣ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್
ಸ್ನೇಹಮಯಿಗೆ ಕೃಷ್ಣಗೆ ಮುಳುವಾದ ಪ್ರಕರಣ ಯಾವುದು..?
ಮುಡಾ ಹಗರಣ ಸಿಎಂ ಸಿದ್ದರಾಮಯ್ಯ ಪಾಲಿಗೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ. ಶುದ್ಧ ಹಸ್ತದ ನಾಯಕ ಎನಿಸಿಕೊಂಡಿದ್ದ ಸಿಎಂ ಅಂಗಿಗೆ ಮಸಿ ಬಳಿದಿದೆ. ಈ ಮಸಿಯನ್ನು ಅಳಿಸಲು ಖುದ್ದು ಅವರ ಪತ್ನಿಯೇ ಅಖಾಡ್ಕಿಳಿದಿದ್ದಾರೆ. ಇತ್ತ ಸಿಎಂ ವಿರುದ್ಧ ದೂರು ನೀಡಿದ್ದ ಸ್ನೇಹಮಯಿಗೆ ಕೃಷ್ಣಗೆ ಸಂಕಷ್ಟ ಶುರುವಾಗಿದೆ.
ಮುಡಾ ಹಗರಣ ಸದ್ಯ ಸಿಎಂ ಸಿದ್ದರಾಮಯ್ಯ ಪಾಲಿಗೆ ಬರೀ ಮುಳ್ಳಲ್ಲ ಜಾಲಿ ಮುಳ್ಳಾಗಿದೆ. ನಂಜಾಗಿ ತೀವ್ರ ನೋವುಂಟು ಮಾಡುತ್ತಿದೆ. ತನ್ನ ಹೆಸ್ರಲ್ಲಿರೋ 14 ಮುಡಾ ಸೈಟ್ಗಳ ವಿಚಾರವಾಗಿ ಪತಿ ವಿರುದ್ಧ ಕೇಳಿ ಬರ್ತಿದ್ದ ಅಕ್ರಮ ಆರೋಪದ ವಿರುದ್ಧ ಸಿಎಂ ಪತ್ನಿ ಸಿಡಿದೆದ್ದಿದ್ದಾರೆ. ಖುದ್ದು ಪಾರ್ವತಿಯವರೇ ಮುಡಾ ಆಯುಕ್ತರಿಗೆ 14 ಸೈಟ್ಗಳನ್ನ ವಾಪಸ್ ನೀಡೋದಾಗಿ ಪತ್ರ ಬರೆದಿದ್ದಾರೆ. ಮಾತ್ರವಲ್ಲದೇ ಸೈಟ್‌ಗಳನ್ನು ವಾಪಸ್ ಮಾಡಿದ್ದಾರೆ.
ಇದನ್ನೂ ಓದಿ:ಹಿರಿಯರ ಮಾತು ಕೇಳಿ; ಆರೋಗ್ಯದ ಬಗ್ಗೆ ಎಚ್ಚರ; ಆಸ್ತಿ ವಿವಾದಗಳಿಂದ ದೂರಯಿರಿ; ಇಲ್ಲಿದೆ ನಿಮ್ಮ ಭವಿಷ್ಯ!

ಸಿಎಂ ಪತ್ನಿ ಮುಡಾ ಸೈಟ್‌ಗಳನ್ನು ವಾಪಸ್ ನೀಡುವ ಬಗ್ಗೆ ಪತ್ರ ಬರೆದ ಬೆನ್ನಲ್ಲೇ 14 ಸೈಟ್ಗಳ ಖಾತೆ ರದ್ದಾಗಿದೆ. ಪತ್ರ ಬರೆದ 24 ಗಂಟೆಗಳ ಒಳಗಾಗಿ ಸೈಟ್ಗಳು ವಾಪಸ್ ಆಗಿವೆ. ಮೈಸೂರು ನೋಂದಣಿ ಕಚೇರಿಯಲ್ಲಿ ಸೈಟ್ಗಳು ರದ್ದಾಗಿದ್ದು ಸೈಟ್ ರದ್ದು ಪತ್ರಕ್ಕೆ ಸಿಎಂ ಪತ್ನಿ ಪಾರ್ವತಿ ಸಹಿ ಮಾಡಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ್ದ ಸ್ನೇಹಮಯಿ ಕೃಷ್ಣಗೆ ಸಂಕಷ್ಟ ಶುರುವಾಗಿದೆ. 2015ರ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ವಿರುದ್ಧ ಮೈಸೂರಿನ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿದೆ. ನಿನ್ನೆ ನಡೆದ ವಿಚಾರಣೆಗೆ ಗೈರಾದ ಹಿನ್ನೆಲೆ ಜಾಮೀನು ರಹಿತ ಬಂಧನಕ್ಕೆ ಆದೇಶ ನೀಡಲಾಗಿದೆ.
ವಿಚಾರಣೆಗೆ ಹಾಜರಾಗುವಂತೆ ಸ್ನೇಹಮಯಿ ಕೃಷ್ಣಗೆ ಸಮನ್ಸ್
ಅತ್ತ ವಾರೆಂಟ್ ಬೆನ್ನಲ್ಲೇ ಇತ್ತ ಮತ್ತೊಂದು ಶಾಕ್ ಸ್ನೇಹಯಿಗೆ ಸಿಕ್ಕಿದೆ. ನಾಳೆ ವಿಚಾರಣೆಗೆ ಖುದ್ದು ಹಾಜರಾಗಬೇಕೆಂದು ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ. ಮುಡಾ ಹಗರಣ ಕುರಿತು ಇ.ಡಿಗೆ ದೂರು ಸಲ್ಲಿಸಿದ ಹಿನ್ನೆಲೆ ವಿಚಾರಣೆಗೆ ಬರುವಂತೆ ಇ.ಡಿ ಸಮನ್ಸ್ ನೀಡಿದೆ.
ಇದನ್ನೂ ಓದಿ:ಸೈಟ್ ವಾಪಸ್ ಮಾಡಿದ್ರೂ ಸಿಎಂ ಸಿದ್ದರಾಮಯ್ಯಗೆ ತಪ್ಪದ ಸಂಕಷ್ಟ; ಮುಂದೇನು?
ಮುಡಾ ಸಂಕಷ್ಟದಲ್ಲಿರುವ ಸಿಎಂ ಇನ್ನೂ ಮೂರು ದಿನಗಳ ಕಾಲ ತವರು ಮೈಸೂರಲ್ಲೇ ಉಳಿಯಲಿದ್ದಾರೆ. ದಸರಾ ಉದ್ಘಾಟನೆ ಹಿನ್ನಲೆ ಮೈಸೂರಿನಲ್ಲೇ ಇರಲಿದ್ದಾರೆ. ಒಟ್ಟಾರೆ ಸಿಎಂ ಸಿದ್ದರಾಮಯ್ಯಗೆ ಚುಚ್ಚಿದ ಮುಡಾ ಮುಳ್ಳು ಭಾರೀ ಗಾಯವನ್ನು ಮಾಡಿದ್ದಲ್ಲದೆ ನಂಜಾಗುವಂತೆ ಮಾಡಿದೆ. ಈ ನೋವಿಗೆ ಸಿಎಂ ಪತ್ನಿಯೇ ಮದ್ದರೆದಿದ್ದಾರೆ. 14 ಸೈಟ್‌ಗಳನ್ನು ವಾಪಸ್ ಮಾಡಿದ್ದಾರೆ. ದೂರು ನೀಡಿದ್ದ ಸ್ನೇಹಮಯಿ ಕೃಷ್ಣ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇದನ್ನೂ ಓದಿ:ಮನನೊಂದು ಸೈಟ್ ವಾಪಸ್ ಕೊಟ್ಟಿದ್ದು; ನನ್ನ ಹೆಂಡತಿ ಮಾಡಿದ್ದು ತಪ್ಪಲ್ಲ.. ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ