newsfirstkannada.com

ಮುಡಾ ಮಾಜಿ ಆಯುಕ್ತನಿಗೆ ಸರ್ಕಾರದಿಂದ ಬಿಗ್ ಗಿಫ್ಟ್: ಹಲವು ಅನುಮಾನ ಮೂಡಿಸಿದ ನೇಮಕ

Share :

Published August 30, 2024 at 10:47am

Update August 30, 2024 at 11:01am

    ಮುಡಾದ ಮಾಜಿ ಆಯುಕ್ತ ದಿನೇಶ್​ಕುಮಾರ್​ಗೆ ಸರ್ಕಾರದ ಬಿಗ್​ ಗಿಫ್ಟ್

    ಹಾವೇರಿ ವಿವಿಯ ಕುಲಸಚಿವನಾಗಿ ಮುಡಾ ಮಾಜಿ ಆಯುಕ್ತ ನೇಮಕ

    ಜಿ.ಟಿ ದಿನೇಶ್ ಕುಮಾರ್ ವರ್ಗಾವಣೆ ಮೂಡಿಸುತ್ತಿದೆ ಸಾಕಷ್ಟು ಅನುಮಾನ

ಮೈಸೂರು: ಮಾಜಿ ಮುಡಾ ಆಯುಕ್ತನಿಗೆ ರಾಜ್ಯ ಸರ್ಕಾರದಿಂದ ದೊಡ್ಡ ಉಡುಗೊರೆ ಸಿಕ್ಕಿದೆ. ಹಾವೇರಿಯ ವಿಶ್ವವಿದ್ಯಾಲಯದ ಕುಲಸಚಿವನಾಗಿ ಜಿ.ಟಿ.ದಿನೇಶ್​ಕುಮಾರ್​ರನ್ನ ನೇಮಕ ಮಾಡುವ ಮೂಲಕ ರಾಜ್ಯ ಸರ್ಕಾರ ಮತ್ತಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಇದನ್ನೂ ಓದಿ: Gold Rate: ನಿನ್ನೆಗಿಂತ ಇಂದು ಇಳಿಕೆ ಕಂಡ ಚಿನ್ನ.. ಸ್ವರ್ಣ ಇಂದು ಖರೀದಿಸಿದರೆ ಉತ್ತಮವೇ?

ಮುಡಾ ವಿಚಾರದಲ್ಲಿ ಈಗಾಗಲೇ ರಾಜ್ಯ ಸರ್ಕಾರ ಅನೇಕ ಮುಜುಗರವನ್ನು ಅನುಭವಿಸುತ್ತಿದೆ. ಸಿಎಂ ಸಿದ್ದರಾಮಯ್ಯನವರ ಕುರ್ಚಿಗೆ ಕಂಟಕ ತಂದೊಡ್ಡುವಂತಹ ಬೆಳವಣಿಗೆಗಳು ನಡೆದಿವೆ. ಇಂತಹ ವೇಳೆಯೇ ಜಿ.ಟಿ.ದಿನೇಶ್​ ಕುಮಾರ್ ಅವರ ಈ ನೇಮಕ ಮತ್ತಷ್ಟು ಚರ್ಚೆಗೆ ವೇದಿಕೆ ಮಾಡಿಕೊಟ್ಟಿದೆ. 50:50 ಅನುಪಾತದಡಿ ಮುಡಾದಲ್ಲಿ ನಡೆದಿದೆ ಎನ್ನಲಾದ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಕೆಎಎಸ್ ಅಧಿಕಾರಿ ಜಿ.ಟಿ.ದಿನೇಶ್​ ಕುಮಾರ್ ಮೇಲೆ ಗಂಭೀರ ಆರೋಪ ಕೇಳಿಬಂದಿತ್ತು.

ಇದನ್ನೂ ಓದಿ: ಮುದ್ದಾದ ಹೆಂಡತಿ ಮುಗಿಸಲು ಮನೆಯೊಳಗೆ ಅಡಗಿ ಕೂತಿದ್ದ.. ಕೊರಿಯೋಗ್ರಾಫರ್ ಸಾವಿಗೆ ಅಸಲಿ ಕಾರಣ ಬಯಲು

ಆರೋಪ ಕೇಳಿ ಬಂದ ತಕ್ಷಣ ಮೈಸೂರಿಗೆ ಆಗಮಿಸಿದ್ದ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಸಭೆ ನಡೆಸಿ ಮುಡಾ ಆಯುಕ್ತರಾಗಿದ್ದ ಜಿ.ಟಿ.ದಿನೇಶ್ ಕುಮಾರ್​​ರನ್ನ ವರ್ಗಾವಣೆ ಮಾಡಲಾಗಿತ್ತು. ಯಾವುದೇ ಸ್ಥಳ ತೋರಿಸಿದೇ ವರ್ಗಾವಣೆ ಆಗಿದ್ದ ದಿನೇಶ್​ಕುಮಾರ್ ಈಗ ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವರಾಗಿ ನೇಮಕಗೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುಡಾ ಮಾಜಿ ಆಯುಕ್ತನಿಗೆ ಸರ್ಕಾರದಿಂದ ಬಿಗ್ ಗಿಫ್ಟ್: ಹಲವು ಅನುಮಾನ ಮೂಡಿಸಿದ ನೇಮಕ

https://newsfirstlive.com/wp-content/uploads/2024/08/SIDDARAMAIAH-3-2.jpg

Load More