ಮುನಿರತ್ನ ಅರೆಸ್ಟ್ ಬೆನ್ನಲ್ಲೇ ಕೈ ಹೈಕಮಾಂಡ್​ ಅಲರ್ಟ್​; ಸಿದ್ದರಾಮಯ್ಯಗೆ ಖಡಕ್ 6 ಸೂಚನೆ

author-image
Ganesh
Updated On
ಜೀವಬೆದರಿಕೆ, ಜಾತಿನಿಂದನೆ? 36 ಲಕ್ಷ ಹಣಕ್ಕೆ ಬೇಡಿಕೆ? ಮುನಿರತ್ನಗೆ ಮುಕ್ತಿ ಸಿಗೋದು ಕಷ್ಟವೇ?
Advertisment
  • ಸಿದ್ದರಾಮಯ್ಯಗೆ ಕಾಂಗ್ರೆಸ್ ಹೈಕಮಾಂಡ್ ಕೊಟ್ಟ ಸೂಚನೆ ಏನು?
  • ಎರಡೂ ಕೇಸ್​ಗಳ ಬಗ್ಗೆ ಮಾಹಿತಿ ಪಡೆಯಲು ಮುಂದಾದ ‘ಹೈ’!
  • ರಾಜ್ಯ ನಾಯಕರಿಂದ ಪ್ರಕರಣದ ಸಂಪೂರ್ಣ ಮಾಹಿತಿ ಸಂಗ್ರಹ

ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ಬಂಧನದ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ಫುಲ್ ಅಲರ್ಟ್ ಆಗಿದೆ. ಮುನಿರತ್ನ ವಿರುದ್ಧ ದಾಖಲಾಗಿರುವ ಕೇಸ್​ಗಳ ಬಗ್ಗೆ ಮಾಹಿತಿ ಪಡೆಯಲು ಮುಂದಾಗಿದೆ. ರಾಜ್ಯ ನಾಯಕರಿಂದ ಪ್ರಕರಣದ ಸಂಪೂರ್ಣ ಮಾಹಿತಿ ಸಂಗ್ರಹ ಪಡೆಯಲು ನಿರ್ಧರಿಸಿದೆ.

ಮಾಹಿತಿಯ ಜೊತೆಗೆ ಪ್ರಕರಣವನ್ನ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವಂತೆ ರಾಜ್ಯ ನಾಯಕರಿಗೆ ಸೂಚನೆ ನೀಡಿದೆ. ಮುನಿರತ್ನ ವಿರುದ್ಧ ಹೋರಾಡುವ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಹಿಂದೇಟು ಹಾಕಬಾರದು ಎಂದು ನಾಯಕ ರಣ್​ದೀಪ್ ಸಿಂಗ್ ಸರ್ಜೇವಾಲ ಸಿದ್ದರಾಮಯ್ಯಗೆ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:‘1990ರಲ್ಲೂ ಕಾಂಗ್ರೆಸ್ ಸಿಎಂ ಕುರ್ಚಿ ಕಳ್ಕೊಂಡ್ರು’- ಸಿದ್ದರಾಮಯ್ಯಗೆ ಎಚ್ಚರಿಕೆ ಕೊಟ್ಟ ಕುಮಾರಸ್ವಾಮಿ; ಹೇಳಿದ್ದೇನು?

‘ಹೈ’ ಸೂಚನೆ!

ಸೂಚನೆ 01: ಯಾವುದೇ ಕಾರಣಕ್ಕೂ ಮುನಿರತ್ನ ಪ್ರಕರಣದಲ್ಲಿ ಹಿಂದೇಟು ಹಾಕಬೇಡಿ
ಸೂಚನೆ 02: ದಲಿತರು, ಒಕ್ಕಲಿಗ ಸಮುದಾಯಕ್ಕೆ ನ್ಯಾಯ ಕೊಡಿಸುವ ಬಗ್ಗೆ ಗಮನ ಹರಿಸಿ
ಸೂಚನೆ 03: ಪ್ರಕರಣವನ್ನ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಬಗ್ಗೆ ಮುತುವರ್ಜಿ ವಹಿಸಿ
ಸೂಚನೆ 04: ರಾಜ್ಯದ 2 ದೊಡ್ಡ ಸಮುದಾಯಗಳಿಗೆ ಬಿಜೆಪಿ ನಾಯಕರ ಬಗ್ಗೆ ಗೊತ್ತಾಗಲಿ
ಸೂಚನೆ 05: ಜನರಿಗೆ ಈ ಕೇಸ್ ಕುರಿತಂತೆ ಮೈತ್ರಿ ನಾಯಕರ ಪ್ರತಿಕ್ರಿಯೆ ಏನು ಎಂದು ತಿಳಿಸಿ
ಸೂಚನೆ 06: ರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತಾಪಿಸುವ ಈ ಬಗ್ಗೆ ನಾವೂ ಸಹ ಗಮನ ಹರಿಸ್ತೇವೆ

ಇದನ್ನೂ ಓದಿ:ಬಾಂಗ್ಲಾ ಬೇಟೆಗೆ ಚಕ್ರವ್ಯೂಹ; 5 ವರ್ಷದ ಹಿಂದಿನ ತಂತ್ರ ಪ್ರಯೋಗಿಸಲು ಪ್ಲಾನ್.. ಏನದು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment