newsfirstkannada.com

Duleep Trophy: ಗಿಲ್​ ಪಡೆಗೆ ಬಿಗ್​ ಶಾಕ್.. ಭರ್ಜರಿ ಶತಕ ಸಿಡಿಸಿದ ಯಂಗ್ ಪ್ಲೇಯರ್; ಈತ ಯಾವ ಆಟಗಾರನ ತಮ್ಮ?

Share :

Published September 5, 2024 at 11:51pm

Update September 5, 2024 at 11:52pm

    ಮೈದಾನದ ದಿಕ್ಕು ದಿಕ್ಕಿಗೂ ಬಾಲ್ ಕಳಿಸಿದ ಯಂಗ್ ಪ್ಲೇಯರ್

    ಔಟ್ ಮಾಡಲಾಗದೇ ಬಸವಳಿದ ಶುಭ್​ಮನ್ ಗಿಲ್ ಟೀಮ್!

    ಟ್ರೋಫಿಯ ಮೊದಲ ಪಂದ್ಯದಲ್ಲೇ ಅಮೋಘವಾದ ಸೆಂಚುರಿ

ಟೀಮ್​ ಇಂಡಿಯಾದ ಕ್ರಿಕೆಟ್​​ನಲ್ಲಿ ಸಹೋದರರು ಕಾಣುವುದು ತೀರ ವಿರಳ. ಈ ಹಿಂದೆ ಇರ್ಫಾನ್ ಪಠಾಣ್ ಹಾಗೂ ಯೂಸುಫ್ ಪಠಾಣ್ ಭರ್ಜರಿಯಾಗಿ ಬ್ಯಾಟಿಂಗ್, ಬೌಲಿಂಗ್ ಮಾಡಿ ಭಾರತವನ್ನು ಗೆಲ್ಲಿಸಿದ್ದರು. ಸದ್ಯ ಇದೀಗ ದುಲೀಪ್ ಟ್ರೋಫಿಯಲ್ಲಿ ಸರ್ಫರಾಜ್ ಖಾನ್ ಅವರ ತಮ್ಮ ಮುಶೀರ್​ ಖಾನ್ ಭಾರತದ ಬಿ ತಂಡದಲ್ಲಿ ಭರ್ಜರಿ ಸೆಂಚುರಿ ಸಿಡಿಸಿ ದಾಖಲೆ ಬರೆದಿದ್ದಾರೆ.

ಇದನ್ನೂ ಓದಿ: ರೋಹಿತ್ ಲೇಜಿಯಾಗಿ, ಕ್ಯಾಸುವೆಲ್ ಆಗಿ ಕಾಣುತ್ತಾರೆ.. ಆದ್ರೆ ಸತ್ಯವಾಗಲೂ..; ಅಂಪೈರ್ ಬಿಗ್​ ಸ್ಟೇಟ್​ಮೆಂಟ್!

ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂಲ್ಲಿ ನಡೆದ ದುಲೀಪ್ ಟ್ರೋಫಿಯ ಪಂದ್ಯದಲ್ಲಿ ಟಾಸ್​ ಗೆದ್ದುಕೊಂಡ ಭಾರತದ ಎ ತಂಡದ ನಾಯಕ ಶುಭ್​ಮನ್​ ಗಿಲ್​ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಭಾರತ ಬಿ ಟೀಮ್​​ನ ಕ್ಯಾಪ್ಟನ್​ ಅಭಿಮನ್ಯೂ ಈಶ್ವರನ್ ಪಡೆ ಬ್ಯಾಟಿಂಗ್ ಮಾಡಲು ಕ್ರೀಸ್​ಗೆ ಆಗಮಿಸಿತು. ಓಪನರ್ ಆಗಿ ಕ್ರೀಸ್​ಗೆ ಬಂದ ಯಶಸ್ವಿ ಜೈಸ್ವಾಲ್, ಅಭಿಮನ್ಯೂ ಈಶ್ವರನ್ ಆರಂಭಿಕ ಆಘಾತಕ್ಕೆ ಒಳಗಾದರು. 53 ರನ್​ಗೆ 2 ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿ ಇತ್ತು. ಬಳಿಕ ಕ್ರೀಸ್​ಗೆ ಆಗಮಿಸಿದ ಮುಶೀರ್​ ಖಾನ್ ಕ್ರೀಸ್​ ಕಚ್ಚಿ ನಿಂತು ತಂಡಕ್ಕೆ ಆಸರೆಯಾಗಿ ಭರ್ಜರಿ ಬ್ಯಾಟಿಂಗ್ ಮಾಡಿದರು.

ಭಾರತ-ಎ ತಂಡದ ಬೌಲರ್​ಗಳನ್ನ ಮುಶೀರ್​ ಖಾನ್​ ಮನ ಬಂದಂತೆ ಚಚ್ಚಿದರು. ಮೈದಾನದ ಎಲ್ಲ ದಿಕ್ಕುಗಳಿಗೂ ಬಾಲ್​​ಗಳನ್ನು ಬಾರಿಸಿದರು. ನಿಧಾನವಾಗಿ ಬ್ಯಾಟಿಂಗ್ ಮಾಡಿದರೂ ಅಮೋಘವಾದ ಶತಕ ಸಿಡಿಸಿ ಸಂಭ್ರಮಿಸಿದರು. ಒಟ್ಟು 227 ಎಸೆತಗಳನ್ನು ಎದುರಿಸಿದ ಮುಶೀರ್ ಖಾನ್ 10 ಬೌಂಡರಿ, 2 ಸಿಕ್ಸರ್ ಸಮೇತ 105 ರನ್​ಗಳನ್ನು ಬಾರಿಸಿ ಬ್ಯಾಟಿಂಗ್​ ಅನ್ನು ಕಾಯ್ದುಕೊಂಡಿದ್ದಾರೆ. ಮುಶೀರ್ ವಿಕೆಟ್​ ಪಡೆಯಲು ಗಿಲ್​ ಪಡೆ ಶತಪ್ರಯತ್ನ ಮಾಡಿದರು ಯಾವುದೇ ಪ್ರಯೋಜನಾ ಆಗಲಿಲ್ಲ. ಸದ್ಯ ಭಾರತ-ಬಿ ಟೀಮ್​ 79 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 202 ರನ್​ಗಳನ್ನು ಗಳಿಸಿದ್ದು ಇನ್ನು ಆಟ ಮುಂದುವರೆಯಲಿದೆ.

ಇದನ್ನೂ ಓದಿ: ಬಿಗ್‌ಬಾಸ್ ಸೀಸನ್‌ 11ಕ್ಕೆ ಕಿಚ್ಚ ಸುದೀಪ್‌ ಆ್ಯಂಕರಿಂಗ್ ಮಾಡ್ತಾರೋ, ಇಲ್ವೋ? ಇಲ್ಲಿದೆ ಪಕ್ಕಾ ಮಾಹಿತಿ!

ಇನ್ನು ಸರ್ಫರಾಜ್ ಖಾನ್ ಅವರ ಸಹೋದರನೇ ಈ ಮುಶೀರ್ ಖಾನ್. ಇಬ್ಬರು ಸಹೋದರರು ಆಗಿದ್ದು ದುಲೀಪ್​ ಟ್ರೋಫಿಯಲ್ಲಿ ಒಂದೇ ಟೀಮ್​ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಕ್ರೀಸ್​ನಲ್ಲಿ ಇಬ್ಬರು ಆಡುವಾಗ ಅಣ್ಣನಾದ ಸರ್ಫರಾಜ್ ಖಾನ್ ಕೇವಲ 5 ರನ್​ಗೆ ಔಟ್ ಆಗಿ ನಿರಾಸೆಯಿಂದ ಪೆವಿಲಿಯನ್​ಗೆ ನಡೆದರು. ಬಳಿಕ ಬ್ಯಾಟಿಂಗ್ ಮುಂದುವರೆಸಿದ ಮುಶೀರ್ ಶತಕ ಸಿಡಿಸಿಯೇ ಬಿಟ್ಟರು. ಅತ್ತ ಪೆವಿಲಿಯನ್​ ಅಲ್ಲಿ ಕುಳಿತ್ತಿದ್ದ ಸರ್ಫರಾಜ್​ ಚಪ್ಪಳೆ ತಟ್ಟಿ ಸಹೋದರನಿಗೆ ಪ್ರೋತ್ಸಾಹಿಸಿದರು. ಅಲ್ಲದೇ ಸರ್ಫರಾಜ್​ ಖಾನ್​ ಮುಶೀರ್​ಗಿಂತ 8 ವರ್ಷ ಹಿರಿಯನು ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Duleep Trophy: ಗಿಲ್​ ಪಡೆಗೆ ಬಿಗ್​ ಶಾಕ್.. ಭರ್ಜರಿ ಶತಕ ಸಿಡಿಸಿದ ಯಂಗ್ ಪ್ಲೇಯರ್; ಈತ ಯಾವ ಆಟಗಾರನ ತಮ್ಮ?

https://newsfirstlive.com/wp-content/uploads/2024/09/MUSHIR_KHAN_NEW.jpg

Load More