/newsfirstlive-kannada/media/post_attachments/wp-content/uploads/2024/09/Kiran-Mandya.jpg)
ಮಂಡ್ಯ: ನಾಗಮಂಗಲ ಕೋಮು ಗಲಭೆ ಪ್ರಕರಣದಲ್ಲಿ ಬಂಧನದ ಭೀತಿಯಿಂದ ಗ್ರಾಮ ತೊರೆದಿದ್ದ ಯುವಕ ಕಿರಣ್ ಸಾವನ್ನಪ್ಪಿದ್ದು, ಇಂದು ಬೆಳಿಗ್ಗೆ 11 ಗಂಟೆಗೆ ಮೃತನ ಅಂತ್ಯಕ್ರಿಯೆ ನಡೆಯಲಿದೆ.
ಯುವಕ ಕಿರಣ್ ತಂದೆ ಕುಮಾರ್​​​ ಜೈಲಿನಲ್ಲಿದ್ದು, ಇಂದು ಜೈಲಿನಿಂದ ಬಂದು ಪುತ್ರನ ಅಂತಿಮ ವಿಧಿ ವಿಧಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ನ್ಯಾಯಾಲಯ ಅನುಮತಿ ನೀಡಿದ್ದು, ಇಂದು ಮಗನ ಕೊನೆಯ ಕಾರ್ಯ ನೆರವೇರಿಸಲಿದ್ದಾರೆ.
/newsfirstlive-kannada/media/post_attachments/wp-content/uploads/2024/09/Kiran-Mandya-1.jpg)
ಇದನ್ನೂ ಓದಿ: ಬೆಳ್ಳಂಬೆಳಗ್ಗೆ ನಡುರಸ್ತೆಯಲ್ಲೇ ಕಾಲರ್​ ಪಟ್ಟಿ ಹಿಡಿದು ಚಾಲಕರ ಮಧ್ಯೆ ಮಾರಾಮಾರಿ; ಕಾರಣವೇನು?
ಮೃತ ಕಿರಣ್ ತಂದೆ ಕುಮಾರ್ ತಂದೆ ಪ್ರಕರಣದಲ್ಲಿ 17ನೇ ಆರೋಪಿಯಾಗಿದ್ದಾರೆ. ಹೀಗಾಗಿ ಜೈಲು ಸೇರಿದ್ದರು. ಆದರೀಗ ಮಗನ ಸಾವಿನ ಸುದ್ದಿ ತಿಳಿದು ಜೈಲಿನಿಂದ ಬಂದು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: ಯುವಕನನ್ನು ಥಳಿಸಿ, ಅರೆಬೆತ್ತಲೆಗೊಳಿಸಿ, ಮೂತ್ರ ಕುಡಿಸಿದ ಪ್ರಕರಣ; ಇಬ್ಬರು ಅರೆಸ್ಟ್​
ಮೃತ ಕಿರಣ್ ಗಣೇಶೋತ್ಸವದ ನೇತೃತ್ವವಹಿಸಿಕೊಂಡಿದ್ದನು. ಈತನ ಸಾವಿನಿಂದ ಗ್ರಾಮದಲ್ಲಿ ಸೂತಕದ ಛಾಯೆ ಮನೆ ಮಾಡಿದೆ. ಮೃತದೇಹ ದರ್ಶನಕ್ಕೂ ಬರಲು ಗ್ರಾಮದ ಯುವಕರು ಹೆದರುತ್ತಿದ್ದಾರೆ. ಗ್ರಾಮಕ್ಕೆ ಬಂದ್ರೆ ಪೊಲೀಸರು ಬಂಧಿಸಬಹುದೆಂಬ ಆತಂಕದಲ್ಲಿದ್ದಾರೆ. ಈಗಾಗಲೇ ಬಂಧನದ ಭೀತಿಯಿಂದ 25ಕ್ಕೂ ಹೆಚ್ಚು ಯುವಕರು ಗ್ರಾಮ ತೊರೆದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us