Advertisment

ಕಾರ್ಖಾನೆ, ವಿಮಾನ ನಿಲ್ದಾಣದ ಬಳಿ ಮನೆ.. ‘ಕೈಗಾರಿಕಾ ಸ್ಮಾರ್ಟ್ ಸಿಟಿ’ ಜನರ ಜೀವನ ಹೇಗಿರುತ್ತದೆ..?

author-image
Ganesh
Updated On
ಕಾರ್ಖಾನೆ, ವಿಮಾನ ನಿಲ್ದಾಣದ ಬಳಿ ಮನೆ.. ‘ಕೈಗಾರಿಕಾ ಸ್ಮಾರ್ಟ್ ಸಿಟಿ’ ಜನರ ಜೀವನ ಹೇಗಿರುತ್ತದೆ..?
Advertisment
  • NICDP ಅಡಿಯಲ್ಲಿ 12 ಹೊಸ ಕೈಗಾರಿಕಾ ಸ್ಮಾರ್ಟ್ ಸಿಟಿ
  • ಆರು ಪ್ರಮುಖ ಕಾರಿಡಾರ್​ಗಳಡಿ 10 ರಾಜ್ಯಗಳಲ್ಲಿ ಸ್ಮಾರ್ಟ್​ ಸಿಟಿ
  • 1 ಲಕ್ಷ ನೇರ, 30 ಲಕ್ಷ ಮಂದಿಗೆ ಪರೋಕ್ಷ ಉದ್ಯೋಗ ಸೃಷ್ಟಿ

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಇಂಡಸ್ಟ್ರಿಯಲ್ ಸ್ಮಾರ್ಟ್​ ಸಿಟಿ (ಕೈಗಾರಿಕಾ ಸ್ಮಾರ್ಟ್​ ಸಿಟಿ) ಯೋಜನೆ ಘೋಷಣೆ ಮಾಡಿದೆ. ಇದರ ಅಡಿ 10 ರಾಜ್ಯಗಳ 12 ನಗರಗಳಲ್ಲಿ ಕೈಗಾರಿಕಾ ಮಾನದಂಡಗಳ ಪ್ರಕಾರ ಸ್ಮಾರ್ಟ್​ ಸಿಟಿಯನ್ನಾಗಿ ಮಾಡಲಾಗುತ್ತದೆ. ಅದಕ್ಕಾಗಿ ಎಲ್ಲಾ ರಿತೀಯ ಸೌಲಭ್ಯ ನೀಡುವುದಾಗಿ ಕೇಂದ್ರ ಘೋಷಣೆ ಮಾಡಿದೆ.

Advertisment

ಯೋಜನೆಯಿಂದ ಕೈಗಾರಿಕಾ ಕ್ಷೇತ್ರಕ್ಕೆ ಭಾರೀ ಪ್ರಮಾಣದಲ್ಲಿ ಹೂಡಿಕೆಗಳು ಹರಿದು ಬರುವ ಲೆಕ್ಕಾಚಾರ ಇದೆ. ಈ ಯೋಜನೆಯ ಪ್ಲಾನ್ ಏನು? ಏನೆಲ್ಲ ಸೌಲಭ್ಯಗಳು ಇರುತ್ತದೆ. ಹೇಗೆ ಅಭಿವೃದ್ಧಿಪಡಿಸಲಾಗುತ್ತದೆ? ಯಾವೆಲ್ಲ ರಾಜ್ಯಗಳು ಸೇರಿಸಲಾಗಿದೆ ಅನ್ನೋದ್ರ ವಿವರ ಇಲ್ಲಿದೆ.

ಏನಿದು ಯೋಜನೆ..?
ರಾಷ್ಟ್ರೀಯ ಕೈಗಾರಿ ಅಭಿವೃದ್ಧಿ ಕಾರಿಡಾರ್​ ಪ್ರೋಗ್ರಾಂ (NIDCP) ಅಡಿಯಲ್ಲಿ ಕೇಂದ್ರ ಸರ್ಕಾರ ಕೈಗಾರಿಕಾ ಸ್ಮಾರ್ಟ್ ಸಿಟಿಗಳನ್ನು ನಿರ್ಮಿಸಲು ಮುಂದಾಗಿದೆ. ಯೋಜನೆಯ ಮೊದಲ ಭಾಗವಾಗಿ 10 ರಾಜ್ಯಗಳ 12 ನಗರಗಳನ್ನು ತೆಗೆದುಕೊಳ್ಳಲಾಗಿದೆ. ಈ ಯೋಜನೆಗಾಗಿ 28,602 ಕೋಟಿ ರೂಪಾಯಿ ಮೀಸಲಿಡುವ ಬಗ್ಗೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಇದನ್ನೂ ಓದಿ:ಕ್ರಿಕೆಟ್ ಜಗತ್ತಿಗೆ ಜಯ್ ಶಾ ಬಾಸ್.. ಇವರ ಒಟ್ಟು ಆಸ್ತಿಯ ಮೌಲ್ಯ ಎಷ್ಟು ಕೋಟಿ..?

Advertisment

publive-image

ಎಷ್ಟು ಬಂಡಾವಳ ನಿರೀಕ್ಷೆ..?
ಈ ಯೋಜನೆ ಅಡಿಯಲ್ಲಿ 10 ಲಕ್ಷ ಜನರಿಗೆ ನೇರ ಉದ್ಯೋಗ ಹಾಗೂ 30 ಲಕ್ಷ ಮಂದಿಗೆ ಪರೋಕ್ಷ ಉದ್ಯೋಗ ಒದಗಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಅಂದರೆ ಒಟ್ಟು 40 ಜನರಿಗೆ ಉದ್ಯೋಗ ದೊರೆಯುವ ನಿರೀಕ್ಷೆ ಇದೆ. 28,602 ಕೋಟಿ ವೆಚ್ಚ ಆಗಲಿದ್ದು, 1.52 ಲಕ್ಷ ಕೋಟಿ ಹೂಡಿಕೆ ಸಾಮರ್ಥ್ಯ ಹೊಂದಿರುತ್ತದೆ ಎಂದು ಕೇಂದ್ರ ತಿಳಿಸಿದೆ.

ಯಾವೆಲ್ಲ ರಾಜ್ಯಗಳು..?
ಉತ್ತರಾಖಂಡದ ಖುರ್ಪಿಯಾ, ಪಂಜಾಬ್​ನ ರಾಜ್​ಪುರ-ಪಟಿಯಾಲ, ಕೇರಳದ ಪಾಲಕ್ಕಾಡ್, ಉತ್ತರ ಪ್ರದೇಶದ ಆಗ್ರಾ ಮತ್ತು ಪ್ರಯಾಗ್​ರಾಜ್, ಬಿಹಾರದ ಗಯಾ, ತಲಂಗಾಣದ ಜಹೀರಾಬಾದ್​, ಆಂಧ್ರ ಪ್ರದೇಶದ ಫರ್ವಕಲ್ ಮತ್ತು ಕೋಪರ್ತಿ, ರಾಜಸ್ಥಾನದ ಜೋಧ್​ಪುರ-ಪಾಲಿಯಲ್ಲಿ ಕೈಗಾರಿ ಸ್ಮಾರ್ಟ್​ ಸಿಟಿ ನಿರ್ಮಾಣ ಮಾಡಲಾಗುತ್ತಿದೆ.

ಪ್ರಯೋಜನ ಏನು?
ಗೋಲ್ಡನ್ ಚತುಷ್ಪಥ ಲಿಂಕ್ ಇರುವ ಪ್ರದೇಶದಲ್ಲಿ ಕೈಗಾರಿ ಸ್ಮಾರ್ಟ್​ ಸಿಟಿಗಳ ನಕ್ಷೆ ರೂಪಿಸಲಾಗುತ್ತದೆ. ಈ ಮೂಲಕ ಮೂಲ ಸೌಕರ್ಯವನ್ನು ಬಲಪಡಿಸುವುದು, ಉದ್ಯೋಗವಕಾಶವನ್ನು ಹೆಚ್ಚಿಸುವುದರ ಜೊತೆಗೆ ಬಂಡವಾಳವನ್ನು ತರುವುದಾಗಿದೆ. ಈ ಮೂಲಕ ದೇಶದ ಅಭಿವೃದ್ಧಿಗೆ ಒತ್ತು ನೀಡುವುದು. 2030 ವೇಳೆಗೆ ಉತ್ಪಾದನೆಯಲ್ಲಿ 2 ಟ್ರಿಲಿಯನ್ ಡಾಲರ್​ ರಫ್ತು ಮಾಡುವುದಾಗಿದೆ.

Advertisment

ಇದನ್ನೂ ಓದಿ:ಕೈಕೊಟ್ಟ ಸಿರಾಜ್, ಜಡೇಜಾ.. ಬಾಂಗ್ಲಾ ಸರಣಿ ಕನಸು ಛಿದ್ರಗೊಳ್ಳುವ ಆತಂಕ..!

publive-image

ಯಾವೆಲ್ಲ ಸೌಲಭ್ಯ?
ಉದ್ಯೋಗಿಗಳು ಸ್ಮಾರ್ಟ್​ ಸಿಟಿಯಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುವ ಸೌಲಭ್ಯ ಪಡೆಯುತ್ತಾರೆ. ಈ ಪ್ರದೇಶದಲ್ಲಿ ರೈಲ್ವೇ, ವಿಮಾನ ಹಾಗೂ ಇತರೆ ಸಾರಿಗೆ ಸೌಲಭ್ಯಗಳು ಇರುತ್ತದೆ. ಹೂಡಿಕೆದಾರರಿಗೆ 24 ಗಂಟೆಗಳ ಕಾಲ ವಿದ್ಯುತ್, ನೀರನ ಸೌಲಭ್ಯ ದೊರೆಯಲಿದೆ. ಗ್ಯಾಸ್​ ಪೈಪ್​ಲೈನಂತಹ ಇತರೆ ಸೌಲಭ್ಯಗಳು ಇರಲಿದೆ. 2027ರ ವೇಳೆಗೆ ಈ ಯೋಜನೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ತೆಲಂಗಾಣದಲ್ಲಿ ಹೆಚ್ಚಿನ ಉದ್ಯೋಗ
ಮಾಹಿತಿಗಳ ಪ್ರಕಾರ.. ಮಹಾರಾಷ್ಟ್ರದಲ್ಲಿ 1.14 ಲಕ್ಷ ಜನರಿಗೆ ಉದ್ಯೋಗ, ತೆಲಂಗಾಣದಲ್ಲಿ 1.74 ಲಕ್ಷ ಜನರಿಗೆ ಉದ್ಯೋಗ ಸಿಗುವ ನಿರೀಕ್ಷೆ ಇದೆ. ಮಹಾರಾಷ್ಟ್ರದಲ್ಲಿ 38 ಸಾವಿರ ಕೋಟಿ, ಬಿಹಾರದಲ್ಲಿ 16 ಸಾವಿರ ಕೂಟಿ ಹೂಡಿಕೆಯನ್ನು ನಿರೀಕ್ಷೆ ಮಾಡಲಾಗಿದೆ.

Advertisment

8 ನಗರಗಳಲ್ಲಿ ಕಾಮಗಾರಿ
ಈಗಾಗಲೇ 8 ನಗರಗಳಲ್ಲಿ ಕಾಮಗಾರಿ ನಡೆಯುತ್ತಿದೆ. ಕೈಗಾರಿಕೆಗಳಿಗೆ ಭೂಮಿ ಹಂಚಿಕೆ ಕಾರ್ಯವು 4 ನಗರಗಳಲ್ಲಿ ನಡೆಯುತ್ತಿದೆ. ಧೋಲೆರಾ (ಗುಜರಾತ್), ಔರಿಕ್ (ಮಹಾರಾಷ್ಟ್ರ), ವಿಕ್ರಮ್ ಉದ್ಯೋಗಪುರಿ (ಮಧ್ಯಪ್ರದೇಶ), ಕೃಷ್ಣಪಟ್ಟಣಂ (ಆಂಧ್ರಪ್ರದೇಶ) ಹಾಗೂ ಉಳಿದ 4 ನಗರಗಳಲ್ಲಿಯೂ ಮೂಲ ಸೌಕರ್ಯ ಒದಗಿಸಲು ಮುಂದಾಗಿದೆ. ಇದನ್ನು ದೇಶದ 20 ನಗರಗಳಿಗೆ ವಿಸ್ತರಿಸಲು ನಿರ್ಧರಿಸಲಾಗಿದೆ.

ಇದನ್ನೂ ಓದಿ:RCB ಫ್ಯಾನ್ಸ್​ಗೆ ಶಾಕ್ ಕೊಟ್ಟ ಕೆಎಲ್ ರಾಹುಲ್.. ಖುಷಿಯಲ್ಲಿದ್ದ ಅಭಿಮಾನಿಗಳಿಗೆ ಮತ್ತೆ ನಿರಾಸೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment