/newsfirstlive-kannada/media/post_attachments/wp-content/uploads/2024/09/Modi.jpg)
ಗಣೇಶ ಹಬ್ಬದ ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್​​ ಮನೆಗೆ ಭೇಟಿ ನೀಡಿದ್ದರು. ಗಣೇಶನಿಗೆ ಪೂಜೆ ಸಲ್ಲಿಸಿದ್ದರು. ಈ ವಿಚಾರ ವಿವಾದಕ್ಕೆ ಕಾರಣವಾಗಿದೆ. ಇದೀಗ ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್ ಇದನ್ನು ಖಂಡಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಗಣೇಶ ಹಬ್ಬದ ಪ್ರಯುಕ್ತ ವಿಘ್ನ ವಿನಾಯಕನನ್ನು ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸುತ್ತಾರೆ. ಆದರಂತೆಯೇ ನವದೆಹಲಿಯಲ್ಲಿ ಡಿವೈ ಚಂದ್ರಚೂಡ್ ಅವರ ಮನೆಯಲ್ಲಿ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಬುಧವಾರ ಚಂದ್ರಚೂಡ್​ ಅವರ ಮನೆಯಲ್ಲಿ ನಡೆದ ಪೂಜೆಯಲ್ಲಿ ಪ್ರಧಾನಿ ಮೋದಿಯವರು ಭಾಗಿಯಾಗಿದ್ದರು. ಗಣೇಶನಿಗೆ ಆರತಿ ಬೆಳಗಿದ್ದರು. ಇದೀಗ ಇದೇ ವಿಚಾರ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.
ಇದನ್ನೂ ಓದಿ: Breaking News: ಕೊನೆಗೂ ಮಣಿದ ಕರ್ನಾಟಕ ಸರ್ಕಾರ; PSI ಪರೀಕ್ಷೆ ಮತ್ತೆ ಮುಂದೂಡಿಕೆ
ಪ್ರಧಾನಿ ಮೋದಿಯವರು ಸಿಜೆಐ ಮನೆಗೆ ಭೇಿಟಿ ನೀಡಿದ್ದಕ್ಕೆ ರಾಜಕೀಯ ವಿವಾದ ಶುರುವಾಗಿದೆ. ನಿನ್ನೆ ರಾತ್ರಿ ಪ್ರಧಾನಿ ಮೋದಿ ದೆಹಲಿಯ ಸಿಜೆಐ ಮನೆಗೆ ಭೇಿಟಿ ನೀಡಿ ಗಣೇಶ ಪೂಜೆ ನೆರವೇರಿಸಿದ್ದಕ್ಕೆ ಪರ-ವಿರೋಧ ಚರ್ಚೆ ಶುರುವಾಗಿದೆ.
ಇದನ್ನೂ ಓದಿ: ಬೆಂಗಳೂರು ಏರ್​ಪೋರ್ಟ್ ರಸ್ತೆಯಲ್ಲಿ ಹಿಟ್ ಅಂಡ್ ರನ್; ಮೂವರು ವಿದ್ಯಾರ್ಥಿಗಳ ದೇಹ ಛಿದ್ರಛಿದ್ರ
ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರಲ್ಲಿ ವಿಶ್ವಾಸ ಕಳೆದುಕೊಂಡಿದ್ದೇವೆ ಎಂದು ಕಾಂಗ್ರೆಸ್ ತಿಳಿಸಿದೆ. ಅತ್ತ ಶಿವಸೇನೆ ಪೂಜೆಯು ಸುಪ್ರೀಂಕೋರ್ಟ್​​​​ನ ನಿಷ್ಪಕ್ಷಪಾತತೆಯ ಬಗ್ಗೆ ಅನುಮಾನ ಹುಟ್ಟು ಹಾಕಿದೆ ಎಂದಿದೆ.
ಪ್ರಿಯಾಂಕಾ ಚತುರ್ವೇದಿಯವರು ಈ ಕುರಿತಾಗಿ ಸಿಜೆಐ ಮಹಾರಾಷ್ಟ್ರದ ಚುನಾವಣಾ ಅರ್ಜಿ ವಿಚಾರಣೆ ನಡೆಸುವ ಭರವಸೆ ಇದೆ ಎಂದಿದ್ದಾರೆ. ಸ್ವತಂತ್ರ ಸಿಜೆಐ ಅವರಲ್ಲಿ ವಿಶ್ವಾಸ ಕಳೆದುಕೊಂಡಿದ್ದೇವೆ ಎಂದು ಹಿರಿಯ ವಕೀಲೆ ಇಂದಿರಾ ಜೈಸಿಂಗ್ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us