/newsfirstlive-kannada/media/post_attachments/wp-content/uploads/2024/06/Sunitha-Williams.jpg)
ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್​ ಭೂಮಿಗೆ ಯಾವಾಗ ಬರುತ್ತಾರೆ ಎಂಬ ಕುತೂಹಲತೆ ಎಲ್ಲರಲ್ಲಿ ಮನೆ ಮಾಡಿದೆ. ಅನೇಕರು ಸುನೀತಾ ವಿಲಿಯಮ್ಸ್​ ಮತ್ತು ಬಚ್​ ವಿಲ್ಮೋರ್​ ಸುರಕ್ಷಿತವಾಗಿ ಭೂಮಿಗೆ ಬರಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಬೋಯಿಂಗ್​ ಸ್ಟಾರ್​ಲೈನರ್​ ಸ್ಪೇಸ್​ ಕ್ಯಾಪ್ಸುಲ್​​ನಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದ ಅವರು ಭೂಮಿಗೆ ಹಿಂತಿರುಗುವುದು ವಿಳಂಬವಾಗುತ್ತಿದೆ. ಆದರೆ ಇದರ ನಡುವೆ ಬಾಹ್ಯಾಕಾಶದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ, ಸುನೀತಾ ವಿಲಿಯಮ್ಸ್​ ಇರುವ ಸ್ಟಾರ್​ಲೈನರ್​ನಲ್ಲಿ ನಿಗೂಢ ಶಬ್ಧವೊಂದು ಕೇಳಿಬಂದಿದೆ. ಅದು ಎಲ್ಲರನ್ನು ಬೆರಗುಗೊಳಿಸುವಂತೆ ಮಾಡಿದೆ.
ಸುನೀತಾ ವಿಲಿಯಮ್ಸ್​ ಮತ್ತು ಬುಚ್​ ವಿಲ್ಮೋರ್​ ಒಂದು ವಾರದ ಕಾಲ ಬಾಹ್ಯಾಕಾಶಕ್ಕೆ ತೆರಳಿದ್ದರು. ಆದರೆ ತಾಂತ್ರಿಕ ದೋಷದಿಂದಾಗಿ ಸದ್ಯ ಇಬ್ಬರು ಅಲ್ಲೇ ಉಳಿದುಕೊಂಡಿದ್ದಾರೆ. ನಾಸಾ ಅವರನ್ನು ನಿರಂತರವಾಗಿ ಸಂಪರ್ಕಿಸುತ್ತಿದೆ. ಹೀಗೆ ಬುಚ್​ ವಿಲ್ಮೋರ್​​ ಜೊತೆಗೆ ನಾಸಾ ಸಂಪರ್ಕದಲ್ಲಿರುವಾಗ ವಿಚಿತ್ರ ಹಾಗೂ ನಿಗೂಢ ಶಬ್ಧವೊಂದು ಕೇಳಿಸಿದೆ. ಸದ್ಯ ಈ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Starliner crew reports hearing strange "sonar like noises" emanating from their craft. This is the real audio of it: pic.twitter.com/xzHTMvB7uq
— SpaceBasedFox ???????????.??? (@SpaceBasedFox)
Starliner crew reports hearing strange "sonar like noises" emanating from their craft. This is the real audio of it: pic.twitter.com/xzHTMvB7uq
— SpaceBasedFox (@SpaceBasedFox) September 1, 2024
">September 1, 2024
ಇನ್ನು ಈ ವಿಚಿತ್ರ ಶಬ್ಧದ ಕುರಿತು ವಿಲ್ಮೋರ್​​​ ಇದು ಜಲಾಂತರ್ಗಾಮಿ ಸೋನಾರ್​ ಅಥವಾ ಬಾಹ್ಯಾಕಾಶ ನೌಕೆಯ ಹೊರಗಿನಿಂದ ಟ್ಯಾಪಿಂಗ್​ ಮಾಡುತ್ತಿರುವ ಧ್ವನಿ ಎಂದು ವಿವರಿಸಿದ್ದಾರೆ. ನಾಸಾದ ಮಿಷನ್​ ಕಂಟ್ರೋಲ್​​ ಈ ಧ್ವನಿಯನ್ನು ಪತ್ತೆಹಚ್ಚಿದ್ದು, ಇದು ಸೋನಾರ್​ ಶಬ್ಧ ಎಂದು ಹೇಳಿದೆ.
ಸದ್ಯ ಸುನೀತಾ ವಿಲಿಯಮ್ಸ್​ ಮತ್ತು ವಿಲ್ಮೋರ್​​ ಬಾಹ್ಯಾಕಾಶದಲ್ಲಿ ಬಾಕಿಯಾಗಿ 3 ತಿಂಗಳೂ ಕಳೆದಿದೆ. ಅವರನ್ನು ಭೂಮಿಗೆ ಕರೆತರಲು ನಾಸಾ ಹೋರಾಡುತ್ತಿದೆ. ಎಲಾನ್​ ಮಸ್ಕ್​ ಅವರ ಸ್ಪೇಸ್​ ಎಕ್ಸ್​ ಮೂಲಕ ನಾಸಾ ಅವರನ್ನು ಕರೆತರಲು ಮುಂದಾಗಿದೆ. ಅಂದಹಾಗೆಯೇ ಮುಂದಿನ ವರ್ಷ ಈ ಇಬ್ಬರು ಗಗನಯಾತ್ರಿಗಳು ಭೂಮಿಗೆ ಬರುವ ನಿರೀಕ್ಷೆಯಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ