ಭೂಮಿಯತ್ತ ನುಗ್ಗಿ ಬರುತ್ತಿರುವ ಆ ಕ್ಷುದ್ರಗ್ರಹದಿಂದ ಕಾದಿದೆಯಾ ಅಪಾಯ?
ಧರೆಯ ಸಮೀಪಕ್ಕೆ ಬಂದಿರುವ ಆ ಕ್ಷುದ್ರಗ್ರಹದ ವೇಗ ಎಷ್ಟಿದೆ ಅಂತ ಗೊತ್ತಾ?
ಒಂದು ವಾಣಿಜ್ಯ ವಿಮಾನದ ಗಾತ್ರದ ಕ್ಷುದ್ರಗ್ರಹದಿಂದ ಆಗಲಿರುವ ಅಪಾಯವೇನು?
ವಾಷಿಂಗ್ಟನ್: ನಾಸಾದ ವಿಜ್ಞಾನಿಗಳು ಸದ್ಯ ದೊಡ್ಡ ಆತಂಕವೊಂದು ಭೂಮಿಗೆ ಎದುರಾಗಿದ್ದರ ಬಗ್ಗೆ ಭಯ ಪಡುತ್ತಿದ್ದಾರೆ. ಬೃಹತ್ ಗಾತ್ರದ ಕ್ಷುದ್ರಗ್ರಹವೊಂದು ಈಗ ಭೂಮಿಯತ್ತ ಭಾರೀ ವೇಗದಲ್ಲಿ ನುಗ್ಗಿ ಬರುತ್ತಿರುವ ಆತಂಕಕಾರಿ ಮಾಹಿತಿಯನ್ನು ಹೊರ ಹಾಕಿದ್ದಾರೆ. ಕ್ಷುದ್ರಗ್ರಹವನ್ನು 2024QV ಎಂದು ಹೆಸರಿಸಿರುವ ನಾಸಾ ವಿಜ್ಞಾನಿಗಳು, ಆ ಕ್ಷುದ್ರಗ್ರಹದ ಬಗ್ಗೆ ಹಲವು ಆತಂಕಕಾರಿ ಮಾಹಿತಿಗಳನ್ನು ಹೊರ ಹಾಕಿದ್ದಾರೆ. ಸೆಪ್ಟಂಬರ್ 3 ರಂದು ಅಂದ್ರೆ ಇಂದೇ ಈ ಕ್ಷುದ್ರಗ್ರಹ ಭೂಮಿಯ ಸಮೀಪ ಹಾದು ಹೋಗಲಿದೆ.
ಖಗೋಳಶಾಸ್ತ್ರ ಪರಿಣಿತರು ಹೇಳುವ ಪ್ರಕಾರ, ಕ್ಷುದ್ರಗ್ರಹದ ಆಕಾರ 120 ಫೀಟ್ ವೃತ್ತಾಕಾರದಲ್ಲಿ ಎಂದು ಹೇಳಿದ್ದಾರೆ. ಅಂದ್ರೆ ಇದು ಅಕ್ಷರಶಃ ಒಂದು ವಾಣಿಜ್ಯ ವಿಮಾನದಷ್ಟು ದೊಡ್ಡದು. ಇದು ಭೂಮಿಯ 13,10,000 ಮೈಲಿ ಹತ್ತಿರದಿಂದ ದಾಟಿ ಹೋಗಲಿದೆಯಂತೆ. ಇದು ಸಾಮಾನ್ಯವಾಗಿ ನಮಗೆ ಭೂಮಿಯಿಂದ ಅತಿದೂರ ಅನಿಸಬಹುದು ಆದ್ರೆ ಖಗೋಳಶಾಸ್ತ್ರಜ್ಞರ ಪ್ರಕಾರ ಇದು ಅತ್ಯಂತ ಹತ್ತಿರದ ಅಂತರ ಎಂಬ ಭಯವನ್ನು ಹೊರಹಾಕಿದ್ದಾರೆ.
ಇದನ್ನೂ ಓದಿ: ಬಾಹ್ಯಾಕಾಶದಲ್ಲಿ ವಿಚಿತ್ರ ಶಬ್ಧದ ರಹಸ್ಯವನ್ನು ಭೇದಿಸಿದ ನಾಸಾ.. ಸುನೀತಾ ವಿಲಿಯಮ್ಸ್ಗಾಗಿ ಎಲ್ಲರ ಪ್ರಾರ್ಥನೆ!
ಗಾತ್ರ ಹಾಗೂ ಅಂತರಕ್ಕಿಂತ ಅತ್ಯಂತ ಆತಂಕಕಾರಿ ವಿಚಾರ ಅಂದ್ರೆ ಅದು ಭೂಮಿಯತ್ತ ನುಗ್ಗಿ ಬರುತ್ತಿರುವ ವೇಗ. ಇದು ಮೊದಲು ಖಗೋಳಶಾಸ್ತ್ರಜ್ಞರನ್ನು ವಿಚಲಿತಗೊಳಿಸಿದೆ. 2024QV1 ಭೂಮಿಯತ್ತ ಯಮವೇಗದಲ್ಲಿ ಬರುತ್ತಿದೆ. ಅದರ ವೇಗೆ ಗಂಟೆಗೆ 43,450 ಕಿಲೋಮೀಟರ್ ಎಂದು ಅಂದಾಜಿಸಲಾಗಿದೆ. ಒಂದು ವೇಳೆ ಈ ವೇಗದಲ್ಲಿ ಭೂಮಿಗೆ ಅತ್ಯಂತ ಅಂತರದಿಂದ ಕ್ಷುದ್ರಗ್ರಹ ನುಸುಳಿ ಹೋದರೆ, ಖಗೋಳಶಾಸ್ತ್ರಜ್ಞರಿಗೆ ಹಾಗೂ ಬಾಹ್ಯಾಕಾಶ ವಿಜ್ಞಾನಿಗಳಿಗೆ ಅಧ್ಯಯನಕ್ಕೆ ಬೇಕಾಗುವ ಅನೇಕ ಅಂಶಗಳನ್ನು ಇದು ಅಪಾಯ ತಂದೊಡ್ಡಬಲ್ಲದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಸುನೀತಾರನ್ನು ಕರೆತರಲು ನಭಕ್ಕೆ ದೇವದೂತರು.. ತಿಂಗಳ ಅಂತ್ಯದಲ್ಲಿ ಸಿಹಿ ಸುದ್ದಿ ಹಂಚಲಿದೆ NASA
ಆದ್ರೆ ಸದ್ಯ ಭೂಮಿಗೆ ಅಂತಹ ಯಾವುದೇ ಅಪಾಯ ಕಾದಿಲ್ಲ ಎಂದಿರುವ ಖಗೋಳಶಾಸ್ತ್ರಜ್ಞರು, ಇದು ಸೌರವ್ಯವಸ್ಥೆಯ ಅನಿಶ್ಚಿತತೆ ಹಾಗೂ ಚಟುವಟಿಗಳನ್ನು ನಮಗೆ ನೆನಪಿಸುತ್ತೆ. ನಾವು ಹೆಚ್ಚು ಜಾಗೃತರಾಗಿರಬೇಕಾದ ಅವಶ್ಯಕತೆಯನ್ನು ತಿಳಿಸುತ್ತೆ ಎಂದಿದ್ದಾರೆ. ಈ ತರದ ಘಟನೆಗಳು ನಡೆಯುವುದನ್ನ ನಾವು ಕೇವಲ ಸಾರ್ವಜನಿಕ ಹಿತಾಸಕ್ತಿಯಿಂದ ಮುಖ್ಯವಾಗುವುದಿಲ್ಲ. ಇದು ನಿರಂತರ ಬಾಹ್ಯಾಕಾಶ ಸಂಶೋಧನೆಗೆ ಹಾಗೂ ಅಧ್ಯಯನಕ್ಕೆ ನಮಗೆ ಮುಖ್ಯವಾಗುತ್ತದೆ ಎಂದು ಹೇಳಿದ್ದಾರೆ ನಾಸಾ ಸೈಂಟಿಸ್ಟ್.
ಇದನ್ನೂ ಓದಿ: ಹಳೆಯ ಚಾಟ್ ಸುಲಭವಾಗಿ ಹುಡುಕಬಹುದು.. ವಾಟ್ಸ್ಆ್ಯಪ್ ಪರಿಚಯಿಸಲು ಸಜ್ಜಾಗಿದೆ ಚಾಟ್ ಫಿಲ್ಟರ್ ವೈಶಿಷ್ಟ್ಯ
ಈ ಒಂದು ಕ್ಷುದ್ರಗ್ರಹಕ್ಕೆ ಅಡ್ಡಿಯೊಡ್ಡುವುದು ಹೇಗೆ ಅದರ ನಡುವಳಿಕೆಗಳೇನು ಎಂಬ ಅಧ್ಯಯನಕ್ಕೆ ಈ ತರಹದ ಘಟನೆಗಳು ನಡೆಯುವುದರಿಂದ ನಮಗೆ ಹಲವು ಸರಕುಗಳನ್ನು ಒದಗಿಸುತ್ತವೆ ಎಂದು ಹೇಳಲಾಗುತ್ತಿದೆ. ಸದ್ಯ ಕ್ಷುದ್ರಗ್ರಹ ಭೂಮಿಯ ಅತ್ಯಂತ ಸಮೀಪಕ್ಕೆ ಹಾದು ಹೋಗುವದರಿಂದ ನಮ್ಮಂಥ ಬಾಹ್ಯಾಕಾಶ ವಿಜ್ಞಾನಿಗಳಿಗೆ ಹಾಗೂ ಖಗೋಳಶಾಸ್ತ್ರಜ್ಞರಿಗೆ ಅವುಗಳ ಬಗ್ಗೆ ಅವುಗಳ ಅಧ್ಯಯನದ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಿಸುತ್ತದೆ ಅನ್ನೋ ಮಾತು ಸ್ಪೇಸ್ ಸೈಂಟಿಸ್ಟ್ಗಳಿಂದ ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ