ಭೂಮಿಗೆ ಬರಲಿದೆ ಸುನೀತಾರನ್ನ ಹೊತ್ತುಕೊಂಡು ಹೋಗಿದ್ದ ಗಗನನೌಕೆ!
ಭೂಮಿಗೆ ಬರಲಿರುವ ಸ್ಟೇರ್ಲೈನರ್, ಸುನೀತಾ ಬರೋದು ಯಾವಾಗ ಗೊತ್ತಾ?
ನಾಸಾ ವಿಜ್ಞಾನಿಗಳು ಈ ಬಗ್ಗೆ ವಿಭಿನ್ನ ಹೇಳಿಕೆಗಳನ್ನು ನೀಡುತ್ತಿರುವುದು ಏಕೆ?
ಸುನೀತಾ ವಿಲಿಯಮ್ಸ್ ಹಾಗೂ ಬಚ್ ವಿಲ್ಮೋರ್ನ್ನು ಹೊತ್ತೊಯ್ದಿದ್ದ ಬಾಹ್ಯಾಕಾಶ ನೌಕೆ ಬೋಯಿಂಗ್ ಸ್ಟೇರ್ಲೈನರ್ ಇಂದು ಖಾಲಿ, ಖಾಲಿಯಾಗಿ ಭೂಮಿಗೆ ಬಂದು ಇಳಿಯಲಿದೆ. ಅದು ಹೊತ್ತೊಯ್ದಿದ್ದ ಇಬ್ಬರೂ ಗಗನಯಾನಿಗಳಾದ ಸುನೀತಾ ವಿಲಿಯಮ್ಸ್ ಹಾಗೂ ಬಚ್ ವಿಲ್ಮೋರ್ ಮಾತ್ರ ಇದರೊಂದಿಗೆ ಬರುವುದಿಲ್ಲ ಎಂದು ನಾಸಾ ಸ್ಪಷ್ಟಪಡಿಸಿದೆ. ಇಬ್ಬರು ಗಗನಯಾನಿಗಳನ್ನು ಮುಂದಿನ ವರ್ಷ ಅಂದ್ರೆ 2025 ಫೆಬ್ರವರಿಯಲ್ಲಿ ಸ್ಪೇಸ್ ಎಕ್ಸ್ ಕ್ರೀವ್ ಡ್ರ್ಯಾಗನ್ ಮೂಲಕ ಮರಳಿ ಭೂಮಿಗೆ ಕರೆತರಲಾಗುವುದು ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.
ಇದನ್ನೂ ಓದಿ: ಭೂಮಿಯತ್ತ ನುಗ್ಗಿ ಬರುತ್ತಿದೆ ಅತಿ ದೊಡ್ಡ ಕ್ಷುದ್ರ ಗ್ರಹ.. ನಾಸಾ ನೀಡಿದ ಎಚ್ಚರಿಕೆ ಏನು? ಕಾದಿದ್ಯಾ ಕಂಟಕ?
ನಾಸಾದ ಹಲವು ಅಧಿಕಾರಿಗಳು ಈ ಬಗ್ಗೆ ಹಲವು ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ನಾಸಾದ ಕೆನಡಿ ಸ್ಪೇಸ್ ಸೆಂಟರ್ನ ಕಮರ್ಷಿಯಲ್ ಕ್ರೀವ್ ಪ್ರೋಗ್ರಾಮರ್ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ ಇದೊಂದು ಅತ್ಯಂತ ಕ್ಷಿಷ್ಟಕರವಾದ ನಿರ್ಧಾರ. ಸದ್ಯ ಗಗನಯಾನಿಗಳು ಹೋಗಿರುವ ಗಗನಯಾನ ನೌಕೆ ಎರಡು ಭಾಗವಾಗಿದೆ. ಸ್ಪೇಸ್ ಎಕ್ಸ್ ಕ್ರೀವ್ ಡ್ರ್ಯಾಗನ್ನಲ್ಲಿ ಸುನೀತಾ ಹಾಗೂ ಬಚ್ ಉಳಿದುಕೊಂಡಿದ್ದಾರೆ. ಇಬ್ಬರನ್ನು ಮೊದಲು ವಾಪಸ್ ಕರೆತರುವ ಬಗ್ಗೆ ದೊಡ್ಡ ಮಟ್ಟದ ತಾರಕಕ್ಕೇರಿದ ಚರ್ಚೆಯಾಗಿದೆ. ಆದ್ರೆ ಇದೊಂದು ಅರಚಾಟದ ಕಿರುಚಾಟದ ಸಭೆ ಎಂದು ನಾನು ಹೇಳಲಾರೆ. ಇದೊಂದು ಒತ್ತಡಯುಕ್ತ ತಾಂತ್ರಿಕ ಚರ್ಚೆಯಾಗಿತ್ತು ಎಂದು ಹೇಳಿದ್ದಾರೆ. ಈ ಎಲ್ಲದರ ಪರಿಣಾಮವಾಗಿ ಇಂದು ಸ್ಟೇರ್ಲೈರ್ ಸ್ಪೇಸ್ ಕ್ಯಾಪ್ಸೂಲ್ ಹೊಸ ಮೆಕ್ಸಿಕೋದ ವೈಟ್ ಸ್ಯಾಂಡ್ನಲ್ಲಿ ಬಂದಿಳಿಯಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಡ್ಯುಯೆಲ್ ಸ್ಕ್ರೀನ್ ಆಯ್ತು.. ಈಗ ಟ್ರಿಪಲ್ ಸ್ಕ್ರೀನ್ ಪರ್ವ! ಮಾರುಕಟ್ಟೆಯಲ್ಲಿ ಮ್ಯಾಜಿಕ್ ಮಾಡೋಕೆ ಹುವೈ ರೆಡಿ
ಸ್ಟೇರ್ಲೈನರ್ ಬಾಹ್ಯಾಕಾಶ ನೌಕೆ ಹಲವು ರೀತಿಯ ಭೀಕರ ವೈಫಲ್ಯಗಳನ್ನು ಕಂಡಿದೆ. ಹಿಲೀಯಂ ಸೋರಿಕೆಯಿಂದ ಹಿಡಿದು ಅನೇಕ ರೀತಿಯ ತಾಂತ್ರಿಕ ದೋಷಗಳು ಗಗನಯಾನಿಗಳಿಗೆ ಆಪತ್ತ ತಂದೊಡ್ಡಿತ್ತು. ಇದರಿಂದ ಅವರನ್ನು ಕಾಪಾಡುವುದು ನಿಜಕ್ಕೂ ನಮಗೆ ದೊಡ್ಡ ಸವಾಲಾಗಿತ್ತು ಎಂದು ನಾಸಾದ ಐಎಸ್ಎಸ್ ಪ್ರೋಗ್ರಾಮ್ ಮ್ಯಾನೇಜರ್ ಡಾನಾ ವೇಗಲ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ನಾಸಾದ ಇನ್ನೊಬ್ಬ ಅಧಿಕಾರಿ ಕೆನ್ ಬಾವೆರ್ಸೋಕ್ಸ್ ಈ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅಷ್ಟು ಸರಳವಲ್ಲ. ಆದ್ರೆ ನಾನು ನಾಸಾದ ಬೋಯಿಂಗ್ ಟೀಮ್ಗೆ ಒಂದು ಮಾತನ್ನು ಹೇಳಲು ಇಷ್ಟಪಡುತ್ತೇನೆ ಅವರ ವಿಶ್ಲೇಷಣೆಗಳು ಪಾರದರ್ಶಕ ಚರ್ಚೆಗಳು ಆದಷ್ಟು ಬಾಹ್ಯಾಕಾಶ ನೌಕೆಯ ಸುರಕ್ಷತೆಗೆ ಪ್ರಾಮುಖ್ಯತೆಯುಳ್ಳ ಪರೀಕ್ಷೆಗಳನ್ನು ನಡೆಸಬೇಕು ಈ ಒಂದು ಗಗನಯಾನದ ಪ್ರಯಾಣದಲ್ಲಿ ನಾವೀಗಾಗಲೇ ಸಾಕಷ್ಟು ಪಾಠಗಳನ್ನು ಕಲಿತಿದ್ದೇವೆ. ಹೀಗಾಗಿ ಸ್ಟೇರ್ಲೈನರ್ ಬಾಹ್ಯಾಕಾಶ ನೌಕೆಯ ಬಗ್ಗೆ ಮತ್ತಷ್ಟು ಡಾಟಾಗಳನ್ನು ಕಲೆ ಹಾಕುವ ಮೂಲಕ ಮುಂದಿನ ಏರ್ಕ್ರಾಪ್ಟ್ ವಾಪಸ್ ಕರೆಸಿಕೊಳ್ಳುವಾಗ ಎದುರಾಗಬಹುದಾದ ಅಪಾಯಗಳನ್ನು ಈಗಲೇ ಗುರುತುಮಾಡಿಕೊಳ್ಳಬೇಕು ಮತ್ತು ಬೇಕಾದ ಸುಧಾರಣಾ ಕ್ರಮವನ್ನು ಇಂದಿನಿಂದಲೇ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.
ಒಂದು ಹಂತದಲ್ಲಿ ಗಗನಯಾನಕ್ಕೆ ಭೂಮಿಯಿಂದ ನೆಗೆದಿದ್ದ ಬೊಯಿಂಗ್ ಸ್ಟೇರ್ಲೈನರ್ ಇಂದು ಭೂಮಿಗೆ ವಾಪಸ್ ಬರಲಿದೆ. ಇದಾದ ಬಳಿಕ ಸುನೀತಾ ವಿಲಿಯಮ್ಸ್ ಹಾಗೂ ಬಚ್ ವಿಲ್ಮೋರ್ರನ್ನ ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆಗೆ ಚುರುಕು ಮೂಡಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ