/newsfirstlive-kannada/media/post_attachments/wp-content/uploads/2024/05/HARDIK_PANDYA-1.jpg)
ದುರಾದೃಷ್ಟವೋ, ಬ್ಯಾಡ್​​ಲಕ್ಕೋ ಟೀಮ್​ ಇಂಡಿಯಾ ಆಲ್​​ರೌಂಡರ್​ ಹಾರ್ದಿಕ್​ ಬೆನ್ನು ಬಿದ್ದಂತಿದೆ. ಮುಂಬೈ ನಾಯಕತ್ವದ ವಿವಾದ ಐಪಿಎಲ್​ ಅಂತ್ಯದ ಬಳಿಕ ಇದೀಗ ವೈಯಕ್ತಿಕ ಜೀವನದಲ್ಲೂ ಬಿರುಗಾಳಿ ಎದ್ದಿದೆ. ಜೀವನಪೂರ್ತಿ ಜೊತೆಗಿರೋ ಮಾತು ಕೊಟ್ಟಿದ್ದ ಮಡದಿ ನತಾಶಾ ಡಿವೋರ್ಸ್​ ಪಡೆಯಲು ಮುಂದಾಗಿದ್ದಾರೆ. ಒಂದು ವೇಳೆ ವಿಚ್ಛೇದನ ಕೊಟ್ಟಿದ್ದೇ ಆದಲ್ಲಿ ಹಾರ್ದಿಕ್​​ ಅವರ ಸಂಪತ್ತಲ್ಲಿ ಶೇ.70ರಷ್ಟು ಆಸ್ತಿ ನತಾಶಾ ಪಾಲಾಗಲಿದೆ.
ಇದನ್ನೂ ಓದಿ:ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ.. ಮೈಸೂರಲ್ಲಿ ಒಡನಾಡಿ ಸಂಸ್ಥೆ ಜೊತೆ ಪೊಲೀಸರ ರೇಡ್; ಆಮೇಲೇನಾಯ್ತು?
/newsfirstlive-kannada/media/post_attachments/wp-content/uploads/2024/05/HARDIK_PANDYA.jpg)
ಹಾರ್ದಿಕ್​ ಪಾಂಡ್ಯ ಭಾರತೀಯ ಕ್ರಿಕೆಟ್​​ ಜಗತ್ತಿನಲ್ಲಿ ಉತ್ತಮ ಆಲ್​ರೌಂಡರ್​​ ಆಗುವ ಭರವಸೆ ಹುಟ್ಟಿಸಿದ್ದ ಆಟಗಾರ. ಆದ್ರೇ ಅದ್ಯಾಕೋ ಏನೋ ಈ ವರ್ಷ ಹಾರ್ದಿಕ್​ ಪಾಂಡ್ಯ ಗ್ರಹಗತಿ ಸರಿಯಿಲ್ಲ ಅಂತ ಕಾಣ್ಸತ್ತೇ. ಕಡು ಬಡತನ ಕುಟುಂಬದಿಂದ ಜೀವನ ಆರಂಭಿಸಿದ್ದ ಹಾರ್ದಿಕ್​​ ಪಾಂಡ್ಯ ಜೀವನದಲ್ಲಿ ಎಲ್ಲವನ್ನು ಸಾಧಿಸಿದ್ದರು. ಟೀಂ ಇಂಡಿಯಾದಲ್ಲಿ ಸ್ಥಾನ, ಐಷಾರಾಮಿ ಜೀವನ ಎಲ್ಲವೂ ಚೆನ್ನಾಗೇ ಇತ್ತು, ಆದ್ರೇ ಈಗ ಎಲ್ಲ ಬದಲಾಗಿ ಹೋಗಿದೆ. ಒಂದ್ಕಡೆ ಕ್ರಿಕೆಟ್​​ ಜೀವನದಲ್ಲಿ ಫೇಲ್​ ಆದ್ರೇ, ​​ಅತ್ತ ವೈಯಕ್ತಿಕ ಜೀವನದಲ್ಲೂ ಫೇಲ್​ ಆಗಿದ್ದಾರೆ.
ಮನೆ ತೊರೆದ ಪತ್ನಿ ನತಾಶಾ, ಪ್ರತ್ಯೇಕ ವಾಸ
ಐಪಿಎಲ್​​ ಸೀಸನ್​ 17 ಅಂತ್ಯ ಕಂಡ ಬೆನ್ನಲ್ಲೇ ಹಾರ್ದಿಕ್​ ಪಾಂಡ್ಯ ಬಾಳಲ್ಲಿ ಬಿರುಗಾಳಿ ಎದ್ದಿದೆ. ಸುಖ ಸಂಸಾರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾದ ಬೇಸರದ ಸುದ್ದಿ ಹೊರಬಿದ್ದಿದೆ. ಪತ್ನಿ ನತಾಶಾ ಸ್ಟಾನ್ಕೋವಿಕ್​​, ಹಾರ್ದಿಕ್ ಪಾಂಡ್ಯ ನಡುವೆ ವೈಮನಸ್ಸು ಶುರುವಾಗಿದ್ದು, ಇಬ್ಬರೂ ಪರಸ್ಪರ ದೂರ ಉಳಿದಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ. ಇಷ್ಟೇ ಅಲ್ಲ, ಹಾರ್ದಿಕ್​ ಮನೆ ತೊರೆದಿರುವ ನತಾಶಾ, ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂಬ ಸುದ್ದಿ ಗೊತ್ತಿದ್ರೂ ಕೂಡ ನತಾಶಾ, ಹಾರ್ದಿಕ್​​ ಬೆಂಬಲಿಸಿ ಏನೂ ಮಾತನಾಡದೇ ಮೌನಕ್ಕೆ ಶರಣಾಗಿದ್ರು. ಜೊತೆಗೂ ಈ ಬಾರಿ ಐಪಿಎಲ್​ ಟೂರ್ನಿಯಲ್ಲೂ ಕಾಣಿಸಿಕೊಳ್ಳದೇ ಹಾರ್ದಿಕ್​ ಅವರಿಂದ ದೂರನೇ ಉಳಿದಿದ್ರು.
ಇದನ್ನೂ ಓದಿ: ಗ್ರಾಮ ಪಂಚಾಯತಿ ಸಿಬ್ಬಂದಿ ನಿರ್ಲಕ್ಷ್ಯದಿಂದ 2 ವರ್ಷದ ಬಾಲಕ ಸಾವು.. ಏನಾಯಿತು?
/newsfirstlive-kannada/media/post_attachments/wp-content/uploads/2024/05/Natasha-4.jpg)
ಹಾರ್ದಿಕ್​​ ಸಂಪತ್ತಲ್ಲಿ 70% ನತಾಶಾ ಪಾಲು..?
ಸದ್ಯ ಹಾರ್ದಿಕ್​​ ಮತ್ತು ನತಾಶಾ ಡಿವೋರ್ಸ್​​​ ಬಗ್ಗೆ ಎಲ್ಲೂ ಕೂಡ ಅಧಿಕೃತವಾಗಿ ಮಾತನಾಡಿಲ್ಲ. ಆದ್ರೇ ನತಾಶಾ ತಮ್ಮ ಇನ್​ಸ್ಟಾದಿಂದ ಹಾರ್ದಿಕ್​ ಪಾಂಡ್ಯ ಹೆಸರನ್ನು ತೆಗೆದಿರುವುದು ಇದಕ್ಕೆಲ್ಲ ಪುಷ್ಠಿ ನೀಡುವಂತಿದೆ. ಒಂದು ವೇಳೆ ನತಾಶಾ ಮತ್ತು ಹಾರ್ದಿಕ್​​​ ವಿಚ್ಛೇದನ ಪಡೆದಿದ್ದೇ ಆದಲ್ಲಿ ಹಾರ್ದಿಕ್​​ ಸಂಪತ್ತಿನ ಶೇ. 70ರಷ್ಟು ಪಾಲಿಗೆ ನತಾಶಾ ದಾವೆ ಹೂಡಲು ಮುಂದಾಗಿದ್ದಾರೆನ್ನಲಾಗಿದೆ. ಒಂದು ಕಾಲದಲ್ಲಿ ಜನುಮದ ಜೋಡಿಯಂತೆ ಕಾಣಿಸಿಕೊಳ್ಳುತ್ತಿದ್ದ ಜೋಡಿ ಈಗ ಬೇರೆ ಬೇರೆ ಆಗಿರುವ ಸುದ್ದಿ ಕೇಳಿ ಕ್ರಿಕೆಟ್​​ ಅಭಿಮಾನಿಗಳು ಬೇಸರ ಹೊರ ಹಾಕಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us