/newsfirstlive-kannada/media/media_files/2025/08/14/flash-flood-kashmir-2025-08-14-19-33-39.jpg)
ಜಮ್ಮು-ಕಾಶ್ಮೀರದ ಕಿಶ್ತವಾರ್ದಲ್ಲಿ ಮೇಘಸ್ಫೋಟ ಸಂಭವಿಸಿ ಇಬ್ಬರು CRPF ಯೋಧರು ಸೇರಿ 40 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಚಿಶೋತಿ ಪ್ರದೇಶದ ಮಾತಾ ಚಂಡಿ ದೇಗುಲ ಬಳಿ ದುರಂತ ಸಂಭವಿಸಿದೆ.
ಮೇಘಸ್ಫೋಟದಲ್ಲಿ 100ಕ್ಕೂ ಹೆಚ್ಚು ಜನರಿಗೆ ಗಾಯಗೊಂಡಿದ್ದು, 37 ಜನರ ಪರಿಸ್ಥಿತಿ ಗಂಭೀರವಾಗಿದೆ. ಈವರೆಗೆ 50 ಜನರ ರಕ್ಷಣೆ, 220ಕ್ಕೂ ಹೆಚ್ಚು ಜನ ನಾಪತ್ತೆ ಆಗಿದ್ದಾರೆ.
ಇದನ್ನೂ ಓದಿ:ನಟ ದರ್ಶನ್ ಅಂಡ್ ಗ್ಯಾಂಗ್ ಜಾಮೀನು ರದ್ದುಪಡಿಸಿದ ಆದೇಶದಲ್ಲಿ ಸುಪ್ರೀಂಕೋರ್ಟ್ ಹೇಳಿದ್ದೇನು ಗೊತ್ತಾ?
ರಕ್ಷಣಾ ತಂಡಗಳು ತಕ್ಷಣ ಸ್ಥಳಕ್ಕೆ ಧಾವಿಸಿವೆ. ಬದುಕುಳಿದವರನ್ನು ಹುಡುಕಲು ಮತ್ತು ಸಂಕಷ್ಟಕ್ಕೆ ಸಿಲುಕಿಕೊಂಡವರನ್ನು ಸ್ಥಳಾಂತರಿಸಲು ದೊಡ್ಡ ಪ್ರಮಾಣದ ಕಾರ್ಯಾಚರಣೆಗಳು ಶುರುವಾಗಿವೆ. ಯಾತ್ರೆಯ ಆರಂಭದ ಸ್ಥಳದಿಂದ ಯಾತ್ರಿಕರನ್ನು ತರಾತುರಿಯಲ್ಲಿ ಸ್ಥಳಾಂತರಿಸುತ್ತಿರುವ ವಿಡಿಯೋಗಗಳು ವೈರಲ್ ಆಗಿವೆ.
ಪರಿಸ್ಥಿತಿಯ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ. ಮೇಘಸ್ಫೋಟ ಪೀಡಿತ ಪ್ರದೇಶದಿಂದ ದೃಢಪಡಿಸಿದ ಮಾಹಿತಿ ನಿಧಾನವಾಗಿ ಬರುತ್ತಿದೆ. ರಕ್ಷಣಾ ಕಾರ್ಯಾಚರಣೆಗಳನ್ನು ನಿರ್ವಹಿಸಲು ಜಮ್ಮು ಮತ್ತು ಕಾಶ್ಮೀರದ ಒಳಗೆ ಮತ್ತು ಅದರಾಚೆಗೆ ಸಾಧ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ಒಮರ್ ಅಬ್ದುಲ್ಲಾ ತಿಳಿಸಿದ್ದಾರೆ.
ಇದನ್ನೂ ಓದಿ: ಪೂಜೆ ಮಾಡಿ ಅಮ್ಮನ ತಬ್ಬಿ ಕಣ್ಣೀರಿಟ್ಟ ಪವಿತ್ರ ಗೌಡ.. ಅರೆಸ್ಟ್ ಮಾಡುವ ಮುನ್ನ ನಡೆದಿದ್ದು ಏನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ