/newsfirstlive-kannada/media/media_files/2025/11/13/sandeep-chakraborthy-2025-11-13-11-51-02.jpg)
ಕೆಟ್ಟ ವಿಚಾರ, ಕೆಟ್ಟ ಕೆಲಸ.. ಕೆಟ್ಟ ವ್ಯಕ್ತಿಗಳು ಸಿಕ್ಕಿಬೀಳೋಕೆ ಒಂದೇ ಒಂದು ಸಣ್ಣ ಸುಳಿವು ಸಾಕು.. ಆದ್ರೆ, ಅದನ್ನ ಭೇಧಿಸುವಂಥ ಚಾಣಾಕ್ಷತನ ಬೇಕು. ಇದೀಗ ದೆಹಲಿಯಲ್ಲಿ ನಡೆದಿರೋ ಸ್ಫೋಟ ಜಸ್ಟ್ ಸ್ಯಾಂಪಲ್.. ಇದಕ್ಕಿಂತ ಅತಿದೊಡ್ಡ ಸ್ಫೋಟಗಳಿಗೆ ಡಿ ಗ್ಯಾಂಗ್ ಸ್ಕೆಚ್ ಹಾಕಿತ್ತು. ಇಂಥಹ ಘೋರ ಕೃತ್ಯಕ್ಕೆ ಫುಲ್‌ಸ್ಟಾಪ್ ಇಟ್ಟಿದ್ದು ಒಬ್ಬ ದಿಟ್ಟ ಪೊಲೀಸ್ ಆಫೀಸರ್ ಅಂದ್ರೆ ನೀವು ನಂಬ್ಲೇಬೇಕು.
ರಾಷ್ಟ್ರ ಲಾಂಛನದಲ್ಲಿ ಕಾಣೋದು ಮೂರೇ ಸಿಂಹ.. ಕಾಣದೇ ಇರೋ ನಾಲ್ಕನೇ ಸಿಂಹನೇ ಪೊಲೀಸ್. ಇದಕ್ಕೆ ದಿಟ್ಟ ಸಾಕ್ಷಿ ಐಪಿಎಸ್ ಅಧಿಕಾರಿ ಸಂದೀಪ್ ಚಕ್ರವರ್ತಿ. ಇಡೀ ದೇಶವನ್ನ ರಕ್ಷಿಸಿದ ಕೀರ್ತಿ ಇವರಿಗೆ ಸಲ್ಲಲೇಬೇಕು.
ದೇಶದಲ್ಲಿ ನರಮೇಧಕ್ಕೆ ಸಂಚು ನಡೆದಿತ್ತು ಅನ್ನೋದು ಆಘಾತಕಾರಿ ಸಂಗತಿ ಹೊರಬಿದ್ದಿದೆ. ಆದ್ರೆ, ಫರಿದಾಬಾದ್‌ನಲ್ಲಿ ವೈದ್ಯ ಉಗ್ರರ ಹುನ್ನಾರದ ಸುಳಿವು ಸಿಕ್ಕಿದೆ ರೋಚಕ.. ಇಡೀ ಪ್ರಕರಣ ಬೆಳಕಿಗೆ ಬಂದಿದ್ದು ಜೈಷ್-ಎ-ಮೊಹಮ್ಮದ್ ಎಂಬ ಭಯೋತ್ಪಾದಕ ಸಂಘಟನೆಯ ಅದೊಂದು ಪೋಸ್ಟರ್‌ನಿಂದ. ಜೊತೆಗೆ ಫರಿದಾಬಾದ್ ಡಾಕ್ಟರ್ ಟೆರರ್ ಮಾಡ್ಯೂಲ್ ಬೆಳಕಿಗೆ ಬಂದಿದ್ದು, ದಿಟ್ಟ ಹೆಜ್ಜೆ ಇಟ್ಟು ಉಗ್ರಗಾಮಿಗಳ ಸೆದೆಬಡೆಯುವ ಪಣ ತೊಟ್ಟಿದ್ದ ಐಪಿಎಸ್ ಅಧಿಕಾರಿ ಸಂದೀಪ್ ಚಕ್ರವರ್ತಿ ಅವರಿಂದ.
ಇದನ್ನೂ ಓದಿ: ಮೇಕೆದಾಟು ವಿಚಾರದಲ್ಲಿ ತಮಿಳುನಾಡಿಗೆ ಭಾರೀ ಮುಖಭಂಗ, ತಮಿಳುನಾಡು ಅರ್ಜಿ ತಿರಸ್ಕೃತ
/filters:format(webp)/newsfirstlive-kannada/media/media_files/2025/11/13/umar-nabi-2025-11-13-08-13-05.jpg)
ಪೋಸ್ಟರ್ TO ಟೆರರ್!
- ಶ್ರೀನಗರದ ನೌಗಾಮ್‌ನಲ್ಲಿ ಜೈಷ್-ಎ-ಮೊಹಮ್ಮದ್ ಪೋಸ್ಟರ್
- ಪೋಸ್ಟರ್‌ನ ಅಂಟಿಸಿ JeM ಉಗ್ರರಿಂದ ಎಚ್ಚರಿಕೆಯ ಸಂದೇಶ
- ಭಾರತ ಸೇನೆಗೆ ಕೆಲವರು ಬೆಂಬಲ ನೀಡುತ್ತಿದ್ದಾರೆ, ಇದನ್ನು ನಿಲ್ಲಿಸಿ
- ಸ್ಥಳೀಯರಿಗೆ ವಾರ್ನಿಂಗ್ ನೀಡಿ ಪೋಸ್ಟರ್ ಅಂಟಿಸಿದ್ದ ಉಗ್ರರು
- ಇದನ್ನು ಗಮನಿಸಿದ್ದ SSP ಸಂದೀಪ್ ಚಕ್ರವರ್ತಿ ತನಿಖೆಗೆ ಆದೇಶ
- ತನಿಖೆ ನಡೆಸಿದಾಗ ಸಿಸಿಟಿವಿಯಲ್ಲಿ ಮೂವರು ವ್ಯಕ್ತಿಗಳ ಸುಳಿವು
- ಮೂವರ ವಿಚಾರಣೆಯಲ್ಲಿ ಡಾ. ಆದಿಲ್ ರಾಥಿಲ್ ಬಗ್ಗೆ ಮಾಹಿತಿ
- ಆದಿಲ್ ರಾಥಿಲ್ ಯುಪಿಯ ಸಹರಾನ್‌ಪುರದಲ್ಲಿ ವೈದ್ಯನಾಗಿದ್ದ
- ಬಳಿಕ ಈತನಿಂದ ಫರಿದಾಬಾದ್‌ನ ಡಾ. ಮುಜಮಿಲ್ ಬಗ್ಗೆ ಮಾಹಿತಿ
- ಪೋಸ್ಟರ್‌ನಿಂದ ಡಾಕ್ಟರ್ ಟೆರರಿಸಂ ಮಾಡ್ಯೂಲ್ ಸಂಗತಿ ಬೆಳಕಿಗೆ
ಇದನ್ನೂ ಓದಿ: ಮೇಕೆದಾಟು ವಿಚಾರದಲ್ಲಿ ತಮಿಳುನಾಡಿಗೆ ಭಾರೀ ಮುಖಭಂಗ, ತಮಿಳುನಾಡು ಅರ್ಜಿ ತಿರಸ್ಕೃತ
/filters:format(webp)/newsfirstlive-kannada/media/media_files/2025/11/13/delhi-case-1-2025-11-13-16-44-13.jpg)
ಹೀಗೆ ಫರಿದಾಬಾದ್ ಡಾಕ್ಟರ್ ಟೆರರ್ ಮಾಡ್ಯೂಲ್ ಬೆಳಕಿಗೆ ಬರಲು ಕಾರಣ ಎಸ್. ಎಸ್.ಪಿ. ಸಂದೀಪ್ ಚಕ್ರವರ್ತಿ ಅವರ ಕಾರ್ಯ ಮಹತ್ವದ ಪಾತ್ರ ವಹಿಸಿದೆ.
ಯಾರು ಈ ಸಂದೀಪ್ ಚಕ್ರವರ್ತಿ?
ಸಂದೀಪ್ ಚಕ್ರವರ್ತಿ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯವರು. ಸದ್ಯ ಜಮ್ಮು-ಕಾಶ್ಮೀರದಲ್ಲಿ ಎಸ್‌ಎಸ್‌ಪಿಯಾಗಿ ಕಾರ್ಯ ನಿರ್ವಹಿಸ್ತಿದ್ದಾರೆ. ಮೂಲತಃ ವೈದ್ಯ ವೃತ್ತಿಯಲ್ಲಿದ್ದ ಇವರು ಬಳಿಕ ಐಪಿಎಸ್ ಹುದ್ದೆಗೇರಿ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸ್ತಿದ್ದಾರೆ. ಇನ್ನು ಡಾ. ಸಂದೀಪ್ ಚಕ್ರವರ್ತಿ ಅವರಿಂದ ಮಹತ್ವದ ಕಾರ್ಯಾಚರಣೆ ನಡೆದು ವೈಟ್ ಕಾಲರ್ ಟೆರರಿಸಂ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಡೆಲ್ಲಿ ಕಾರ್​ ಬ್ಲಾಸ್ಟ್​​ ಕೇಸ್.. ಮೃತರ ಸಂಖ್ಯೆ 13ಕ್ಕೆ ಏರಿಕೆ
ಪೊಲೀಸ್ ಅಧಿಕಾರಿಗಳಿಗೆ ಅವರು ಮಾಡುವ ಕಾರ್ಯ.. ಸಮಾಜದ ಬಗ್ಗೆ ಬದ್ಧತೆ ಇದ್ರೆ ಇಡೀ ದೇಶವನ್ನೇ ಅಪಾಯದಿಂದ ಪಾರು ಮಾಡಬಹುದು ಅನ್ನೋದು ಸಂದೀಪ್ ಚಕ್ರವರ್ತಿ ಅವರಿಂದ ಗೊತ್ತಾಗಿದೆ. ಈ ರೀತಿಯ ಕಾರ್ಯ ಮಾಡ್ತಿರೋ ಎಲ್ಲಾ ಪೊಲೀಸ್ ಅಧಿಕಾರಿಗಳಿಗೊಂದು ಬಿಗ್ ಸೆಲ್ಯೂಟ್.
ವಿಶೇಷ ವರದಿ: ಚಂದ್ರಮೋಹನ್, ನ್ಯೂಸ್‌ಫಸ್ಟ್, ನವದೆಹಲಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us