/newsfirstlive-kannada/media/media_files/2025/12/04/indigo-airlines-cancelled02-2025-12-04-18-06-27.jpg)
ದೇಶಾದ್ಯಂತ ಇಂಡಿಗೋ ವಿಮಾನ ಹಾರಾಟ ರದ್ದತಿ ತೀವ್ರವಾದ ಬಿಕ್ಕಟ್ಟನ್ನು ಸೃಷ್ಟಿಸಿದೆ. ನಿನ್ನೆ ನೂರಾರು ವಿಮಾನಗಳು ಕ್ಯಾನ್ಸಲ್ ಆಗಿರೋದ್ರಿಂದ ಏರ್‌ಪೋರ್ಟ್‌ನಲ್ಲೇ ಪ್ರಯಾಣಿಕರು ಪರದಾಡಿದ್ದಾರೆ. ಇವತ್ತು ಪ್ರಯಾಣಿಕರಿಗೆ ಇದೇ ಸಮಸ್ಯೆ ಮುಂದುವರೆಯಲಿದೆ. ಇಂಡಿಗೋ ಸಮಸ್ಯೆ ನಡುವೆ ಕೇಂದ್ರ ಸರ್ಕಾರ ಎಂಟ್ರಿಯಾಗಿ ನೋಟಿಸ್ ಜಾರಿ ಮಾಡಿದೆ. ಇದೆಲ್ಲದರ ನಡುವೆ ಕೆಲ ವಿಮಾನಯಾನ ಸಂಸ್ಥೆಗಳು ಬೇಕಾಬಿಟ್ಟಿ ದರ ಏರಿಕೆ ಮಾಡಿದ್ದು ಸರ್ಕಾರ ಖಡಕ್​ ಮೂಗುದಾರ ಹಾಕಿದೆ.
24 ಗಂಟೆಯೊಳಗೆ ಉತ್ತರಿಸಿ.. ಇಲ್ಲದಿದ್ರೆ ಕ್ರಮದ ಬಗ್ಗೆ ಎಚ್ಚರಿಕೆ
ಡಿಸೆಂಬರ್ 4ಕ್ಕೆ ಭಾರತಕ್ಕೆ ಬಂದಿಳಿದಿದ್ದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎರಡು ದಿನ ಪ್ರವಾಸದಲ್ಲಿದ್ರು. ಪುಟಿನ್ ಭಾರತಕ್ಕೆ ಭೇಟಿ ನೀಡಿದ ದಿನವೂ ಇಂಡಿಗೋ ವಿಮಾನ ಹಾರಾಟ ರದ್ದಾಗಿತ್ತು.. ಹೀಗಾಗಿ ಕೇಂದ್ರ ಸರ್ಕಾರ ಇಂಡಿಗೋ ಕಂಪನಿ ಹಾಗೂ ಅದರ ಸಿಇಒ ಪೀಟರ್ ಎಲ್ಬರ್ಸ್ ಮೇಲೆ ಸಿಟ್ಟಾಗಿದೆ. ಸಾವಿರಾರು ಫ್ಲೈಟ್ ಕ್ಯಾನ್ಸಲ್ ಆಗಿರೋದು ಬೇರೆ ದೇಶದ ಎದುರು ಮುಜುಗರ ಮಾಡುವಂತಾಗಿದೆ.
ಇದನ್ನೂ ಓದಿ: ವೆಂಕಟೇಶ್ ಪ್ರಸಾದ್ vs ಶಾಂತ ಕುಮಾರ್ : KSCA ಚುನಾವಣೆ ಆರಂಭ..!
/filters:format(webp)/newsfirstlive-kannada/media/media_files/2025/12/04/indigo-airlines-cancelled-2025-12-04-17-58-21.jpg)
ಹೀಗಾಗಿ ಪೀಟರ್ ಎಲ್ಬರ್ಸ್ ವಿರುದ್ಧ ಕೇಂದ್ರ ಮತ್ತು ಪ್ರಧಾನಿ ಕಾರ್ಯಾಲಯ ತೀವ್ರ ಅಸಮಾಧಾನ ಹೊರಹಾಕಿದೆ. ಜೊತೆಗೆ ಇಂಡಿಗೋ ಏರ್‌ಲೈನ್ಸ್‌ಗೆ ಶೋಕಾಸ್ ನೋಟಿಸ್ ಕೊಟ್ಟಿದ್ದು, ವಿಮಾನಯಾನದ ವಿಳಂಬ, ರದ್ದತಿ ಮತ್ತು ಕಾರ್ಯಾಚರಣೆಯ ಸ್ಥಗಿತಗಳಿಗೆ ವಿವರಣೆ ನೀಡುವಂತೆ 24 ಗಂಟೆಯೊಳಗೆ ಸೂಚಿಸಿದೆ. ಒಂದ್ವೇಳೆ ಉತ್ತರ ಕೊಡೋದು ತಡವಾದ್ರೆ ಶಿಕ್ಷಾರ್ಹ ಕ್ರಮ ಕೊಳ್ಳಲಾಗುವುದು ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ಎಚ್ಚರಿಕೆ ನೀಡಿದೆ. ಇದರ ವಿದೇಶಿ ಸಿಇಓ ಪೀಟರ್ ಎಲ್ಬರ್ಸ್ ತೆಗೆದು ಹಾಕಲು ಇಂಡಿಗೋ ಕಂಪನಿಗೆ ಮೌಖಿಕ ಸೂಚನೆ ಸಾಧ್ಯತೆ ಇದ್ದು, ವಿಮಾನ ಹಾರಾಟ ರದ್ದತಿಗೆ ಬಗ್ಗೆ ತನಿಖೆ ಆರಂಭವಾಗಿದೆ.
ಇಂಡಿಗೋ ಸೇವೆಯಲ್ಲಿ ವ್ಯತ್ಯಯವಾಗಿರೋದ್ರಿಂದ ರದ್ದಾದ ಬುಕ್ಕಿಂಗ್‌ಗಳಿಗೆ ಸ್ವಯಂ ಚಾಲಿತ ಪಾವತಿ ಮಾಡ್ಲಾಗುತ್ತೆ. ಸ್ವಯಂಚಾಲಿತವಾಗಿ ಅದೇ ವಿಧಾನಕ್ಕೆ ಕಳಿಸಲಾಗುತ್ತಿದೆ. ಡಿಸೆಂಬರ್ 5ರಿಂದ ಡಿಸೆಂಬರ್ 15ರವರೆಗಿನ ಎಲ್ಲಾ ಬುಕ್ಕಿಂಗ್​​ಗಳಿಗೆ, ರದ್ದತಿ, ಮರು ಹೊಂದಿಸುವ ಶುಲ್ಕ ಸಂಪೂರ್ಣ ಮನ್ನಾ ಎಂದು ಪ್ರಯಾಣಿಕರಿಗೆ ಇಂಡಿಗೋ ಮಾಹಿತಿ ಕೊಟ್ಟಿದೆ. ಇಂಡಿಗೋ ವಿಮಾನ ಸಂಸ್ಥೆಯ ಯಡವಟ್ಟಿನಿಂದ ಕಳೆದ ಐದಾರು ದಿನಗಳಿಂದ ಪ್ರಯಾಣಿಕರು ಪರದಾಡ್ತಿದ್ದು, ಇದರ ಮಧ್ಯೆ ಬೇರೆ ಬೇರೆ ವಿಮಾನ ಸಂಸ್ಥೆಗಳು ಬಿಕ್ಕಟ್ಟಿನ ಲಾಭ ಪಡೆಯಲು ಟಿಕೆಟ್​ ದರವನ್ನ ಏರಿಕೆ ಮಾಡಿದ್ದಾರೆ. ಇದೀಗ ಈ ವಿಚಾರಕ್ಕೆ ಮಧ್ಯೆ ಪ್ರವೇಶಿಸಿರುವ ಕೇಂದ್ರ ಸರ್ಕಾರ ದರ ಏರಿಕೆಗೆ ಬ್ರೇಕ್​ ಹಾಕಿದೆ.
ಇದನ್ನೂ ಓದಿ:ಕ್ಯಾಪ್ಟನ್ ರೂಮ್​ಗೆ ಬೀಗ ಜಡಿದ ಕಿಚ್ಚ ಸುದೀಪ್.. ಇಲ್ಲಿ ಎಲ್ಲಾ ಗಿಲ್ಲಿಯಿಂದಲೇ..
/filters:format(webp)/newsfirstlive-kannada/media/post_attachments/wp-content/uploads/2023/10/IndiGo-Plane.jpg)
ದುಪ್ಪಟ್ಟು ದರಕ್ಕೆ ಬ್ರೇಕ್
- ಟಿಕೆಟ್ ದರ ಹೆಚ್ಚಿಸಿದ ಏರ್ ಇಂಡಿಯಾ, ಸ್ಪೈಸ್​​ ಜೆಟ್​​ ಏರ್​ಲೈನ್ಸ್
- ಸ್ಪೈಸ್​​ ಜೆಟ್​​ ಬೆಂಗಳೂರು-ದೆಹಲಿ ಮೊದಲು 5-7 ಸಾವಿರ, ಈಗ ₹38,278
- ಏರ್ ಇಂಡಿಯಾ ಬೆಂಗಳೂರು-ದೆಹಲಿಗೆ ಮೊದಲು 5-7 ಸಾವಿರ, ಈಗ ₹39,719
- ಈ ಬೆನ್ನಲ್ಲೇ ದೇಶಿಯ ವಿಮಾನ ದರಗಳ ಮೇಲೆ ಕೇಂದ್ರ ಸರ್ಕಾರ ಮಿತಿ
- 500 ಕಿಲೋ ಮೀಟರ್​ವರೆಗೆ 7,500 ರೂಪಾಯಿ ಗರಿಷ್ಠ ದರ
- 500–ರಿಂದ 1,000 ಕಿ.ಮೀ 12,000 ರೂಪಾಯಿ ಗರಿಷ್ಠ ದರ
- 1,000 ರಿಂದ 1,500 ಕಿ.ಮೀ 15,000 ರೂಪಾಯಿ ಗರಿಷ್ಠ ದರ
- 1,500 ಕಿಲೋ ಮೀಟರ್​ಗಿಂತ ಹೆಚ್ಚು ₹18,000 ಗರಿಷ್ಠ ದರ
- ಈ ಬೆಲೆಯು UDF, PSF ಮತ್ತು ತೆರಿಗೆಗಳನ್ನು ಒಳಗೊಂಡಿಲ್ಲ
- ವ್ಯಾಪಾರ ವರ್ಗ ಮತ್ತು UDAN ವಿಮಾನಗಳಿಗೆ ಅನ್ವಯಿಸಲ್ಲ
ಏರ್‌ಪೋರ್ಟ್‌ಗಳಲ್ಲಿ ಪ್ರಯಾಣಿಕರ ಒಂದೊಂದು ಹೇಳತೀರದಾಗಿದೆ. ಒಟ್ನಲ್ಲಿ.. ಇಂಡಿಗೋ ಸಮಸ್ಯೆ ಇನ್ನೂ 10 ದಿನಗಳ ಕಾಲ ಹೀಗೆ ಇರಲಿದೆ ಅಂತ ಸಂಸ್ಥೆ ಹೇಳಿಕೊಂಡಿದೆ. ಹೀಗಾಗಿ ಸಮಸ್ಯೆ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣಿಸ್ತಿಲ್ಲ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us