ನಾಯಿ ಕಚ್ಚಿ ಎಮ್ಮೆ ಸಾವು.. ತಿಥಿ ಕಾರ್ಯದಲ್ಲಿ ಅದರ ಹಾಲು, ಮೊಸರು ಸೇವಿಸಿದ್ದ 200 ಮಂದಿ ಕಂಗಾಲು..!

ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಉಜ್ನಿ ಪ್ರದೇಶದಲ್ಲಿ ನಾಯಿ ಕಚ್ಚಿದ ಪರಿಣಾಮ ಎಮ್ಮೆ ಸಾವನ್ನಪ್ಪಿದೆ. ಇದು ಇಡೀ ಗ್ರಾಮದಲ್ಲಿ ಆತಂಕವನ್ನುಂಟು ಮಾಡಿದೆ. ಮುನ್ನೆಚ್ಚರಿಕೆಯಾಗಿ 200 ಗ್ರಾಮಸ್ಥರಿಗೆ ರೇಬೀಸ್ ಲಸಿಕೆಗಳನ್ನು ಹಾಕಿಸಿಕೊಂಡಿದ್ದಾರೆ.

author-image
Ganesh Kerekuli
buffalo
Advertisment

ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಉಜ್ನಿ ಪ್ರದೇಶದಲ್ಲಿ ನಾಯಿ ಕಚ್ಚಿದ ಪರಿಣಾಮ ಎಮ್ಮೆ ಸಾವನ್ನಪ್ಪಿದೆ. ಇದು ಇಡೀ ಗ್ರಾಮದಲ್ಲಿ ಆತಂಕವನ್ನುಂಟು ಮಾಡಿದೆ. ನಾಯಿ ಕಡಿತದಿಂದ ಎಮ್ಮೆ ಸಾವನ್ನಪ್ಪಿದ್ದು, ಅದರ ಹಾಲಿನಿಂದ ತಯಾರಿಸಿದ ಮೊಸರು, ಮಜ್ಜಿಗೆಯನ್ನ ಸೇವಿಸಿರುವ ಗ್ರಾಮಸ್ಥರಲ್ಲಿ ಭಯ ಶುರುವಾಗಿದೆ. ಮುನ್ನೆಚ್ಚರಿಕೆಯಾಗಿ ಸುಮಾರು 200 ಗ್ರಾಮಸ್ಥರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಧಾವಿಸಿ ರೇಬೀಸ್ ಲಸಿಕೆಗಳನ್ನು ಹಾಕಿಸಿಕೊಂಡಿದ್ದಾರೆ. 

ಆಗಿದ್ದೇನು..? 

ಗ್ರಾಮಸ್ಥರ ಪ್ರಕಾರ, ಡಿಸೆಂಬರ್ 23 ರಂದು ಉಜಾನಿ ಪೊಲೀಸ್ ಠಾಣೆ ಪ್ರದೇಶದಲ್ಲಿರುವ ಪಿಪ್ರೌಲ್ ಗ್ರಾಮದಲ್ಲಿ ವ್ಯಕ್ತಿಯೊಬ್ಬ ತಿಥಿ ಕಾರ್ಯ ನಡೆದಿತ್ತು. ಆ ಕಾರ್ಯಕ್ರಮಕ್ಕೆ ಇಡೀ ಗ್ರಾಮಸ್ಥರನ್ನು ಆಹ್ವಾನ ಮಾಡಲಾಗಿತ್ತು. ಊಟದ ವೇಳೆ ಮೊಸರು ಮತ್ತು ಮಜ್ಜಿಗೆಯನ್ನ ನೀಡಲಾಗಿತ್ತು. ಅಲ್ಲಿ ಬಳಸಿದ್ದ ಮಜ್ಜಿಗೆ ಮತ್ತು ಮೊಸರನ್ನು ಎಮ್ಮೆಯ ಹಾಲಿನಿಂದ ತಯಾರಿಸಲಾಗಿತ್ತು. ಆ ಎಮ್ಮೆಗೆ ಕೆಲವು ದಿನಗಳ ಹಿಂದೆ ನಾಯಿಯೊಂದು ಕಚ್ಚಿತ್ತು ಎನ್ನಲಾಗಿದೆ. 

ಡಿಸೆಂಬರ್ 26 ರಂದು ನಾಯಿ ಕಡಿತದಿಂದ ಎಮ್ಮೆ ಸಾವನ್ನಪ್ಪಿದೆ ಎಂದು ವರದಿಯಾಗಿದೆ. ಇದು ಸೋಂಕು ಹರಡುವ ಸಾಧ್ಯತೆಯ ಬಗ್ಗೆ ಗ್ರಾಮದಲ್ಲಿ ಭೀತಿಯನ್ನು ಹುಟ್ಟುಹಾಕಿದೆ. ಇದೇ ಕಾರಣಕ್ಕೆ ಉಜ್ಜೈನಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಗ್ರಾಮಸ್ಥರು ದೌಡಾಯಿಸಿದ್ದಾರೆ. ಸುಮಾರು 200 ಮಂದಿ ರೇಬಿಸ್ ಔಷಧಿಯಲ್ಲಿ ಹಾಕಿಸಿಕೊಂಡಿದ್ದಾರೆ. 

ಇದನ್ನೂ ಓದಿ: ವರ್ಷಾಂತ್ಯ, ಸರಣಿ ರಜೆ ಹಿನ್ನೆಲೆ ಎಲ್ಲೆಲ್ಲೂ ಜನಜಂಗುಳಿ.. ಹೇಗಿದೆ ಜನರ ಹುರುಪು..?

ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮಸ್ಥರು ಔಷಧಿ ಹಾಕಿಸಿಕೊಂಡಿದ್ದಾರೆ. ಗ್ರಾಮಸ್ಥೆ ಜಶೋದಾ ದೇವಿ ಮಾತನ್ನಾಡಿ, ಗ್ರಾಮದಲ್ಲಿ ಹದಿಮೂರನೇ ದಿನದ ಕಾರ್ಯವಿತ್ತು. ಅಲ್ಲಿ ಎಲ್ಲರೂ ರೈತಾ ತಿಂದರು. ನಂತರ, ಎಮ್ಮೆ ಸತ್ತಾಗ ಮತ್ತು ನಾಯಿ ಕಚ್ಚಿದ ವಿಷಯ ತಿಳಿದು ಗ್ರಾಮಸ್ಥರು ಗಾಬರಿ ಆಗಿದ್ದಾರೆ ಎಂದು ತಿಳಿಸಿದ್ದಾರೆ. 

ವೈದ್ಯರ ತಂಡ ಏನು ಹೇಳಿದೆ..? 

ಮುಖ್ಯ ವೈದ್ಯಾಧಿಕಾರಿ ಡಾ. ರಾಮೇಶ್ವರ ಮಿಶ್ರಾ ಮಾತನಾಡಿ ಗ್ರಾಮದಲ್ಲಿ ಒಂದು ಎಮ್ಮೆಯನ್ನು ನಾಯಿ ಕಚ್ಚಿತ್ತು ಎನ್ನಲಾಗಿದೆ. ಕೊನೆಗೆ ಆ ಎಮ್ಮೆ ರೇಬೀಸ್ ಲಕ್ಷಣಗಳಿಂದ ಸಾವನ್ನಪ್ಪಿದೆ. ಆ ಎಮ್ಮೆಯ ಹಾಲಿನಿಂದ ತಯಾರಿಸಿದ ಮೊಸರು ರೈತಾ ತಿಂದಿರುವುದಾಗಿ ಗ್ರಾಮಸ್ಥರು ವರದಿ ಮಾಡಿದ್ದಾರೆ. ಮುನ್ನೆಚ್ಚರಿಕೆಯಾಗಿ, ಎಲ್ಲರಿಗೂ ರೇಬೀಸ್ ಲಸಿಕೆ ಹಾಕಿಸಿಕೊಳ್ಳಲು ಸೂಚಿಸಲಾಗಿದೆ. ಹಾಲನ್ನು ಕುದಿಸಿದ ನಂತರ ರೇಬೀಸ್ ಸಾಮಾನ್ಯವಾಗಿ ಅಪಾಯಕಾರಿಯಲ್ಲ. ಸಂಭಾವ್ಯ ಅಪಾಯವನ್ನು ತಡೆಗಟ್ಟಲು ಲಸಿಕೆ ಹಾಕಲಾಗಿದೆ. ಆರೋಗ್ಯ ಇಲಾಖೆಯ ಪ್ರಕಾರ, ಗ್ರಾಮದಲ್ಲಿ ಪ್ರಸ್ತುತ ಯಾವುದೇ ರೋಗ ಹರಡಿಲ್ಲ. 

ಇದನ್ನೂ ಓದಿ: ಮೆಟ್ರೋದಲ್ಲಿ ಮೊಬೈಲ್ ಬಳಸೋ ಮುನ್ನ ಎಚ್ಚರ.. ಅಪ್ಪಿ, ತಪ್ಪಿ ರೀಲ್ಸ್​ ಕ್ಲಿಕ್ ಮಾಡಿದ್ರೆ ಅಷ್ಟೇ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Dog buffalo
Advertisment