ವರ್ಷಾಂತ್ಯ, ಸರಣಿ ರಜೆ ಹಿನ್ನೆಲೆ ಎಲ್ಲೆಲ್ಲೂ ಜನಜಂಗುಳಿ.. ಹೇಗಿದೆ ಜನರ ಹುರುಪು..?

ವರ್ಷಾಂತ್ಯ ಹಾಗೂ ಸಾಲು ಸಾಲು ರಜೆ ಹಿನ್ನೆಲೆ ರಾಜ್ಯದ ದೇಗುಲಗಳು ಹಾಗೂ ಪ್ರವಾಸಿ ತಾಣಗಳು ಜನರಿಂದ ತುಂಬಿ ತುಳುಕುತ್ತಿವೆ. ಒಂದ್ಕಡೆ ಜನರು ಪಾರ್ಟಿ ಸಂಭ್ರಮದಲ್ಲಿದ್ರೆ ಮತ್ತೆ ಕೆಲವರು ಕುಟುಂಬದೊಂದಿಗೆ ಪ್ರವಾಸಿ ತಾಣಗಳಿಗೆ ಲಗ್ಗೆ ಇಟ್ಟು ಸಂಭ್ರಮ ಪಡ್ತಿದ್ದಾರೆ.

author-image
Ganesh Kerekuli
new year (8)
Advertisment

ವರ್ಷಾಂತ್ಯ ಹಾಗೂ ಸಾಲು ಸಾಲು ರಜೆ ಹಿನ್ನೆಲೆ ರಾಜ್ಯದ ದೇಗುಲಗಳು ಹಾಗೂ ಪ್ರವಾಸಿ ತಾಣಗಳು ಜನರಿಂದ ತುಂಬಿ ತುಳುಕುತ್ತಿವೆ. ಒಂದ್ಕಡೆ ಜನರು ಪಾರ್ಟಿ ಸಂಭ್ರಮದಲ್ಲಿದ್ರೆ ಮತ್ತೆ ಕೆಲವರು ಕುಟುಂಬದೊಂದಿಗೆ ಪ್ರವಾಸಿ ತಾಣಗಳಿಗೆ ಲಗ್ಗೆ ಇಟ್ಟು ಸಂಭ್ರಮ ಪಡ್ತಿದ್ದಾರೆ. ಅದ್ಯಾವ ಲೆವೆಲ್​ಗೆ ಅಂದ್ರೆ ಹೋಟೆಲ್​ ರೂಮ್​ಗಳೆಲ್ಲ ತುಂಬಿದ್ದು ದರ ಮೂರು ಪಟ್ಟು ಹೆಚ್ಚಾಗಿದೆ.

ಇದನ್ನೂ ಓದಿ: ಸರ್ಕಾರಿ ಉದ್ಯೋಗದ ಆಕಾಂಕ್ಷಿಗಳಿಗೆ ಭರ್ಜರಿ ಗುಡ್​ನ್ಯೂಸ್.. ಇಂದೇ ಅರ್ಜಿ ಹಾಕಿ..!

new year (6)

ಜಗತ್ತಿನಾದ್ಯಂತ ಹೊಸ ವರ್ಷದ ಸಂಭ್ರಮ ನಿಧಾನವಾಗಿ ಮನೆ ಮಾಡ್ತಿದೆ. ಹೊಸ ವರುಷವನ್ನು ಹರುಷದಿಂದ ಸ್ವಾಗತಿಸಲು ಈಗಾಗಲೇ ಜನ ಸಜ್ಜಾಗಿದ್ದಾರೆ. ಕೆಲವರು ಗುಂಡು-ತುಂಡು ಅಂತ ಪಾರ್ಟಿ ಮಾಡಿ ಮಾಡಿ ಮಸ್ತಿ ಮಾಡೋಕೆ ಕಾಯ್ತಿದ್ರೆ ಇನ್ನೂ ಕೆಲವರು ತಮಗೆ ಸಿಕ್ಕ ಸಾಲು ಸಾಲು ರಜೆಗಳನ್ನ ಸಿಕ್ಕಾಪಟ್ಟೆ ಎಂಜಾಯ್ ಮಾಡ್ತಿದ್ದಾರೆ.

ವರ್ಷಾಂತ್ಯ, ಸರಣಿ ರಜೆ ಹಿನ್ನೆಲೆ ಎಲ್ಲೆಲ್ಲೂ ಜನಜಂಗುಳಿ

ನ್ಯೂ ಇಯರ್ ಫೀವರ್​.. ಎಲ್ಲರೂ ಹೊಸ ವರುಷ ಸ್ವಾಗತಕ್ಕೆ ಸಜ್ಜಾಗ್ತಿದ್ದಾರೆ. ಈ ನಡುವೆ ವರ್ಷಾಂತ್ಯ ಹಾಗೂ ಸಾಲು ಸಾಲು ರಜೆ ಹಿನ್ನೆಲೆ ಯಾವುದೇ ದೇಗುಲ ಅಥವಾ ಪ್ರವಾಸಿಗಳತ್ತ ಕಣ್ಣಾಡಿಸಿದ್ರೆ ಸಾಕು ಜನವೋ ಜನ.. 

ಇದನ್ನೂ ಓದಿ:U19 ವಿಶ್ವಕಪ್​ಗೆ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟ; ವೈಭವ್​​ ಸೂರ್ಯವಂಶಿ ನಾಯಕ

new year (5)

ಮಂಡ್ಯದ ಬಹುತೇಕ ಪ್ರವಾಸಿ ತಾಣಗಳಲ್ಲಿ ಜನಸಾಗರ ತುಂಬಿದ್ದು ಅದರಲ್ಲೂ ವಿಶ್ವಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮ ಪ್ರವಾಸಿಗರಿಂದ ಭರ್ತಿಯಾಗಿದೆ. ಪ್ರವಾಸಿಗರು ಕುಟುಂಬಗಳೊಂದಿಗೆ ಲಗ್ಗೆ ಇಟ್ಟು ಪಕ್ಷಿಗಳನ್ನು ಕಣ್ತುಂಬಿಕೊಂಡು ಖುಷಿ ಪಡ್ತಿದ್ದಾರೆ. ಇನ್ನೂ ಕೆಲವರು ದೋಣಿಗಳಲ್ಲಿ ಪಕ್ಷಿಗಳು‌ ಗೂಡು ಕಟ್ಟಿರುವ ಸಮೀಪಕ್ಕೆ ತೆರಳಿ ವೀಕ್ಷಣೆ ಮಾಡಿ ಸಂತಸಪಡ್ತಿದ್ದಾರೆ. ಸಂತಾನೋತ್ಪತ್ತಿಗಾಗಿ ದೇಶ ವಿದೇಶಗಳಿಂದ ಪಕ್ಷಿಗಳು ಆಗಮಿಸಿದ್ದು ಪಕ್ಷಿಗಳಿಗಿಂತ ಪ್ರವಾಸಿಗರ ಸಂಖ್ಯೆಯೆ ಹೆಚ್ಚಾಗಿದೆ. 

ಪ್ರವಾಸಿ ತಾಣದ ಜೊತೆ ದೇಗುಲಗಳಿಗೂ ಪ್ರವಾಸಿಗರ ಲಗ್ಗೆ

ಪ್ರವಾಸಿ ತಾಣ ಮಾತ್ರವಲ್ಲದೇ ಶ್ರೀರಂಗಪಟ್ಟಣದ ಕಾವೇರಿ ನದಿ ದಡದಲ್ಲಿರುವ ಶಕ್ತಿ ದೇವಿ ನಿಮಿಷಾಂಭ ದೇಗುಲಕ್ಕೂ ಭಕ್ತರ ದಂಡು ಲಗ್ಗೆ ಇಡ್ತಿದೆ. ಧನುರ್ಮಾಸ ಹಾಗೂ ಸಾಲು ಸಾಲು ರಜೆ ಇರೋದ್ರಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಕಾವೇರಿ ನದಿಯಲ್ಲಿ ಮಿಂದೆದ್ದು ದೇವಿ ದರ್ಶನ ಮಾಡಿ ಪೂಜೆ ಸಲ್ಲಿಸುತ್ತಿದ್ದಾರೆ. 

ಇದನ್ನೂ ಓದಿ:99 ಲಕ್ಷ ರೂಪಾಯಿ ಸಾಲ ಪಡೆದು ವಂಚನೆ ಆರೋಪ; ಬಿಜೆಪಿ ಶಾಸಕ ಶರಣು ಸಲಗರ್ ವಿರುದ್ಧ FIR

new year (3)

ಹೀಲಿಯಂ ಸಿಲಿಂಡರ್ ಸ್ಪೋಟ ಹಿನ್ನೆಲೆ ಪ್ರವಾಸಿಗರ ಮೇಲೆ ಹದ್ದಿನ ಕಣ್ಣು

ಇನ್ನು ಮಂಡ್ಯ ಮಾತ್ರವಲ್ಲದೇ ಮೈಸೂರಿಗೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ.  ದೇಶ-ವಿದೇಶದಿಂದಲೂ ಪ್ರವಾಸಿಗರು ಲಗ್ಗೆ ಇಡುತ್ತಿದ್ದಾರೆ. ಮೊನ್ನೆ ಹೀಲಿಯಂ ಸಿಲಿಂಡರ್ ಸ್ಫೋಟ ಹಿನ್ನೆಲೆ ಮೈಸೂರು ಪೊಲೀಸರು ಪ್ರವಾಸಿಗರ ಮೇಲೆ ಹದ್ದಿನ ಕಣ್ಣಿರಿಸಿದ್ದಾರೆ. ಯಾವುದೇ ಅಹಿತಕರ ಘಟನೆ ಸಂಭವಿಸದ ರೀತಿ ಮೈಸೂರು ಅರಮನೆ, ಮೃಗಾಲಯ, ಚಾಮುಂಡಿ ಬೆಟ್ಟ, ಸಂತಫಿಲೋಮಿನಾ ಚರ್ಚ್ ಸೇರಿ ಹಲವೆಡೆ ತಪಾಸಣೆ ಮಾಡ್ತಿದ್ದಾರೆ.

ಇದನ್ನೂ ಓದಿ:Breaking‌ News: ಭೀಕರ ರೈಲು ದುರಂತ.. ಮಧ್ಯರಾತ್ರಿ ಎರಡು ಬೋಗಿಗಳು ಬೆಂಕಿಗೆ ಆಹುತಿ..

new year (4)

ಹೊಸಪೇಟೆಯಲ್ಲಿ ಹೋಮ್ ಸ್ಟೇ, ರೆಸಾರ್ಟ್​ಗಳಿಗೆ ಪುಲ್ ಡಿಮಾಂಡ್

ಕುಡಿದು, ಕುಣಿದು ಕುಪ್ಪಳಿಸುವವರು ಹೊಸ ವರ್ಷ ಸ್ವಾಗತಕ್ಕೆ ವಿಜಯನಗರ ಜಿಲ್ಲೆಯ ಹೊಸಪೇಟೆಗೆ ಹರಿದು ಬರುತ್ತಿದ್ದಾರೆ. ಹಂಪಿ, ಪ್ರಾಣಿ ಸಂಗ್ರಹಾಲಯ, ದರೋಜಿ ಕರಡಿಧಾಮ, ಅಂಜನಾದ್ರಿ, ತುಂಗಭದ್ರಾ ಜಲಾಶಯ, ನೋಡಲು ಪ್ರವಾಸಿಗರು ದಾಂಗುಡಿ ಇಡ್ತಿದ್ದಾರೆ. ಹೀಗಾಗಿ ಹೋಮ್ ಸ್ಟೇ, ರೆಸಾರ್ಟ್, ಹೋಟೆಲ್​ಗಳಿಗೆ ಭಾರೀ ಡಿಮ್ಯಾಂಡ್ ಬಂದಿದ್ದು ಲಾಡ್ಜ್​ಗಳ ದರ ಮೂರು ಪಟ್ಟು ಹೆಚ್ಚಾಗಿದೆ. ಅದ್ಯಾವ ಲೆವೆಲ್​ಗೆ ಜನರು ಲಗ್ಗೆ ಇಟ್ಟಿದ್ದಾರಂದ್ರೆ ರೂಮ್​ಗಳು ಸಿಗದೇ ಪ್ರವಾಸಿಗರು ವಾಪಸ್ಸಾಗ್ತಿದ್ದಾರೆ. ಆಂಧ್ರಪ್ರದೇಶ, ಮಹಾರಾಷ್ಟ್ರ , ತಮಿಳುನಾಡು, ಕೇರಳ ಹಾಗೂ ವಿದೇಶಿಯರು ಕೂಡ ನಗರಕ್ಕೆ ದಾಂಗುಡಿ ಇಡ್ತಿದ್ದಾರೆ. 

ಒಟ್ಟಾರೆ ಹೊಸ ವರುಷವನ್ನು ನಜರು ಹರುಷದಿಂದಲೇ ಸ್ವಾಗತಿಸುತ್ತಿದ್ದಾರೆ. ಸಾಲು ಸಾಲು ರಜೆಗಳ ಹಿನ್ನೆಲೆ ದೇವಸ್ಥಾನ, ಪ್ರವಾಸಿ ತಾಣಗಳು ತುಂಬಿ ತುಳುಕುತ್ತಿವೆ.

ಇದನ್ನೂ ಓದಿ:ರಾಜ್ಯದಲ್ಲಿ ಮರ್ಯಾದಾ ಹತ್ಯೆ ತಡೆ ಕಾನೂನು -ಸಿದ್ದರಾಮಯ್ಯ ಸರ್ಕಾರ ಮಹತ್ವದ ನಿರ್ಧಾರ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Happy new year Happy New Year 2026
Advertisment