ಮೆಟ್ರೋದಲ್ಲಿ ಮೊಬೈಲ್ ಬಳಸೋ ಮುನ್ನ ಎಚ್ಚರ.. ಅಪ್ಪಿ, ತಪ್ಪಿ ರೀಲ್ಸ್​ ಕ್ಲಿಕ್ ಮಾಡಿದ್ರೆ ಅಷ್ಟೇ..!

ಮೆಟ್ರೋದಲ್ಲಿ ಕುಳಿತು ರೀಲ್ಸ್ ನೋಡೋ ಅಭ್ಯಾಸ ಇದ್ಯಾ? ಹಾಗಿದ್ರೆ ಎಚ್ಚರ. ಇನ್ನು ಮುಂದೆ ಮೆಟ್ರೋ ಹತ್ತಿ ರೀಲ್ಸ್ ನೋಡಿದ್ರೆ ದಂಡ ಬೀಳಲಿದೆ. ರೀಲ್ಸ್​ ನೋಡಿದ್ದು ಗೊತ್ತಾದ ಕೂಡ ವಾರ್ನ್​ ಮಾಡ್ತಾರೆ. ಒಂದು ವೇಳೇ ವಾರ್ನ್​ ನಂತರವೂ ರೀಲ್ಸ್​ ನೋಡಿದ್ರೆ, ದಂಡ ಫಿಕ್ಸ್.

author-image
Ganesh Kerekuli
Updated On
namma metro (2)
Advertisment
  • ರೀಲ್ಸ್ ನೋಡೋದ್ರಿಂದ ಇತರೆ ಪ್ರಯಾಣಿಕರಿಗೆ ತೊಂದರೆ
  • ಈ ಬಗ್ಗೆ ನಿರಂತರವಾಗಿ ಬಿಎಂಆರ್​ಸಿಎಲ್​ಗೆ ದೂರು
  • ಹೀಗಾಗಿ, ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾದ BMRCL

ಬೆಂಗಳೂರು: ಮೆಟ್ರೋದಲ್ಲಿ ಕುಳಿತು ರೀಲ್ಸ್ ನೋಡೋ ಅಭ್ಯಾಸ ಇದ್ಯಾ? ಹಾಗಿದ್ರೆ ಎಚ್ಚರ. ಇನ್ನು ಮುಂದೆ ಮೆಟ್ರೋ ಹತ್ತಿ ರೀಲ್ಸ್ ನೋಡಿದ್ರೆ ದಂಡ ಬೀಳಲಿದೆ. ರೀಲ್ಸ್​ ನೋಡಿದ್ದು ಗೊತ್ತಾದ ಕೂಡ ವಾರ್ನ್​ ಮಾಡ್ತಾರೆ. 

ಒಂದು ವೇಳೇ ವಾರ್ನ್​ ನಂತರವೂ ರೀಲ್ಸ್​ ನೋಡಿದ್ರೆ, ದಂಡ ಫಿಕ್ಸ್. ಮಿನಿಮಮ್ ಅಂದ್ರೆ 500 ರೂಪಾಯಿ ದಂಡ ಹಾಕಲು ಬಿಎಂಆರ್ಸಿಎಲ್ ನಿರ್ಧಾರ ಮಾಡಿದೆ. ಈ ನಿರ್ಧಾರದಿಂದ ಬಿಎಂಆರ್​ಸಿಎಲ್​ ನಡೆ ಎಷ್ಟು ಸರಿ ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ.
ಮೊದಲು ಮೆಟ್ರೋದಲ್ಲಿ ಊಟ ಮಾಡೋ ಹಾಗೇ ಇಲ್ಲ ಅಂದ್ರು. ಈಗ ರೀಲ್ಸ್​ ನೋಡೋ ಹಾಗೂ ಇಲ್ಲ ಅಂತಿದ್ದಾರೆ. ಹಾಗಿದ್ರೆ ಬಿಎಂಆರ್​ಸಿಎಲ್​ ಏನು ತುಘಲಕ್​ ದರ್ಬಾರ್​ ಮಾಡ್ತಾಯಿದೆ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. 

ಇದನ್ನೂ ಓದಿ: ವರ್ಷಾಂತ್ಯ, ಸರಣಿ ರಜೆ ಹಿನ್ನೆಲೆ ಎಲ್ಲೆಲ್ಲೂ ಜನಜಂಗುಳಿ.. ಹೇಗಿದೆ ಜನರ ಹುರುಪು..?

namma metro (1)

ಕಳೆದ ಒಂದು ವರ್ಷದಲ್ಲಿ ವಾರ್ನಿಂಗ್ ಕೊಟ್ಟು ಮೆಟ್ರೋ ಭದ್ರತಾ ಸಿಬ್ಬಂದಿಗಳೇ ಸುಸ್ತಾಗಿದ್ದಾರಂತೆ. ಹೀಗಾಗಿ ಕಠಿಣ ನಿಯಮ ರಚನೆಯ ಲೆಕ್ಕಾಚಾರಕ್ಕೆ BMRCL ಮುಂದಾಗಿದೆ. ಡಿಸೆಂಬರ್ 5 ರಿಂದ 25ರ ವರೆಗಿನ ಡಾಟಾ ಪ್ರಕಾರ 6 ಸಾವಿರದ 520 ಮಂದಿ ವಿರುದ್ಧ ಲೌಡ್ ಸೌಂಡ್ ಕೇಸ್ ದಾಖಲಾಗಿವೆ.

ರೀಲ್ಸ್ ನೋಡೋದು ಜೋರಾಗಿ ಮಾತನಾಡುವುದು, ಬ್ಲೂಟೂತ್ ಹಾಕಿ ಗಟ್ಟಿ ಮಾತನಾಡುವ 6 ಸಾವಿರದ 520 ಪ್ರಕರಣ ದಾಖಲಾಗಿವೆ. ಮೆಟ್ರೋ ಟ್ರೈನ್ ಒಳಗಡೆ ಕದ್ದು ತಿಂಡಿ/ಊಟ ತಿನ್ನುವ 268 ಕೇಸ್ ದಾಖಲಾದ್ರೆ, ತಂಬಾಕು ಸೇವನೆಯಡಿ 641 ಕೇಸ್ ದಾಖಲಾಗಿವೆ.

ಇದನ್ನೂ ಓದಿ:U19 ವಿಶ್ವಕಪ್​ಗೆ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟ.. ಸೌತ್​ ಆಫ್ರಿಕಾ ಸರಣಿಗೆ ವೈಭವ್​ ಕ್ಯಾಪ್ಟನ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Namma metro Metro Yellow Line Mobile Phone
Advertisment