ದೆಹಲಿಯಲ್ಲಿ ವಿಧ್ವಂಸಕ ಕೃತ್ಯ.. ಕರ್ನಾಟಕದಲ್ಲೂ ಹೈ-ಅಲರ್ಟ್​, ಸಿಎಂ ಖಡಕ್ ಸೂಚನೆ

ದೆಹಲಿಯಲ್ಲಿ ನಡೆದ ವಿಧ್ವಂಸಕ ಕೃತ್ಯ ಬೆನ್ನಲ್ಲೇ ಕರ್ನಾಟಕದಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಈಗಾಗಲೇ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದು, ಅಂತೆಯೇ ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣ, ಮಾರುಕಟ್ಟೆ ಸೇರಿದಂತೆ ಜನಬಿಡ ಪ್ರದೇಶಗಳಲ್ಲಿ ಅರ್ಲಟ್​ ಘೋಷಣೆ ಮಾಡಲಾಗಿದೆ.

author-image
Ganesh Kerekuli
Siddaramaiah
Advertisment

ದೆಹಲಿಯಲ್ಲಿ ನಡೆದ ಸ್ಫೋ* ಪ್ರಕರಣ ಬೆನ್ನಲ್ಲೇ ದೇಶದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಶ್ರೀರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಪೊಲೀಸರ ಭದ್ರತೆ ಹೆಚ್ಚಾಗಿದೆ. ಸ್ಥಳದಲ್ಲಿ ಭದ್ರತಾ ಸಿಬ್ಬಂದಿ  ಮೊಕ್ಕಾಂ ಹೂಡಿ ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ.

ತಾಜ್​ಮಹಲ್​​ ಸೇರಿದಂತೆ ಕುತುಬ್​ ಮಿನಾರ್​ ದೇಶ ಪ್ರೇಕ್ಷಣಿಯ ತಾಣ ಹಾಗೂ ವಿಮಾನ ನಿಲ್ದಾಣದಲ್ಲೂ ಹೈ-ಅಲರ್ಟ್ ಘೋಷಿಸಲಾಗಿದೆ.

ಕರ್ನಾಟಕದಲ್ಲೂ ಅಲರ್ಟ್​..!

ಬೆಂಗಳೂರಲ್ಲೂ ಪೊಲೀಸರು ಕಟ್ಟೆಚ್ಚರ ವಹಿಸಲಾಗಿದೆ. ದೆಹಲಿ ಪ್ರಕರಣ ಬೆನ್ನಲ್ಲೇ  ಪೊಲೀಸರು ಬೆಂಗಳೂರಿನ ಎಲ್ಲಾ ಕಡೆ ಪರಿಶೀಲನೆ ನಡೆಸಿದ್ದಾರೆ. ಮಾಲ್​ಗಳು, ಲಾಡ್ಜ್, ಹೋಟೆಲ್, ರೈಲ್ವೆ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಜನರ ಓಡಾಟ ಹೆಚ್ಚಿರುವ ಕಡೆ ಮತ್ತಷ್ಟು ಫುಲ್ ಅಲರ್ಟ್ ಘೋಷಣೆ ಮಾಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ.. ಬೆಂಗಳೂರು ಪೊಲೀಸರ ಜೊತೆ ಮಾತಾನಾಡಿ ರಾಜ್ಯದಲ್ಲೂ ಅಲರ್ಟ್‌ ಘೋಷಿಸಿದ್ದೇವೆ. ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಭದ್ರತೆಯೊಂದಿಗೆ ಇಡೀ ರಾಜ್ಯದಲ್ಲಿ ಭದ್ರತೆ ಬಿಗಿಗೊಳಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ. 

ಇದನ್ನೂ ಓದಿ: ಡಾಕ್ಟರ್ ಮನೆಯಲ್ಲಿ ಮದ್ದು, ಗುಂಡು, ಬಂದೂಕು.. ದೆಹಲಿ ವಿಧ್ವಂಸಕ ಕೃತ್ಯಕ್ಕೂ ಮುನ್ನ ಏನೆಲ್ಲ ನಡೆದಿತ್ತು..?

Delhi incident (5)

ಕೇಂದ್ರ ಸರ್ಕಾರದ ಅಧೀನದ ಕಚೇರಿಗಳ ಭದ್ರತೆಗೆ ಬೆಂಗಳೂರು ಕಮಿಷನರ್ ಸೂಚಿಸಿದ್ದಾರೆ. ಕೂಡಲೇ ಠಾಣಾ ವ್ಯಾಪ್ತಿಯಲ್ಲಿ ಗಸ್ತು ಮಾಡಬೇಕು. ಲಾಡ್ಜ್ ಗಳನ್ನು ತಪಾಸಣೆ ಮಾಡಬೇಕು, ಮಾತ್ರವಲ್ಲದೇ ಅನುಮಾನಸ್ಪದ ವ್ಯಕ್ತಿಗಳು ವಿಚಾರಣೆ ಮಾಡಬೇಕು. ಲಾಡ್ಜ್‌ನಲ್ಲಿ ತಂಗಿರೋ ಹೊರ ರಾಜ್ಯದವರ ವಿಚಾರಣೆ ನಡೆಸುವಂತೆ ಕಮಿಷನರ್ ನಗರದ ಎಲ್ಲಾ ಇನ್ಸ್​​ಪೆಕ್ಟರ್​ಗಳಿಗೆ  ಖಡಕ್​ ಸೂಚನೆ ಕೊಟ್ಟಿದ್ದಾರೆ. 

ಬಿಹಾರದಲ್ಲಿ ಎರಡನೇ ಹಂತದ ಚುನಾವಣೆ ಆರಂಭವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಂಭವಿಸಿದ ಭೀಕರ ಕಾರು ಸ್ಫೋ*ದಿಂದಾಗಿ, 2ನೇ ಹಂತದ ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ಬಿಹಾರದಲ್ಲಿ ತೀವ್ರ ಕಟ್ಟೆಚ್ಚರ ಘೋಷಣೆ ಮಾಡಲಾಗಿದೆ. ರಾಜಧಾನಿ ಪಾಟ್ನಾ ಸೇರಿದಂತೆ ರಾಜ್ಯಾದ್ಯಂತ ಪೊಲೀಸ್‌ ಸರ್ಪಗಾವಲು ಹಾಕಲಾಗಿದ್ದು, ಪ್ರಮುಖವಾಗಿ ಗಡಿ ಭಾಗಗಳಲ್ಲಿ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ. ಹೊರ ರಾಜ್ಯದಿಂದ ಬಿಹಾರ ಪ್ರವೇಶಿಸುವವರ ಮೇಲೆ ನಿಗಾ ವಹಿಸಲಾಗಿದೆ

ಇದನ್ನೂ ಓದಿ: 8 ನಿಮಿಷದಲ್ಲಿ ಘಟನಾ ಸ್ಥಳಕ್ಕೆ ಬಂದ ತನಿಖಾ ತಂಡ.. ದೆಹಲಿ ಕೃತ್ಯದ ತನಿಖೆ ಹೇಗೆ ನಡೀತಿದೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Delhi incident Red Fort ದೆಹಲಿ ಕೆಂಪುಕೋಟೆ
Advertisment