ಡಾಕ್ಟರ್ ಮನೆಯಲ್ಲಿ ಮದ್ದು, ಗುಂಡು, ಬಂದೂಕು.. ದೆಹಲಿ ವಿಧ್ವಂಸಕ ಕೃತ್ಯಕ್ಕೂ ಮುನ್ನ ಏನೆಲ್ಲ ನಡೆದಿತ್ತು..?

ರಾಷ್ಟ್ರ ರಾಜಧಾನಿಯಲ್ಲಿ ಅತಿ ದೊಡ್ಡ ವಿಧ್ವಂಸಕ ಕೃತ್ಯಕ್ಕೆ ರೂಪಿಸಿದ್ದ ಸಂಚು ಪೊಲೀಸರ ಸಮಯೋಚಿತ ಕಾರ್ಯಾಚರಣೆಯಿಂದ ತಪ್ಪಿದಂತಾಗಿದೆ. 300 ಕೆ.ಜಿ ಆರ್​​ಡಿಎಕ್ಸ್ ಸೇರಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನ ವಶಪಡಿಸಿಕೊಂಡಿದ್ದು ಇಬ್ಬರು ವೈದ್ಯರು ಸೇರಿ ಐವರನ್ನ ಬಂಧಿಸಲಾಗಿದೆ.

author-image
Ganesh Kerekuli
Delhi incident (4)
Advertisment

ರಾಷ್ಟ್ರ ರಾಜಧಾನಿಯಲ್ಲಿ ಅತಿ ದೊಡ್ಡ ವಿಧ್ವಂಸಕ ಕೃತ್ಯಕ್ಕೆ ರೂಪಿಸಿದ್ದ ಸಂಚು ಪೊಲೀಸರ ಸಮಯೋಚಿತ ಕಾರ್ಯಾಚರಣೆಯಿಂದ ತಪ್ಪಿದಂತಾಗಿದೆ. 300 ಕೆ.ಜಿ ಆರ್​​ಡಿಎಕ್ಸ್ ಸೇರಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನ ವಶಪಡಿಸಿಕೊಂಡಿದ್ದು ಇಬ್ಬರು ವೈದ್ಯರು ಸೇರಿ ಐವರನ್ನ ಬಂಧಿಸಲಾಗಿದೆ. ಇಷ್ಟೆಲ್ಲಾ ಮುನ್ನೆಚ್ಚರಿಕೆ ತೆಗೆದುಕೊಂಡಿದ್ರು ದೆಹಲಿಯಲ್ಲಿ ಸ್ಫೋ* ಶಬ್ಧ ಎಲ್ಲರ ನಿದ್ದೆ ಕಸಿದುಕೊಂಡಿದೆ.

ನಿನ್ನೆ ರಾಷ್ಟ್ರರಾಜಧಾನಿಯಲ್ಲಿ ಬ್ಲಾ*ಸ್ಟ್ ಸದ್ದು ಕೇಳಿಸೋದಕ್ಕೂ ಮುಂಚೆ ಪೊಲೀಸರು ಉಗ್ರ ಚಟುಚಟಿಯನ್ನ ಭೇದಿಸಿದ್ರು. 300 ಕೆ.ಜಿ ಆರ್​​ಡಿಎಕ್ಸ್ ಸೇರಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನ ವಶಪಡಿಸಿಕೊಂಡಿದ್ರು. 
ರಾಷ್ಟ್ರರಾಜಧಾನಿ ದೆಹಲಿಯ ಸಮೀಪದಲ್ಲೇ ಭಯೋತ್ಪಾದಕ ಕೃತ್ಯಕ್ಕೆ ಸಂಚು ರೂಪಿಸಿದ್ದು ಜಮ್ಮು ಕಾಶ್ಮೀರ ಪೊಲೀಸರು ಹಾಗೂ ದೆಹಲಿ ಪೊಲೀಸರು ಭಯೋತ್ಪಾದಕ ಜಾಲವನ್ನ ಭೇದಿಸಿದ್ದಾರೆ.

ಇದನ್ನೂ  ಓದಿ: ದೆಹಲಿ ಮೆಟ್ರೋ ಸ್ಟೇಷನ್ ಗ್ಲಾಸ್ ಪುಡಿಪುಡಿ.. ಸ್ಫೋ* ಬಳಿಕ ಏನೆಲ್ಲಾ ಆಯ್ತು..?

Delhi incident (3)

ಹರಿಯಾಣದ ಫರಿದಾಬಾದ್​​​​​ನಲ್ಲಿ ಬೃಹತ್ ಸ್ಫೋ*ಕ ಸಾಗಣೆ ಸಂಬಂಧ ಜಮ್ಮು-ಕಾಶ್ಮೀರ ಮೂಲದ ವೈದ್ಯ ಡಾ.ಮುಜಮ್ಮಿಲ್ ಶಕೀಲ್ ಮನೆಯಲ್ಲಿ 300 ಕೆ.ಜಿಗೂ ಹೆಚ್ಚು RDX ಸೇರಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. 330 ಕೆ.ಜಿ RDX, AK-47 ಜೊತೆಗೆ ಒಂದು ಪಿಸ್ತೂಲ್ ಹಾಗೂ 3 ಮ್ಯಾಗಜೀನ್‌, 20 ಟೈಮರ್‌ಗಳು, ಅಮೋನಿಯಂ ನೈಟ್ರೇಟ್, ವಾಕಿ-ಟಾಕಿ ಸೆಟ್ ವಶಕ್ಕೆ ಪಡೆಯಲಾಗಿದೆ. 

ಗುಜರಾತ್​ನಲ್ಲೂ ಭಯೋತ್ಪಾದನಾ ಚಟುವಟಿಕೆ ಪತ್ತೆ

ಇತ್ತ ಗುಜರಾತ್ ಪೊಲೀಸರ ಭಯೋತ್ಪಾದನಾ ನಿಗ್ರಹ ದಳವು ಗಾಂಧಿನಗರ ಬಳಿಯ ಅದಲಾಜ್ ಪಟ್ಟಣದಲ್ಲಿ ಸೈಬರ್ ವಂಚಕರ ತಂಡದ ಐವರನ್ನ ಬಂಧಿಸಲಾಗಿದೆ. ಪಾಕಿಸ್ತಾನ ಮೂಲದ ಕ್ರಿಪ್ಟೋಕರೆನ್ಸಿ ವ್ಯಾಲೆಟ್‌ಗೆ 10 ಕೋಟಿ ರೂಪಾಯಿಗಳನ್ನ ವರ್ಗಾಯಿಸಲು ಸಹಾಯ ಮಾಡಿದ ಆರೋಪದ ಮೇಲೆ ಗುಜರಾತ್‌ನ ಸೂರತ್ ನಿವಾಸಿಯನ್ನ.. ಯುಪಿ ಡಾಕ್ಟರ್​ಗಳನ್ನ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಸಯ್ಯದ್ ಬಳಿ ಮೂರು ಹ್ಯಾಂಡ್‌ ಗನ್‌, ಎರಡು ಆಸ್ಟ್ರಿಯನ್ ನಿರ್ಮಿತ ಗ್ಲಾಕ್ ಪಿಸ್ತೂಲ್‌ ಮತ್ತು ಇಟಾಲಿಯನ್ ನಿರ್ಮಿತ ಬೆರೆಟ್ಟಾ ಮತ್ತು ಈ ಶಸ್ತ್ರಾಸ್ತ್ರಗಳಿಗೆ ಬೇಕಾದ ಮದ್ದುಗುಂಡುಗಳನ್ನ ವಶಕ್ಕೆ ಪಡೆಯಲಾಗಿದೆ. 

ಇದನ್ನೂ ಓದಿ: ಉಚಿತ ಸಲಹೆಯಿಂದ ದೂರ ಇರಿ, ನಿಮ್ಮ ನಿರ್ಧಾರವೇ ಅಂತಿಮವಾಗಿರಲಿ -ರಾಶಿ ಭವಿಷ್ಯ

Delhi incident (1)

ಲಾಕರ್​ನಲ್ಲಿ ಪತ್ತೆಯಾಯ್ತು ರೈಫಲ್ & ಮದ್ದುಗುಂಡು

ಜಮ್ಮು & ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ತನಿಖೆ ವೇಳೆ ಕಾಲೇಜಿನಲ್ಲಿ ಅಕ್ಟೋಬರ್​ವರೆಗೆ ಕೆಲಸ ಮಾಡ್ಕೊಂಡಿದ್ದ ಆದಿಲ್ ರಾಥರ್ ಎಂಬಾತನ ಲಾಕರ್‌ನಲ್ಲಿ ಅಸಾಲ್ಟ್ ರೈಫಲ್ ಮತ್ತು ಮದ್ದುಗುಂಡುಗಳು ಪತ್ತೆಯಾಗಿವೆ. 
ಇದಿಷ್ಟು ನಿನ್ನೆ ಒಂದೇ ದಿನ ನಡೆದ ಬೆಳವಣಿಗಳು.. ದೆಹಲಿ ಪ್ರಕರಣಕ್ಕೂ ಮುನ್ನ ಪೊಲೀಸರು ಗುಪ್ತಚರ ಇಲಾಖೆ ಇಷ್ಟೆಲ್ಲಾ ಮುಂಜಾಗ್ರತೆ ವಹಿಸಿದ್ರು ಸಂಜೆ ದೆಹಲಿಯಲ್ಲಿ ಸ್ಫೋ*ವಾಗಿದೆ. ಇನ್ನೂ ಇವತ್ತು ಎಲೆಕ್ಷನ್​ ಇರೋ ಕಾರಣ ಬಿಹಾರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಇದನ್ನೂ ಓದಿ:ದೆಹಲಿಯಲ್ಲಿ ಕೃತ್ಯಕ್ಕೆ ಬಳಸಿದ್ದ ಕಾರಿನ ಡಿಟೇಲ್ಸ್​​​.. ಹಾಲಿ ಮಾಲೀಕನ ಫೋಟೋ ಲಭ್ಯ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Delhi incident Red Fort ದೆಹಲಿ ಕೆಂಪುಕೋಟೆ
Advertisment