Advertisment

ದೆಹಲಿ ಮೆಟ್ರೋ ಸ್ಟೇಷನ್ ಗ್ಲಾಸ್ ಪುಡಿಪುಡಿ.. ಸ್ಫೋ* ಬಳಿಕ ಏನೆಲ್ಲಾ ಆಯ್ತು..?

ಅದು ಎಲ್ಲರೂ ಕೆಲಸಗಳನ್ನ ಮುಗಿಸಿ ಮನೆ ಕಡೆಗೆ ಹೊರಟಿದ್ದ ಸಮಯ.. ಗಿಜಿ ಗಿಜಿ ಟ್ರಾಫಿಕ್​.. ವಾಹನ ಹಾರನ್.. 7 ಗಂಟೆಗೆ 8 ನಿಮಿಷ ಇರಬೇಕಾದ್ರೆ ಭಯಾನಕ ಸ್ಫೋ*ದ ಶಬ್ಧ.. ದೆಹಲಿ ಜನರ ಎದೆ ಬಡಿತ ಭಯದಲ್ಲಿ ಡಬಲ್​ ಆಗಿ ನಡುಗಿ ಹೋಗಿದ್ದಾರೆ. ಈ ಪ್ರಕರಣ ಬರಿ ದೆಹಲಿ ಮಾತ್ರ ಅಲ್ಲ.. ಇಡೀ ದೇಶವನ್ನ ಬೆಚ್ಚಿ ಬೀಳಿಸಿದೆ..

author-image
Ganesh Kerekuli
Delhi incident (3)
Advertisment

ಅದು ಎಲ್ಲರೂ ಕೆಲಸಗಳನ್ನ ಮುಗಿಸಿ ಮನೆ ಕಡೆಗೆ ಹೊರಟಿದ್ದ ಸಮಯ.. ಗಿಜಿ ಗಿಜಿ ಟ್ರಾಫಿಕ್​.. ವಾಹನ ಹಾರನ್.. ಎಲ್ಲಾ ನಾರ್ಮಲ್​ ಆಗಿತ್ತು. 7 ಗಂಟೆಗೆ 8 ನಿಮಿಷ ಇರಬೇಕಾದ್ರೆ ಭಯಾನಕ ಸ್ಫೋ*ದ ಶಬ್ಧ.. ದೆಹಲಿ ಜನರ ಎದೆ ಬಡಿತ ಭಯದಲ್ಲಿ ಡಬಲ್​ ಆಗಿ ನಡುಗಿ ಹೋಗಿದ್ದಾರೆ. ಈ ಪ್ರಕರಣ ಬರಿ ದೆಹಲಿ ಮಾತ್ರ ಅಲ್ಲ.. ಇಡೀ ದೇಶವನ್ನ ಬೆಚ್ಚಿ ಬೀಳಿಸಿದೆ..

Advertisment

ಮೆಟ್ರೋ ಸ್ಟೇಷನ್ ಗ್ಲಾಸ್ ಪುಡಿ ಪುಡಿ

ಐತಿಹಾಸಿಕ ಕೆಂಪುಕೋಟೆ.. ರಾಷ್ಟ್ರ ರಾಜಧಾನಿಯ ಹೃದಯಭಾಗದಲ್ಲಿ ಸ್ಫೋ*​ ಅನ್ನೋ ಬೆಂಕಿ ಬಿದ್ದಿದೆ. ಮೋದಿ ಅಧಿಕಾರಕ್ಕೆ ಬಂದ ಮೇಲೆ ಜಮ್ಮು ಕಾಶ್ಮೀರ ಕಣಿವೆ ದಾಟಿ ನಡೆದ ಮೊದಲ ಸ್ಫೋ* ಇದು. ಕೆಂಪು ಕೋಟೆ ಸಮೀಪದ ಲಾಲ್‌ ಕಿಲಾ ಬಳಿ ಸಂಭವಿಸಿದ ಭೀಕರ ಸ್ಫೋ*ದಲ್ಲಿ 8 ಜನ ಬಲಿ ಆಗಿದ್ದಾರೆ. 26ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಲೋಕ್​ ನಾಯಕ್​ ಜಯಪ್ರಕಾಶ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಇದನ್ನೂ ಓದಿ: ಟೀಂ ಇಂಡಿಯಾದಲ್ಲಿ ಓರ್ವ ಸೈಲೆಂಟ್ ಸ್ಟಾರ್​.. ಒಂದು ಅವಕಾಶಕ್ಕಾಗಿ ಕಾಯ್ತಿದ್ದಾನೆ ಈತ..!

Delhi incident

ಕಾರು.. ಗೂಡ್ಸ್‌ ಗಾಡಿ.. ಆಟೋ.. ಹಲವು ವಾಹನ ಧಗಧಗ

ಮೆಟ್ರೋ ನಿಲ್ದಾಣದ ಗೇಟ್‌ ನಂಬರ್‌ 1 ರಲ್ಲಿ ನಿಂತಿದ್ದ ಕಾರು.. 6.52ರ ಸಮಯಕ್ಕೆ ಏಕಾಏಕಿ ಸ್ಫೋ*ವಾಗಿತ್ತು. ಸ್ಫೋ*ದ ತೀವ್ರತೆಗೆ ಹಲವು ವಾಹನಗಳು ಹೊತ್ತಿ ಉರಿದಿವೆ. ಕಾರು.. ಗೂಡ್ಸ್‌ ವಾಹನ.. ಆಟೋ.. ಹಲವು ವಾಹನಗಳು ಧಗಧಗಿಸಿವೆ.

Advertisment

ಸ್ಥಳಕ್ಕೆ 7 ಅಗ್ನಿಶಾಮಕ ದೌಡು, ಬೆಂಕಿ ನಂದಿಸುವ ಕಾರ್ಯ

2 ಕಾರು ಸ್ಫೋ*ದಿಂದ ಪಕ್ಕದಲ್ಲಿದ್ದ ಹಲವು ಕಾರುಗಳಿಗೂ ಬೆಂಕಿ ಹೊತ್ತಿದೆ. ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ, ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. 7 ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದೆ. ಭಾರಿ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದ ಕಾರಣ ನಂದಿಸಲು ಕೆಲ ಸಮಯವೇ ಬೇಕಾಗಿತ್ತು.  ಐ20 ಕಾರಿನಲ್ಲಿ ಬ್ಲಾ*​ ಆಗಿದೆ ಎನ್ನಲಾಗ್ತಿದೆ. ಐ20 ಕಾರ್‌ನಲ್ಲಿ ಸ್ಫೋ*ಕಗಳನ್ನ ಸಾಗಿಸುವಾಗ ಸಂಭವಿಸಿರಬಹುದು ಎಂದು ದೆಹಲಿ ಪೊಲೀಸರು ಶಂಕಿಸಿದ್ದಾರೆ. 

ಇದನ್ನೂ ಓದಿ: ಟೀಂ ಇಂಡಿಯಾದಲ್ಲಿ ಓರ್ವ ಸೈಲೆಂಟ್ ಸ್ಟಾರ್​.. ಒಂದು ಅವಕಾಶಕ್ಕಾಗಿ ಕಾಯ್ತಿದ್ದಾನೆ ಈತ..!

Delhi incident

ಈ ಭಯಾನಕ ಸ್ಫೋ*ದಲ್ಲಿ 9 ಮಂದಿ ಸಾ*ನ್ನಪ್ಪಿದ್ದಾರೆ. ಪ್ರಕರಣದಲ್ಲಿ ಮೃತಪಟ್ಟವರ ಗುರುತುಗಳನ್ನ ಪತ್ತೆ ಹಚ್ಚಲು ತನಿಖಾ ದಳ ಕಾರ್ಯಾಚರಣೆ ನಡೆಸುತ್ತಿದೆ. ಅಷ್ಟೂ ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಸತ್ತ 9 ಜನರ ಪೈಕಿ ಒಬ್ಬರ ಹೆಸರು ಅಶೋಕ್​ ಎಂದು ಗುರುತಿಸಲಾಗಿದೆ.  ಪ್ರತ್ಯಕ್ಷದರ್ಶಿ ಧರ್ಮೇಂದ್ರ ಕಾರಿನ ಚಲನ ವಲನ ಬಗ್ಗೆ ಇಂಚಿಂಚಾಗಿ ಬಿಚ್ಚಿದ್ದಾರೆ. ಜೊತೆಗೆ ಬ್ಲಾ* ವೇಳೆ ಆದ ಅನುಭವ ಹಂಚಿಕೊಂಡಿದ್ದಾರೆ.

Advertisment

ಕೆಂಪು ಕೋಟೆ ಬಳಿ ಸಂಭವಿಸಿದ ಭೀಕರ ಸ್ಫೋ*ದಲ್ಲಿ ಸಾ*ನ್ನಪ್ಪಿದವರ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಮೂಲಕ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಗೃಹ ಸಚಿವ ಅಮಿತ್​ ಶಾ ಸೇರಿ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ಕೃತ್ಯಕ್ಕೆ ಬಳಸಿದ್ದ ಕಾರಿನ ಡಿಟೇಲ್ಸ್​​​.. ಹಾಲಿ ಮಾಲೀಕನ ಫೋಟೋ ಲಭ್ಯ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೆಹಲಿ ಕೆಂಪುಕೋಟೆ Red Fort Delhi incident
Advertisment
Advertisment
Advertisment