/newsfirstlive-kannada/media/media_files/2025/11/11/delhi-incident-1-2025-11-11-07-24-28.jpg)
ಇನ್ನು, ಸ್ಫೋ* ಪ್ರಕರಣಕ್ಕೆ ಕ್ಷಣಕ್ಕೊಂದು ತಿರುವು ಸಿಗುತ್ತಿದೆ. ಮೊದಲು ಇಕೋ ಕಾರು ಸ್ಫೋ*ಗೊಂಡು ದುರಂತ ಸಂಭವಿಸಿದೆ ಎನ್ನಲಾಗಿತ್ತು. ಆದರೆ ಪರಿಶೀಲನೆ ವೇಳೆ ಹುಂಡೈ ಐ20 ಕಾರು ಸ್ಫೋ* ಆಗಿದ್ದು ಗೊತ್ತಾಗಿದೆ. ಐ 20 ಕಾರು ಹರಿಯಾಣಕ್ಕೆ ಸೇರಿದ್ದು, ಅಲ್ಲಿನ ರೆಜಿಸ್ಟ್ರೇಷನ್ ನಂಬರ್ ಇರೋದು ಕನ್ಫರ್ಮ್ ಆಗಿದೆ. ಇದೀಗ ಆ ಕಾರು ಮಾಲೀಕ ಯಾರು? ಆತ ಹೇಗಿದ್ದಾನೆ ಈ ಕುರಿತ ರಿಪೋರ್ಟ್​​ ಇಲ್ಲಿದೆ..
HR 26 CE 7674.. ದೆಹಲಿಯಲ್ಲಿ ರಕ್ತ ಹರಿಸಿದ ಕಾರಿದು.. ಇಡೀ ಸ್ಫೋ*ದ ಕೇಂದ್ರವೇ ಈ ಕಾರು. ಈಗ ಕಾರಿನ ಸುತ್ತವೇ ತನಿಖೆ ಶುರುವಾಗಿದೆ.. ಹರಿಯಾಣ ನೋಂದಣಿ​​​ ಹೊಂದಿದ್ದ ಹುಂಡೈ i20 ಕಾರಿನ ಮೂಲ ಹುಡುಕಾಟ ಆರಂಭವಾಗಿದೆ.. ಸ್ಫೋ*ಗೊಂಡ ಕಾರಿಗೆ ಕಾಶ್ಮೀರದ ಫುಲ್ವಾಮಾ ನಂಟು ಬೆಸೆದಿದೆ..
ಹಾಲಿ ಮಾಲೀಕನ ಎಕ್ಸ್‌ಕ್ಲೂಸಿವ್ ಫೋಟೋ ಲಭ್ಯ!
ದೆಹಲಿಯ ಕೆಂಪು ಕೋಟೆಯ ಬಳಿ ಸಂಭವಿಸಿದ ಭೀಕರ ಸ್ಫೋ*, ಎಂಟು ಮಂದಿ ಬಲಿ ಪಡೆದಿದೆ.. ವಾಹನದ ಹಿಂಭಾಗದಲ್ಲಿ ಸ್ಫೋ* ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.. ಈ ಸ್ಫೋ* ಸಂಭವಿಸಿರುವ ಕಾರಿನ ಮಾಹಿತಿಯನ್ನು ಪೊಲೀಸರು ಪತ್ತೆ ಮಾಡಿದ್ದು ಅದು ಹರ್ಯಾಣದ ನೋಂದಣಿ ಫಲಕ ಹೊಂದಿದ್ದ ಹುಂಡೈ i20 ಕಾರು ಅನ್ನೋದು ಪತ್ತೆ ಹಚ್ಚಲಾಗಿದೆ.
ಇದನ್ನೂ ಓದಿ:ಟೀಂ ಇಂಡಿಯಾದಲ್ಲಿ ಓರ್ವ ಸೈಲೆಂಟ್ ಸ್ಟಾರ್​.. ಒಂದು ಅವಕಾಶಕ್ಕಾಗಿ ಕಾಯ್ತಿದ್ದಾನೆ ಈತ..!
/filters:format(webp)/newsfirstlive-kannada/media/media_files/2025/11/11/delhi-incident-2025-11-11-07-29-54.jpg)
ಗುರುಗ್ರಾಮ್ TO ಪುಲ್ವಾಮಾ!
- HR 26 CE 7674 ನಂಬರ್ ಪ್ಲೇಟ್ ಹೊಂದಿರುವ i20
- ಕಾರಿನ ಮೂಲ ಮಾಲೀಕನನ್ನ ಬಂಧಿಸಿರುವ ಪೊಲೀಸರು
- ಬಂಧಿತನನ್ನ ಮೊಹಮ್ಮದ್ ಸಲ್ಮಾನ್ ಅಂತ ಗೊತ್ತಾಗಿದೆ
- ಕಣಿವೆಯ ಲಿಂಕ್​​ ಕೊಟ್ಟ ಸಲ್ಮಾನ್, ಪ್ರಕರಣಕ್ಕೆ ಬಿಗ್​​​ ಟ್ವಿಸ್ಟ್​​
- ಕಾರು ಖರೀದಿಸಿದ್ದ ತಾರಿಕ್ ಕಾಶ್ಮೀರದ ಪುಲ್ವಾಮಾ ನಿವಾಸಿ
- 2019ರಲ್ಲಿ ಉಗ್ರರ ದಾಳಿಗೆ ಸಾಕ್ಷಿಯಾಗಿದ್ದ ಫುಲ್ವಾಮಾ ನಂಟು
ಸ್ಫೋ*ಕ್ಕೆ ಬಳಸಿದ್ದ ಕಾರು ಈತ ಯಾಕೆ ಕೊಟ್ಟ? ಆತನಿಗೆ ಗೊತ್ತಿಲ್ಲದೇ ಕಾರು ಬಳಸಿಕೊಂಡರಾ? ಅಥವಾ ಆತನೂ ಶಾಮೀಲಾಗಿದ್ದಾನಾ ಎಂಬಿತ್ಯಾದಿ ಆ್ಯಂಗಲ್‌ನಿಂದ ತನಿಖೆ ನಡೆಯುತ್ತಿದೆ. ಅಷ್ಟಕ್ಕೂ ಪುಲ್ವಾಮಾ ಕಥೆ ಏನು?
ಪುಲ್ವಾಮಾ.. ಘನಘೋರ ಘಟನೆ
ಪುಲ್ವಾಮಾ.. ಭಾರತದ ಮೇಲೆ ನಡೆದ ಅತ್ಯಂತ ಭೀಕರ ಭಯೋತ್ಪಾದಕ ದಾಳಿಗಳಲ್ಲಿ ಒಂದು. ಫೆಬ್ರವರಿ 14, 2019 ರಂದು, ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಿಲಿಟರಿ ಬೆಂಗಾವಲು ಪಡೆಯ ಮೇಲೆ ದಾಳಿ ನಡೆದಿತ್ತು.. ಮಾರುತಿ ಇಕೋ ವ್ಯಾನ್‌ನಲ್ಲಿ ಬಂದ ಆತ್ಮಾ*ಹುತಿ ಬಾಂಬರ್ ಈ ದಾಳಿ ನಡೆಸಿದ್ದ.. ಆದಿಲ್ ಅಹ್ಮದ್ ದಾರ್ ಎಂದು ಗುರುತಿಸಲಾದ ಉಗ್ರ ಮತ್ತು 40 ಸೈನಿಕರು ಸಾ*ನ್ನಪ್ಪಿದ್ರು.. ಆವತ್ತು ಪುಲ್ವಾಮಾ ದಾಳಿಗೆ ಹೊಣೆಯನ್ನ ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ ಹೊತ್ತಿತ್ತು..
ಒಟ್ಟಾರೆ, ಹರಿಯಾಣದ ಫರಿದಾಬಾದ್‌ನಲ್ಲಿರುವ ಎರಡು ವಸತಿ ಕಟ್ಟಡಗಳ ಮೇಲೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ದಾಳಿ ನಡೆಸಿದ್ರು. ಸುಮಾರು 3,000 ಕೆಜಿ ಸ್ಫೋ*ಕಗಳನ್ನು ವಶಪಡಿಸಿಕೊಂಡ ಕೆಲವೇ ಗಂಟೆಗಳ ನಂತರ ದೆಹಲಿಯಲ್ಲಿ ಈ ಸ್ಫೋ* ಸಂಭವಿಸಿದೆ.. 350 ಕೆಜಿ ಅಮೋನಿಯಂ ನೈಟ್ರೇಟ್ ಸೇರಿದಂತೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ: BREAKING NEWS: ದೆಹಲಿಯ ಕೆಂಪುಕೋಟೆ ಬಳಿ ಸ್ಪೋಟದಲ್ಲಿ 9 ಮಂದಿ ಸಾವು: ಕ್ಷಣ ಕ್ಷಣಕ್ಕೂ ಹೆಚ್ಚಾದ ಸಾವಿನ ಸಂಖ್ಯೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us