/newsfirstlive-kannada/media/media_files/2025/11/11/delhi-incident-5-2025-11-11-08-30-41.jpg)
ಸಂಜೆ ಜನದಟ್ಟಣೆಯ ಸಮಯ.. ವಾಹನಗಳು ಮತ್ತು ಪಾದಚಾರಿಗಳಿಂದ ತುಂಬಿ ತುಳುಕುತ್ತಿದ್ರು. ಕೆಂಪುಕೋಟೆ ಸಿಗ್ನಲ್ ಬಳಿ ವಾಹನವೊಂದು ನಿಧಾನವಾಗಿ ಚಲಿಸ್ತಿತ್ತು.. ಸಂಜೆ 6.52ರ ಸುಮಾರಿಗೆ ವಾಹನ ಏಕಾಏಕಿ ಸ್ಫೋ*ಗೊಂಡಿದೆ.. ಕಾರ್​​ನಲ್ಲಿ ಮೂವರು ವ್ಯಕ್ತಿಗಳಿದ್ರೂ ಅನ್ನೋ ಮಾಹಿತಿ ಇದೆ.. ಕಾರು ಸ್ಫೋ* ಆಗ್ತಿದ್ದ, ಅಕ್ಕಪಕ್ಕದ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ..
ಸ್ಫೋ* ಸಂಭವಿಸಿ ಜಸ್ಟ್​​ ಎಂಟೇ ನಿಮಿಷದಲ್ಲಿ ದೇಶದ ಹಾರ್ಟ್​​ಲ್ಯಾಂಡ್​​​ ಡೆಲ್ಲಿ ಹೈಅಲರ್ಟ್​​ಗೆ ಜಾರಿತ್ತು. ಸ್ಥಳಕ್ಕೆ ಮೊದಲು ಓಡಿ ಬಂದ ಅಗ್ನಿಶಾಮಕ ದಳ ಮತ್ತು ದೆಹಲಿ ಪೊಲೀಸರು ಬೆಂಕಿ ನಂದಿಸಲು ನಿರತವಾದ್ರೆ, ಅಷ್ಟೊತ್ತಿಗೆ ಫೋರೆನ್ಸಿಕ್ ಟೀಮ್ ಆಗಮಿಸಿತ್ತು.. ಸ್ಥಳದಲ್ಲಿ ವಸ್ತುಗಳನ್ನ ಸಾಕ್ಷ್ಯಗಳನ್ನು ಸಂಗ್ರಹಿಸುವ ಕಾರ್ಯಕ್ಕೆ ಇಳೀತು.. ಕೃತ್ಯಕ್ಕೆ ಯಾವೆಲ್ಲಾ ಸಾಮಗ್ರಿಗಳನ್ನ ಬಳಸಲಾಗಿದೆ ಅಂತ ಫೋರೆನ್ಸಿಕ್​ ಟೀಮ್​ ಪತ್ತೆ ಹಚ್ತಿದೆ.. ಇನ್ನು, ನ್ಯಾಷನಲ್ ಇನ್ವೆಸ್ಟಿಗೇಶನ್ ಏಜೆನ್ಸಿ ಎನ್​​ಐಎ, ಗುಪ್ತಚರ ಇಲಾಖೆ ಕೂಡ ಸ್ಥಳವನ್ನು ಸೀಲ್ ಮಾಡಿ ತನಿಖೆ ಆರಂಭಿಸಿದೆ.
/filters:format(webp)/newsfirstlive-kannada/media/media_files/2025/11/11/delhi-incident-6-2025-11-11-08-32-16.jpg)
ಕಾರುಗಳು, ಆಟೋಗಳು ಸೇರಿ ಸುಮಾರು 22 ವಾಹನಗಳು ಹಾನಿಗೊಳಗಾಗಿವೆ ಅನ್ನೋ ಪ್ರಥಮ ಮಾಹಿತಿ ಸಿಕ್ಕಿದೆ.. ಇದು ಉಗ್ರರ ದಾಳಿಯಾ? ಅಥವಾ ಕಾರಿನ ಇಂಧನದಿಂದಾದ ಅವಘಡವಾ ಅನ್ನೋದು ಪರಿಶೀಲಿಸಲಾಗ್ತಿದೆ.. CCTV ಫೂಟೇಜ್‌ಗಳು, ವಾಹನದ ಅವಶೇಷಗಳು ಹಾಗೂ ಸ್ಫೋ*ದ ಸ್ಥಳದ ವಸ್ತುಗಳನ್ನು ಪರಿಶೀಲನೆಗೆ ಒಳಪಡಿಸಲಾಗ್ತಿದೆ..
ಘಟನೆ ಸಂಭವಿಸ್ತಿದ್ದಂತೆ ಅಲರ್ಟ್​​​ ಆದ ಕೇಂದ್ರ ಗೃಹ ಸಚಿವ ಅಮಿತ್​​​ ಶಾ, ಘಟನಾ ಸ್ಥಳಕ್ಕೆ ದೌಡಾಯಿಸಿದ್ರು.. ಪರಿಸ್ಥಿತಿ ಬಗ್ಗೆ ಎನ್‌ಐಎ ತನಿಖೆಯ ಮೇಲ್ವಿಚಾರಣೆ ನಡೆಸ್ತಿರುವ ಅಮಿತ್ ಶಾ ಬಳಿಕ ಅದನ್ನ ಪ್ರಧಾನಿ ಮೋದಿಗೆ ನಿಯಮಿತವಾಗಿ ಪರಿಸ್ಥಿತಿಯ ಮಾಹಿತಿ ನೀಡ್ತಿದ್ದಾರೆ.. ಬಳಿಕ LNJP ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ... ಸ್ಥಳದಲ್ಲಿನ ಭದ್ರತಾ ವ್ಯವಸ್ಥೆಗಳನ್ನು ಅಮಿತ್​​​ ಶಾ ಪರಿಶೀಲಿಸಿದ್ರು.. ಯಾವುದೇ ಸುಳಿವುಗಳನ್ನ ನಿರ್ಲಕ್ಷಿಸದಂತೆ ನಿರ್ದೇಶಿಸಿದ್ದಾರೆ.. ಈ ದಾಳಿ ಅತ್ಯಂತ ಗಂಭೀರ ಮತ್ತು ಇದರ ಹಿಂದಿನ ಪಿತೂರಿಯನ್ನು ಯಾವುದೇ ಬೆಲೆ ತೆತ್ತಾದರೂ ಕಂಡುಹಿಡಿದು ತಕ್ಕಶಾಸ್ತಿ ಮಾಡಬೇಕೆಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ದೆಹಲಿ ಮೆಟ್ರೋ ಸ್ಟೇಷನ್ ಗ್ಲಾಸ್ ಪುಡಿಪುಡಿ.. ಸ್ಫೋ* ಬಳಿಕ ಏನೆಲ್ಲಾ ಆಯ್ತು..?
/filters:format(webp)/newsfirstlive-kannada/media/media_files/2025/11/11/delhi-incident-2025-11-11-07-29-54.jpg)
ದೆಹಲಿ ನಗರದ ಮೆಟ್ರೋ ನಿಲ್ದಾಣಗಳು, ವಿಮಾನ ನಿಲ್ದಾಣ ಹಾಗೂ ಇತರೆ ಪ್ರಮುಖ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ.. ಇನ್ನು, ಸಿಸಿಟಿವಿ ಫೂಟೇಜ್ ಆಧಾರದಲ್ಲಿ ವಾಹನ ಯಾರು ಚಲಾಯಿಸ್ತಿದ್ರು, ವಾಹನದಲ್ಲಿದ್ದ ಮೃತ ಮೂವರು ಯಾರು ಅಂತ ಪತ್ತೆಹಚ್ಚಲಾಗುತ್ತಿದೆ.. ಇವತ್ತು ಹೈವೋಲ್ಟೇಜ್​​​ ಸಭೆ ನಡೆಯಲಿದ್ದು, NIA ಮತ್ತು ದೆಹಲಿ ಪೊಲೀಸ್ ಅಧಿಕೃತ ಹೇಳಿಕೆಗಳು ಪ್ರಕಟವಾಗುವ ನಿರೀಕ್ಷೆ ಇದೆ..
ಇನ್ನೊಂದು ಮಾಹಿತಿ ಪ್ರಕಾರ ಈ ಸ್ಫೋ* ಉದ್ದೇಶಪೂರ್ವಕ ಅಲ್ಲ.. ಬೇರೆ ಸ್ಥಳದಲ್ಲಿ ದೊಡ್ಡ ಕೃತ್ಯ ನಡೆಸಲು ಕಾರಿನಲ್ಲಿ ಸಾಮಾಗ್ರಿ ಸಾಗಿಸುತ್ತಿದ್ದಿರಬಹುದು ಅನ್ನೋ ಶಂಕೆಯೂ ಇದೆ.. ರೆಡ್ ಪೋರ್ಟ್ ಎದುರು ಟ್ರಾಫಿಕ್ ಸಿಗ್ನಲ್​ನಲ್ಲಿ ಆಕಸ್ಮಿಕವಾಗಿ ಸಂಭವಿಸಿರುವ ಅನುಮಾನ ಇದೆ.. ಇದೆಲ್ಲದಕ್ಕೂ ಹೈವೋಲ್ಟೇಜ್​​​ ಸಭೆ ಬಳಿಕ ಅಮಿತ್​ ಶಾ ಅಧಿಕೃತ ಹೇಳಿಕೆ ನೀಡಲಿದ್ದಾರೆ.. ಒಟ್ಟಾರೆ, ಕಣಿವೆ ಆಚೆಗೆ ಘಟಿಸಿದ ಬಹುದೊಡ್ಡ ಸ್ಫೋ* ಇದಾಗಿದೆ.. 2011ರ ಬಳಿಕ ದೆಹಲಿಯಲ್ಲಿ ಬ್ಲಾ*​ ಆಗಿದೆ.
ಇದನ್ನೂ ಓದಿ: ಡಾಕ್ಟರ್ ಮನೆಯಲ್ಲಿ ಮದ್ದು, ಗುಂಡು, ಬಂದೂಕು.. ದೆಹಲಿ ವಿಧ್ವಂಸಕ ಕೃತ್ಯಕ್ಕೂ ಮುನ್ನ ಏನೆಲ್ಲ ನಡೆದಿತ್ತು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us