ಅಮೆರಿಕ ಹೊಸ ತೆರಿಗೆ ನೀತಿ.. ಎಷ್ಟು ಲಕ್ಷ ಕೋಟಿ ರಫ್ತಿನ ಮೇಲೆ ಪರಿಣಾಮ ಬೀರುತ್ತದೆ..?

ಇಂದಿನಿಂದ ಅಮೆರಿಕ ತೆರಿಗೆ ಏರಿಕೆ ನೀತಿ ಜಾರಿಯಾಗಿದೆ. ಹಾಗಾದರೆ ಭಾರತ ಪ್ರತಿವರ್ಷ ಅಮೆರಿಕಗೆ ಎಷ್ಟು ಲಕ್ಷ ಕೊಟಿ ಮೌಲ್ಯದ ಸರಕುಗಳನ್ನು ರಫ್ತು ಮಾಡುತ್ತದೆ. ಜೊತೆಗೆ ಭಾರತ ಎಷ್ಟು ಲಕ್ಷ ಕೋಟಿ ಮೌಲ್ಯದ ಸರಕುಗಳನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳುತ್ತದೆ ಅನ್ನೋ ವಿವರ ಇಲ್ಲಿದೆ.

author-image
Ganesh Kerekuli
Trump tariff
Advertisment

ಭಾರತ ಮತ್ತು ಯುಎಸ್ (India-US) ವ್ಯಾಪಾರ ಸಂಬಂಧದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ. ಈಗಾಗಲೇ ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಉತ್ಪನ್ನಗಳ ಟ್ಯಾರಿಫ್ ಏರಿಕೆ ಮಾಡಿರೋದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದರು. ಅದರಂತೆ ಇಂದಿನಿಂದ ಅಮೆರಿಕ ತೆರಿಗೆ ಏರಿಕೆ ನೀತಿ ಜಾರಿಯಾಗಿದೆ. 

ಶೇಕಡ 25ರಷ್ಟು ಇದ್ದ ತೆರಿಗೆಯನ್ನ ಮತ್ತೆ ಶೇಕಡ 25ಕ್ಕೆ ಯುಎಸ್ಎ ಏರಿಸಿದೆ. ಈ ಮೂಲಕ ಭಾರತದ ಉತ್ಪನ್ನಗಳಿಗೆ ಟ್ರಂಪ್ ಶೇ.50ರಷ್ಟು ತೆರಿಗೆ ವಿಧಿಸಿದಂತೆ ಆಗಿದೆ. GTRI ವರದಿಯ ಪ್ರಕಾರ, ಅಮೆರಿಕದ ಈ ಕ್ರಮದಿಂದಾಗಿ ಭಾರತದ 5.4 ಲಕ್ಷ ಕೋಟಿ ರೂಪಾಯಿಗಳ ರಫ್ತಿನ ಮೇಲೆ ನೇರ ಪರಿಣಾಮ ಬೀರಲಿದೆ. 

ಇದನ್ನೂ ಓದಿ: ‘ದೊಡ್ಡಣ್ಣ’ನಿಗೆ ತೆರಿಗೆ ಮೋಹ.. ಇಂದಿನಿಂದ ಭಾರತದ ಉತ್ಪನ್ನಗಳಿಗೆ ಶೇ.50ರಷ್ಟು ತೆರಿಗೆ..!

ಪ್ರಸ್ತುತ ಭಾರತದ ಆರ್ಥಿಕತೆಯು ಸುಮಾರು 339 ಲಕ್ಷ ಕೋಟಿ ರೂಪಾಯಿ ಮೌಲ್ಯದ್ದಾಗಿದೆ. ಪ್ರತಿ ವರ್ಷ ಭಾರತ 38 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಮೌಲ್ಯದ ಸರಕುಗಳನ್ನು ವಿದೇಶಗಳಿಗೆ ರಫ್ತು ಮಾಡುತ್ತದೆ. ಇದರಲ್ಲಿ ಅಮೆರಿಕ ಹೆಚ್ಚು ಪಾಲುದಾರ. ಭಾರತವು ಸುಮಾರು 7.65 ಲಕ್ಷ ಕೋಟಿ ರೂ. ಮೌಲ್ಯದ ಸರಕುಗಳನ್ನು ಅಮೆರಿಕಕ್ಕೆ ನೀಡುತ್ತದೆ. ಇದರಲ್ಲಿ ಯಂತ್ರೋಪಕರಣಗಳು, ಎಲೆಕ್ಟ್ರಾನಿಕ್ ವಸ್ತುಗಳು, ಔಷಧಗಳು ಮತ್ತು ಆಭರಣಗಳು, ಬಟ್ಟೆಗಳು, ರಾಸಾಯನಿಕಗಳು, ಪೆಟ್ರೋಲಿಯಂ ಉತ್ಪನ್ನಗಳು ಸೇರಿವೆ.

ಇದನ್ನೂ ಓದಿ: ಮಗು ಹುಟ್ಟಲು ಮಹಿಳೆಯರ ಅವಶ್ಯಕತೆನೇ ಇಲ್ಲ.. ಜೀವಂತ ಕಂದಗೆ ಜನ್ಮ ನೀಡಲಿದೆ ರೋಬೋಟ್.!

USA PREZ DONALD TRUMP

ಈಗ ಅಮೆರಿಕ ಶೇಕಡಾ 50 ರಷ್ಟು ಸುಂಕ ವಿಧಿಸಿದೆ. ಇದರರ್ಥ ಭಾರತದಿಂದ ಅಲ್ಲಿಗೆ ಹೋಗುವ ಸರಕುಗಳು ದುಬಾರಿ ಆಗುತ್ತವೆ. ಮತ್ತು ಅವುಗಳಿಗೆ ಬೇಡಿಕೆ ಕಡಿಮೆಯಾಗಬಹುದು. ಆದರೆ ಇದು ಪ್ರತಿಯೊಂದು ವಸ್ತುವಿನ ಮೇಲೆ ಪರಿಣಾಮ ಬೀರಲ್ಲ. ತಜ್ಞರ ಪ್ರಕಾರ, ಬಟ್ಟೆ, ಆಭರಣ, ಪೀಠೋಪಕರಣಗಳು ಮತ್ತು ಸಮುದ್ರಾಹಾರದಂತಹ ಕೆಲವು ವರ್ಗದ ಉತ್ಪನ್ನಗಳ ಮೇಲೆ ಮಾತ್ರ ಪರಿಣಾಮ ಬೀರುತ್ತದೆ.

ಅಮೆರಿಕದಿಂದ ಎಷ್ಟು ಆಮದು ಮಾಡಿಕೊಳ್ತದೆ? 

ಅಮೆರಿಕವು ಪ್ರತಿವರ್ಷ ಸುಮಾರು 3.46 ಲಕ್ಷ ಕೋಟಿ ರೂಪಾಯಿ ಮೌಲ್ಯದ ಸರಕುಗಳನ್ನು ಭಾರತಕ್ಕೆ ರಫ್ತು ಮಾಡುತ್ತದೆ. ಮುಖ್ಯವಾಗಿ ಕಚ್ಚಾ ತೈಲ, ಪೆಟ್ರೋಲಿಯಂ ಉತ್ಪನ್ನಗಳು, ಕಲ್ಲಿದ್ದಲು, ವಜ್ರಗಳು, ವಿಮಾನ ಮತ್ತು ಬಾಹ್ಯಾಕಾಶ ನೌಕೆಯ ಭಾಗಗಳು ಸೇರಿವೆ. ಅಂದರೆ ಎರಡೂ ದೇಶಗಳ ನಡುವಿನ ವ್ಯಾಪಾರ ಸಂಬಂಧ ಸಾಕಷ್ಟು ಆಳವಾಗಿದೆ ಮತ್ತು ಪರಸ್ಪರರ ಅಗತ್ಯಗಳನ್ನು ಅವಲಂಬಿಸಿದೆ. 

ಇದನ್ನೂ ಓದಿ:ಇದು ವಿಶ್ವದ ಎರಡನೇ ಅತಿದೊಡ್ಡ ವಜ್ರ.. ಬೆಲೆ ತಿಳಿದರೆ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡೊನಾಲ್ಡ್​ ಟ್ರಂಪ್ DONALD TRUMP US tariff shock
Advertisment